Subscribe to Gizbot

ತ್ರಿವಳಿಗಳಲ್ಲಿ ತಾಯಿ ಯಾರು? ಇಂಟರ್ನೆಟ್‌ನಲ್ಲಿ ಗೊಂದಲ ಸೃಷ್ಟಿಸಿದ ಫೋಟೋ

Written By:

ತಾಯಿ ಮತ್ತು ಇಬ್ಬರು ಮಕ್ಕಳು ಇಂಟರ್ನೆಟ್‌ನಲ್ಲಿ ಇದೀಗ ಸದ್ದು ಮಾಡುತ್ತಿದ್ದಾರೆ. ಕೇಲನ್ ಮೋಮ್ಸ್ ತನ್ನ ಸಹೋದರಿ ಮತ್ತು ತಾಯಿಯೊಂದಿಗಿದ್ದ ಫೋಟೋವೊಂದನ್ನು ಅಪ್‌ಲೋಡ್ ಮಾಡಿದ್ದು ಈ ಮೂವರೂ ಒಂದೇ ರೀತಿ ಇರುವುದರಿಂದ ಇವರುಗಳಲ್ಲಿ ತಾಯಿ ಯಾರು ಮತ್ತು ಮಕ್ಕಳು ಯಾರು ಎಂಬುದನ್ನು ಗುರುತಿಸುವುದೇ ಅಸಾಧ್ಯವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಕ್ರಾಂತಿಯನ್ನೇ ನಡೆಸಿದ ತಾಯಿ ಮಕ್ಕಳ ಫೋಟೋ ನೋಡುಗರಲ್ಲಿ ಗೊಂದಲವನ್ನುಂಟು ಮಾಡಿದ್ದು ಸತ್ಯ

ಬನ್ನಿ ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಈ ತಾಯಿ ಮತ್ತು ಇಬ್ಬರು ಮಕ್ಕಳ ಫೋಟೋ ಸಾಮಾಜಿಕ ತಾಣದಲ್ಲಿ ಹೇಗೆ ಹರಿದಾಡಿದೆ ಮತ್ತು ಇದು ಇಷ್ಟೊಂದು ಜನಪ್ರಿಯತೆಯನ್ನು ಪಡೆದುಕೊಳ್ಳಲು ಕಾರಣವಾದರೂ ಏನು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆನ್‌ಲೈನ್‌

#1

ಕೇಲನ್ ಮೋಮ್ಸ್ ತನ್ನ ತಾಯಿ ಮತ್ತು ಸಹೋದರಿಯೊಂದಿಗಿದ್ದ ಫೋಟೋವನ್ನು ಆನ್‌ಲೈನ್‌ನಲ್ಲಿ ಹರಿಯಬಿಟ್ಟಿದ್ದಾಳೆ.

ಸಾಮಾಜಿಕ ತಾಣ

#2

ಸಾಮಾಜಿಕ ತಾಣ ಇವರುಗಳ ತಾಯಿಯನ್ನು ಹುಡುಕುವಲ್ಲಿ ವಿಫಲಗೊಂಡಿದ್ದು ಗೊಂದಲಕ್ಕೆ ಒಳಗಾಗಿದೆ.

18,000 ಕ್ಕಿಂತ ಹೆಚ್ಚು ಬಾರಿ ರೀಟ್ವೀಟ್

#3

ಈ ಮೂವರೂ ತ್ರಿವಳಿಗಳಂತೆಯೇ ಕಾಣುತ್ತಿರುವ ಈ ಫೋಟೋವು 18,000 ಕ್ಕಿಂತ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.

ಯುವತ್ವ ಕಳೆ

#4

ಮೂವರೂ ಯುವತ್ವ ಕಳೆಯಲ್ಲಿ ಮಿಂಚುತ್ತಿರುವುದರಿಂದ ಇಬ್ಬರು ಅವಳಿ ಮಕ್ಕಳು ಮತ್ತು ತಾಯಿಯನ್ನು ಹುಡುಕಲು ಇದು ಕಷ್ಟವನ್ನುಂಟು ಮಾಡಿದೆ.

29,000 ಕ್ಕಿಂತಲೂ ಹೆಚ್ಚಿನ ಮೆಚ್ಚುಗೆ

#5

ಜನವರಿ 28 ರಂದು ಈ ಫೋಟೋವನ್ನು ಪೋಸ್ಟ್ ಮಾಡಿದ್ದು 29,000 ಕ್ಕಿಂತಲೂ ಹೆಚ್ಚಿನ ಮೆಚ್ಚುಗೆಗಳನ್ನು ಪಡೆದುಕೊಂಡಿದೆ. ಕೆಲವು ಟ್ವಿಟ್ಟರ್ ಬಳಕೆದಾರರು ಈ ಫೋಟೋವನ್ನು ಹ್ಯಾಶ್ ಟ್ಯಾಗ್ #blackdontcrack ನೊಂದಿಗೆ ಹಂಚಿಕೊಂಡಿದ್ದು ತಮ್ಮ ವಯಸ್ಸಿಗಿಂತಲೂ ಇವರು ಚಿಕ್ಕವರಾಗಿ ಕಂಡುಬಂದಿದ್ದಾರೆ.

ಸೆಲ್ಫಿಯು ಪಡೆದುಕೊಂಡ ಮೆಚ್ಚುಗೆ

#6

ಸೆಲ್ಫಿಯು ಪಡೆದುಕೊಂಡ ಮೆಚ್ಚುಗೆಯನ್ನು ಕಂಡುಕೊಂಡ ಕುಟುಂಬದವರು ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಪುಟವೊಂದನ್ನು ತೆರೆದು ಇನ್ನಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅವಳಿ ಸಹೋದರಿಯರ ತಾಯಿ ಟೀನಾ

#7

ಚಿತ್ರದಲ್ಲಿ ಎಡಭಾಗದಲ್ಲಿರುವರೇ ಅವಳಿ ಸಹೋದರಿಯರ ತಾಯಿ ಟೀನಾ ಆಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಚಿತ್ರಕೃಪೆ:Dailyhit

ಇನ್ನೂ ತರುಣಿ

#8

16 ಹರೆಯದ ಇಬ್ಬರು ಮಕ್ಕಳ ತಾಯಿಯಾಗಿದ್ದು ಈಕೆ ಇನ್ನೂ ತರುಣಿಯಂತಿರುವುದರ ಗುಟ್ಟೇನು ಎಂಬುದಾಗಿ ಕೇಳಿದಾಗ ಆಕೆಯ ಉತ್ತರ ನಿಜಕ್ಕೂ ದಂಗುಬಡಿಸಿದೆ.

ಫಿಟ್

#9

ನಾನು ಸಾಕಷ್ಟು ನೀರು ಕುಡಿಯುತ್ತೇನೆ ಮತ್ತು ನನ್ನನ್ನು ನಾನು ಫಿಟ್ ಆಗಿ ಇರಿಸಿಕೊಳ್ಳುತ್ತೇನೆ ಎಂಬುದಾಗಿ 35 ರ ಹರೆಯದ ಟೀನಾ ನುಡಿದಿದ್ದಾರೆ. ಆಂತರಿಕ ಸೌಂದರ್ಯಕ್ಕೆ ನಾನು ಹೆಚ್ಚಿನ ಮಹತ್ವವವನ್ನು ನೀಡುತ್ತೇನೆ ಎಂಬುದು ಟೀನಾ ಮಾತಾಗಿದೆ.

ಸೆಲ್ಫಿ

#10

ಟೀನಾ ತಮ್ಮಿಬ್ಬರ ಮಕ್ಕಳನ್ನು ಶಾಲೆಯಿಂದ ಕರೆತರುತ್ತಿದ್ದಾಗ ಕೇಲನ್ ಸೆಲ್ಫಿ ಕ್ಲಿಕ್ಕಿಸಿ ಅದನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಆದರೆ ಇದು ತಕ್ಷಣವೇ ವೈರಲ್ ಆಗಿ ಹಬ್ಬಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಇಂಟರ್ನೆಟ್‌ನಲ್ಲಿ ಗದ್ದಲವೆಬ್ಬಿಸಿದ ಟಾಪ್ ಕ್ರಿಯಾತ್ಮಕ ಅನ್ವೇಷಣೆಗಳು
ಜೇಮ್ಸ್‌ ಬಾಂಡ್‌ ಸಿನಿಮಾಗಳ ಯಶಸ್ಸಿನ ಗುಟ್ಟು ರಟ್ಟು
ಜಾಹೀರಾತಿನಲ್ಲೂ ನಡೆದಿರುವ ಫೋಟೋಶಾಪ್ ತಪ್ಪುಗಳು
ಕೋಲ್ಕತ್ತಾ ಸೇತುವೆ ಕುಸಿತ ಚಿತ್ರಗಳಲ್ಲಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಹೋಗಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
When Kaylan Mahomes posted a recent car selfie with her twin, Kyla, and their mother, the social media world went into confusion.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot