ವಾಟ್ಸ್‌ಆಪ್‌ ಖಾತೆ ಹ್ಯಾಕ್ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿದ್ದಕ್ಕೆ 24 ವರ್ಷ ಜೈಲು!

|

ವಾಟ್ಸ್ಆಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿನ ಖಾತೆಗಳಿಗೆ ಕನ್ನ ಹಾಕಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ 24 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ವೈದ್ಯೆಯರು ಮತ್ತು ಶುಶ್ರೂಷಕಿಯರು ಸೇರಿದಂತೆ 200 ಮಹಿಳೆಯರಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ವ್ಯಕ್ತಿ ಈಗ ಸತತ 24ವರ್ಷ ಜೈಲಿನಲ್ಲಿ ಕೊಳೆಯಬೇಕಾಗಿದೆ.

ಹೌದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮ ಅಪರಾಧಕ್ಕೆ ಸಂಬಂಧಿಸಿದಂತೆ ಇಷ್ಟು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಪಾಕಿಸ್ತಾನದ ಕ್ರಮ ಈಗ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರ ಖಾತೆಗೆ ಕನ್ನ ಹಾಕಿ ಅಶ್ಲೀಲ ಚಿತ್ರಗಳನ್ನು ನಿಮ್ಮ ಖಾತೆಗಳಲ್ಲಿ ಅಪ್‌ಲೊಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಗೆ ಇಂತಹ ಗತಿ ಬಂದಿದೆ.

ವಾಟ್ಸ್‌ಆಪ್‌ ಖಾತೆ ಹ್ಯಾಕ್ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿದ್ದಕ್ಕೆ 24 ವರ್ಷ ಜೈಲು!

ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರ ಖಾತೆಗೆ ಕನ್ನ ಹಾಕಿ, ಅಶ್ಲೀಲ ಚಿತ್ರಗಳನ್ನು ನಿಮ್ಮ ಖಾತೆಗಳಲ್ಲಿ ಅಪ್‌ಲೊಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಆರೋಪದ ಮೇಲೆ ಪಂಜಾಬ್‌ನ ಲಯ್ಯಾಹ್ ಜಿಲ್ಲೆ ನಿವಾಸಿ ಅಬ್ದುಲ್‌ ವಹಾಬ್ ಎಂಬುವನನ್ನು 2015ರಲ್ಲಿ ಬಂಧಿಸಲಾಗಿತ್ತು. ಇದೀಗ ಶಿಕ್ಷೆಯನ್ನು ಪ್ರಕಟಿಸಿದ್ದು, 4 ವರ್ಷ ಜೈಲು ಮತ್ತು ₹7 ಲಕ್ಷ ದಂಡ ವಿಧಿಸಿ ಆದೇಶ ನೀಡಲಾಗಿದೆ.

ವೈದ್ಯೆಯರ ಮತ್ತು ಶುಶ್ರೂಷಕಿಯರ ವಾಟ್ಸ್‌ಆಪ್‌ ಖಾತೆಯನ್ನೂ ವಹಾಬ್ ಹ್ಯಾಕ್ ಮಾಡಿದ್ದಾನೆ. ಅಲ್ಲದೇ ಆಕ್ಷೇಪಾರ್ಹ ವಿಡಿಯೊಗಳು ಮತ್ತು ಫೋಟೊಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್‌ ಮಾಡಿದ್ದಲ್ಲದೆ, ಹಣ ನೀಡುವಂತೆ ಪೀಡಿಸುತ್ತಿದ್ದಾನೆ ಎಂದು ಪಾಕಿಸ್ತಾನದ ಯುವ ವೈದ್ಯರ ಸಂಘಟನೆಯ ಡಾ. ಸಲ್ಮಾನ್‌ ಕಝ್ಮಿ ಎಂಬುವವರು ವಹಾಬ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ವಾಟ್ಸ್‌ಆಪ್‌ ಖಾತೆ ಹ್ಯಾಕ್ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿದ್ದಕ್ಕೆ 24 ವರ್ಷ ಜೈಲು!

ವಾಟ್ಸ್ಆಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿನ ಖಾತೆಗಳಿಗೆ ಕನ್ನ ಹಾಕುವುದು ಕಷ್ಟ ಎಂದು ತಿಳಿದಿದೆ. ಆದರೆ, ಈಗ ಶಿಕ್ಷೆಗೆ ಗುರಿಯಾಗಿರುವ ಅಬ್ದುಲ್‌ ವಹಾಬ್ ಎಂಬುವವನು 200 ಮಹಿಳೆಯಯರ ಖಾತೆಗಳಿಗೆ ಕನ್ನಹಾಕಿದ ಎಂಬುದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ. ಒಟ್ಟಿನಲ್ಲಿ ಆತ ತಪ್ಪು ಮಾಡಿದ್ದರೆ ಭಾರೀ ಶಿಕ್ಷೆಯನ್ನು ಅನುಭವಿಸಬೇಕಿರುವುದು ಮಾತ್ರ ಸತ್ಯ.

Best Mobiles in India

English summary
Pakistani Cyber-Stalker Gets 24 Years in Jail for Blackmailing 200 Female Doctors, Nurses. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X