ಫೇಸ್‌ಬುಕ್‌ಗಿಂತ ಅಧಿಕ ಪ್ರಾಧಾನ್ಯತೆ ವಾಟ್ಸಾಪ್‌ಗೆ: ಏಕೆ ಗೊತ್ತಾ?

By Suneel
|

ಅಧಿಕವಾಗಿ ಇಂಟರ್ನೆಟ್‌ ಕಡೆಗೆ ಮುಖಮಾಡಿ ನಿಂತಿರುವ ಯುವಪೀಳಿಗೆ ಪ್ರಸ್ತುತ ದಿನಗಳಲ್ಲಿ ಸಂವಹನಕ್ಕೆ ಯಾವ ವೇದಿಕೆ ಬಳಸಿಕೊಳ್ಳುತ್ತಿದ್ದಾರೆ ಅಂದ್ರೆ ಫೇಸ್‌ಬುಕ್‌ ಕಡೆ ಮುಖಮಾಡಿ ನಿಲ್ಲುವುದು ಸಾಂಪ್ರದಾಯಿಕವಾದ ಉತ್ತರ ಅನಿಸಬಹುದು. ಆದ್ರೆ ವಾಸ್ತವ ಕಾರಣವೇ ಬೇರೆ ಇದೆ.

ಹೌದು, ಇಂದು ಫೇಸ್‌ಬುಕ್‌ಗಿಂತ ಪ್ರಾಥಮಿಕ ಮೆಸೇಜ್‌ ಆಪ್‌ಗಳಾದ ವಾಟ್ಸಾಪ್, ವೀಚಾಟ್ ಅನ್ನೇ ಫೇಸ್‌ಬುಕ್‌ಗಿಂತ ಅಧಿಕವಾಗಿ ಪ್ರಪಂಚದಾದ್ಯಂತ ಬಳಸುತ್ತಿದ್ದಾರೆ. "ರಿ ಇಲ್ಲಾ ಬಿಡ್ರಿ, ಫೇಸ್‌ಬುಕ್‌ಗಿಂತ ಬೇರೇ ಯಾವುದನ್ನು ಜಾಸ್ತಿ ಬಳಸಲು ಸಾಧ್ಯವೇ ಇಲ್ಲ" ಅಂತ ಹೇಳುವವರು ಇರಬಹುದು. ಆದ್ರೆ ಫೇಸ್‌ಬುಕ್‌ ಖಾತೆ ಹೊಂದಿರುವವರು ಅಧಿಕವಾಗಿದ್ದಾರೆಂಬುದು ಒಪ್ಪುವ ಮಾತು. ವಾಸ್ತವವಾಗಿ ಫೇಸ್‌ಬುಕ್‌ಗಿಂತ ವಾಟ್ಸಾಪ್‌ ಇಂದು ಅಧಿಕವಾಗಿ ಬಳಸುತ್ತಿರುವ ಆಪ್‌ ಆಗಿದೆ. ಹಾಗಾದ್ರೆ ಜನರೆಲ್ಲಾ ಫೇಸ್‌ಬುಕ್‌ಗಿಂತ ಅಧಿಕವಾಗಿ ವಾಟ್ಸಾಪ್ ಅನ್ನು ಬಳಸುತ್ತಿರುವುದಾದರೂ ಏಕೆ ಎಂಬುದು ಇಂದಿನ ಪ್ರಶ್ನೆ. ಇದಕ್ಕೆ ಉತ್ತರವನ್ನು ಲೇಖನದಲ್ಲಿ ಓದಿ ತಿಳಿಯಿರಿ.

ಫೇಸ್‌ಬುಕ್‌ಗಿಂತ ವಾಟ್ಸಾಪ್‌ಗೇಕೆ ಪ್ರಾಧಾನ್ಯತೆ?

ಫೇಸ್‌ಬುಕ್‌ಗಿಂತ ವಾಟ್ಸಾಪ್‌ಗೇಕೆ ಪ್ರಾಧಾನ್ಯತೆ?

ಫೇಸ್‌ಬುಕ್‌ಗೆ ಹೋಲಿಸಿದರೆ ವಾಟ್ಸಾಪ್‌ ಮತ್ತು ವೀಚಾಟ್‌ ವೈಯಕ್ತಿಕವಾದದು. ಅಯ್ಯೋ ಈ ಪೋಸ್ಟ್‌ ಅನ್ನು ನಾನು ಫೇಸ್‌ಬುಕ್‌ನಲ್ಲಿ ಹಾಕಲೇ ಬಾರದಿತ್ತು ಎಂದು ಕೆಲವೊಮ್ಮೆ ಕೆಲವು ಅನಾಹುತ ಉಂಟುಮಾಡುವ ಮಾಹಿತಿ ಅಂಟಿಸಿ ಕೊರಗುವುದುಂಟು. ಆದರೆ ವಾಟ್ಸಾಪ್‌ನಲ್ಲಿ ಪೋಸ್ಟ್‌ ಮಾಡಿದ ಯಾವುದೇ ಮಾಹಿತಿಗೆ ಎದರುವ ಅವಶ್ಯಕತೆ ಇಲ್ಲ. ಹೆಚ್ಚು ವಯಕ್ತಿಕ ಮತ್ತು ಸುರಕ್ಷತೆ ವಾಟ್ಸಾಪ್‌ನಲ್ಲಿದೆ.

ಫೇಸ್‌ಬುಕ್‌ಗಿಂತ ವಾಟ್ಸಾಪ್‌ಗೇಕೆ ಪ್ರಾಧಾನ್ಯತೆ?

ಫೇಸ್‌ಬುಕ್‌ಗಿಂತ ವಾಟ್ಸಾಪ್‌ಗೇಕೆ ಪ್ರಾಧಾನ್ಯತೆ?

ಡೇಟಾ ವಿಷಯದಲ್ಲಿ ವಾಟ್ಸಾಪ್‌ ಮತ್ತು ವೀಚಾಟ್ ಫೇಸ್‌ಬುಕ್‌ಗಿಂತ ಸುರಕ್ಷತೆ ಹೊಂದಿವೆ. ಫೇಸ್‌ಬುಕ್‌ನಲ್ಲಿ ಯಾವುದೇ ಮಾಹಿತಿ ಶೇರ್‌ ಮಾಡುವ ಮೊದಲು ಅದರ ನೀತಿ, ಪಾಲಿಸಿಗಳ ಬಗ್ಗೆ ಚಿಂತಿಸಬೇಕಾಗುತ್ತದೆ. ಫೇಸ್‌ಬುಕ್‌ ಬಗ್ಗೆ ಹ್ಯಾಕ್‌ ಆದರೆ ಎಂಬ ಭಯವು ಇರುತ್ತದೆ. ಆದರೆ ವಾಟ್ಸಾಪ್‌ ವಿಷಯದಲ್ಲಿ ಸುರಕ್ಷತೆ ಎಂಬುದಕ್ಕೆ ಭಯಪಡುವಹಾಗಿಲ್ಲ.

ಫೇಸ್‌ಬುಕ್‌ಗಿಂತ ವಾಟ್ಸಾಪ್‌ಗೇಕೆ ಪ್ರಾಧಾನ್ಯತೆ?

ಫೇಸ್‌ಬುಕ್‌ಗಿಂತ ವಾಟ್ಸಾಪ್‌ಗೇಕೆ ಪ್ರಾಧಾನ್ಯತೆ?

ಫೇಸ್‌ಬುಕ್‌ನಲ್ಲಿ ಮೆಸೇಜ್‌ ಕಳುಹಿಸಿದರೆ ಅವರು ನೋಡಿದ್ದಾರೋ ಇಲ್ಲವೋ ಎಂಬುದು ಸಹ ತಿಳಿಯುವುದಿಲ್ಲ. ಅಲ್ಲದೇ ಆನ್‌ಲೈನ್‌ಗೆ ಬರುವುದನ್ನು ಸಹ ಕಾಯಬೇಕಾಗುತ್ತದೆ. ಆದರೆ ವಾಟ್ಸಾಪ್‌ನಲ್ಲ ಮೆಸೇಜ್‌ ಅನ್ನು ನೋಡಲಾಗಿದೆಯೇ ಎಂಬುದು ತಿಳಿಯುತ್ತದೆ. ಅಲ್ಲದೇ ಅತೀ ವೇಗದಲ್ಲಿ ಚಾಟ್‌ ಮಾಡಬಹುದು.

ಫೇಸ್‌ಬುಕ್‌ಗಿಂತ ವಾಟ್ಸಾಪ್‌ಗೇಕೆ ಪ್ರಾಧಾನ್ಯತೆ?

ಫೇಸ್‌ಬುಕ್‌ಗಿಂತ ವಾಟ್ಸಾಪ್‌ಗೇಕೆ ಪ್ರಾಧಾನ್ಯತೆ?

ವಾಟ್ಸಾಪ್‌ನಲ್ಲಿ ನಮ್ಮ ಸಂಪರ್ಕದಲ್ಲಿರುವವರ ಜೊತೆ ಚಾಟ್‌ ಮಾಡುತ್ತೇವೆ. ಆದರೆ ಫೇಸ್‌ಬುಕ್‌ನಲ್ಲಿ ಫೇಕ್‌ ಖಾತೆ ಜೊತೆಗೆ ಅವರ ಪರಿಚಯ ವಿಲ್ಲದೇ ಸಂವಹನ ಬೆಳೆಸಿ ಅನಾಹುತಕ್ಕೆ ಕಾರಣವಾಗುವ ಸಂಭವವಿರುತ್ತದೆ.

ಫೇಸ್‌ಬುಕ್‌ಗಿಂತ ವಾಟ್ಸಾಪ್‌ಗೇಕೆ ಪ್ರಾಧಾನ್ಯತೆ?

ಫೇಸ್‌ಬುಕ್‌ಗಿಂತ ವಾಟ್ಸಾಪ್‌ಗೇಕೆ ಪ್ರಾಧಾನ್ಯತೆ?

ಫೇಸ್‌ಬುಕ್‌ನಲ್ಲಿ ನಿಮಗೆ 1000 ಗೆಳೆಯರೇ ಇರಬಹುದು. ಆದರೆ ವಾಟ್ಸಾಪ್‌ ಮತ್ತು ವೀಚಾಟ್‌ನಲ್ಲಿ ಮಾತ್ರ ನಿಮ್ಮ ಆತ್ಮೀಯ ಗೆಳೆಯರು ಸಂಪರ್ಕದಲ್ಲಿರುತ್ತಾರೆ. ಅಲ್ಲದೇ ವೈಯಕ್ತಿಕವಾಗಿ ವಾಟ್ಸಾಪ್‌ನಲ್ಲಿನ ಸ್ನೇಹಿತರನ್ನು ಪ್ರಧಾನವಾಗಿ ಪರಿಗಣಿಸಿ ಗ್ರೂಪ್‌ ಸಹ ಮಾಡಬಹುದು.

ಫೇಸ್‌ಬುಕ್‌ಗಿಂತ ವಾಟ್ಸಾಪ್‌ಗೇಕೆ ಪ್ರಾಧಾನ್ಯತೆ?

ಫೇಸ್‌ಬುಕ್‌ಗಿಂತ ವಾಟ್ಸಾಪ್‌ಗೇಕೆ ಪ್ರಾಧಾನ್ಯತೆ?

ವಾಟ್ಸಾಪ್, ವೀಚಾಟ್‌, ಫೇಸ್‌ಬುಕ್‌ ಬಳಸಲು ಇಂಟರ್ನೆಟ್‌ ಅತ್ಯಾವಶ್ಯಕ. ಆದರೆ ಫೇಸ್‌ಬುಕ್‌ಗಿಂತ ವಾಟ್ಸಾಪ್ ಕಡಿಮೆ ಡೇಟಾ ಬಳಕೆಮಾಡುತ್ತದೆ.

ಫೇಸ್‌ಬುಕ್‌ಗಿಂತ ವಾಟ್ಸಾಪ್‌ಗೇಕೆ ಪ್ರಾಧಾನ್ಯತೆ?

ಫೇಸ್‌ಬುಕ್‌ಗಿಂತ ವಾಟ್ಸಾಪ್‌ಗೇಕೆ ಪ್ರಾಧಾನ್ಯತೆ?

ಫೇಸ್‌ಬುಕ್‌ ಅನ್ನು ಬಳಸಲು ವೇಗದ ಇಂಟರ್ನೆಟ್‌ ಸಂಪರ್ಕ ಇಲ್ಲದಿದ್ದರೇ ಬಳಸಲು ಕಿರಿಕಿರಿ ಅಲ್ಲದೇ ಸಮಸ್ಯೆಯು ಹೌದು. ಆದರೆ ವಾಟ್ಸಾಪ್‌ ಅನ್ನು ಯಾವುದೇ ಕಡಿಮೆ ವೇಗದ ಇಂಟರ್ನೆಟ್‌ನಲ್ಲೂ ಸಹ ಬಳಸಬಹುದು.

ಗಿಜ್‌ಬಾಟ್‌

ಗಿಜ್‌ಬಾಟ್‌

ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ

ವಾಟ್ಸಾಪ್ ಬಳಸಲು ಫೋನ್ ನಂಬರ್ ಬೇಕಾಗಿಯೇ ಇಲ್ಲವಂತೆ!ವಾಟ್ಸಾಪ್ ಬಳಸಲು ಫೋನ್ ನಂಬರ್ ಬೇಕಾಗಿಯೇ ಇಲ್ಲವಂತೆ!

ಹೊಸ ಸಂಖ್ಯೆಯಿಂದ ಹಳೆಯ ವಾಟ್ಸಾಪ್ ಬಳಸುವುದು ಹೇಗೆ?ಹೊಸ ಸಂಖ್ಯೆಯಿಂದ ಹಳೆಯ ವಾಟ್ಸಾಪ್ ಬಳಸುವುದು ಹೇಗೆ?

Best Mobiles in India

English summary
Reasons Why We Prefer Whatsapp Over Facebook. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X