ಕೆಲವು ದೇಶಗಳಲ್ಲಿ ಫೇಸ್‌ಬುಕ್‌ಗಿಂತಲೂ ಹೆಚ್ಚು ಜನಪ್ರಿಯ ಜಾಲತಾಣಗಳು ಇವು!!

ಜನಪ್ರಿಯ ಜಾಲತಾಣ ಫೇಸ್‌ಬುಕ್ ಇಂದು ಎಷ್ಟು ಬೆಳದುನಿಂತಿದೆ ಎಂದರೆ, ಯಾವೊಬ್ಬ ಫೇಸ್‌ಬುಕ್ ಬಳಕೆದಾರನೂ ಕೂಡ ಕನಿಷ್ಟಪಕ್ಷ 30 ನಿಮಿಷಗಳ ಒಳಗಾಗಿ ಫೇಸ್‌ಬುಕ್ ಅನ್ನು ತೆರೆದು ನೋಡದೇ ಇರಲು ಸಾಧ್ಯವಿಲ್ಲ ಎನ್ನುತ್ತವೆ ಕೆಲವು ವರದಿಗಳು.

|

ಜನಪ್ರಿಯ ಜಾಲತಾಣ ಫೇಸ್‌ಬುಕ್ ಇಂದು ಎಷ್ಟು ಬೆಳದುನಿಂತಿದೆ ಎಂದರೆ, ಯಾವೊಬ್ಬ ಫೇಸ್‌ಬುಕ್ ಬಳಕೆದಾರನೂ ಕೂಡ ಕನಿಷ್ಟಪಕ್ಷ 30 ನಿಮಿಷಗಳ ಒಳಗಾಗಿ ಫೇಸ್‌ಬುಕ್ ಅನ್ನು ತೆರೆದು ನೋಡದೇ ಇರಲು ಸಾಧ್ಯವಿಲ್ಲ ಎನ್ನುತ್ತವೆ ಕೆಲವು ವರದಿಗಳು. ಹಾಗಾಗಿ, ಇಂದಿನ ಎಲ್ಲಾ ಜನತೆಗೂ ಫೇಸ್‌ಬುಕ್ ಎಂಬುದು ಬಹುದೊಡ್ಡ ಆಕರ್ಷಣೆಯಾಗಿದೆ.

ಹಾಗಾಗಿ, ಫೇಸ್‌ಬುಕ್ ಎಂಬ ಈ ಆಕರ್ಷಣೆಯಿಂದ ಹೊರಬಂದು ಮತ್ತೊಂದು ಇದೇ ರೀತಿಯ ಜಾಲತಾಣಕ್ಕೆ ನಾವು ಹೋಗಬೇಕಾದರೆ ಅದು ಸುಲಭಸಾಧ್ಯವಲ್ಲ. ಈಗಾಗಲೇ ಹೊಂದಿರುವ ಫೇಸ್‌ಬುಕ್ ಫ್ರೆಂಡ್ಸ್. ಹೆಚ್ಚು ಜನರಿಂದ ಫೇಸ್‌ಬುಕ್ ಬಳಕೆ, ಹಾಗೂ ಫೇಸ್‌ಬುಕ್ ಅಕೌಂಟ್ ಅಪ್‌ಡೇಟ್ಸ್ ಎಲ್ಲವೂ ನಮ್ಮನ್ನು ಫೇಸ್‌ಬುಕ್ ಬಳಕೆ ಮಾಡುವಂತೆ ಹಿಡಿದಿಡುತ್ತವೆ.!

ಕೆಲವು ದೇಶಗಳಲ್ಲಿ ಫೇಸ್‌ಬುಕ್‌ಗಿಂತಲೂ ಹೆಚ್ಚು ಜನಪ್ರಿಯ ಜಾಲತಾಣಗಳು ಇವು!!

ಇನ್ನು ಇವೆಲ್ಲವನ್ನೂ ಮೀರಿ ದೊಡ್ಡ ಮಾರುಕಟ್ಟೆ ತಂತ್ರಗಳನ್ನು ಫೇಸ್‌ಬುಕ್ ಎಂಬ ಮಾಯೆಯನ್ನು ಮೀರಿಸುವ ಕೆಲಸಕ್ಕೆ ಕೆಲ ಜಾಲತಾಣಗಳು ಕೈಹಾಕಿವೆ. ಹಾಗಾದರೆ, ಫೇಸ್‌ಬುಕ್ ಅನ್ನು ಎದುರುಹಾಕಿಕೊಂಡು ಸೇವೆ ಸಲ್ಲಿಸಿ ಜನಪ್ರಿಯವಾಗಿರುವ ಜಾಲತಾಣಗಳು ಯಾವುವು? ಫೇಸ್‌ಬುಕ್‌ಗಿಂತಲೂ ಅವುಗಳ ವಿಭಿನ್ನತೆ ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಕಕಾವೊ ಟಾಕ್!!

ಕಕಾವೊ ಟಾಕ್!!

ದಕ್ಷಿಣ ಕೊರಿಯಾದಲ್ಲಿರುವ 5.62 ಕೋಟಿ ಜನಸಂಖ್ಯೆಯಲ್ಲಿ ಸುಮಾರು 4.5 ಕೋಟಿ ಮಂದಿ ಬಳಸುತ್ತಿರುವ ಈ ಜಾಲತಾಣ ಕಕಾವೊ ಟಾಕ್! ವಿಶ್ವದಲ್ಲಿಯೇ ಒಂದು ದೇಶದಲ್ಲಿ ಶೇ 90ರಷ್ಟು ಜನರ ನೆಚ್ಚಿನ ಜಾಲತಾಣವಾಗಿ ಮನ್ನಣೆ ಗಳಿಸಿರುವ ಏಕೈಕ ಆಪ್ ಇದಾಗಿದೆ. 2010ರಲ್ಲಿ ಹುಟ್ಟಿದ ಈ ಆಪ್ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿ ಫೇಸ್‌ಬುಕ್‌ ಅನ್ನು ಮೂಲೆಗೆ ತಳ್ಳಿದೆ

ವಿ ಕಾಂಟಾಕ್ಟೆ!!

ವಿ ಕಾಂಟಾಕ್ಟೆ!!

ಫೆಸ್‌ಬುಕ್ ಅನ್ನು ಹದರಿಸಿರುವ ಮತ್ತೊಂದು ಸಾಮಾಜಿಕ ಜಾಲತಾಣ ವಿ ಕಾಂಟಾಕ್ಟೆ. ಫೇಸ್‌ಬುಕ್‌ನಂತೆಯೇ ಆರಂಭವಾದ ಈ ಸಂಸ್ಥೆ ರಷ್ಯಾದಲ್ಲಿ ಹುಟ್ಟಿದ್ದು, ರಷ್ಯಾದ ಯುವಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ರಷ್ಯಾದಲ್ಲಿ ಈ ಜಾಲತಾಣವನ್ನು ಶೇ 65ರಷ್ಟು ಜನ ಬಳಸುತ್ತಿದ್ದರೆ, ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ ಕೇವಲ ಶೇ 35ರಷ್ಟಿದೆ.!!

ವೀ ಚಾಟ್!!

ವೀ ಚಾಟ್!!

2009ರಲ್ಲಿ ಫೇಸ್‌ಬುಕ್ ಬಳಕೆ ಮೇಲೆ ಚೀನಾ ಸರ್ಕಾರ ನಿಷೇಧ ವಿಧಿಸಿದ ನಂತರ ಬೆಳೆದುನಿಂತ ವಿಚಾಟ್ ಚೀನಾದಲ್ಲಿ ಭಾರೀ ಹೆಸರುಗಳಿಸಿರುವ ಜಾಲತಾಣವಾಗಿದೆ. ಫೇಸ್‌ಬುಕ್‌ಗಿಂತಲೂ ವಿಭಿನ್ನವಾಗಿ ರೂಪಿತವಾಗಿ 2011ರಲ್ಲಿ ಬಳಕೆಗೆ ಬಂದ ವೀಚಾಟ್ ಕೇವಲ ಏಳು ವರ್ಷಗಳಲ್ಲಿ 100 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ.

How to view all photos, pages, comments and posts you liked on Facebook (KANNADA)
ಲೈನ್‌!!

ಲೈನ್‌!!

ನಾವು ಚಾಟ್‌ ಮಾಡುವಾಗ ಬಳಸುವ ಎಮೊಜಿಗಳ ಹಾಗೆಯೇ ಇದ್ದ ಸ್ಟಿಕ್ಕರ್‌ಗಳನ್ನು ಪರಿಚಯಿಸಿದ ಲೈನ್ ಜಾಲತಾಣಕ್ಕೆ ಜಪಾನ್ ಯುವಜನರು ಬಾಚಿತಬ್ಬಿದರು. ಫೇಸ್‌ಬುಕ್, ಟಿಂಬ್ಲರ್‌ನಂತಹ ಆಪ್‌ಗಳ ಪೈಪೋಟಿಯಲ್ಲಿಯೂ ಮೊದಲ ಸ್ಥಾನಕ್ಕೇರಿರ ಲೈನ್ ಜಾಲತಾಣವನ್ನು ಇಂದು ಜಪಾನ್‌ನಲ್ಲಿ ಸುಮಾರು 2.2ಕೋಟಿ ಜನರು ಬಳಸುತ್ತಿದ್ದಾರೆ.

ಫೇಸ್‌ಬುಕ್ ಅಕೌಂಟ್ ಡಿಲೀಟ್ ಮಾಡುವುದು ಸುಲಭ ಅಂದುಕೊಂಡಿದ್ದೀರಾ?..ಹಾಗಾದ್ರೆ ಇಲ್ಲಿ ನೋಡಿ!!ಫೇಸ್‌ಬುಕ್ ಅಕೌಂಟ್ ಡಿಲೀಟ್ ಮಾಡುವುದು ಸುಲಭ ಅಂದುಕೊಂಡಿದ್ದೀರಾ?..ಹಾಗಾದ್ರೆ ಇಲ್ಲಿ ನೋಡಿ!!

Best Mobiles in India

English summary
Facebook recently became one of the largest IPOs in history but according to a recent Huffington Post article, the Social Network isn’t the only way to connect. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X