ಡೆಸ್ಕ್ಟಾಪ್ ನಿಂದ ಇನ್ಸ್ಟಾಗ್ರಾಮ್ ಗೆ ಫೋಟೋ ಪೋಸ್ಟ್ ಮಾಡುವುದು ಹೇಗೆ?

By Manju

  ಇತ್ತೀಚೆಗೆ ಇನ್ಸ್ಟಾಗ್ರಾಮ್ ತನ್ನ ಆಪ್ ಅನ್ನು ಅಪ್ಡೇಟ್ ಮಾಡಿದ್ದು, ಈಗ ಬಳಕೆದಾರರು ತಮ್ಮ ಸಾಧನದಲ್ಲಿ ಆಪ್ ಅನ್ನು ಇನ್ಸ್ಟಾಲ್ ಮಾಡದೆಯೇ ಫೋಟೋಗಳನ್ನು ಪೋಸ್ಟ್ ಮಾಡಬಹುದು ಮತ್ತು ಇತರರು ಪೋಸ್ಟ್ ಮಾಡಿದ ಫೋಟೋಗಳನ್ನು ನೋಡಬಹುದಾಗಿದೆ. ಆದರೆ ಇದಕ್ಕಾಗಿ ಬಳಕೆದಾರರು ಇನ್ಸ್ಟಾಗ್ರಾಮ್ ಆಪ್ ಗೆ ಆಕ್ಸೆಸ್ ಪಡೆಯಲು ಮತ್ತೊಂದು ಆಪ್ ಅನ್ನು ಇನ್ಸ್ಟಾಲ್ ಮಾಡಬೇಕು.

  ಡೆಸ್ಕ್ಟಾಪ್ ನಿಂದ ಇನ್ಸ್ಟಾಗ್ರಾಮ್ ಗೆ ಫೋಟೋ ಪೋಸ್ಟ್ ಮಾಡುವುದು ಹೇಗೆ?

  ಈ ಹೊಸ ಅಪ್ಡೇಟ್ ಮೂಲಕ ಬಳಕೆದಾರರಿಗೆ ಕ್ಯಾಮೆರಾ ಐಕಾನ್ ದೊರೆಯಲಿದ್ದು ಬಳಕೆದಾರರು ಗ್ಯಾಲರಿಯಿಂದ ತಮ್ಮ ಆಯ್ಕೆಯ ಫೋಟೋ ಅನ್ನು ಪೋಸ್ಟ್ ಮಾಡಬಹುದು. ಆದರೆ ಬಳಕೆದಾರರು ವೀಡಿಯೋ ಪೋಸ್ಟ್ ಮಾಡಲಾಗದು, ಅಥವಾ ಫಿಲ್ಟರ್ ಬಳಸಲಾಗದು ಮತ್ತು ಇತರರ ಸ್ಟೋರಿಗಳನ್ನು ನೋಡಲಾಗದು. ಈ ಲೇಖನದಲ್ಲಿ ಡೆಸ್ಕ್ಟಾಪ್ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಪೋಸ್ಟ್ ಮಾಡುವುದು ಹೇಗೆಂದು ತಿಳಿಸಲಿದ್ದೇವೆ.

  ಇನ್ಸ್ಟಾಗ್ರಾಮ್ ಒಂದು ಫೋಟೋ ಶೇರಿಂಗ್ ಆಪ್ ಆಗಿದ್ದು, ಬಳಕೆದಾರರು ಫೋಟೋ ಹಾಗೂ ವೀಡಿಯೋಗಳನ್ನು ಈ ಆಪ್ ಮೂಲಕ ಸಾರ್ವಜನಿಕವಾಗಿ ಆಥವಾ ಖಾಸಗಿಯಾಗಿ ತಮ್ಮ ಆಯ್ಕೆಯ ಗೆಳೆಯರೊಂದಿಗೆ ಹಂಚಿಕೊಳ್ಳಬಹುದಾಗಿದೆ. ಅಲ್ಲದೆ ಈ ಆಪ್ ಮೂಲಕ ಬಳಕೆದಾರರು ತಮ್ಮ ಫೋಟೋಗಳಿಗೆ ಡಿಜಿಟಲ್ ಫಿಲ್ಟರ್ಗಳನ್ನು ಹಾಕಬಹುದು, ಜಿಯೋಟ್ಯಾಗ್ ಮೂಲಕ ಲೊಕೇಶನ್ ಹಾಕಬಹುದು ಮತ್ತು ತಮ್ಮ ಪೋಸ್ಟ್ಗಳಿಗೆ ಹ್ಯಾಶ್ಟ್ಯಾಗ್ ಗಳನ್ನು ಕೂಡ ಹಾಕಬಹುದು.

  ನಾವೀಗ ಹೇಳ ಹೊರಟಿರುವ ಪ್ರಕ್ರಿಯೆಯ ಮೂಲಕ ಡೆಸ್ಕ್ಟಾಪ್ ಬಳಕೆದಾರರು ಇನ್ಸ್ಟಾಗ್ರಾಮ್ ಅನ್ನು ಆಕ್ಸೆಸ್ ಮಾಡಬಹುದಲ್ಲದೆ, ಫೋಟೋ ಪೋಸ್ಟ್ ಮಾಡಬಹುದು ಮತ್ತು ಇತರರು ಪೋಸ್ಟ್ ಮಾಡಿರುವ ಫೋಟೋಗಳನ್ನೂ ನೋಡಬಹುದು. ಇದಕ್ಕಾಗಿ ಮೊದಲಿಗೆ ಕ್ರೋಮ್ ನ ಇನ್ಕಾಗ್ನಿಟೋ ಟ್ಯಾಬ್ ಅಥವಾ ಸಫಾರಿಯ ಪ್ರೈವೇಟ್ ಬ್ರೌಸಿಂಗ್ ವಿಂಡೋ ಮೂಲಕ ಇನ್ಸ್ಟಾಗ್ರಾಮ್ ನ ವೆಬ್ ಆಪ್ ತೆರೆದು ಲಾಗಿನ್ ಮಾಡಿ.

  ಡೆಸ್ಕ್ಟಾಪ್ ನಿಂದ ಇನ್ಸ್ಟಾಗ್ರಾಮ್ ಗೆ ಫೋಟೋ ಪೋಸ್ಟ್ ಮಾಡುವುದು ಹೇಗೆ?

  ಕ್ರೋಮ್

  ಕ್ರೋಮ್ ನಲ್ಲಿ ಇದನ್ನು ಸಾಧಿಸಲು ಮೊದಲು CTRL+SHIFT+I ಒತ್ತಿ.ಆಗ ನಿಮ್ಮ ಪರದೆಯ ಬಲಭಾಗದಲ್ಲಿ ಡೆವೆಲಪರ್ಸ್ ವಿಂಡೋ ತೆರೆದುಕೊಳ್ಳುತ್ತದೆ. ಅದರ ಮೆಲ್ಭಾಗದಲ್ಲಿ 'ಎಲಿಮೆಂಟ್ಸ್' ಪಕ್ಕದಲ್ಲಿ ಮೊಬೈಲ್ ಡಿಸ್ಪ್ಲೇ ಐಕಾನ್ ಒಂದು ನಿಮಗೆ ಕಾಣಸಿಗುತ್ತದೆ. ಅದನ್ನು ಒತ್ತಿದಾಗ ವೆಬ್ಸೈಟ್ ವ್ಯೂ ಡೆಸ್ಕ್ಟಾಪ್ ನಿಂದ ಸ್ಮಾರ್ಟ್ಫೋನ್ ಗೆ ಅನುಗುಣವಾಗಿ ಬದಲಾಗುತ್ತದೆ. ಈಗ ವೆಬ್ಸೈಟ್ ನ ಕೆಳಭಾಗದಲ್ಲಿ ಮಧ್ಯದಲ್ಲಿ ಕಾಣಸಿಗುವ ಕ್ಯಾಮೆರಾ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಡೆಸ್ಕ್ಟಾಪ್ ನಿಂದ ಇನ್ಸ್ಟಾಗ್ರಾಮ್ ಗೆ ಫೋಟೋ ಅಪ್ಲೋಡ್ ಮಾಡಬಹುದಾಗಿದೆ.

  ಡೆಸ್ಕ್ಟಾಪ್ ನಿಂದ ಇನ್ಸ್ಟಾಗ್ರಾಮ್ ಗೆ ಫೋಟೋ ಪೋಸ್ಟ್ ಮಾಡುವುದು ಹೇಗೆ?

  ಸಫಾರಿ

  ಸಫಾರಿ ಯಲ್ಲಿ ಇದನ್ನು ಸಾಧಿಸಲು ಬಳಕೆದಾರರು ಮೊದಲಿಗೆ ಪ್ರಿಫರೆನ್ಸಸ್->ಎಡ್ವಾನ್ಸ್ಡ್ ಗೆ ಹೋಗಿ "ಶೋ ಡೆವಲಪ್ ಮೆನು ಇನ್ ಮೆನು ಬಾರ್" ಎಂಬ ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. ಈಗ ಒಂದು ಪ್ರೈವೇಟ್ ವಿಂಡೋ ತೆರೆದು 'ಡೆವಲಪ್ ಮೆನು' ವಿನಲ್ಲಿ 'ಯೂಸರ್ ಏಜಂಟ್' ಅನ್ನು 'iOS 10- ಐಫೋನ್' ಎಂದು ಸೆಟ್ ಮಾಡಿ. ಈಗ ಬಳಕೆದಾರರು ಕ್ಯಾಮೆರಾ ಆಯ್ಕೆಯನ್ನು ಪಡೆಯಬಹುದಾಗಿದ್ದು, ಈ ಮೂಲಕ ತಮ್ಮ ಲ್ಯಾಪ್ಟಾಪ್ ನಿಂದ ನೇರವಾಗಿ ಇನ್ಸ್ಟಾಗ್ರಾಮ್ ಗೆ ಫೋಟೋ ಅಪ್ಲೋಡ್ ಮಾಡಬಹುದಾಗಿದೆ.

  'ಟ್ರೂ ಕಾಲರ್' ಆಪ್ ಬಳಸಿ ಹಣಕಳೆದುಕೊಳ್ಳಬೇಡಿ!!..ಈಗಲೇ ಎಚ್ಚರವಾಗಿ!?!

  Read more about:
  English summary
  Instagram has recently updated its app where once can post photos and browse through images without having to install the app on your device.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more