ಏನೀದು ಫೇಸ್‌ಬುಕ್ 'ಟೆನ್ ಇಯರ್ಸ್ ಚಾಲೆಂಜ್'.!?

|

ಮಾಹಿತಿ ಅತೀ ವೇಗವಾಗಿ ತಲುಪಬೇಕೆಂದರೇ ಇದು ಸಾಮಾಜಿಕ ಜಾಲತಾಣಗಳಿಂದ ಮಾತ್ರ ಸಾಧ್ಯ. ವೈರಸ್‌ಗಿಂತ ಸ್ಪೀಡ್‌ ಆಗಿ ಹರಿದಾಡಿಸುವ ಸಾಮರ್ಥ್ಯ ಸಾಮಾಜಿಕ ಜಾಲತಾಣಗಳಿಗಿದೆ ಎನ್ನುವುದು ಇದೀಗ ಜನಜನಿತ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಎಲ್ಲ ಬಗೆಯ ಸುದ್ದಿಗಳು, ಟ್ರೋಲ್, ಮತ್ತು ಮೆಮ್ಸ್‌ಗಳು ಹರಿದಾಡುತ್ತಿರುವುದು ಸಹಜ. ಫೇಸ್‌ಬುಕ್‌ನಲ್ಲಿ 'ಚಾಲೆಂಜ್' ಸ್ವೀಕರಿಸುವುದು ಇದೀಗ ಭಾರಿ ಟ್ರೆಂಡ್ ಹುಟ್ಟುಹಾಕಿದೆ.

ಏನೀದು ಫೇಸ್‌ಬುಕ್ 'ಟೆನ್ ಇಯರ್ಸ್ ಚಾಲೆಂಜ್'.!?

ಹೌದು, ಫೇಸ್‌ಬುಕ್‌ನಲ್ಲಿಗ 'ಟೆನ್ ಇಯರ್ಸ್ ಚಾಲೆಂಜ್' ಭಾರಿ ಸುದ್ದಿಯಲ್ಲಿದ್ದು, ಹತ್ತು ವರ್ಷಗಳ ಹಿಂದಿನ ಫೋಟೋವನ್ನು ಮತ್ತು ಪ್ರಸ್ತುತ ಫೋಟೋವನ್ನು ಕೂಡಿಸಿ ಒಟ್ಟಿಗೆ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡುವುದರ ಮೂಲಕ ಫೇಸ್‌ಬುಕ್ ಬಳಕೆದಾರರು ಟೆನ್ ಇಯರ್ಸ್ ಚಾಲೆಂಜ್‌ನಲ್ಲಿ ಭಾಗಿಯಾಗಬಹದಾಗಿದೆ. ಹತ್ತು ವರ್ಷದಲ್ಲಿ ಹೇಗಿದ್ದೆ ಮತ್ತು ಇವಾಗ ಹೇಗಿದಿನಿ ನೋಡಿ ವ್ಯತ್ಯಾಸ ಗಮನಿಸಿ ಅನ್ನುವ ತರಹ ಇದೆ.

ಏನೀದು ಫೇಸ್‌ಬುಕ್ 'ಟೆನ್ ಇಯರ್ಸ್ ಚಾಲೆಂಜ್'.!?

ಇದೀಗ ಟ್ರೆಂಡ್‌ನಲ್ಲಿರುವ ಫೇಸ್‌ಬುಕ್‌ನ ಈ ಟೆನ್‌ ಇಯರ್ಸ್ ಚಾಲೆಂಜ್‌ನಲ್ಲಿ ಈಗಾಗಲೇ ಅನೇಕ ಪ್ರಖ್ಯಾತ ಸೆಲೆಬ್ರಿಟಿಗಳು ಸೇರಿದಂತೆ ಸುಮಾರು 5 ಮಿಲಿಯನ್‌ಗಿಂತಲೂ ಹೆಚ್ಚು ಫೇಸ್‌ಬುಕ್‌ನ ಬಳಕೆದಾರರು ತಮ್ಮ ಹತ್ತು ವರ್ಷದ ಹಳೆಯ ಮತ್ತು ಪ್ರಸ್ತುತ ಫೋಟೋಗಳನ್ನು ಕೂಡಿಸಿ ಪೋಸ್ಟ್‌ ಮಾಡಿ ಚಾಲೆಂಜ್‌ನಲ್ಲಿ ಭಾಗವಹಿಸಿದ್ದಾರೆ. ಟೆನ್‌ ಇಯರ್ಸ್ ಚಾಲೆಂಜ್‌ ಫೇಸ್‌ಬುಕ್‌ನ ಈ ವರ್ಷದ ಮೊದಲ ಚಾಲೆಂಜ್ ಎಂದು ಹೇಳಲಾಗುತ್ತಿದೆ.

ಏನೀದು ಫೇಸ್‌ಬುಕ್ 'ಟೆನ್ ಇಯರ್ಸ್ ಚಾಲೆಂಜ್'.!?

ಅಷ್ಟಕ್ಕೂ ಫೇಸ್‌ಬುಕ್‌ನಲ್ಲಿ ಈ 'ಟೆನ್ ಇಯರ್ಸ್ ಚಾಲೆಂಜ್' ಅನ್ನು ಯಾರು ಆರಂಭಿಸಿದರು ಮತ್ತು ಯಾಕೆ ಆರಂಭಿಸಿದರು ಎನ್ನುವುದು ಹೇಳಲಾಗದು. ಈ ಹಿಂದೆ ಇದೇ ತರಹ ಕಿ ಕಿ ಡ್ಯಾನ್ಸ್‌ ಚಾಲೆಂಜ್ ಸಾಮಾಜಿಕ್ ತಾಣಗಳಲ್ಲಿ ವೈರಲ್ ಆಗಿರುವ ಹಾಗೇ ಇದು ಸಹ. ಹಾಗಾದರೇ ಯಾರೆಲ್ಲಾ ಈ ಚಾಲೆಂಜ್‌ನಲ್ಲಿ ಭಾಗವಹಿಸಬಹುದು.?, ಫೇಸ್‌ಬುಕ್‌ ಬಳಸುವ ಪ್ರತಿಯೊಬ್ಬರೂ ಸಹ ಟೆನ್ ಇಯರ್ಸ್ ಚಾಲೆಂಜ್ ಸ್ವೀಕರಿಸಬಹುದು, ತಮ್ಮ ಹಳೆಯ ಫೋಟೋ ಮತ್ತು ಪ್ರಸ್ತುತ ಫೋಟೋ ಕೂಡಿಸಿ ಪೋಸ್ಟ್ ಮಾಡಿದರಾಯಿತು.

Best Mobiles in India

English summary
What is it, who started ten years challenge it and how to get in.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X