ಈ ಆಪ್ ಬಂದರೇ ನಿಮ್ಮ ಮಕ್ಕಳು ಬಿದ್ದು, ಬಿದ್ದು ನಗೋದು ಗ್ಯಾರಂಟಿ!

|

ಸ್ಮಾರ್ಟ್‌ಫೋನ್‌ವೊಂದು ಜತೆಗಿದ್ದರೆ ಮನರಂಜನೆಯ ಮಹಾಪೂರವೇ ಇದ್ದಂತೆ. ಈಗ ದೊಡ್ಡವರೇ ಇರಲಿ, ಮಕ್ಕಳೇ ಇರಲಿ ಎಲ್ಲರು ಮನರಂಜನೆ ಬಯಸುತ್ತಾರೆ. ಆದರೆ ಪ್ರತಿಯೊಬ್ಬರ ಅಭಿರುಚಿಯು ಭಿನ್ನ ಭಿನ್ನ ವಾಗಿರುವಂತೆ ಮಕ್ಕಳಿಗೆ ಮಾತ್ರ ಭಿನ್ನವಾದ ಮನರಂಜನೆ ನೀಡುವ ಜಾಲತಾಣಗಳು ಇಲ್ಲ. ಆದರೆ, ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮಕ್ಕಳಿಗೆ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದೆ.

ಈ ಆಪ್ ಬಂದರೇ ನಿಮ್ಮ ಮಕ್ಕಳು ಬಿದ್ದು, ಬಿದ್ದು ನಗೋದು ಗ್ಯಾರಂಟಿ!

ಮಕ್ಕಳ ಮನರಂಜನೆಗಾಗಿಯೇ ಫೇಸ್‌ಬುಕ್‌ ಒಂದು LOL ಹಬ್ ಎಂಬ ಹೊಸ ಆಪ್ ಅನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದ್ದು, ಈ 'LOL ಹಬ್' ಆಪ್ ನಿಮ್ಮ ಮಕ್ಕಳನ್ನು ನಗಿಸುವುದು ಗ್ಯಾರಂಟಿ . ಏಕೆಂದರೇ LOL ಹಬ್ ಕಂಪ್ಲೀಟ್ ಫನ್ನಿ ವಿಡಿಯೋಗಳೇ ತುಂಬಿರುವ ಆಪ್ ಆಗಿರಲಿದ್ದು, ಇದರಲ್ಲಿ ಮಕ್ಕಳು ಸಂಪೂರ್ಣ ಹಾಸ್ಯಭರಿತ ವಿಡಿಯೋಗಳನ್ನು ಹಂಚಿಕೊಳ್ಳಬಹುದಾಗಿದೆ ಮತ್ತು ಪೋಸ್ಟ್ ಸಹ ಮಾಡಬಹುದಾಗಿದೆ. ಈ ಫನ್ನಿ ವಿಡಿಯೋಗಳು ಮಕ್ಕಳಿಗೆ ಖುಷಿ ನೀಡುತ್ತವೆ.

ಈ ಆಪ್ ಬಂದರೇ ನಿಮ್ಮ ಮಕ್ಕಳು ಬಿದ್ದು, ಬಿದ್ದು ನಗೋದು ಗ್ಯಾರಂಟಿ!

ಮಕ್ಕಳಿಗಾಗಿಯೇ ಫೇಸ್‌ಬುಕ್ ಸಂಸ್ಥೆ ಪರಿಚಯಿಸುತ್ತಿರುವ ಈ ನೂತನ ಆಪ್‌ನಲ್ಲಿ ಹಾಸ್ಯಭರಿತ ವಿಡಿಯೋ ಕ್ಲಿಪ್‌ಗಳನ್ನು ಹಂಚಿಕೊಳ್ಳಬಹುದಾಗಿದ್ದು, ಸ್ವಂತ ಪೋಸ್ಟ್‌ಗಳನ್ನು ಸಹ ಮಾಡಬಹುದಾಗಿದೆ. ಇದರಲ್ಲಿ ಫಾರ್ ಯೂ, ಅನಿಮಲ್ಸ್, ಫೈಲ್ಸ್ ಮತ್ತು ಫನ್ನಿ ವಿಡಿಯೋ ಎಂಬ ವಿಭಾಗಗಳಾಗಿ ವಿಂಗಡಿಸಿರುತ್ತಾರೆ ಎನ್ನಲಾಗುತ್ತಿದೆ. ಫೇಸ್‌ಬುಕ್‌ನ ಬಹುನಿರೀಕ್ಷಿತ ಈ ಆಪ್ ಬಂದರೇ ನಿಮ್ಮ ಮಕ್ಕಳು ಸಿಕ್ಕಾಪಟ್ಟೆ ಎಂಜಾಯ್ ಮಾಡುವುದು ಗ್ಯಾರಂಟಿ.

ಈ ಆಪ್ ಬಂದರೇ ನಿಮ್ಮ ಮಕ್ಕಳು ಬಿದ್ದು, ಬಿದ್ದು ನಗೋದು ಗ್ಯಾರಂಟಿ!

ಏಕೆಂದರೆ, ಸ್ಮಾರ್ಟ್‌ಫೋನಿನಲ್ಲಿ ಮಕ್ಕಳಿಗೆ ಬರೀ ಗೇಮ್ಸ್ ಆಡಿ ಬೇಜಾರಾಗಿದ್ದರೆ ಅವರ ಬೇಸರವನ್ನು ಹೊಗಲಾಡಿಸಲು ಈ ಆಯ್ಕೆ ಕಾಣಿಸಿಕೊಳ್ಳಲಿದೆ. ಫೇಸ್‌ಬುಕ್‌ನ ಈ ಹೊಸ ಪ್ರಯತ್ನ ಕೇವಲ ಮನರಂಜನೆಗೆ ಮಾತ್ರವಲ್ಲದೇ, ಮಕ್ಕಳ ಬೌದ್ದಿಕ ಮಟ್ಟವನ್ನು ಸಹ ಹೆಚ್ಚಿಸುವ ಕ್ರಮವಾಗಿದೆ. ಏಕೆಂದರೇ ಅವರು ಸಿಕ್ಕಾಪಟ್ಟೆ ಆಡುವುದರಲ್ಲಿ ಬ್ಯುಸಿ ಆಗಿರ್ತಿರೆ. ಹಾಗಾಗ, ಅವರು ಈಗ ಹೊಸತನ್ನು ತಿಳಿಯಲು ಫೇಸ್‌ಬುಕ್ ಈ ಆಪ್ ಅನ್ನು ಬಿಡುಗಡೆ ಮಾಡುತ್ತಿದೆ.

ಈ ಆಪ್ ಬಂದರೇ ನಿಮ್ಮ ಮಕ್ಕಳು ಬಿದ್ದು, ಬಿದ್ದು ನಗೋದು ಗ್ಯಾರಂಟಿ!

ಇನ್ನು ಈಗಾಗಲೇ ಫೇಸ್‌ಬುಕ್‌ ಈ ಆಪ್‌ ಅನ್ನು 100 ಪ್ರೌಢ ಶಾಲಾ ಮಕ್ಕಳಗೆ ಬಳಸಲು ನೀಡಿ ಪ್ರಾಯೋಗಿಕ ಪರೀಕ್ಷೆಗಳನ್ನು ಮಾಡಿದೆ. ಫೇಸ್‌ಬುಕ್ ಸಂಸ್ಥೆ ತನ್ನ ಹೊಸ LOL ಹಬ್‌ನ್ನು ಆದಷ್ಟು ಬೇಗ ಮಕ್ಕಳಿಗಾಗಿ ಪರಿಚಯಿಸುವುದು ಎನ್ನಲಾಗುತ್ತಿದ್ದು, ಫೇಸ್‌ಬುಕ್ 'ಫನ್ನಿ ವಿಡಿಯೋ ಹಬ್' ಅನ್ನು ಪ್ರತ್ಯೆಕ ಆಪ್ ಮಾಡಿ ಬಿಡುಗಡೆ ಮಾಡಬಹುದು ಅಥವಾ ಫೇಸ್‌ಬುಕ್‌ನಲ್ಲಿಯೇ ಹೊಸ ಫೀಚರ್ ಆಗಿಯೂ ಸೇರಿಸಲೂಬಹುದು ಎಂದು ಹೇಳಲಾಗುತ್ತಿದೆ.

Best Mobiles in India

English summary
The app will be divided into categories like 'For You', 'Animals', 'Fails' and 'Pranks'.to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X