ನಿಮ್ಮ ಒಂದು ಲೈಕ್‌ನಿಂದ ಫೇಸ್‌ಬುಕ್‌ ಗಳಿಸುವ ಹಣವೆಷ್ಟು ಗೊತ್ತಾ?!

  |

  ನಾವು ನೇರವಾಗಿ ಒಂದು ರೂಪಾಯಿಯನ್ನು ನೀಡದಿದ್ದರೂ ಸಹ ಫೇಸ್‌ಬುಕ್ ಲಕ್ಷಾಂತರ ಕೋಟಿಗೂ ಅಧಿಕ ಆದಾಯವನ್ನು ಗಳಿಸಿರುವುದು ಹೇಗೆ ಎಂದು ಆಶ್ಚರ್ಯವಾಗಬಹುದು. ಆದರೆ, ಇದಕ್ಕಿಂತಲೂ ಆಶ್ಚರ್ಯವಾದ ಸಂಗತಿ ಏನು ಗೊತ್ತಾ? 'ಫೇಸ್‌ಬುಕ್‌ ಬಳಸುವ ಬಹುತೇಕರ ಒಂದು ದಿನದ ಆದಾಯಕ್ಕಿಂತ ಅವನು ಫೇಸ್‌ಬುಕ್‌ಗೆ ಪಾವತಿಸುವ ಹಣ ಹೆಚ್ಚು' ಎಂದರೆ ನೀವು ನಂಬಲೇಬೇಕು.!

  ಹೌದು, 2016 ರಿಂದಲೂ ಅಮೆರಿಕ ಹಾಗೂ ಕೆನಡಾದಲ್ಲಿ ಫೇಸ್‌ಬುಕ್‌ ಒಬ್ಬ ಬಳಕೆದಾರನಿಂದ ಗಳಿಸುತ್ತಿರುವುದು ಪ್ರತಿ ದಿನಕ್ಕೆ ಸರಾಸರಿ 19 ಡಾಲರ್‌ಗೂ ಹೆಚ್ಚು. ಭಾರತದ ರೂ.ಗಳ ಲೆಕ್ಕದಲ್ಲಿ 1,200 ರೂ.! ಅಂದರೆ, ಫೇಸ್‌ಬುಕ್‌ ಬಳಸುವ ಬಹುತೇಕ ಜನರು ಇದರ ಅರ್ಧದಷ್ಟನ್ನೂ ದಿನಕ್ಕೆ ದುಡಿಯವುದಿಲ್ಲ. ಆದರೆ, ಅವರು ಹಣವನ್ನು ಮಾತ್ರ ನೀಡುತ್ತಾರೆ. ಏಕೆಂದರೆ, ಫೇಸ್‌ಬುಕ್‌ನ ಮಾರುಕಟ್ಟೆಯ ತಂತ್ರವೇ ಹಾಗಿದೆ.!

  ನಿಮ್ಮ ಒಂದು ಲೈಕ್‌ನಿಂದ ಫೇಸ್‌ಬುಕ್‌ ಗಳಿಸುವ ಹಣವೆಷ್ಟು ಗೊತ್ತಾ?!

  ನಮ್ಮೆಲ್ಲರ ಖಾಲಿ ಸಮಯವನ್ನೇ ಫೇಸ್‌ಬುಕ್‌ ಈ ಮಟ್ಟಿಗೆ ಬಂಡವಾಳ ಮಾಡಿಕೊಂಡಿದೆ. ನಾವು ಫೇಸ್‌ಬುಕ್‌ನಲ್ಲಿ ಒತ್ತುವ ಒಂದೊಂದು ಲೈಕೂ ಕೂಡ ಒಂದು ಪೈಸೆಗಳಿಗೆ ಸಮನಾಗಿ ಫೇಸ್‌ಬುಕ್‌ನ ಬ್ಯಾಂಕ್‌ ಖಾತೆಯೊಳಗೆ ಬಿದ್ದಿರುತ್ತವೆ. ಟಿವಿ ಚಾನೆಲ್‌ಗ‌ಳಲ್ಲಿ ಟಿಆರ್ಪಿ ಇದ್ದಂತೆ, ಸೋಷಿಯಲ್ ಮೀಡಿಯಾದಲ್ಲಿನ ಮಾನದಂಡಗಳು ಬೇರೆ ಇರುತ್ತವೆ. ಹಾಗಾಗಿ, ಇಂದಿನ ಲೇಖನದಲ್ಲಿ ಫೇಸ್‌ಬುಕ್ ಕೋಟ್ಯಂತರ ಲಾಭ ಮಾಡುತ್ತಿರುವುದು ಹೇಗೆ? ಜಾಲತಾಣಗಳ ಸಂಪಾದನೆಯ ಮೂಲ ಯಾವುದು? ಎಂಬುದನ್ನು ತಿಳಿಯೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ARPU ಹಾಗೂ DAU!!

  ಟಿವಿ ಚಾನೆಲ್‌ಗ‌ಳಲ್ಲಿ ಟಿಆರ್ಪಿ ಇದ್ದಂತೆ, ಫೇಸ್‌ಬುಕ್‌ನಲ್ಲಿ ARPU (ಡೈಲಿ ಆಕ್ಟೀವ್‌ ಯೂಸರ್‌) ಹಾಗೂ MAN (ಮಂತ್ಲಿ ಆಕ್ಟೀವ್ ಯೂಸರ್‌) ಎಂಬುದು ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತವೆ. ಇದರ ಜೊತೆಗೆ ಜಾಹೀರಾತು ಟಾರ್ಗೆಟಿಂಗ್ ಬಳಕೆದಾರರ ಡೇಟಾ ವಿಶ್ಲೇಷಣೆಯೂ ಪ್ರಮುಖ ಪಾತ್ರ ವಹಿಸುತ್ತದೆ.

  ಜಾಹೀರಾತಿನಿಂದ ದೊರಕುವ ಆದಾಯ?

  ಫೇಸ್‌ಬುಕ್‌ಗೆ ದೊರಕಿರುವ ಆದಾಯದಲ್ಲಿ ಶೇ.90ರಷ್ಟು ಆದಾಯ ಜಾಹೀರಾತಿನಿಂದಲೇ ದೊರೆಯುತ್ತದೆ. ಫೇಸ್‌ಬುಕ್‌ ಓಪನ್‌ ಮಾಡಿ ಯಾರದೋ ಕಾಮೆಂಟ್‌ಗೆ ಲೈಕ್‌ ಒತ್ತಿದಾದ ಅಲ್ಲೇ ಮೇಲೆ ಒಂದು ಜಾಹೀರಾತು ನಿಮಗೆ ಕಾಣಿಸುತ್ತದೆಯಲ್ಲವೇ? ನೀವು ನೋಡಿದ ಆ ಜಾಹಿರಾತುವಿನಿಂದ ಫೇಸ್‌ಬುಕ್ ಹಣವನ್ನು ಗಳಿಸಿರುತ್ತದೆ.

  ಟಿವಿ ಹಾಗೂ ಪ್ರಿಂಟ್‌ಗಿಂತ ಪರಿಣಾಮಕಾರಿ

  ಫೇಸ್‌ಬುಕ್‌ನಲ್ಲಿ ಕಾಣಿಸುವ ಜಾಹಿರಾತುಗಳು ಟಿವಿ ಹಾಗೂ ಪ್ರಿಂಟ್‌ ಮೀಡಿಯಾಗಳಲ್ಲಿನ ಜಾಹೀರಾತಿಗಿಂತ ಹೆಚ್ಚು ಪರಿಣಾಮಕಾರಿವಿವೆ. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾ ಮೂಲಕ ಯಾರು ನಮ್ಮ ಉತ್ಪನ್ನವನ್ನು ಖರೀದಿಸುತ್ತಾರೋ ಅವರಿಗೆ ಮಾತ್ರವೇ ಜಾಹೀರಾತು ತೋರಿಸಬಹುದು. ಇದು ಜನರನ್ನು ಹೆಚ್ಚು ಪ್ರೇರೇಪಿಸುತ್ತದೆ.

  ನೀವು ಗಮನಿಸಿದ್ದೀರಾ?

  ನೀವು ಇತ್ತೀಚೆಗೆ ನೋಡಿದ ಸಿನಿಮಾ, ಓದಿದ ಪುಸ್ತಕ, ನಿಮ್ಮ ವೈಯಕ್ತಿಕ ವಿವರಗಳು, ಜನ್ಮ ದಿನ ಹಾಗೂ ಸ್ಥಳವನ್ನೆಲ್ಲ ದಾಖಲಿಸುವಂತೆ ಫೇಸ್‌ಬುಕ್ ಕೇಳುತ್ತಲೇ ಇರುತ್ತದೆ. ಫೇಸ್‌ಬುಕ್‌ಗೆ ನಮ್ಮ ಮೇಲೆ ಇಷ್ಟು ಆಸಕ್ತಿ ಇರಲು ಕಾರಣ ನಮಗೆ ಯಾವ ಜಾಹೀರಾತು ತೋರಿಸಬೇಕು ಎಂಬುದನ್ನು ಫೇಸ್‌ಬುಕ್ ನಿರ್ಧರಿಸಲು.

  ಜಾಹಿರಾತುಗಳು ಪರಿಣಾಮಕಾರಿಯೇ?

  ನಿಮಗೆ ಫೇಸ್‌ಬುಕ್ ಜಾಹಿರಾತುಗಳು ಅಷ್ಟೇನು ಪರಿಣಾಮಕಾರಿಯಲ್ಲ ಎಂದು ಅನಿಸಬಹುದು. ಆದರೆ, ನಿಮಗೆ ಕಾಣಿಸುವ ಆ ಜಾಹಿರಾತುಗಳು ನಿಮ್ಮನ್ನು ಆವರಿಸಿಕೊಳ್ಳುತ್ತವೆ. ನಮ್ಮ ವಿವರಗಳನ್ನು ಬಳಸಿಕೊಂಡು ನಾವು ಬಳಸುವ ಅಥವಾ ಬಳಸಬಹುದಾದ ಉತ್ಪನ್ನಗಳ ಜಾಹೀರಾತನ್ನು ನಮಗೇ ತೋರಿಸಿ ಫೇಸ್‌ಬುಕ್ ದುಡ್ಡು ಮಾಡಿಕೊಳ್ಳುತ್ತವೆ.

  ಹೊಸ ಜಾಹೀರಾತು ಟ್ರೆಂಡ್!

  ಫೇಸ್‌ಬುಕ್ ಮೀಡಿಯಾದಲ್ಲಿ ಪ್ರತಿ ಉತ್ಪನ್ನವನ್ನೂ ಯಾವ ವರ್ಗದ ಜನರಿಗೆ ತಲುಪಿಸಬೇಕು, ಸಂಸ್ಥೆಯ ಬಗ್ಗೆ ಜನರಲ್ಲಿ ಯಾವ ಅಭಿಪ್ರಾಯ ಮೂಡಿಸಬೇಕು ಎಂಬುದರಿಂದ ಹಿಡಿದು ಪ್ರತಿ ಅಂಶವೂ ಸಿಗುತ್ತದೆ. ಕಡಿಮೆ ಹಣದಲ್ಲಿ ಹೆಚ್ಚು ಜನರನ್ನು ಮತ್ತು ಸರಿಯಾದ ಜನರನ್ನು ತಲುಪಲು ಫೇಸ್‌ಬುಕ್ ದಾರಿ ಮಾಡಿಕೊಡುವುದರಿಂದ ಹೊಸ ಜಾಹೀರಾತು ಟ್ರೆಂಡ್ ಹುಟ್ಟಿದೆ.

  ನಿಮ್ಮ ಇತಿಹಾಸವೇ ದುಡ್ಡು!

  ಫೇಸ್‌ಬುಕ್‌ನಲ್ಲಿ ನಮ್ಮ ಬ್ರೌಸಿಂಗ್ ಹಿಸ್ಟರಿಯೇ ನಮ್ಮ ಬ್ಯಾಂಕ್‌ ಅಕೌಂಟಿನ ಬ್ಯಾಲೆನ್ಸ್ ಇದ್ದಹಾಗೆ. ಅಲ್ಲಿ ಎಷ್ಟು ಕಾಸಿದೆ, ಯಾವ ರೀತಿಯ ಬ್ಯಾಲೆನ್ಸ್ ಇದೆ ಎಂಬುದರ ಮೇಲೆ ನಮ್ಮನ್ನು ಅಳೆಯಲಾಗುತ್ತದೆ. ಇದು ಒಂದು ರೀತಿಯಲ್ಲಿ ನಮ್ಮ ಜಾತಕವನ್ನು ನಾವೇ ಮಾರಿಕೊಂಡು, ಫೇಸ್‌ಬುಕ್‌ಗೆ ಹಣ ನೀಡುತ್ತಿದ್ದೇವೆ. ಮತ್ತು ನೀಡಲೇಬೇಕಾಗಿದೆ.!

  ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಫೇಸ್‌ಬುಕ್ ಫಾಲೋವರ್ಸ್ ಹೊಂದಿರುವ 'ಟಾಪ್ 10' ತಾರೆಯರು!!

  ಪ್ರತಿತಿಂಗಳೂ ಸುಮಾರು 200 ಕೋಟಿ ಜನರು ಭೇಟಿ ನೀಡುವ ಆನ್‌ಲೈನ್ ಪ್ರಪಂಚ ಎಂದರೆ ಅದು ಫೇಸ್‌ಬುಕ್‌ ಮಾತ್ರ! ಹಾಗಾಗಿ, ವಿಶ್ವದ ಸೆಲೆಬ್ರಿಟಿಗಳೆಲ್ಲರೂ ಇಂದು ಫೇಸ್‌ಬುಕ್ ಮೂಲಕ ಜನರನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಏಕೆಂದರೆ, ಇಂದು ಫೇಸ್‌ಬುಕ್ ಫಾಲೋವರ್ಸ್ ಎಷ್ಟಿದ್ದಾರೆ ಎಂಬುದರ ಮೇಲೆ ಅವರ ಜನಪ್ರಿಯತೆ ಕೂಡ ನಿಂತಿದೆ.!!

  ಇನ್ನು ಫೇಸ್‌ಬುಕ್ ಬಳಕೆದಾರರಿಗೂ ಹೆಚ್ಚು ಫೇಸ್‌ಬುಕ್ ಫಾಲೋವರ್ಸ್ ಹೊಂದಿರುವವರ ಈ ಬಗ್ಗೆ ಕುತೋಹಲ ಇದ್ದೇ ಇರುತ್ತದೆ. ಹಾಗಾದರೆ, ಫೇಸ್‌ಬುಕ್‌ನಲ್ಲಿ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ 10 ಸೆಲೆಬ್ರಿಟಿಗಳು ಯಾರು? ಅವರ ಫಾಲೋವರ್ಸ್ ಸಂಖ್ಯೆ ಎಷ್ಟು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.! ಮುಂದಿನ ಸ್ಲೈಡರ್‌ಗಳಲ್ಲಿ ವಿಶ್ವದ ಟಾಪ್ 10 ಸೆಲೆಬ್ರಿಟಿಗಳು ಯಾರ್ಯಾರು ಎಂಬುದನ್ನು ತಿಳಿಯಿರಿ.!!

  ಟಾಪ್ 10 : ಟೈಲರ್ ಸ್ವಿಫ್ಟ್.!!

  ಅಮೆರಿಕಾದ ಸಿಂಗರ್ ಹಾಗೂ ಬರಹಗಾರ್ತಿಯಾಗಿರುವ ಟೈಲರ್ ಸ್ವಿಫ್ಟ್ ಫೇಸ್‌ಬುಕ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪಟ್ಟಿಯಲ್ಲಿ ಟಾಪ್ 10 ಸ್ಥಾನದಲ್ಲಿದ್ದಾರೆ. ಟೈಲರ್ ಸ್ವಿಫ್ಟ್ 74 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.!!

  ಟಾಪ್ 9 : ಮೈಕೆಲ್ ಜಾಕ್ಸನ್ !!

  ಕಿಂಗ್ ಆಫ್ ಪಾಪ್ಸ್ ಎಂಬ ಬಿರುದು ಪಡೆದಿದ್ದ ಮೈಕೆಲ್ ಜಾನ್ಸನ್ ಫೇಸ್‌ಬುಕ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪಟ್ಟಿಯಲ್ಲಿ ಈಗಲೂ 9ಸ್ಥಾನದಲ್ಲಿದ್ದಾರೆ. ಮೈಕೆಲ್ ಜಾನ್ಸನ್ 75 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.!!

  ಟಾಪ್ 8 : ವಿಲ್ ಸ್ಮಿತ್!!

  ವಿಶ್ವದ ಟಾಪ್ ನಟರಲ್ಲಿ ಒಬ್ಬರಾದ ಅಮೆರಿಕಾದ ನಟ, ರ್ಯಾಪರ್, ಕಾಮಿಡಿಯನ್ ವಿಲ್ ಸ್ಮಿತ್ ಫೇಸ್‌‌ಬುಕ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪಟ್ಟಿಯಲ್ಲಿ ಟಾಪ್ 8 ನೇ ಸ್ಥಾನದಲ್ಲಿದ್ದಾರೆ.! ವಿಲ್ ಸ್ಮಿತ್ 75.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.!!

  ಟಾಪ್ 7: ಜಸ್ಟಿನ್ ಬೆಬರ್

  ಆನ್‌ಲೈನ್ ಪ್ರಪಂಚದಲ್ಲಿ ಹೆಚ್ಚು ಟ್ರೋಲ್ ಆಗುವ ಕೆನಡಿಯನ್ ಸಿಂಗರ್ ಜಸ್ಟಿನ್ ಬೆಬರ್ ಫೇಸ್‌‌ಬುಕ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪಟ್ಟಿಯಲ್ಲಿ ಟಾಪ್ 7 ನೇ ಸ್ಥಾನದಲ್ಲಿದ್ದಾರೆ.! ಜಸ್ಟಿನ್ ಬೆಬರ್ 78.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.!!

  ಟಾಪ್ 6: ರಿಹಾನ!!

  ಬಾರ್ಬಿಡಿಯನ್ ಸಿಂಗರ್, ಸ್ಕ್ರಿಪ್ ರೈಟರ್ ಮತ್ತು ನಟಿ ರಿಹಾನ ಫೇಸ್‌‌ಬುಕ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪಟ್ಟಿಯಲ್ಲಿ ಟಾಪ್ 6ನೇ ಸ್ಥಾನದಲ್ಲಿದ್ದಾರೆ.! ರಿಹಾನ 81 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.!!

  ಟಾಪ್ 5: ಲಿಯೊ ಮೆಸ್ಸಿ!!

  ಜನಪ್ರಿಯ ಫುಟ್‌ಬಾಲ್ ಆಟಗಾರ ಅರ್ಜೆಂಟೆನಾದ ಲಿಯೊ ಮೆಸ್ಸಿ ಫೇಸ್‌‌ಬುಕ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪಟ್ಟಿಯಲ್ಲಿ ಟಾಪ್ 5ನೇ ಸ್ಥಾನದಲ್ಲಿದ್ದಾರೆ.! ಮೆಸ್ಸಿ 89 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.!!

  ಟಾಪ್ 4 : ಎಮಿನಮ್

  90ರ ದಶಕದಲ್ಲಿ ಇಡೀ ವಿಶ್ವವನ್ನೇ ಸೆಳೆದಿದ್ದ ಅಮೆರಿಕಾದ ರ್ಯಾಪರ್ ಎಮಿನಮ್ ಫೇಸ್‌‌ಬುಕ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪಟ್ಟಿಯಲ್ಲಿ ಟಾಪ್ 4 ನೇ ಸ್ಥಾನದಲ್ಲಿದ್ದಾರೆ.! ಎಮಿನಮ್ 90.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.!!

  ಟಾಪ್ 3 : ವಿನ್ ಡೀಸೆಲ್

  ಫಾಸ್ಟ್ ಆಂಡ್ ದಿ ಫ್ಯೂರಿಯಸ್ ಸೀರಿಸ್ ಚಿತ್ರ ಸರಣಿಗಳ ಮೂಲಕ ವಿಶ್ವದಲ್ಲಿಯೇ ಹೆಸರಾಟದ ನಟ ವಿನ್ ಡೀಸೆಲ್ ಫೇಸ್‌‌ಬುಕ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪಟ್ಟಿಯಲ್ಲಿ ಟಾಪ್ 3 ನೇ ಸ್ಥಾನದಲ್ಲಿದ್ದಾರೆ.! ವಿನ್ ಡೀಸೆಲ್ 101.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.!!

  ಟಾಪ್ 2: ಶಕಿರಾ!!

  ಇಡೀ ವಿಶ್ವದ ಗಮನ ಸೆಳೆದ ಕೊಲಂಬಿಯನ್ ನಟಿ ಶಕಿರಾ ಫೇಸ್‌‌ಬುಕ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪಟ್ಟಿಯಲ್ಲಿ ಟಾಪ್ 2 ನೇ ಸ್ಥಾನದಲ್ಲಿದ್ದಾರೆ.! ಶಕಿರಾ 104.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.!!

  ಟಾಪ್ 1 : ಕ್ರಿಸ್ಟಿಯಾನೊ ರೊನಾಲ್ಡೊ!!

  ವಿಶ್ವ ಫುಟ್‌ಬಾಲ್ ಜಗತ್ತಿನ ಜನಪ್ರಿಯ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಫೇಸ್‌‌ಬುಕ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.! ಕ್ರಿಸ್ಟಿಯಾನೊ ರೊನಾಲ್ಡೊ 122.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Facebook makes money a number of ways however advertising is the company's revenue channel. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more