ಪಾಸ್‌ವರ್ಡ್ ಬದಲಿಸಿಕೊಳ್ಳುವಂತೆ ಬಳಕೆದಾರರಿಗೆ ಟ್ವಿಟರ್ ಮನವಿ!..ಏಕೆ ಗೊತ್ತಾ?

|

ಸಾಮಾಜಿಕ ಜಾಲತಾಣಗಳೆಲ್ಲವೂ ಒಂದು ರೀತಿಯಲ್ಲಿ ಸಂಕಷ್ಟದ ಪರಿಸ್ಥಿಗೆ ಸಿಲುಕಿವೆ. ಫೇಸ್‌ಬುಕ್ ನಂತರ ಇದೀಗ ಟ್ಟಿಟರ್ ನಲ್ಲಿ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಕೂಡಲೇ ಖಾತೆಗಳ ಪಾಸ್‌ವರ್ಡ್'ಗಳನ್ನು ಬದಲಿಸುವಂತೆ 336 ಮಿಲಿಯನ್ ಬಳಕೆದಾರರಿಗೆ ಟ್ವಿಟರ್ ಮನವಿ ಮಾಡಿಕೊಂಡಿದೆ. ಹಾಗಾಗಿ, ಬಹುತೇಕ ಟ್ವಿಟರ್ ಬಳಕೆದಾರರು ತಮ್ಮ ಪಾಸ್‌ವರ್ಡ್ ಬದಲಿಸಿಕೊಳ್ಳಬೇಕಿದೆ.

ಹೌದು, ಟ್ವಿಟರ್ ನಲ್ಲಿ ದೋಷವೊಂದು ಪತ್ತೆಯಾಗಿದ್ದು, ಅಪಾಯ ಎರದುರಿಸುವುದಕ್ಕಿಂತ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸೇವೆ ಹಾಗೂ ವೇದಿಕೆಗಳಲ್ಲಿ ಒಂದೇ ರೀತಿಯ ಪಾಸ್ ವರ್ಡ್ ಗಳನ್ನು ಬಳಕೆ ಮಾಡುತ್ತಿರುವ ಬಳಕೆದಾರರೂ ಕೂಡಲೇ ತಮ್ಮ ಪಾಸ್ ವರ್ಡ್ ಗಳನ್ನು ಬದಲಿಸಿಕೊಳ್ಳುವಂತೆ ಟ್ವಿಟರ್ ಸಂಸ್ಥೆ ತನ್ನ ಬಳಕೆದಾರರಿಗೆ ಮನವಿ ಮಾಡಿಕೊಂಡಿದೆ.

ಪಾಸ್‌ವರ್ಡ್ ಬದಲಿಸಿಕೊಳ್ಳುವಂತೆ ಬಳಕೆದಾರರಿಗೆ ಟ್ವಿಟರ್ ಮನವಿ!..ಏಕೆ ಗೊತ್ತಾ?

ಸುಮಾರು 3.30 ಕೋಟಿಗೂ ಹೆಚ್ಚು ಬಳಕೆದಾರರು ಮುಂಜಾಗ್ರತ ಕ್ರಮವಾಗಿ ತಮ್ಮ ವೈಯಕ್ತಿಕ ಪಾಸ್‌ವರ್ಡ್‌ಗಳು ಮತ್ತು ಗ್ರೂಪ್‌ ಪಾಸ್‌ವರ್ಡ್‌ಗಳನ್ನು ಬದಲಿಸುವಂತೆ ಟ್ವಿಟರ್ ಮನವಿ ಮಾಡಿಕೊಂಡಿದೆ. ಯಾರೆಲ್ಲಾ ಬಳಕೆದಾರರು ಪಾಸ್‌ವರ್ಡ್ ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನು ಟ್ವಿಟರ್ ಸಂಸ್ಥೆಯೇ ನೋಟಿಫಿಕೇಷನ್‌ಗಳ ಮೂಲಕ ಎಚ್ಚರಿಸುತ್ತಿದೆ.

Twitter Shortcut ಕೀಗಳನ್ನು ಬಳಸುವುದು ಟ್ವಿಟ್ಟಿಗರ ಮೂಲ ಲಕ್ಷಣಗಳಲ್ಲೊಂದು!!

ಟ್ವಿಟರ್‌ನಲ್ಲಿ ಈಗಷ್ಟೇ ದೋಷವೊಂದನ್ನು ಕಂಡು ಹಿಡಿಯಲಾಗಿದೆ. ಜಾಲತಾಣದಲ್ಲಿ ಸೇವ್ ಮಾಡಲಾಗಿರುವ ಪಾಸ್‌ವರ್ಡ್ ಗಳಲ್ಲಿ ದೋಷಗಳು ಕಂಡುಬಂದಿರುವುದು ಸ್ಪಷ್ಟವಾಗಿರುವುದರಿಂದ ಬಳಕೆದಾರರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಪ್ರಸ್ತುತ ಎದುರಾಗಿರುವ ದೋಷವನ್ನು ಶೀಘ್ರದಲ್ಲಿಯೇ ಪರಿಹರಿಸಲಾಗುತ್ತದೆ ಎಂದು ಟ್ವಿಟರ್ ಹೇಳಿಕೊಂಡಿದೆ.

ಪಾಸ್‌ವರ್ಡ್ ಬದಲಿಸಿಕೊಳ್ಳುವಂತೆ ಬಳಕೆದಾರರಿಗೆ ಟ್ವಿಟರ್ ಮನವಿ!..ಏಕೆ ಗೊತ್ತಾ?

ಟ್ವಿಟರ್ ನಲ್ಲಿ ಪಾಸ್‌ವರ್ಡ್‌ಗಳಿಗೆ ಸಂಬಂಧಿಸಿದ ದೋಷ ಎದುರಾಗಿತ್ತು.ಆದರೆ, ಇಲ್ಲಿ ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿಲ್ಲ ಅಥವಾ ಯಾವುದೇ ರೀತಿಯ ನಿಯಮಗಳೂ ಸಹ ಉಲ್ಲಂಘನೆಯಾಗಿಲ್ಲ.ಆದರೂ, ಟ್ವಿಟರ್ ನಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಬಳಕೆದಾರರ ಬಳಿ ಕ್ಷಮೆಯಾಚಿಸುತ್ತೇವೆ ಎಂದು ಟ್ವಿಟರ್ ಮುಖ್ಯ ತಾಂತ್ರಿಕ ಅಧಿಕಾರಿ ಪರಗ್ ಅಗ್ರವಾಪ್ ಅವರು ಹೇಳಿದ್ದಾರೆ

ಓದಿರಿ: 10,999ರೂ.ಬೆಲೆಯ ಈ ಫೋನ್ ಮುಂದೆ ರೆಡ್‌ಮಿ ನೋಟ್ 5 ಕೂಡ ವೇಸ್ಟ್!!

Best Mobiles in India

English summary
People were advised to change their passwords, enable two-factor authentication on their Twitter account and use a password manager to create strong.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X