ಟ್ವೀಟರ್ ನಲ್ಲಿ ಲಭ್ಯವಾಗುತ್ತದೆ ಮತ್ತೊಂದು ಫೀಚರ್- “ಹೈಡ್ ರಿಪ್ಲೈ”

By Gizbot Bureau
|

ಅನಗತ್ಯ ಸಂಭಾಷಣೆಯನ್ನು ನಿರ್ವಹಿಸುವುದಕ್ಕಾಗಿ ಬಳಕೆದಾರರಿಗೆ ಹೆಚ್ಚಿನ ಕಂಟ್ರೋಲ್ ನೀಡುವ ಬಗ್ಗೆ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವೀಟರ್ ಹೈಡ್ ರಿಪ್ಲೈ ಫೀಚರ್ ನ್ನು ಬಿಡುಗಡೆಗೊಳಿಸುವ ತಯಾರಿಯಲ್ಲಿದೆ.

ಹೆಚ್ಚಿನ ಕಂಟ್ರೋಲ್ ನೀಡುವ ಉದ್ದೇಶ:

ಹೆಚ್ಚಿನ ಕಂಟ್ರೋಲ್ ನೀಡುವ ಉದ್ದೇಶ:

ಟ್ವೀಟರ್ ನಲ್ಲಿ ಮಹತ್ವಪೂರ್ಣ ಚರ್ಚೆ ಮಾಡುವ ಬಳಕೆದಾರರು ನಮಗೆ ಬಹಳ ಮುಖ್ಯ ಮತ್ತು ನಾವು ಅವರ ಮಾತುಕತೆಯನ್ನು ಉತ್ತಮ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಒಟ್ಟಾರೆ ಟ್ವೀಟರ್ ಹಿತದೃಷ್ಟಿಯಿಂದ ಉತ್ತಮವಾಗಿರುವುದಾಗಿದೆ. ಹಾಗಾಗಿ ಅವರಿಗೆ ಹೆಚ್ಚಿನ ಕಂಟ್ರೋಲ್ ನೀಡುವ ಬಗ್ಗೆ ನಾವು ಚಿಂತಿಸಿದ್ದೇವೆ ಎಂದು ಹಿರಿಯ ಪ್ರೊಡಕ್ಟ್ ಮ್ಯಾನೇಜರ್ ಆಗಿರುವ ಮೈಕೆಲ್ ಮಿಷಲ್ ಟ್ವೀಟ್ ಮಾಡಿದ್ದಾರೆ.

ಶಾಶ್ವತವಾಗಿ ಹೈಡ್ ಮಾಡಲು ಸಾಧ್ಯವಿಲ್ಲ:

ಶಾಶ್ವತವಾಗಿ ಹೈಡ್ ಮಾಡಲು ಸಾಧ್ಯವಿಲ್ಲ:

ಬಳಕೆದಾರರಿಗೆ ಈ ಫೀಚರ್ ಶಾಶ್ವತವಾಗಿ ರಿಪ್ಲೈ ಗಳನ್ನು ಹೈಡ್ ಮಾಡುವುದಕ್ಕೆ ಬಿಡುವುದಿಲ್ಲ. ಕೆಟ್ಟ- ನಂಬಿಕೆ ಮತ್ತು ದ್ವೇಷ ಬಿತ್ತರಿಸುವುದನ್ನು ತಪ್ಪಿಸುವುದಕ್ಕೆ ಇದು ಹೆಚ್ಚಿನ ನೆರವು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಂಭಾಷಣೆ ಹೈಡ್:

ಸಂಭಾಷಣೆ ಹೈಡ್:

ಈ ಫೀಚರ್ ಬಳಸಿ ವ್ಯಕ್ತಿಯು ತನ್ನ ಸಂಭಾಷೆಯಲ್ಲಿನ ರಿಪ್ಲೈಗಳನ್ನ ಹೈಡ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಮೆನು ಆಯ್ಕೆಯ ಮೂಲಕ ಹಿಡನ್ ರಿಪ್ಲೈಗಳನ್ನು ನೋಡುವುದಕ್ಕೆ ಇತರರಿಗೆ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ಮುಂದಿನ ತಿಂಗಳು ಸಾರ್ವಜನಿಕವಾಗಿ ಟೆಸ್ಟಿಂಗ್

ಮುಂದಿನ ತಿಂಗಳು ಸಾರ್ವಜನಿಕವಾಗಿ ಟೆಸ್ಟಿಂಗ್

ಮುಂದಿನ ತಿಂಗಳುಗಳಲ್ಲಿ, ಸಾರ್ವಜನಿಕವಾಗಿ ಈ ಫೀಚರ್ ನ್ನು ಟೆಸ್ಟ್ ಮಾಡುವುದಕ್ಕೆ ಆರಂಭಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ವೀಕ್ಷಕ ಮತ್ತು ಬರವಣಿಗೆಗಾರರ ನಡುವೆ ಉತ್ತಮ ಅನುಭವವಿರುವುದಕ್ಕೆ ಇದು ನೆರವು ನೀಡುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಫ್ಲಾಟ್ ಫಾರ್ಮ್ ನಲ್ಲಿ ಶಿಸ್ತು:

ಫ್ಲಾಟ್ ಫಾರ್ಮ್ ನಲ್ಲಿ ಶಿಸ್ತು:

ಟ್ವೀಟರ್ ಕಳೆದ ವರ್ಷದಿಂದ ಹಲವು ಟೂಲ್ ಗಳನ್ನು ಬಿಡುಗಡೆಗೊಳಿಸಿದೆ-ಬ್ಲಾಕ್, ಮ್ಯೂಟ್ ಮತ್ತು ರಿಪೋರ್ಟ್ ಇತ್ಯಾದಿಗಳು. ಇವೆಲ್ಲವೂ ಕೂಡ ಫ್ಲಾಟ್ ಫಾರ್ಮ್ ನಲ್ಲಿ ಒಂದು ರೀತಿಯ ಶಿಸ್ತನ್ನು ಕಾಪಾಡುವ ನಿಟ್ಟಿನಲ್ಲಿ ಜಾರಿಗೆ ತಂದ ಟೂಲ್ ಗಳಾಗಿವೆ. ಬ್ಲಾಕ್ ಮತ್ತು ಮ್ಯೂಟ್ ಫೀಚರ್ ಗಳು ಕೇವಲ ಬ್ಲಾಕರ್ ಗಳ ಅನುಭವವನ್ನು ಚೇಂಜ್ ಮಾಡುತ್ತದೆ ಮತ್ತು ರಿಪೋರ್ಟ್ ಫೀಚರ್ ಆಪ್ ಪಾಲಿಸಿಯನ್ನು ಮುರಿಯುವವರಿಗಾಗಿ ಕಾರ್ಯ ನಿರ್ವಹಿಸುತ್ತದೆ.

ಫ್ಲಾಟ್ ಫಾರ್ಮ್ ನಲ್ಲಿ ಎಡಿಟ್ ಫೀಚರ್ ನ್ನು ಸೇರಿಸುವುದಕ್ಕೂ ಕೂಡ ಟ್ವೀಟರ್ ಪ್ಲಾನ್ ಮಾಡುತ್ತಿದೆ ಮತ್ತು ಇದು ಟ್ವೀಟ್ ನ್ನು ಪೋಸ್ಟ್ ಮಾಡಿ 5 ರಿಂದ 30 ನಿಮಿಷದ ಒಳಗೆ ಮಾಡಿಫೈ ಮಾಡುವುದಕ್ಕೆ ಅವಕಾಶ ನೀಡುತ್ತದೆ ಎಂದು ಕಂಪೆನಿಯ ಸಿಇಓ ಜಾಕ್ ಡಾರ್ಸೇ ಈಗಾಗಲೇ ಒಮ್ಮೆ ತಿಳಿಸಿದ್ದಾರೆ.

Best Mobiles in India

English summary
Twitter to introduce 'hide reply' feature soon

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X