ಟ್ವಿಟ್ಟಿಗರಿಗೆ ಖುಷಿ ಸುದ್ದಿ.!.ಟ್ವಿಟ್ಟರ್‌ನಲ್ಲಿ ಕ್ಯಾಮೆರಾ ಫೀಚರ್‌ ಲಾಂಚ್.!!

|

ಅಮೆರಿಕಾ ಮೂಲದ ನ್ಯೂಸ್‌ ಮತ್ತು ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ 'ಟ್ವಿಟ್ಟರ್', ಆರಂಭದ ದಿನಗಳಲ್ಲಿ ಕೇವಲ 140 ಪದಗಳಲ್ಲಿ ಮಾತ್ರ ಟ್ವಿಟ್ಟ್ ಮಾಡುವ ಅವಕಾಶ ನೀಡಿತ್ತು. ಆದರೆ 2017ರಲ್ಲಿ ಟಿಟ್ಟ್ ಮಾಡುವ ಪದಗಳ ಲಿಮಿಟ್‌ ಅನ್ನು ಡಬಲ್ ಮಾಡಿ ಟ್ವಿಟ್ಟಿಗರ್ ಮನ ಗೆದ್ದಿದ್ದ ಟ್ವಿಟ್ಟರ್, ಇದೀಗ ಮತ್ತೆ ಟ್ವಿಟ್ಟಿಗರಿಗೆ ಸಿಹಿಸುದ್ದಿ ನೀಡಿದೆ. ಅದೆನೇಂದರೆ ಟ್ವಿಟ್ಟರ್‌ ಭಾರಿ ಅಚ್ಚರಿಯ ಫೀಚರ್ಸ್‌ ಒಂದನ್ನು ಪರಿಚಯಿಸಿದೆ.

ಟ್ವಿಟ್ಟಿಗರಿಗೆ ಖುಷಿ ಸುದ್ದಿ.!.ಟ್ವಿಟ್ಟರ್‌ನಲ್ಲಿ ಕ್ಯಾಮೆರಾ ಫೀಚರ್‌ ಲಾಂಚ್.!!

ಹೌದು, ಟ್ವಿಟ್ಟರ್ ಆಪ್‌ ಇದೀಗ ಕ್ಯಾಮೆರಾ ಆಯ್ಕೆಯನ್ನು ಪರಿಚಯಿಸಿದ್ದು, ಟ್ವಿಟ್ಟಿಗರು ಪದಗಳಲ್ಲಿ ಮಾತ್ರವಲ್ಲದೇ ಇನ್ಮುಂದೇ ಫೋಟೋ ಕ್ಲಿಕ್ಕಿಸಿ ಟ್ವಿಟ್ಟ್ ಮಾಡಬಹುದಾಗಿದೆ. ಈ ಮೊದಲು ಗ್ಯಾಲರಿಯಲ್ಲಿರುವ ಫೋಟೋಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಪೋಸ್ಟ್‌ ಮಾಡಬಹುದಾಗಿತ್ತು ಆದರೆ ಈ ಹೊಸ ಆಯ್ಕೆಯಿಂದ ಟ್ವಿಟ್ಟರ್‌ನಲ್ಲಿಯೇ ನೇರವಾಗಿ ಕ್ಯಾಮೆರಾ ತೆರೆದು ಫೋಟೋ ಕ್ಲಿಕ್ಕಿಸಿ ಟ್ವಿಟ್ಟ್ ಮಾಡುವ ಅವಕಾಶ ದೊರೆತಿದೆ.

ಟ್ವಿಟ್ಟಿಗರಿಗೆ ಖುಷಿ ಸುದ್ದಿ.!.ಟ್ವಿಟ್ಟರ್‌ನಲ್ಲಿ ಕ್ಯಾಮೆರಾ ಫೀಚರ್‌ ಲಾಂಚ್.!!

ಟ್ವಿಟ್ಟರ್‌ ಕ್ಯಾಮೆರಾ ಆಯ್ಕೆಯನ್ನು ಪರಿಚಯಿಸಿರುವುದು ಟ್ವಿಟ್ಟಿಗರಿಗೆ ಖುಷಿ ಎನಿಸಿದ್ದರೇ, ಇನ್‌ಸ್ಟಾಗ್ರಾಂ ಮತ್ತು ಸ್ನ್ಯಾಪ್‌ಚಾಟ್‌ ಸಾಮಾಜಿಕ ಜಾಲತಾಣಗಳಿಗೆ ಶಾಕ್‌ ನೀಡಿದಂತಾಗಿದೆ. ಈ ಹೊಸ ಕ್ಯಾಮೆರಾ ಆಯ್ಕೆಯು ಇನ್ನೇನು ಕೆಲವೇ ದಿನಗಳಲ್ಲಿ ಟ್ವಿಟ್ಟರ್‌ ಆಪ್‌ಗಳಲ್ಲಿ ಬಳಕೆಗೆ ಲಭ್ಯವಾಗಲಿದೆ. ಹಾಗಾದರೇ ಟ್ವಿಟ್ಟರ್ ಕ್ಯಾಮೆರಾ ಆಯ್ಕೆಯ ಕುರಿತು ಮತ್ತಷ್ಟು ಮಾಹಿತಿಯನ್ನು ನೋಡೋಣ ಬನ್ನಿರಿ.

ಸಾಮಾಜಿಕ ಜಾಲತಾಣಗಳ ಪೈಪೋಟಿ

ಸಾಮಾಜಿಕ ಜಾಲತಾಣಗಳ ಪೈಪೋಟಿ

ಇನ್‌ಸ್ಟಾಗ್ರಾಂ ಮತ್ತು ಸ್ನ್ಯಾಪ್‌ಚಾಟ್‌ ಸಾಮಾಜಿಕ ಜಾಲತಾಣಗಳು ಕ್ಯಾಮೆರಾ ಫೀಚರ್ಸ್‌ನಿಂದ ಹೆಚ್ಚು ಗ್ರಾಹಕರನ್ನು ಮತ್ತು ಸೆಲೆಬ್ರಿಟಿಗಳನ್ನು ಆಕರ್ಷಿಸಿವೆ. ಟ್ವಿಟ್ಟರ್‌ ಜನಪ್ರಿಯತೆ ಗಳಿಸಿದ್ದರೂ ಕ್ಯಾಮೆರಾ ಆಯ್ಕೆ ಇಲ್ಲದಿರುವುದು ಅದರ ಒಂದು ನ್ಯೂನ್ಯತೆಯಂತಾಗಿತ್ತು. ಆದರೆ ಇದೀಗ ಕ್ಯಾಮೆರಾ ಆಯ್ಕೆ ಪರಿಚಯಿಸಿರುವ ಟ್ವಿಟ್ಟರ್ ಜನಪ್ರಿಯತೆ ಅಧಿಕವಾಗುವುದು ಪಕ್ಕಾ ಆಗಿದೆ.

ಟ್ವಿಟ್ಟರ್‌ ಕ್ಯಾಮೆರಾ

ಟ್ವಿಟ್ಟರ್‌ ಕ್ಯಾಮೆರಾ

ಟ್ವಿಟ್ಟರ್‌ನಲ್ಲಿ ಹೊಸದಾಗಿ ಕ್ಯಾಮೆರಾ ಆಯ್ಕೆ ನೀಡಿದ್ದು, ಟ್ವಿಟ್ಟಿಗರು, ಇನ್ಮುಂದೆ ಟ್ವಿಟ್ಟರ್‌ ಕ್ಯಾಮೆರಾ ಆಯ್ಕೆ ಮೂಲಕ ನೇರ ಫೋಟೊ ಕ್ಲಿಕ್ಕ್ ಮಾಡಬಹುದು ಅಥವಾ ನೇರ ವಿಡಿಯೋ ಸಹ ಮಾಡಬಹುದಾದ ಆಯ್ಕೆಗಳು ಲಭ್ಯ ಇರಲಿವೆ. ಈ ಕ್ಯಾಮೆರಾ ಆಯ್ಕೆಯು ಟ್ವಿಟ್ಟರ್‌ನಲ್ಲಿ ವಿಡಿಯೋ ಪ್ರಸಾರ ಮಾಡಲು ಮತ್ತು ನ್ಯೂಸ್‌ಗಳನ್ನು ಪೋಸ್ಟ್ ಮಾಡಲು ಉತ್ತೇಜನ ನೀಡಲಿದೆ.

ಹ್ಯಾಶ್‌ಟ್ಯಾಗ್‌ ಮತ್ತು ಲೊಕೇಶನ್

ಹ್ಯಾಶ್‌ಟ್ಯಾಗ್‌ ಮತ್ತು ಲೊಕೇಶನ್

ಟ್ವಿಟ್ಟರ್‌ನಲ್ಲಿ ಕ್ಲಿಕ್ಕಿಸುವ ಫೋಟೋಗಳನ್ನು ಪೋಸ್ಟ್‌ ಮಾಡುವಾಗ ಹ್ಯಾಶ್‌ಟ್ಯಾಗ್‌ ಮತ್ತು ಲೊಕೇಶನ್ ಆಯ್ಕೆಗಳನ್ನು ಬಳಸಿಕೊಳ್ಳಬಹುದಾಗಿದೆ. ಇದರೊಂದಿಗೆ ಫೋಟೋ ಕುರಿತು ಕಿರು ಸಂದೇಶವನ್ನು ಸಹ ಬರೆಯುವ ಅವಕಾಶ ನೀಡಲಾಗಿದೆ.

ಆಂಡ್ರಾಯ್ಡ್‌ನಲ್ಲೂ ಲಭ್ಯ

ಆಂಡ್ರಾಯ್ಡ್‌ನಲ್ಲೂ ಲಭ್ಯ

ಪ್ರಸ್ತುತ ಇರುವ ಟ್ವಿಟ್ಟರ್ ಆಪ್‌ ಅನ್ನು ಅಪ್‌ಡೇಟ್‌ ಮಾಡಕೊಳ್ಳಬೇಕಿದ್ದು, ನಂತರದಲ್ಲಿ ಹೊಸ ಫೀಚರ್ಸ್‌ ಬಳಕೆಗೆ ದೊರೆಯಲಿದೆ. ಆಂಡ್ರಾಯ್ಡ್‌ ಮತ್ತು ಐಎಸ್‌ಓ ಅಪರೇಟಿಂಗ್ ಸಿಸ್ಟಮ್ ಬಳಕೆದಾರರಿಬ್ಬರಿಗೂ ಈ ಹೊಸ ಕ್ಯಾಮೆರಾ ಫೀಚರ್ಸ್ ಲಭ್ಯವಾಗಲಿದೆ.

Best Mobiles in India

English summary
Twitter is now rolling out its new integrated camera to both its Android and iOS mobile apps.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X