ಫೇಸ್‌ಬುಕ್ ಬಗೆಗೆ ನಂಬಲೂ ಸಾಧ್ಯವಾಗದಂತಹ ಅದ್ಬುತ 5 ವಿಷಯಗಳಿವು!!

  ವಿಶ್ವದ ಯಾವುದೇ ರಾಷ್ಟ್ರದ ಜನಸಂಖ್ಯೆಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಎಂಬ ಮಾಯಾ ಜಗತ್ತು ಒಂದು ಅದ್ಬುತವೇ ಸರಿ. ಫೇಸ್‌ಬುಕ್ ಎನ್ನುವುದೇ ಒಂದು ವಿಶಿಷ್ಟ ಜಗತ್ತು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಆ ಫೇಸ್‌ಬುಕ್ ಜಗತ್ತಿನೊಳಗೆಯೇ ಹತ್ತಾರು ವಿಶಿಷ್ಟತೆಗಳಿವೆ ಎಂಬುದು ಮಾತ್ರ ಹಲವರಿಗೆ ಗೊತ್ತಿಲ್ಲ.!

  ಹೌದು, 2004 ರಲ್ಲಿ ಮಾರ್ಕ್ ಜುಕರ್‌ಬರ್ಗ್ ಎಂಬ ಅಮೆರಿಕನ್ ಕಂಪ್ಯೂಟರ್ ಪ್ರೋಗ್ರಾಮರ್ ಹುಟ್ಟಿಹಾಕಿದ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇಂದಿಗೆ ವಿಶ್ವದ ಟೆಕ್ ದಿಗ್ಗಜನಾಗಿ ಬೆಳೆದುನಿಂತಿದೆ. ಅಂದು ಚಿಕ್ಕದಾಗಿ ಹುಟ್ಟಿಕೊಂಡ ಫೇಸ್‌ಬುಕ್ ಎಂಬ ತಾಣವು ಇಂದು ಪ್ರಪಂಚದ ಟಾಪ್ 5 ಅಂತರ್ಜಾಲ ತಾಣವಾಗಿ ರೂಪುಗೊಂಡಿದೆ ಎಂದರೆ ಆಶ್ಚರ್ಯವಾಗಲೇಬೇಕು.!

  ಫೇಸ್‌ಬುಕ್ ಬಗೆಗೆ ನಂಬಲೂ ಸಾಧ್ಯವಾಗದಂತಹ ಅದ್ಬುತ 5 ವಿಷಯಗಳಿವು!!

  ನಿಮಗೆ ಗೊತ್ತಾ? ಫೇಸ್‌ಬುಕ್‌ನಲ್ಲಿ ನೀವು ಒಂದು ಬಾರಿ ಒತ್ತುವ ಲೈಕ್ ಬಟನ್ ಸಮಯದಲ್ಲಿಯೇ, ಸರಾಸರಿ 2 ಮಿಲಿಯನ್ ಲೈಕ್‌ಗಳನ್ನು ವಿಶ್ವದ ಜನರು ಒತ್ತಿರುತ್ತಾರೆ. ಹಾಗಾದರೆ, ಇಂತಹುಗಳದೇ ರೀತಿಯ ಪೇಸ್‌ಬುಕ್ ಬಗ್ಗೆ ಇರುವ ಅದ್ಬುತ ವಿಷಯಗಳು ಯಾವುವು ಎಂಬುದನ್ನು ತಿಳಿಯಿರಿ. ಇವು ಖಂಡಿತವಾಗಿಯೂ ನಿಮಗೆ ಆಶ್ಚರ್ಯವಾದ ವಿಷಯಗಳಾಗಿವೆ.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಅನ್‌ಫ್ರೆಂಡ್ ಮಾಡಿದಕ್ಕೆ ಕೊಲೆ!!

  ಅಮೆರಿಕಾದಂತಹ ರಾಷ್ಟ್ರಗಳಲ್ಲಿ ಸ್ವಾಭಿಮಾನದ ಪ್ರತೀಕವೋ ಅಥವಾ ಹುಚ್ಚುತನ ಹೆಚ್ಚಾಗಿದೆಯೋ ಗೊತ್ತಿಲ್ಲ. ಏಕೆಂದಂರೆ, ಸಾಮಾಜಿಕ ಜಾಲತಾಣವನ್ನು ಹೆಚ್ಚು ಬಳಕೆ ಮಾಡುವ ಅಮೆರಿಕಾದಲ್ಲಿ ಫೇಸ್‌ಬುಕ್‌ನಲ್ಲಿ ಅನ್‌ಫ್ರೆಂಡ್ ಮಾಡಿದಕ್ಕೆ ಕೊಲೆ ಮಾಡಿರುವ ಹಲವು ಘಟನೆಗಳು ನಡೆದಿವೆ.

  How to view all photos, pages, comments and posts you liked on Facebook (KANNADA)
  ವಾಟ್ಸ್‌ಆಪ್ ಹುಟ್ಟಲು ಫೇಸ್‌ಬುಕ್ ಕಾರಣ!!

  ವಾಟ್ಸ್‌ಆಪ್ ಹುಟ್ಟಲು ಫೇಸ್‌ಬುಕ್ ಕಾರಣ!!

  ವಾಟ್ಸ್‌ಆಪ್ ಅನ್ನು ಫೇಸ್‌ಬುಕ್ ಖರೀದಿ ಮಾಡಿದೆ ಎಂಬುದು ನಿಮಗೆಲ್ಲಾ ಗೊತ್ತಿರಬಹುದು. ಆದರೆ, ನಿಮಗೆ ಗೊತ್ತಾ, ವಾಟ್ಸ್‌ಆಪ್ ಹುಟ್ಟಲು ಫೇಸ್‌ಬುಕ್ ಕಾರಣವಾಗಿದೆ.! ವಾಟ್ಸ್ಆಪ್ ಹುಟ್ಟುಹಾಕಿದ ಬ್ರಿಯಾನ್ ಆಕ್ಟನ್ ಅವರಿಗೆ ಫೇಸ್‌ಬುಕ್ ಕೆಲಸ ಕೊಡಲು ನಿರಾಕರಿಸಿತ್ತು. ಆ ನಂತರವೇ ಬ್ರಿಯಾನ್ ಆಕ್ಟನ್ ಅವರು ವಾಟ್ಸ್‌ಆಪ್ ಹುಟ್ಟುಹಾಕಿದರು.!

  ಫೇಸ್‌ಬುಕ್‌ನಲ್ಲಿ ಸತ್ತವರ ಅಕೌಂಟ್?

  ನಿಮಗೆ ಗೊತ್ತಾ?..2004 ರಲ್ಲಿ ಹುಟ್ಟಿದ ಫೇಸ್‌ಬುಕ್‌ನಲ್ಲಿ ಅತ್ತವರ ಸಂಖ್ಯೆಯೇ 40 ಮಿಲಿಯನ್‌ಗಿಂತಲೂ ಹೆಚ್ಚಿದೆ ಎಂದು ಫೇಸ್‌ಬುಕ್ ವರದಿಗಳೇ ಹೇಳಿಕೊಂಡಿವೆ. ಈ ಅಕೌಂಟ್‌ಗಳು ಈಗಲೂ ಆಕ್ಟಿವೇಟ್ ಆಗಿವೆ. ಅವರ ಹತ್ತಿರದವರು ಫೇಸ್‌ಬುಕ್ ಅನ್ನು ಸಂಪರ್ಕಿಸಿ ಅಕೌಂಟ್ ಡಿಲೀಟ್ ಮಾಡುವಂತೆ ಕೋರಬಹುದು ಅಥವಾ ಅವರ ಅಕೌಂಟ್ ಅನ್ನು ನೆನಪಿನ ಖಾತೆಯನ್ನಾಗಿ ಮಾರ್ಪಡಿಸಲು ಕೋರಬಹುದು.!

  1 ನಿಮಿಷ ಸರ್ವರ್ ಡೌನ್ ಆದರೆ ನಷ್ಟವೆಷ್ಟು?

  ಫೇಸ್‌ಬುಕ್‌ನಲ್ಲಿ ಆಕ್ಟಿವ್ ಆಗಿರುವ ಜನಸಂಖ್ಯೆಯೇ ಹತ್ತಾರು ಕೋಟಿಯಷ್ಟಿರುವಾಗ ಪೇಸ್‌ಬುಕ್ ಒಂದು ನಿಮಿಷ ಕಾರ್ಯನಿರ್ವಹಿಸದಿದ್ದರೆ ಆಗುವ ನಷ್ಟದ ಪ್ರಮಾಣ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಫೇಸ್‌ಬುಕ್‌ ಸರ್ವರ್ ಒಂದು ನಿಮಿಷ ಡೌನ್ ಆಗಿದ್ದರೆ, ಪ್ರತಿ ನಿಮಿಷಕ್ಕೆ ಕನಿಷ್ಟ ಎಂದರೂ 50,000 ಡಾಲರ್ ನಷ್ಟವಾಗುತ್ತದಂತೆ.!!

  ಫೇಸ್‌ಬುಕ್ ಅನ್ನು ಹಲವು ದೇಶಗಳು ಬ್ಯಾನ್ ಮಾಡಿವೆ!!

  ಫೇಸ್‌ಬುಕ್ ಅನ್ನು ವಿಶ್ವದ ಕೆಲ ರಾಷ್ಟ್ರಗಳು ತಮ್ಮ ದೇಶದ ಜನರು ಬಳಕೆ ಮಾಡುವುದನ್ನು ಬ್ಯಾನ್ ಮಾಡಿವೆ. ಚೀನಾ, ವಿಯೇಟ್ನಾಂ, ನಾರ್ಥ್ ಕೋರಿಯಾದಂತಹ ಕೆಲವು ರಾಷ್ಟ್ರಗಳಲ್ಲಿ ಜನರು ಫೇಸ್‌ಬುಕ್ ಬಳಕೆ ಮಾಡುವುದು ಅಸಾಧ್ಯವಾಗಿದೆ. ಕೆಲವು ದೇಶಗಳು ಭಧ್ರತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದರೆ, ಇನ್ನು ಕೆಲವು ದೇಶಗಳು ಫೇಸ್‌ಬುಕ್ ಬೆಳವಣಿಗೆ ಕಂಡು ಅದನ್ನು ಬ್ಯಾನ್ ಮಾಡಿವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Unbelievable Amazing Things in the Facebook world. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more