ಫೇಸ್‌ಬುಕ್ ಖಾತೆಗೆ ಆಧಾರ್ ಲಿಂಕ್!!?..ಇದಕ್ಕೆ ಫೇಸ್‌ಬುಕ್ ಹೇಳಿದ್ದೇನು ಗೊತ್ತಾ?

ನಕಲಿ ಖಾತೆಗಳಿಂದ ಫೇಸ್‌ಬುಕ್‌ನಲ್ಲಿ ಆಗಬಹುದಾದ ತೊಂದರೆಗಳಿಗೆ ಬೇಸತ್ತಿರುವ ಜನ ಇಂತದೊಂದು ವ್ಯವಸ್ಥೆಗಾಗಿ ಜನರೇ ಕೋರುತ್ತಿದ್ದಾರೆ.!!

|

ಫೇಸ್‌ಬುಕ್ ಖಾತೆಗೆ ಸೈನ್‌ಆಪ್‌ ಆಗುವ ಸಂದರ್ಭದಲ್ಲಿ ಆಧಾರ್ ಮಾಹಿತಿ ನೀಡಿ ಸೈನ್ಅಪ್ ಆಗುವಂತಹ ಸುದ್ದಿ ಕೇಳಿ ಫೇಸ್‌ಬುಕ್ ಬಳಕೆದಾರರೇ ಹೆಚ್ಚು ಖುಷಿಯಾಗಿದ್ದಾರೆ.!! ನಕಲಿ ಖಾತೆಗಳಿಂದ ಫೇಸ್‌ಬುಕ್‌ನಲ್ಲಿ ಆಗಬಹುದಾದ ತೊಂದರೆಗಳಿಗೆ ಬೇಸತ್ತಿರುವ ಜನ ಇಂತದೊಂದು ವ್ಯವಸ್ಥೆಗಾಗಿ ಜನರೇ ಕೋರುತ್ತಿದ್ದಾರೆ.!!

ಫೇಸ್‌ಬುಕ್ ಖಾತೆಗೆ ಆಧಾರ್ ಲಿಂಕ್!!?..ಇದಕ್ಕೆ ಫೇಸ್‌ಬುಕ್ ಹೇಳಿದ್ದೇನು ಗೊತ್ತಾ?

ಆಧಾರ್ ಮಾಹಿತಿ ನೀಡಿ ಫೇಸ್‌ಬುಕ್ ಖಾತೆಗೆ ಸೈನ್ಅಪ್ ಆಗುವ ವಿಷಯಕ್ಕೆ ಬಳಕೆದಾರರೇ ಬೆಂಬಲ ವ್ಯಕ್ತಪಡಿಸಿದ್ದು ಇದೀಗ ವೈರಲ್ ಆಗಿದೆ.!! ಇದೇ ವೇಳೆಲ್ಲಿ ಹೆಚ್ಚುತ್ತಿರುವ ನಕಲಿ ಖಾತೆಗಳನ್ನು ಪರಿಶೀಲಿಸಲು ಫೇಸ್‌ಬುಕ್‌, ಆಧಾರ್ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ ಎಂಬ ಸುದ್ದಿಯ ಬಗ್ಗೆ ಫೇಸ್‌ಬುಕ್ ಸ್ಪಷ್ಟನೆ ನೀಡಿದೆ.!! ಹಾಗಾದರೆ, ಫೇಸ್‌ಬುಕ್ ಆಧಾರ್ ಸೈನ್‌ಅಪ್ ಆಯ್ಕೆ ತರುತ್ತದೆಯೇ? ಫೇಸ್‌ಬುಕ್ ಹೇಳಿದ್ದೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಆಧಾರ್ ಮಾಹಿತಿ ಕೇಳಿದ್ದು ನಿಜ!!

ಆಧಾರ್ ಮಾಹಿತಿ ಕೇಳಿದ್ದು ನಿಜ!!

ಪ್ರಖ್ಯಾತ ಜಾಲತಾಣ ಫೇಸ್‌ಬುಕ್ ಬಳಕೆದಾರರ ಆಧಾರ್ ಮಾಹಿತಿಯನ್ನು ಕೇಳಿರುವುದು ನಿಜವಾಗಿದೆ. ಆದರೆ, ಬಳಕೆದಾರರು ಫೇಸ್‌ಬುಕ್‌ಗೆ ಆಧಾರ್ ಮಾಹಿತಿ ನೀಡುವ ವಿಷಯ ಅವರರವ ವಿವೇಚನೆಗೆ ಬಿಟ್ಟಿದ್ದಾಗಿದೆ. ಬಳಕೆದಾರರಿಗೆ ಇಷ್ಟವಿದ್ದರೆ ಮಾತ್ರ ಅವರೇ ಆಧಾರ್ ಮಾಹಿತಿ ನೀಡಬಹುದು ಎಂದು ಹೇಳಿದೆ.!!

Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!
ಸೈನ್‌ಅಪ್ ಉದ್ದೇಶಕ್ಕೆ ಅಲ್ಲ!!

ಸೈನ್‌ಅಪ್ ಉದ್ದೇಶಕ್ಕೆ ಅಲ್ಲ!!

ಹೆಚ್ಚುತ್ತಿರುವ ನಕಲಿ ಖಾತೆಗಳನ್ನು ಪರಿಶೀಲಿಸಲು ಫೇಸ್‌ಬುಕ್‌, ಆಧಾರ್ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ ಎಂಬ ಸುದ್ದಿಯನ್ನು ಫೇಸ್‌ಬುಕ್ ಅಲ್ಲಗಳೆದಿದೆ. ! ಸಾಮಾಜಿಕ ಜಾಲತಾಣದ ಸೈನ್‌ಅಪ್‌ಗಾಗಿ ಆಧಾರ್ ಮಾಹಿತಿ ಸಂಗ್ರಹಿಸುವ ಉದ್ದೇಶ ಇಲ್ಲ ಎಂದು ಫೇಸ್‌ಬುಕ್ ತಿಳಿಸಿದೆ.!!

ಸಂಸ್ಥೆಯ ಬೇರೊಂದು ಪ್ರಯೋಗ!!

ಸಂಸ್ಥೆಯ ಬೇರೊಂದು ಪ್ರಯೋಗ!!

ತಮ್ಮ ನಿಜವಾದ ಹೆಸರಿನೊಂದಿಗೆ ಸೈನ್‌ಅಪ್‌ ಆಗಿ, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದು ಹೇಗೆ ಎಂಬುದನ್ನು ಹೊಸ ಬಳಕೆದಾರರಿಗೆ ತಿಳಿಸಿಕೊಡಲು ಸಂಸ್ಥೆಯು ಪ್ರಯೋಗವೊಂದನ್ನು ನಡೆಸುತ್ತಿದೆ. ಆದರೆ, ಆಧಾರ್‌ ಮಾಹಿತಿ ಸಂಗ್ರಹಿಸುವ ಮತ್ತು ಸಂಪರ್ಕ ಕಲ್ಪಿಸುವ ಉದ್ದೇಶ ಇಲ್ಲ ಎಂದು ಫೇಸ್‌ಬುಕ್‌ ಸಂಸ್ಥೆ ಸ್ಪಷ್ಟಪಡಿಸಿದೆ.!!

ಬಳಕೆದಾರರ ರಕ್ಷಣೆಗಾಗಿ ಅಷ್ಟೆ!!

ಬಳಕೆದಾರರ ರಕ್ಷಣೆಗಾಗಿ ಅಷ್ಟೆ!!

ಫೆಸ್‌ಬುಕ್ ಬಳಕೆದಾರರು ಹೆಚ್ಚುವರಿ ಮಾಹಿತಿಯಾಗಿ ಆಧಾರ‌ ವಿವರ ನೀಡಿದರೆ ಕುಟುಂಬದವರು ಮತ್ತು ಸ್ನೇಹಿತರು ಅವರನ್ನು ಗುರುತಿಸಲು ನೆರವಾಗುತ್ತದೆ. ಅಂದರೆ ಅಪಾಯದ ಸಂದರ್ಭಗಳಲ್ಲಿ ಆಧಾರ್ ಮಾಹಿತಿ ಇದ್ದರೆ ಸಹಾಯವಾಗಲಿದೆ ಎಂದಿದೆ. ಹಾಗಾಗಿ, ಆಧಾರ್ ಮಾಹಿತಿ ನೀಡಬೇಕಾದುದು ಕಡ್ಡಾಯವೇನಲ್ಲ ಎಂದು ಸಂಸ್ಥೆ ಬ್ಲಾಗ್‌ಸ್ಪಾಟ್‌ನಲ್ಲಿ ತಿಳಿಸಿದೆ.!!

ಆಧಾರ್ ಸೇವೆ ಸಿಗುವುದು ಕಷ್ಟ.!!

ಆಧಾರ್ ಸೇವೆ ಸಿಗುವುದು ಕಷ್ಟ.!!

ಆಧಾರ್ ಅನ್ನು ಫೇಸ್‌ಬುಕ್‌ಗೆ ಜೋಡಿಸಲು ಬಳಕೆದಾರರೇ ಒತ್ತಾಯಿಸುತ್ತಿದ್ದರೂ ಭವಿಷ್ಯದಲ್ಲಿಯೂ ಈ ಸೇವೆ ಕಾರ್ಯರೂಪಕ್ಕೆ ಬರುವ ಯಾವುದೇ ಲಕ್ಷಣಗಳಿಲ್ಲ. ಏಕೆಂದರೆ ಆಧಾರ್ ಪ್ರಾಧಿಕಾರದ ಈ ಸೇವೆ ಎಲ್ಲಾ ಖಾಸಾಗಿ ಕಂಪೆನಿಗಳಿಗೆ ಉಚಿತವಾಗಿ ಸಿಗುವ ಯಾವುದೇ ಸೌಲಭ್ಯವಿಲ್ಲ.!!

10 ನಿಮಿಷದಲ್ಲಿ ಉಚಿತ ಬ್ಲಾಗ್‌ ರಚಿಸುವುದು ಹೇಗೆ?..ಎಷ್ಟು ಸಿಂಪಲ್ ಗೊತ್ತಾ?10 ನಿಮಿಷದಲ್ಲಿ ಉಚಿತ ಬ್ಲಾಗ್‌ ರಚಿಸುವುದು ಹೇಗೆ?..ಎಷ್ಟು ಸಿಂಪಲ್ ಗೊತ್ತಾ?

Best Mobiles in India

English summary
Social networking giant Facebook has clarified that it is not collecting any Aadhaar data. to know more visit to kannada.gibot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X