ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಮೇಲ್ ಗೆ ಒಳಗಾಗುತ್ತಿದ್ದರೆ ಏನು ಮಾಡಬೇಕು ಗೊತ್ತಾ?

By Gizbot Bureau
|

ಫೇಸ್ ಬುಕ್, ವಾಟ್ಸ್ ಆಪ್ ಮತ್ತು ಇನ್ಸ್ಟಾಗ್ರಾಂಗಳು ದೃಷ್ಟರಿಗೂ ಕೂಡ ಲೈಫ್ ನೀಡುತ್ತಿದೆ. ಜನರು ಇದೀಗ ತಮ್ಮ ಸ್ನೇಹ, ಸಂಬಂಧ, ಪ್ರೀತಿ ಎಲ್ಲವನ್ನೂ ಆನ್ ಲೈನ್ ನಲ್ಲಿ ಕಾಪಾಡಿಕೊಳ್ಳುವುದಕ್ಕೆ ಮುಂದಾಗುತ್ತಿದ್ದಾರೆ ಮತ್ತು ಅದಕ್ಕಾಗಿ ಈ ಆನ್ ಲೈನ್ ಫ್ಲ್ಯಾಟ್ ಫಾರ್ಮ್ ಗಳು ವೇದಿಕೆಯಾಗುತ್ತಿವೆ. ಆದರೆ ಬೇಸರದ ಸಂಗತಿಯೆಂದರೆ ಕೆಲವರಿಗೆ ಈ ಫ್ಲ್ಯಾಟ್ ಫಾರ್ಮ್ ಗಳು ನಿದ್ದೆಗೆಡಿಸಿಬಿಟ್ಟಿವೆ.ಇತ್ತೀಚೆಗೆ 21 ವರ್ಷದ ಹುಡುಗನೊಬ್ಬ 17 ವರ್ಷದ ಕಾಲೇಜು ಹುಡುಗನ ಬೆತ್ತಲೆ ಫೋಟೋಗಳಿಂದ 6.4 ಲಕ್ಷ ರುಪಾಯಿ ಮತ್ತು ಬೆಳ್ಳಿ,ಚಿನ್ನದ ಆಭರಣಗಳನ್ನು ದೋಚಿದ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಮೇಲ್ ಗೆ ಒಳಗಾಗುತ್ತಿದ್ದರೆ ಏನು ಮಾಡಬೇಕು ಗೊತ್ತಾ?

ಹಾಗಾದರೆ ಇಂಟಿಮೇಟ್ ಫೋಟೋ ಮತ್ತು ವೀಡಿಯೋಗಳನ್ನು ವಾಟ್ಸ್ ಆಪ್, ಫೇಸ್ ಬುಕ್, ಇನ್ಸ್ಟಾಗ್ರಾಂನಲ್ಲಿ ಕಳುಹಿಸಿ ಪೇಚಿಗೆ ಸಿಲುಕುವ ಸನ್ನಿವೇಶದ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಅಂಶಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಬ್ಲಾಕ್ ಮೇಲ್

ಬ್ಲಾಕ್ ಮೇಲ್

ಯಾವುದೇ ಬ್ಲಾಕ್ ಮೇಲ್ ನ್ನು ಆರಂಭದಲ್ಲೇ ಸಹಿಸಿಕೊಳ್ಳಬೇಡಿ. ಮೊದಲ ದಿನದಿಂದಲೇ ಈ ಸನ್ನಿವೇಶವನ್ನು ಎದುರಿಸುವ ಶಕ್ತಿಯನ್ನು ನೀವು ನಿಮ್ಮ ಮನಸ್ಸಿನಲ್ಲಿ ಹೆಚ್ಚಿಸಿಕೊಳ್ಳಬೇಕು.

ಒಂದು ವೇಳೆ ನೀವು ಬ್ಲಾಕ್ ಮೇಲ್ ಗೆ ಒಳಗಾಗುತ್ತಿದ್ದರೆ ಆನ್ ಲೈನ್ ಲೈಂಗಿಕ ಸಂಪರ್ಕ ಕ್ರೈಮ್ ಅಲ್ಲ ಬದಲಾಗಿ ನಿಮ್ಮ ವಯಕ್ತಿಕ ಫೋಟೋ ಅಥವಾ ವೀಡಿಯೋಗಳನ್ನು ಇನ್ನೊಬ್ಬರಿಗೆ ನಿಮ್ಮ ಅನುಮತಿ ಇಲ್ಲದೆ ಕಳುಹಿಸುವುದು ಅಪರಾಧವಾಗಿರುತ್ತದೆ ಎಂಬುದು ನಿಮಗೆ ತಿಳಿದಿರಲಿ.

ಒಂದು ವಿಷಯ ನೆನಪಿಡಿ. ನಿಮ್ಮದು ಯಾವುದೇ ತಪ್ಪಿಲ್ಲ ಯಾಕೆಂದರೆ ನೀವು ನಂಬಿಕೆ ಇಟ್ಟ ವ್ಯಕ್ತಿಗೆ ಇಂಟಿಮೇಟ್ ಫೋಟೋಗಳನ್ನು ಕಳುಹಿಸಿರುತ್ತೀರಿ. ಮತ್ತೊಬ್ಬ ವ್ಯಕ್ತಿ ಇಲ್ಲಿ ತಪ್ಪಾಗಿರುತ್ತಾನೆ ಮತ್ತು ಅದನ್ನು ನೀವು ಪರಿಶೀಲಿಸಬೇಕಾಗುತ್ತದೆ.

ಸ್ಥಳೀಯ ಪೋಲೀಸರ ಬಳಿ ನೀವು ತೆರಳುವುದಕ್ಕಿಂತ ಮುನ್ನ ಒಬ್ಬ ವಕೀಲರನ್ನು ಸಂಪರ್ಕಿಸಿ ಮತ್ತು ಬ್ಲಾಕ್ ಮೇಲ್ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಪರಿಪೂರ್ಣವಾಗಿ ಹೋರಾಡುವುದಕ್ಕೆ ಸಲಹೆ ಪಡೆಯಿರಿ. ಇದು ಪೋಲೀಸರ ಬಳಿ ಬಿಗಿಯಾಗಿರುವ ಕೇಸ್ ಹಾಕುವುದಕ್ಕೆ ಸಹಾಯ ಮಾಡುತ್ತದೆ.

ವೆಬ್ ಸೈಟ್

ವೆಬ್ ಸೈಟ್

www.cybercrime.gov.in ನಲ್ಲಿ ನೀವು ಯಾವಾಗ ಬೇಕಿದ್ದರೂ ಕೂಡ ದೂರು ನೀಡುವುದಕ್ಕೆ ಅವಕಾಶವಿರುತ್ತದೆ. ಇದು ಮಿನಿಸ್ಟ್ರಿ ಆಫ್ ಹೋಮ್ ಅಫೈರ್ಸ್ ನಿಂದ ನಿಗದಿಪಡಿಸಲಾಗಿರುವ ನಿರ್ಧಿಷ್ಟ ವೆಬ್ ಸೈಟ್ ಆಗಿರುತ್ತದೆ.

ಒಂದು ವೇಳೆ www.cybercrime.gov.in ನಲ್ಲಿ ನೀವು ವರದಿ ಮಾಡಿದರೆ ಆ ಕಂಪ್ಲೈಟ್ ನಲ್ಲಿ ರಾಜ್ಯ ಮತ್ತು ಯುಟಿ ಆಧಾರಿತ ಮಾಹಿತಿಗಳನ್ನು ಸರಿಯಾಗಿ ನೀಡಿದ್ದೀರೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

www.cybercrime.gov.in ನಲ್ಲಿ ನೀವು ನೀಡಿದ ಕೇಸಿನ ಪ್ರೊಗ್ರೆಸ್ ನ್ನು ಕೂಡ ಟ್ರ್ಯಾಕ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಹೌದು ವೆಬ್ ಸೈಟ್ ನಲ್ಲಿ ರಿಪೋರ್ಟ್ ಎಂಡ್ ಟ್ರ್ಯಾಕ್ ಆಯ್ಕೆಯನ್ನು ಹೇಮ್ ಪೇಜ್ ನಲ್ಲಿ ಕ್ಲಿಕ್ಕಿಸಿ. ಇದು ರಿಪೋರ್ಟ್ ಯುವರ್ ಕಂಪ್ಲೈಟ್ ಸೆಕ್ಷನ್ ಅಡಿಯಲ್ಲಿ ಇರುತ್ತದೆ. ಅಕೌಂಟ್ ನ್ನು ನಿಮ್ಮ ಮೊಬೈಲ್ ನಂಬರ್ ಮತ್ತು ಹೆಸರನ್ನು ನಮೂದಿಸಿ ಪಡೆದುಕೊಳ್ಳಬೇಕಾಗುತ್ತದೆ. ಕಟೆಂಟ್ ನ್ನು ರಿಪೋರ್ಟ್ ಮಾಡಬೇಕಾಗುತ್ತದೆ ಮತ್ತು ಪ್ರೊಗ್ರೆಸ್ ನ್ನು ಟ್ರ್ಯಾಕ್ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ವಾಟ್ಸ್ ಆಪ್

ವಾಟ್ಸ್ ಆಪ್

ಫೇಸ್ ಬುಕ್ ಗೂ ವರದಿ ಮಾಡಬಹುದು. ಈ ಕೆಳಗಿನ ಲಿಂಕ್ ನಲ್ಲಿ ಫೇಸ್ ಬುಕ್ ಗೆ ಬ್ಲಾಕ್ ಮೇಲರ್ ಗಳ ಬಗ್ಗೆ ತಿಳಿಸಬಹುದು -- https://www.facebook.com/help/contact/567360146613371


ಇನ್ಸ್ಟಾಗ್ರಾಂಗೆ ವರದಿ ಮಾಡಬಹುದು - ಈ ಕೆಳಗಿನ ಲಿಂಕ್ ಬಳಸಿ ಇನ್ಸ್ಟಾಗ್ರಾಂಗೆ ಬ್ಲಾಕ್ ಮೇಲರ್ ಬಗ್ಗೆ ತಿಳಿಸಬಹುದು -- https://help.instagram.com/contact/1681792605481224?helpref=faq_content

ಚಾಟ್ ನಲ್ಲಿರುವ ರಿಪೋರ್ಟ್ ಫೀಚರ್ ಬಳಸಿ ವಾಟ್ಸ್ ಆಪ್ ನಲ್ಲೂ ಕೂಡ ವರದಿ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಕ್ಯಾಮರಾ

ಕ್ಯಾಮರಾ

ಯಾವುದೇ ವ್ಯಕ್ತಿಯ ಅನುಮತಿ ಇಲ್ಲದೆ ಆತನ/ಳ ಫೋಟೋ ಕ್ಲಿಕ್ಕಿಸುವುದು ಮತ್ತು ಅದನ್ನು ಪ್ರಕಟ ಮಾಡುವುದು ಕಾನೂನು ಬಾಹಿರವಾಗಿರುತ್ತದೆ ಮತ್ತು ಐಟಿ ಆಕ್ಟ್ 2000- ವಯಲೇಷನ್ ಆಫ್ ಪ್ರೈವೆಸಿ ಸೆಕ್ಷನ್ 66ಇ ಅಡಿಯಲ್ಲಿ ಶಿಕ್ಷೆಗೂ ಕೂಡ ಅರ್ಹವಾಗಿರುವ ಅಪರಾಧವಾಗಿರುತ್ತದೆ.

ಯಾವುದೇ ವ್ಯಕ್ತಿಯ ಹೆಸರು ಹಾಳು ಮಾಡುವುದಕ್ಕಾಗಿ ಫೋಟೋ ಅಥವಾ ವೀಡಿಯೋಗಳನ್ನು ಪ್ರಕಟ ಮಾಡುವುದು ಎಲೆಕ್ಟ್ರಾನಿಕ್ ಮೆಟಿರಿಯಲ್ ಬಳಸಿ ಕೆಟ್ಟದ್ದನ್ನು ಹರಡುವಿಕೆಗೆ ಸಂಬಂಧಿಸಿದ ಐಟಿ ಆಕ್ಟ್, 2000ದ ಸೆಕ್ಷನ್ 67 ರ ಪ್ರಕಾರ ಶಿಕ್ಷೆಗೆ ಅರ್ಹವಾಗಿರುವ ಅಪರಾಧವಾಗಿರುತ್ತದೆ.

ಒಂದು ವೇಳೆ ವಿಕ್ಟಿಮ್ ಮೈನರ್ ಆಗಿದ್ದರೆ 18 ವರ್ಷದ ಒಳಗಿನವರಿಗೆ ಅನ್ವಯಿಸುವ ಮಕ್ಕಳ ಲೈಂಗಿಕತೆಗೆ ಸಂಬಂಧಿಸಿದ ಐಟಿ ಆಕ್ಟ್ ನ ಸೆಕ್ಷನ್ 67ಬಿ ಅನ್ವಯಿಸುತ್ತದೆ.

ಹಿಡನ್ ಕ್ಯಾಮರಾ ಬಳಸಿ ರೆಕಾರ್ಡ್ ಮಾಡುವುದು ಮತ್ತು ವೀಡಿಯೋ ಕ್ಲಿಪ್ ಗಳನ್ನು ಹಂಚುವುದು ಕೂಡ ಶಿಕ್ಷೆಗೆ ಅರ್ಹವಾಗಿರುವ ಅಪರಾಧವಾಗಿದ್ದು ಲೈಂಗಿಕತೆಗಾಗಿ ಎಲೆಕ್ಟ್ರಾನಿಕ್ ಮೆಟಿರಿಯಲ್ ಬಳಕೆ ಐಟಿ ಆಕ್ಟ್ 2000 ದ ಸೆಕ್ಷನ್ 67ಎ ಅಡಿಯಲ್ಲಿ ಇದಕ್ಕೆ ಶಿಕ್ಷೆಯನ್ನು ನೀಡಲಾಗುತ್ತದೆ.

Best Mobiles in India

English summary
What you need to know if someone blackmails you on WhatsApp, Facebook or Instagram

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X