Subscribe to Gizbot

ಯೂಟ್ಯೂಬ್ ಗೋ ಗೆ ಹೊಸ ಫೀಚರ್ಗಳನ್ನು ನೀಡಿದ ಯೂಟ್ಯೂಬ್!

Posted By: Tejaswini P G

ಗೂಗಲ್ ಯೂಟ್ಯೂಬ್ ಬಳಕೆದಾರರ ವೀಡಿಯೋ ಸ್ಟ್ರೀಮಿಂಗ್ ಅನುಭವವನ್ನು ಉತ್ತಮವಾಗಿಸಲು ಸದಾ ಹೊಸ ಹೊಸ ಫೀಚರ್ಗಳನ್ನು ನೀಡುತ್ತಲೇ ಇರುತ್ತದೆ. ಗೂಗಲ್ ಕೆಲ ಸಮಯದ ಹಿಂದೆ ಕಡಿಮೆ ಡೇಟಾ ಬಳಸುವ ಮೂಲಕ ವೀಡಿಯೋ ಸ್ಟ್ರೀಮಿಂಗ್ ಮಾಡಲು ಯೂಟ್ಯೂಬ್ ಗೋ ಆಪ್ ಅನ್ನು ಪ್ರಸ್ತುತಪಡಿಸಿದ್ದು, ಈಗ ಯೂಟ್ಯೂಬ್ ಗೋ 130 ದೇಶಗಳಲ್ಲಿ ಲಭ್ಯವಾಗಲಿದೆ.

ಯೂಟ್ಯೂಬ್ ಗೋ ಗೆ ಹೊಸ ಫೀಚರ್ಗಳನ್ನು ನೀಡಿದ ಯೂಟ್ಯೂಬ್!

2016ರಲ್ಲಿ ಗೂಗಲ್ ಯೂಟ್ಯೂಬ್ ಅನ್ನು ಆಫ್ಲೈನ್ ಆಕ್ಸೆಸ್ ಮಾಡಲು ಈ ಲೈಟ್ ವೇಯ್ಟ್ ಆಪ್ ಅನ್ನು ಬಿಡುಗಡೆ ಮಾಡಿದ್ದು, ಬೀಟಾ ಆವೃತ್ತಿಯಾಗಿ ಲಾಂಚ್ ಮಾಡಲಾಗಿತ್ತು.ಈಗ ಬರುತ್ತಿರುವ ವರದಿಯ ಅನುಸಾರ ಗೂಗಲ್ ಯೂಟ್ಯೂಬ್ ಗೋ ಅನ್ನು 130 ವಿಭಿನ್ನ ದೇಶಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ.

ಗ್ಯಾಜೆಟ್ಸ್ 360 ಯ ವರದಿಗಳ ಅನುಸಾರ ಗೂಗಲ್ ಯೂಟ್ಯೂಬ್ ಗೋ ಗೆ ಹೊಸ ಫೀಚರ್ಗಳನ್ನು ತಂದಿದ್ದು, ಕಡಿಮೆ ಅಥವಾ ಸ್ಥಿರವಲ್ಲದ ಇಂಟರ್ನೆಟ್ ಕನೆಕ್ಟಿವಿಟಿ ಹೊಂದಿರುವ ಪ್ರದೇಶಗಳಲ್ಲೂ ಉತ್ತಮ ವೀಡಿಯೋ ಸ್ಟ್ರೀಮಿಂಗ್ ಅನುಭವ ನೀಡಲು ಈ ಫೀಚರ್ಗಳು ಅನುವಾಗಲಿದೆ.

ಉತ್ತಮ ಗುಣಮಟ್ಟದ ವೀಡಿಯೋಗಳನ್ನು ಡೌನ್ಲೋಡ್, ಸ್ಟ್ರೀಮಿಂಗ್ ಮತ್ತು ಶೇರ್ ಮಾಡುವ ಸಾಮರ್ಥ್ಯವೇ ಹೊಸ ಯೂಟ್ಯೂಬ್ ಗೋ ನ ಪ್ರಮುಖ ಫೀಚರ್ ಆಗಿದೆ. ಅಲ್ಲದೆ ಯೂಟ್ಯೂಬ್ ಗೋ ನಲ್ಲಿ ಮೂಲ ಸ್ಟಾಂಡರ್ಡ್ ಮತ್ತು ಬೇಸಿಕ್ ಗುಣಮಟ್ಟದ ವೀಡಿಯೋ ಆಕ್ಸೆಸ್ ಮಾಡುವ ಫೀಚರ್ ಕೂಡ ಇದೆ.

ಯೂಟ್ಯೂಬ್ ಬಳಕೆದಾರರು ವೇಗದ ವೈಫೈ ಅಥವಾ ಮೊಬೈಲ್ ಡೇಟಾ ಗೆ ಕನೆಕ್ಟ್ ಆಗಿದ್ದರೆ ಆಪ್ ನ ಈ ಹೊಸ ಫೀಚರ್ ಬಹಳ ಉಪಯೋಗಿ ಎನಿಸುತ್ತದೆ. ಆದರೆ ಬಳಕೆದಾರರ ಆದ್ಯತೆ ಉತ್ತಮ ಗುಣಮಟ್ಟದ ವೀಡಿಯೋ ಆಗಿದ್ದರೆ, ಅವರು ಯೂಟ್ಯೂಬ್ ಗೋ ಬಳಸುವ ಸಾಧನದಲ್ಲಿ ಹೆಚ್ಚು ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರಬೇಕು.

ಈ ವರದಿಗಳ ಪ್ರಕಾರ ಈ ಹೊಸ ಫೀಚರ್ ಮೂಲ ಯೂಟ್ಯೂಬ್ ಆಪ್ ಮತ್ತು ಯೂಟ್ಯೂಬ್ ಗೋ ಆಪ್ ನ ಮಧ್ಯದ ಅಂತರವನ್ನು ಕಡಿಮೆ ಮಾಡಲಿದ್ದು,ಮೂಲ ಯೂಟ್ಯೂಬ್ ಆಪ್ ಗೆ ಹೈ-ಕ್ವಾಲಿಟಿ ವೀಡಿಯೋ ಡೌನ್ಲೋಡ್ ಆಯ್ಕೆ ಲಭ್ಯವಾಗಲಿದೆ.

ಈ ಹೊಸ ಯೂಟ್ಯೂಬ್ ಗೋ ಆಪ್ ನಲ್ಲಿ ಬಳಕೆದಾರರು ವೈಯುಕ್ತೀಕರಿಸಲಾದ ಕಂಟೆಂಟ್ ಅನ್ನು ಪಡೆಯುವ ಫೀಚರ್ ಇದ್ದು, ಹೋಮ್ ಸ್ಕ್ರೀನ್ ಮೇಲೆ ಎಳೆಯುವ ಮೂಲಕ ಇದನ್ನು ಬಳಸಬಹುದಾಗಿದೆ. ಈ ಆಪ್ ಬಳಕೆದಾರರಿಗೆ ತಮ್ಮ ಫೇವರೆಟ್ ಚ್ಯಾನಲ್ಗಳು ವೀಡಿಯೋ ಆಡ್ ಮಾಡಿದಾಗ ಸೂಚನೆಯನ್ನು ನೀಡುತ್ತದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!

ನಿಮ್ಮ ಆಧಾರ್ ದುರುಪಯೋಗವಾಗಿದೆಯೇ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ..?

ಗೂಗಲ್ ಶೇರ್ ನಿಯರ್ ಬೈ ನಂತಹ ಹೊಸ ಫೀಚರ್ಗಳನ್ನು ಸಹ ನೀಡುತ್ತಿದ್ದು, ಈ ಮೂಲಕ ಸುಲಭವಾಗಿ ಶೇರ್ ಮಾಡಬಹುದಾಗಿದೆ. ಅಲ್ಲದೆ ಬಳಕೆದಾರರಿಗೆ ಹಲವು ವೀಡಿಯೋಗಳನ್ನು ಏಕ ಕಾಲಕ್ಕೆ ಶೇರ್ ಮಾಡುವ ಫೀಚರ್ ಕೂಡ ಈ ಆಪ್ ನೀಡುತ್ತಿದೆ.

ಯೂಟ್ಯೂಬ್ ಗೋ ಆಪ್ 10MB ಗಿಂತ ಕಡಿಮೆ ಗಾತ್ರ ಹೊಂದಿದ್ದು ಆಂಡ್ರಾಯ್ಡ್ 4.1 ಜೆಲ್ಲೀಬೀನ್ ಮತ್ತು ಅದರ ನಂತರದ ಆಂಡ್ರಾಯ್ಡ್ ಆವೃತ್ತಿಗಳಲ್ಲಿ ಕೆಲಸಮಾಡುತ್ತದೆ.ಬಳಕೆದಾರರು ಯೂಟ್ಯೂಬ್ ಗೋ ಆಪ್ ಅನ್ನು ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಬಹುದಾಗಿದೆ.

ಯೂಟ್ಯೂಬ್ ಗೋ ಆಪ್ ತನ್ನ ಬಳಕೆದಾರರು ವೀಡಿಯೋ ಡೌನ್ಲೋಡ್ ಮಾಡುವ ಆಥವಾ ನೋಡುವ ಮೊದಲು ಅದರ ಮುನ್ನೋಟ ಅಥವಾ ಪ್ರಿವ್ಯೂ ಪಡೆಯಬಹುದಾಗಿದೆ ಮತ್ತು ವೀಡಿಯೋ ನೋಡಲು ಅವರು ಎಷ್ಟು MB ವ್ಯಯಿಸಲು ಸಿದ್ಧರಿದ್ದಾರೆಂದು ಆಯ್ಕೆಮಾಡಬಹುದಾಗಿದೆ. ಯೂಟ್ಯೂಬ್ ಮೂಲಕ ಬಳಕೆದಾರರು ವೀಡಿಯೋ ಅನ್ನು ಡೌನ್ಲೋಡ್ ಮಾಡಿ ತಮ್ಮ ಫೋನಿನ ಮೆಮೋರಿ ಅಥವಾ SD ಕಾರ್ಡ್ ನಲ್ಲಿ ಸೇವ್ ಮಾಡಿ ಇಂಟರ್ನೆಟ್ ಕನೆಕ್ಷನ್ ಇಲ್ಲದಿರುವಾಗಲೂ ನೋಡಬಹುದಾಗಿದೆ.

English summary
Google's YouTube Go has the ability of downloading, streaming and sharing High Quality videos.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot