ಈತ ಆಪಲ್ ಬದಲು ದುಬಾರಿ ಬೆಲೆಯ ಐಫೋನ್ X ಅನ್ನೇ ಜ್ಯೂಸ್ ಮಾಡಿ ಕುಡಿದ..!

|

ಯೂಟ್ಯೂಬ್ ಚಾನಲ್‌ಗಳಲ್ಲಿ ಹೆಚ್ಚಿನ ಮಂದಿ ವೀಕ್ಷಕರನ್ನು ಸೆಳೆಯುವ ಸಲುವಾಗಿ ಹಲವು ಮಾದರಿಯ ವಿಡಿಯೋಗಳನ್ನು ಮಾಡುವವರನ್ನು ನಾವು ಕಾಣಬಹುದಾಗಿದೆ. ಇದಲ್ಲೊಬ್ಬ ಯೂಟ್ಯೂಬರ್ ಹೊಸದಾಗಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಫಿಲ್ಟರ್ ವೊಂದನ್ನು ವಿವರಿಸುವ ಸಲುವಾಗಿ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಎಂದು ಕರೆಸಿಕೊಂಡಿರುವ ಐಫೋನ್ X ಅನ್ನು ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾಡಿದ್ದಾನೆ.

ಈತ ಆಪಲ್ ಬದಲು ದುಬಾರಿ ಬೆಲೆಯ ಐಫೋನ್ X ಅನ್ನೇ ಜ್ಯೂಸ್ ಮಾಡಿ ಕುಡಿದ..!

ಮಾರುಕಟ್ಟೆಯಲ್ಲಿ ಹೊಸ ಮಾದರಿ ಫಿಲ್ಟರ್ ಸ್ಟ್ರಾ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಅದರಲ್ಲಿ ನೀವು ಕೊಳಚೆ ನೀರನ್ನು ಕುಡಿದರು ಶುದ್ಧವಾಗಿಯೇ ಬರಲಿದೆ ಎಂಬುದನ್ನು ತೋಸಿಸುವ ಸಲುವಾಗಿ ತನ್ನ ಬ್ರಾಂಡ್ ನ್ಯೂ ಐಫೋನ್ ‍X ಅನ್ನು ಮಿಕ್ಸಿಯಲ್ಲಿ ಹಾಕಿ ರೂಬ್ಬಿದ್ದಾನೆ.

ಟೆಕ್ ರಾಕ್ಸ್;

ಟೆಕ್ ರಾಕ್ಸ್;

ಯೂಟ್ಯೂಬ್‌ನಲ್ಲಿ ಟೆಕ್ ರಾಕ್ಸ್ ಎಂದೇ ಖ್ಯಾತಿಯನ್ನ ಪಡೆದುಕೊಂಡಿರುವ ಚಾನಲ್‌ನಲ್ಲಿ ಸುಮಾರು 6.2 ಮಿಲಿಯನ್ ಸಬ್‌ಸ್ಕ್ರಬರ್ಸ್ ಅನ್ನು ಕಾಣಬಹುದಾಗಿದ್ದು, ಇದಲ್ಲಿ ಇದೇ ಮಾದರಿಯ ವಿಡಿಯೋಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ. ಹೆಚ್ಚಿನ ಆದಾಯ ಇರುವ ಕಾರಣ ಆತನಿಗೆ ಐಫೋನ್ X ಅನ್ನು ಕಳೆದುಕೊಳ್ಳುವುದು ನಷ್ಟವೇನು ಅಲ್ಲ.

ಫುಲ್ ಪುಡಿ ಪುಡಿ:

ಫುಲ್ ಪುಡಿ ಪುಡಿ:

ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾಡುವಂತೆ ಇಡೀ ಐಫೋನ್ X ಅನ್ನು ಪುಡಿ ಪುಡಿ ಮಾಡಿದ್ದಾನೆ ಎನ್ನಲಾಗಿದೆ. ಅನಂತರ ಪುಡಿಯನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಅದಕ್ಕೆ ನೀರನ್ನು ಮಿಕ್ಸಿ ಮಾಡಿದ್ದಾನೆ. ಮಾಡಿದ ನಂತರದಲ್ಲಿ ಅದನ್ನು ಕುಡಿದ್ದಾನೆ.

ಶುದ್ದೀಕರಿಸಲು:

ಶುದ್ದೀಕರಿಸಲು:

ಟೆಕ್ ರಾಕ್ಸ್ ನಲ್ಲಿ ಹೊಸದಾಗಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಲೈಫ್ ಸ್ಟ್ರಾ ಎನ್ನವ ಪೋರ್ಟಬಲ್ ಫಿಲ್ಟರ್ ಅನ್ನು ಬಳಕೆ ಮಾಡಿ ಕೊಳಚೆ ನೀರನ್ನು ಶುದ್ಧಿಕರಿಸುವುದಾಗಿ ತೋರಿಸುವ ಸಲುವಾಗಿ ಐಫೋನ್ ಅನ್ನೇ ಜ್ಯೂಸ್ ಮಾಡಿದ್ದಾನೆ ಎನ್ನಲಾಗಿದೆ.

ಸಾಧ್ಯವಾಗಿಲ್ಲ:

ಲೈಫ್ ಸ್ಟ್ರಾ ಎನ್ನವ ಪೋರ್ಟಬಲ್ ಫಿಲ್ಟರ್ ಐಫೋನ್ ಜ್ಯೂಸ್ ಅನ್ನು ಸಂಪೂರ್ಣವಾಗಿ ಶುದ್ಧಿಕರಿಸಲು ಸಾಧ್ಯವಾಗದೆ ಹೊದರೂ ಸಹ ಸುಮಾರು 90% ನೀರನ್ನು ಶುದ್ಧಿಕರಿಸಿ ತೋರಿಸಿದೆ. ಆದರೆ ಅದು ಕುಡಿಯಲು ಯೋಗ್ಯವಾಗಿರಲಿಲ್ಲ ಎನ್ನಲಾಗಿದೆ.

Best Mobiles in India

English summary
YouTuber pulverises his iPhone X in a blender and then tries to DRINK the juice. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X