ಐಬಾಲ್ ನಿಂದ ರೂ.8,999ಕ್ಕೆ 4G ಡುಯಲ್ ಸಿಮ್ ಟಾಬ್ಲೆಟ್ ಬಿಡುಗಡೆ

Written By:

ಐಬಾಲ್ ಕಂಪನಿಯೂ ಸ್ಮಾರ್ಟ್‌ಪೋನ್‌ ಕಡೆಗೆ ಹೆಚ್ಚಿನ ಗಮನವನ್ನು ನೀಡದೆ ಟ್ಯಾಬ್ಲೆಟ್‌ ಕಡೆಗೆ ಒಲವು ನೀಡಿದ್ದು, ಈ ಹಿನ್ನಲೆಯಲ್ಲಿ ಬಜೆಟ್ ಬೆಲೆಯಲ್ಲಿ ಉತ್ತಮ ಟಾಬ್ಲೆಟ್‌ವೊಂದನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ.

ಐಬಾಲ್ ನಿಂದ ರೂ.8,999ಕ್ಕೆ 4G ಡುಯಲ್ ಸಿಮ್ ಟಾಬ್ಲೆಟ್ ಬಿಡುಗಡೆ

ಓದಿರಿ: ವಾಟ್ಸ್‌ಆಪ್ ಹೊಸ ಫೀಚರ್‌ನಿಂದ ಇನ್ಮುಂದೆ ಸುಳ್ಳು ಹೇಳುವುದು ಕಷ್ಟ ಆಗಬಹುದು...!

ಈ ಬಾರಿ ಐಬಾಲ್ ರೂ.8,999ಗೆ 3GB RAM ಹೊಂದಿರುವ 'ಬ್ರಿಸ್ಕ್ 4G2' ಟಾಬ್ಲೆಟ್ ಅನ್ನು ನೀಡಲಿದ್ದು, ಗ್ರಾಹಕರಿಗೆ ಕೊಟ್ಟ ಕಾಸಿಗೆ ಮೋಸ ಆಗಿದಿರುವಂತೆ ತನ್ನ ಟ್ಯಾಬ್ಲೆಟ್ ಅನ್ನು ವಿನ್ಯಾಸಗೊಳಿಸಿದೆ. ಸ್ಮಾರ್ಟ್‌ಪೋನ್‌ ಬೆಲೆಗಿಂತ ಕಡಿಮೆಗೆ ಟ್ಯಾಬ್ಲೆಟ್ ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
7 ಇಂಚಿನ HD ಡಿಸ್‌ಪ್ಲೇ:

7 ಇಂಚಿನ HD ಡಿಸ್‌ಪ್ಲೇ:

'ಬ್ರಿಸ್ಕ್ 4G2' ಟಾಬ್ಲೆಟ್ 7 ಇಂಚಿನ HD IPS ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ ಗುಣಮಟ್ಟದ ವಿಡಿಯೋ ಉತ್ತಮವಾಗಿ ಪ್ಲೇಯಾಗಲಿದ್ದು, ಆಟವಾಡಲು ಹೇಳಿ ಮಾಡಿಸಿದಂತಿದೆ.

3GB RAM:

3GB RAM:

ಈ ಟಾಬ್ಲೆಟ್‌ನಲ್ಲಿ 3GB RAM ಅಳವಡಿಸಲಾಗಿದ್ದು, ಇದೊರಂದಿಗೆ 16GB ಇಂಟರ್ನಲ್ ಮೆಮೊರಿಯನ್ನು ಸಹ ಹೊಂದಿದೆ. ಅಲ್ಲದೇ 32GB ವರೆಗೆ ಮೆಮೊರಿ ಕಾರ್ಡ್‌ ಹಾಕಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ವೇಗದ ಕಾರ್ಯಚರಣೆ:

ವೇಗದ ಕಾರ್ಯಚರಣೆ:

ವೇಗದ ಕಾರ್ಯನಿರ್ವಹಣೆಗಾಗಿ 64-bit ಕ್ವಾಡ್ ಕೋರ್ ARM ಕಾರ್ಕಟೆಕ್ಸ್ A53 ಪ್ರೋಸೆಸರ್ ಅಳವಡಿಸಲಾಗಿದ್ದು, ಜೊತೆಗೆ T720 GPU ಈ ಟ್ಯಾಬ್ಲೆಟ್‌ನಲ್ಲಿದೆ. ಅಲ್ಲದೇ ಹಿಂಭಾಗದಲ್ಲಿ 5MP ಕ್ಯಾಮೆರಾ ಮತ್ತು ಮುಂಭಾಗದಲ್ಲಿ 2MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಡುಯಲ್ ಸಿಮ್ ಹಾಕುವ ಅವಕಾಶ:

ಡುಯಲ್ ಸಿಮ್ ಹಾಕುವ ಅವಕಾಶ:

ಬ್ರಿಸ್ಕ್ 4G2' ಟಾಬ್ಲೆಟ್ 4G ಸಪೋರ್ಟ್ ಮಾಡಲಿದ್ದು, ಡುಯಲ್ ಸಿಮ್ ಹಾಕುವ ಅವಕಾಶವನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ರಿಲಯನ್ಸ್ ಜಿಯೋ ಸಿಮ್ ಅನ್ನು ಬಳಸಬಹುದಾಗಿದೆ.

ಇತರೆ ವಿಶೇಷತೆಗಳು:

ಇತರೆ ವಿಶೇಷತೆಗಳು:

ಬ್ರಿಸ್ಕ್ 4G2' ಟಾಬ್ಲೆಟ್ ನಲ್ಲಿ 3,500mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಆಂಡ್ರಾಯ್ಡ್ 6.0ದಲ್ಲಿ ಕಾರ್ಯ ನಿರ್ವಹಿಸಲಿದೆ. ಅಲ್ಲದೇ Wi-Fi , Bluetooth v4.0, USB port, OTG ಮುಂತಾದ ಸೌಲಭ್ಯಗಳನ್ನು ಈ ಟಾಬ್ಲೆಟ್ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
iBall has launched a new tablet and targets the budget market with its new 7.0-inch tablet. The new tablet is called ‘Brisk 4G2’ and it is priced at Rs 8,999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot