ವಾಟ್ಸ್‌ಆಪ್ ಹೊಸ ಫೀಚರ್‌ನಿಂದ ಇನ್ಮುಂದೆ ಸುಳ್ಳು ಹೇಳುವುದು ಕಷ್ಟ ಆಗಬಹುದು...!

Written By:

ದಿನೇ ದಿನೇ ಫೇಸ್‌ಬುಕ್ ಒಡೆತನದ ವಾಟ್ಸ್ಆಪ್‌ನಲ್ಲಿ ಬದಲಾವಣೆಗಳು ಆಗುತ್ತಿದೆ. ಮೊನ್ನೆ ತಾನೆ ಕಳುಹಿಸಿದ್ದ ಮೇಸೆಜ್ ಆನ್ನು ಡಿಲಿಟ್ ಮಾಡುವ ಅವಕಾಶವನ್ನು ಮಾಡಿಕೊಡಲು ಮುಂದಾಗಿದ್ದ ವಾಟ್ಸ್ಆಪ್ ಈ ಬಾರಿ ನಿಮ್ಮ ಗ್ರೂಪ್‌ನಲ್ಲಿರುವ ಸ್ನೇಹಿತರ ಲೋಕೆಷನ್ ಟ್ರಾಕ್ ಮಾಡುವ ಹೊಸ ಅವಕಾಶವನ್ನು ಮಾಡಿಕೊಡಲಿದೆ.

ವಾಟ್ಸ್‌ಆಪ್ ಹೊಸ ಫೀಚರ್‌ನಿಂದ ಇನ್ಮುಂದೆ ಸುಳ್ಳು ಹೇಳುವುದು ಕಷ್ಟ ಆಗಬಹುದು...!

ಓದಿರಿ: ಕರ್ನಾಟಕಕ್ಕೆ ಮಾತ್ರ ಬಿಎಸ್ಎನ್ಎಲ್‌ನಿಂದ ಭರ್ಜರಿ ಕೊಡುಗೆ...!!!

ಈ ಫೀಚರ್ ಬಳಕೆಯಿಂದ ಇನ್ನು ಮುಂದೆ ನಿಮ್ಮ ಸ್ನೇಹಿತರಿಗೆ ಸುಳ್ಳು ಹೇಳುವುದು ಕಷ್ಟವಾಗಲಿದೆ. ಹೇಳಿದಲ್ಲಿಗೆ ಸರಿಯಾದ ಸಮಯಕ್ಕೆ ಬಾರದೆ, ಮನೆಯಲ್ಲೇ ಕುಳಿತು ಇನ್ನು ಎರಡು ನಿಮಿಷದಲ್ಲಿ ಬರುತ್ತೇನೆ ಎಂದು ಸುಳ್ಳು ಹೇಳಲು ಸಾಧ್ಯವಿಲ್ಲ. ಕಾರಣ ನಿಮ್ಮ ಸ್ನೇಹಿತರು ನೀವಿರುವ ಜಾಗವನ್ನು ವಾಟ್ಸ್‌ಆಪ್‌ ಮೂಲಕ ಟ್ರಾಕ್ ಮಾಡಬಹುದು.

ಈಗಾಗಲೇ ಆಂಡ್ರಾಯ್ಡ್ ಮತ್ತು ಐಎಸ್ಓ ಬಳಕೆದಾರಿಗೆ ಈ ಸೇವೆಯನ್ನು ನೀಡಲು ವಾಟ್ಸ್ಆಪ್ ಸಿದ್ಧತೆ ನಡೆಸಿದ್ದು, ಬೀಟಾ ವರ್ಷನ್ 2.17.3.28 ಬಳಕೆದಾರರು ಈಗಾಗಲೇ ಈ ಸೇವೆಯನ್ನು ಬಳಸಲು ಆರಂಭಿಸಿದ್ದಾರೆ ಎನ್ನಲಾಗಿದೆ.

ವಾಟ್ಸ್‌ಆಪ್ ಹೊಸ ಫೀಚರ್‌ನಿಂದ ಇನ್ಮುಂದೆ ಸುಳ್ಳು ಹೇಳುವುದು ಕಷ್ಟ ಆಗಬಹುದು...!

ಓದಿರಿ: ಮಾರುಕಟ್ಟೆಗೆ ಬಂದಿದೆ ನೀರಿನಲ್ಲಿ ತೊಳೆಯಬಹುದಾದ ಸ್ಮಾರ್ಟ್‌ಪೋನ್...!

ಈ ಆಯ್ಕೆಯಿಂದಾಗಿ ನಿಮ್ಮ ಗುಂಪಿನಲ್ಲಿರುವ ಸ್ನೇಹಿತರು ಎಲ್ಲಿದ್ದಾರೆ ಎಂಬ ಲೋಕೆಷನ್ ಅನ್ನು ಟ್ರಾಕ್ ಮಾಡಲು ಇದು ಸಹಾಯಕಾರಿಯಾಗಲಿದೆ. ಅಲ್ಲದೇ ಇದು ರಿಯಲ್ ಟೈಮ್‌ನಲ್ಲಿ ಇರುವ ಜಾಗವನ್ನು ಸಹ ತೋರಿಸಲಿದೆ. ಅವರು ನಿಮ್ಮಂದ ಎಷ್ಟು ದೂರದಲ್ಲಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ.

ಸ್ನೇಹಿತರೆಲ್ಲರೂ ಒಂದೇ ಸ್ಥಳದಲ್ಲಿ ಸೇರಲು ಮತ್ತು ಜಾಗವನ್ನು ಹುಡುಕಲು ಈ ಫೀಚರ್ ಸಹಾಯ ಮಾಡಲಿದೆ. ಭಾರತದಲ್ಲಿ ಸುಮಾರು 160 ಮಿಲಿಯನ್ ಮಂದಿ ವಾಟ್ಸ್‌ಆಪ್ ಬಳಕೆ ಮಾಡುತ್ತಿದ್ದು, ಅದಲ್ಲದೇ ಸುಮಾರು 50ಕ್ಕೂ ಹೆಚ್ಚು ಭಾಷೆಗಳಲ್ಲಿ ವಾಟ್ಸ್‌ಆಪ್ ಬಳಸಬಹುದಾಗಿದೆ. ಇದರಲ್ಲಿ ಭಾರತೀಯ 10 ಭಾಷೆಗಳು ಸೇರಿಕೊಂಡಿದೆ.

Read more about:
English summary
WhatsApp is working on a feature that will track the live location of members, allowing users to track the whereabouts of their friends in real time. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot