ಲಿನೋವೋದಿಂದ ಮತ್ತೊಂದು ಟ್ಯಾಬ್ಲೆಟ್: ಆಂಡ್ರಾಯ್ಡ್‌ ನ್ಯಾಗಾ, 10 ಇಂಚಿನ ಡಿಸ್‌ಪ್ಲೇ

Written By:

ಸದ್ಯ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಚೀನಾ ಮೂಲದ ಲಿನೋವೋ ಕಂಪನಿ, ಈ ಬಾರಿ ಟ್ಯಾಬ್ಲೆಟ್‌ ಕಡೆಗೆ ತನ್ನ ಗಮನವನ್ನು ಹರಿಸಲು ಮುಂದಾಗಿದೆ. ಸದ್ಯ ಮಾರುಕಟ್ಟೆಗೆ ಎಂಟ್ರಿ ಲೆವೆಲ್ ಟ್ಯಾಬ್ಲೆಟ್ ವೊಂದನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.

ಲಿನೋವೋದಿಂದ ಮತ್ತೊಂದು ಟ್ಯಾಬ್ಲೆಟ್: ಆಂಡ್ರಾಯ್ಡ್‌ ನ್ಯಾಗಾ, 10 ಇಂಚಿನ ಡಿಸ್‌ಪ್ಲೇ

ಓದಿರಿ: 2GB RAM, 13MP ಕ್ಯಾಮೆರಾ ಹೊಂದಿರುವ ನೋಕಿಯಾ 3: ಬೆಲೆ 10,500 ರೂ.ಗಳು ಮಾತ್ರ..!!!

ಸ್ಯಾಮ್‌ಸಂಗ್ Galaxy Tab S3 ಮತ್ತು Kodak ಸಹ ಮಾರುಕಟ್ಟೆಗೆ ಹೊಸ ಟ್ಯಾಬ್ ಬಿಡುಗಡೆ ಮಾಡಲಿದ್ದು, ಈ ಹಿನ್ನಲೆಯಲ್ಲಿ ಲಿನೋವೋ TB-X704 ಹೆಸರಿನ ಟ್ಯಾಬ್ ಪರಿಚಯಿಸಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
10 ಇಂಚಿನ Full HD ಡಿಸ್‌ಪ್ಲೇ:

10 ಇಂಚಿನ Full HD ಡಿಸ್‌ಪ್ಲೇ:

ಲಿನೋವೋ ಬಿಡುಗಡೆ ಮಾಡಲು ಹೊರಟಿರುವ TB-X704 ಟ್ಯಾಬ್ಲೆಟಿನಲ್ಲಿ 10 ಇಂಚಿನ Full HD ಡಿಸ್‌ಪ್ಲೇ ಅಳವಡಿಸಲಾಗಿದ್ದು, 1920 x 1200 ರೆಸಲ್ಯೂಷನ್ ಗುಣಮಟ್ಟವನ್ನು ಹೊಂದಿರುವ ಈ ಪರದೆ ಮಲ್ಟಿ ಟಸ್ ಆಯ್ಕೆಯನ್ನು ಒಳಗೊಂಡಿದೆ.

3 GB RAM, ಆಂಡ್ರಾಯ್ಡ್ ನ್ಯಾಗಾ:

3 GB RAM, ಆಂಡ್ರಾಯ್ಡ್ ನ್ಯಾಗಾ:

TB-X704 ಟ್ಯಾಬ್ಲೆಟಿನಲ್ಲಿ ವೇಗದ ಕಾರ್ಯಚರಣೆಗೆ 2.0GHz ವೇಗದ ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಚಿಚ್ ಸೆಟ್ ಅಳವಡಿಸಲಾಗಿದ್ದು, ಇದೊಂದಿಗೆ 3 GB RAM ಇದ್ದು, 16 GB ಇಂಟರ್ನಲ್ ಮೆಮೊರಿ ಸಹ ಇದರಲ್ಲಿದೆ. ಅಲ್ಲದೇ ಆಂಡ್ರಾಯ್ಡ್ ನ್ಯಾಗಾದಲ್ಲಿ ಈ ಟ್ಯಾಬ್‌ ಕಾರ್ಯನಿರ್ವಹಿಸಲಿದೆ.

8 MP ಕ್ಯಾಮೆರಾ;

8 MP ಕ್ಯಾಮೆರಾ;

ಲಿನೋವೊ ಟ್ಯಾಬ್ಲೆಟಿನ ಹಿಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದ್ದು, ಇದರೊಂದಿಗೆ LED ಫ್ಲಾಷ್‌ ಸಹ ಇದೆ. ಅಲ್ಲದೇ ಮುಂಭಾಗದಲ್ಲಿ 5 MP ಕ್ಯಾಮೆರಾ ಸಹ ಇದೆ.

 ಇತರೆ ವಿಶೇಷತೆಗಳು:

ಇತರೆ ವಿಶೇಷತೆಗಳು:

TB-X704 ಟ್ಯಾಬ್ಲೆಟಿನಲ್ಲಿ Bluetooth, WiFi, GPS, NFC, ಮತ್ತು microUSB ಸೇರಿದಂತೆ ಎಲ್ಲಾ ಆಯ್ಕೆಗಳು ಲಭ್ಯವಿದ್ದು, ಒಟ್ಟಿನಲ್ಲಿ ಗುಣಮಟ್ಟದ ಟ್ಯಾಬ್ ಇದಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
a recent listing at GFXbench reveals the key specs about the upcoming Lenovo tablet TB-X704. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot