Subscribe to Gizbot

ಬಜೆಟ್ ಬೆಲೆಯಲ್ಲಿ ಟ್ಯಾಬ್ಲೆಟ್‌ ನೀಡಲಿದೆ ಸ್ಯಾಮ್‌ಸಂಗ್: ಸ್ಮಾರ್ಟ್‌ಫೋನ್ ಇನ್ಯಾಕೆ..?

Written By:

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಹಾವಳಿ ಹೆಚ್ಚಾಗಿದ್ದು, ಅದರಲ್ಲೂ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಬಜೆಟ್ ಫೋನ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಸಹ. ಈ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ಬಜೆಟ್‌ ಬೆಲೆಯಲ್ಲಿ ಟ್ಯಾಬ್ಲೆಟ್‌ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ ಎನ್ನಲಾಗಿದೆ.

ಬಜೆಟ್ ಬೆಲೆಯಲ್ಲಿ ಟ್ಯಾಬ್ಲೆಟ್‌ ನೀಡಲಿದೆ ಸ್ಯಾಮ್‌ಸಂಗ್: ಸ್ಮಾರ್ಟ್‌ಫೋನ್ ಇನ್ಯಾಕೆ

ಓದಿರಿ: ಅಮೆಜಾನ್ ಸಣ್ಣ ವಸ್ತುವಿಗೂ ದೊಡ್ಡ ಬಾಕ್ಸ್ ಕಳುಹಿಸುವುದು ಯಾಕೆ..? ಆಚ್ಚರಿಯ ಸತ್ಯ..!

4G ಸಪೋರ್ಟ್ ಮಾಡುವ ಗ್ಯಾಲೆಕ್ಸಿ ಟ್ಯಾಬ್ A 7.0 ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ ಸ್ಯಾಮ್‌ಸಂಗ್. ಉತ್ತಮ ಬ್ಯಾಟರಿ ಮತ್ತು ಡಿಸ್‌ಪ್ಲೇಯನ್ನು ಹೊಂದಿರುವ ಟ್ಯಾಬ್ ಇದಾಗಲಿದೆ ಎನ್ನಲಾಗಿದೆ. ಟ್ಯಾಬ್‌ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸುವ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ A 7.0 ಬೆಲೆ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ A 7.0 ಬೆಲೆ:

ಸ್ಯಾಮ್‌ಸಂಗ್ ಬಿಡುಗಡೆ ಮಾಡಲಿರುವ ಗ್ಯಾಲೆಕ್ಸಿ ಟ್ಯಾಬ್ A 7.0 ಬಜೆಟ್ ಬೆಲೆಯಲ್ಲಿ ದೊರೆಯಲಿದೆ, ರೂ.9500ಕ್ಕೆ ಮಾರುಕಟ್ಟೆಯಲ್ಲಿ ಈ ಟ್ಯಾಬ್ ಲಭ್ಯವಿರಲಿದೆ ಎನ್ನಲಾಗಿದೆ. ಇದು ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಸಾಕಷ್ಟು ಹೊಡೆತವನ್ನು ನೀಡುವ ಸಾಧ್ಯತೆ ಇದೆ.

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ದೊಡ್ಡ ಬ್ಯಾಟರಿ:

ದೊಡ್ಡ ಬ್ಯಾಟರಿ:

4G ಸಫೋರ್ಟ್ ಮಾಡುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ A 7.0ನಲ್ಲಿ HD ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಅಲ್ಲದೇ 4000mAh ಅನ್ನು ಈ ಫೋನಿನಲ್ಲಿ ಅಳವಡಿಸಲಾಗಿದ್ದು, 8 ಗಂಟೆಗಳ ವಿಡಿಯೋ ಪ್ಲೇ ಬ್ಯಾಕ್ ಹೊಂದಿದೆ ಎನ್ನಲಾಗಿದೆ.

RAM- ಸ್ಟೋರೆಜ್:

RAM- ಸ್ಟೋರೆಜ್:

ಇದಲ್ಲದೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ A 7.0 ನಲ್ಲಿ 1.5GB RAM ಕಾಣಬಹುದಾಗಿದ್ದು, ಇದರೊಂದಿಗೆ 8GB ಇಂಟರ್ನಲ್ ಮೆಮೊರಿಯನ್ನು ಅಳವಡಿಸಲಾಗಿದೆ. ಅಲ್ಲದೇ ಮೈಕ್ರೋ SD ಕಾರ್ಟ್ ಹಾಕಿಕೊಳ್ಳುವ ಮೂಲಕ 200GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ A 7.0ದಲ್ಲಿ 1.5GHz ವೇಗದ ಕ್ವಾಡ್‌ ಕೋರ್ ಪ್ರೋಸೆಸರ್ ನೀಡಲಾಗಿದೆ, ಇದಲ್ಲದೇ ಹಿಂಭಾಗದಲ್ಲಿ 5MP ಕ್ಯಾಮೆರಾವನ್ನು ಮುಂಭಾಗದಲ್ಲಿ 2MP ಕ್ಯಾಮೆರಾವನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung to launch budget tablet Galaxy Tab A 7.0. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot