ಒನ್ಇಂಡಿಯಾದಿಂದ ಬಸ್ ಟಿಕೆಟ್ ಬುಕ್ಕಿಂಗ್ ಸೇವೆ

By Ashwath
|

ಒನ್‌ಇಂಡಿಯಾದ ಗಿಝ್‌ಬಾಟ್‌ ಓದುಗರಿಗೆ ಗುಡ್‌ನ್ಯೂಸ್‌. ಇನ್ನೂ ಮುಂದೆ ನೀವು ಕುಳಿತಲ್ಲಿಯೇ ಇಂಟರ್‌ನೆಟ್‌ ಮೂಲಕ ಸುಲಭವಾಗಿ ಬಸ್‌ಟಿಕೆಟ್‌ ಬುಕ್‌ ಮಾಡಬಹುದು. ಭಾರತದ ನಂ.1 ಪ್ರಾದೇಶಿಕ ಪೋರ್ಟಲ್ ಒನ್ಇಂಡಿಯಾ ಆನ್‌ಲೈನ್ ಬಸ್ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಆರಂಭಿಸಿದೆ. ಆನ್‌ಲೈನ್ ಬಸ್ ಟಿಕೆಟ್ ಬುಕ್ಕಿಂಗ್ ಸೇವೆಯಲ್ಲಿ ಅಗ್ರಗಣ್ಯರಾಗಿರುವ ರೆಡ್‌ಬಸ್.ಇನ್ ಸಹಯೋಗದೊಂದಿಗೆ ಒನ್ಇಂಡಿಯಾ ಬಸ್ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಆರಂಭಿಸಿದ್ದು, ಓದುಗರು ಇಂದಿನಿಂದಲೇ bus.oneindia.in ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಸೇವೆಯನ್ನು ಪಡೆದುಕೊಳ್ಳಬಹುದು.

ರಾಜ್ಯ ಸೇರಿದಂತೆ ದೇಶದ ಉದ್ದಗಲಕ್ಕೂ ಸಂಚರಿಸುವ ಬಸ್ಸುಗಳ ಮಾಹಿತಿ, ಯಾವ ಬಸ್‌,ಬೇಕಾದ ಸೀಟ್‌ಗಳನ್ನು ನೀವು ಮುಂಚಿತವಾಗಿಯೇ ಈ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್‌ ಮಾಡಬಹುದು.

ಒನ್ಇಂಡಿಯಾದಿಂದ ಬಸ್ ಟಿಕೆಟ್ ಬುಕ್ಕಿಂಗ್ ಸೇವೆ

bus.oneindia.in ವೆಬ್‌ಸೈಟ್‌ನಲ್ಲಿ ಹೀಗೆ ಟಿಕೆಟ್ ಬುಕ್‌ ಮಾಡಿ :

ಊರು ಮತ್ತು ದಿನಾಂಕ : ಎಲ್ಲಿಂದ ಎಲ್ಲಿಗೆ ಹೋಗಬೇಕು, ಯಾವ ದಿನಾಂಕದಂದು ಹೋಗಬೇಕು ಆಯ್ಕೆ ಮಾಡಿಕೊಂಡು, ಸರ್ಚ್ ಬಸಸ್ ಬಟನ್ ಕ್ಲಿಕ್ಕಿಸಿ.

ಬಸ್ ಮತ್ತು ಸೀಟು : ಮೊದಲಿಗೆ ಬಸ್ ಆಪರೇಟರ್ ಆಯ್ಕೆ ಮಾಡಿಕೊಳ್ಳಿ. ಸೀಟುಗಳು ಎಷ್ಟಿವೆ ಎಂದು ನೋಡಿಕೊಂಡು, ಬೇಕಾದ ಸೀಟು ಆಯ್ದುಕೊಳ್ಳಿ. ಹತ್ತಬೇಕಾದ ಸ್ಥಳ ಕ್ಲಿಕ್ಕಿಸಿ ಮುಂದುವರಿಯುವ ಬಟನ್ ಒತ್ತಿರಿ.

ಪ್ರಯಾಣದ ವಿವರ : ಮೊಬೈಲ್ ನಂಬರ್, ಇಮೇಲ್ ವಿವರಗಳನ್ನು ನಮೂದಿಸಿ. ಟಿಕೆಟ್ ಬುಕ್ ಆಗಿರುವ ಬಗ್ಗೆ ಎಸ್ಎಂಎಸ್ ಅಥವಾ ಈಮೇಲ್ ಮುಖಾಂತರ ತಿಳಿಸಲು ಈ ವಿವರಗಳು ಅಗತ್ಯ. ಎಸ್ಎಂಎಸ್ ಎಮ್‌ಟಿಕೆಟ್ (mTicket) ಆಗಿದ್ದು, ಎಲ್ಲ ಬಸ್ಸುಗಳು ಸ್ವೀಕರಿಸುತ್ತವೆ. ಇದಾದ ನಂತರ ಮತ್ತೆ ಮುಂದುವರಿಯಿರಿ.

ಹಣ ಪಾವತಿ : ನಿಮ್ಮ ವೈಯಕ್ತಿಕ ಮಾಹಿತಿ, ಕಾರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ಒದಗಿಸಿ 'ಸಬ್ಮಿಟ್' ಬಟನ್ ಒತ್ತಿರಿ.

ದೃಢೀಕರಣ : ನಿಮ್ಮ ಟಿಕೆಟ್ ಯಶಸ್ವಿಯಾಗಿ ಬುಕ್ ಆಗಿರುತ್ತದೆ. ಎಲ್ಲ ವಿವರಗಳು ನೀವು ಒದಗಿಸಿರುವ ಇಮೇಲ್ ವಿಳಾಸಕ್ಕೆ ಅಥವಾ ಮೊಬೈಲ್ ನಂಬರಿಗೆ ಎಸ್ಎಂಎಸ್ ಮೂಲಕ ರವಾನಿಸಲಾಗುವುದು.

ವೀಸಾ ಮತ್ತು ಮಾಸ್ಟರ್‌ಕಾರ್ಡ್ ಇರುವ ಕ್ರೆಡಿಟ್ ಕಾರ್ಡ್ ಬಳಕೆದಾರರು ಮತ್ತು ವೀಸಾ, ವೀಸಾ ಎಲೆಕ್ಟ್ರಾನ್, ಮಾಸ್ಟರ್‌ಕಾರ್ಡ್ ಮತ್ತು ಮೇಸ್ಟ್ರೋ ಕಾರ್ಡ್ ಇರುವ ಡೆಬಿಟ್ ಕಾರ್ಡ್ ಬಳಕೆದಾರರು ತಮ್ಮ ಕಾರ್ಡ್ ಬಳಸಿ ಬಸ್ ಟಿಕೆಟ್ ಬುಕ್ ಮಾಡಬಹುದು. ಎಲ್ಲಾ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಆಗಿರುವುದರಿಂದ ನೆಟ್ ಬ್ಯಾಂಕಿಂಗ್ ಮುಖಾಂತರವೂ ಬಸ್ ಟಿಕೆಟ್ ಬುಕ್ ಮಾಡಬಹುದು.

ಒನ್‌ಇಂಡಿಯಾದ ಇತರ ಸೇವೆಗಳು:

recharge.oneindia.com

ಬಸ್‌ ಟಿಕೆಟ್‌ ಬುಕ್ಕಿಂಗ್‌ ಅಲ್ಲದೇ ಒನ್‌ ಇಂಡಿಯಾ ಇತರ ಸೇವೆಗಳನ್ನು ಓದುಗರಿಗೆ ನೀಡುತ್ತಿದೆ. ನೀವು ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್ ಮಾಡಬೇಕಿದ್ದಲ್ಲಿ ಒನ್ಇಂಡಿಯಾ ರಿಚಾರ್ಜ್‌ ವೆಬ್‌ಸೈಟ್‌ನಲ್ಲಿ ಸುಲಭವಾಗಿ ರಿಚಾರ್ಜ್‌ ಮಾಡಬಹುದು.

www.goprobo.com

ಭಾರತದಲ್ಲಿ ಬೇರೆ ಬೇರೆ ಆನ್‌ಲೈನ್‌ ಶಾಪಿಂಗ್‌ ತಾಣಗಳಿವೆ. ಹೀಗಾಗಿ ಒಂದು ಮೊಬೈಲ್‌ಗೆ ಬೇರೆ ಬೇರೆ ಶಾಪಿಂಗ್‌ ತಾಣದಲ್ಲಿ ಬೇರೆ ರೀತಿಯ ದರಗಳು ನಿಗದಿಯಾಗುತ್ತವೆ. ಹೀಗಾಗಿ ನಿಮ್ಮ ಅನುಕೂಲಕ್ಕಾಗಿ ಒಂದೇ ಪೇಜ್‌ನಲ್ಲಿ ಆ ಎಲ್ಲಾ ಶಾಪಿಂಗ್‌ ತಾಣಗಳು ನೀವು ಬಯಸಿದ ಮೊಬೈಲ್‌ಗೆ ಎಷ್ಟು ದರವನ್ನುನಿಗದಿಪಡಿಸಿದೆ ಎನ್ನುವ ಮಾಹಿತಿಗಾಗಿ ನೀವು www.goprobo.com ವೆಬ್‌ಸೈಟ್‌ಗೆ ಭೇಟಿ ನೀಡಿ ದರಗಳ ಮಾಹಿತಿಯನ್ನು ಚೆಕ್‌ಮಾಡಬಹುದು.

ಇದನ್ನೂ ಓದಿ : ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X