ಯೂಟ್ಯೂಬ್ ಮಾತ್ರವಲ್ಲ, ನೀವು ನೋಡಲೇಬೇಕಾದ ಉತ್ತಮ ವೀಡಿಯೋ ಸ್ಟ್ರೀಮಿಂಗ್ ತಾಣಗಳು

By Tejaswini P G
|

ವೀಡಿಯೋ ಸ್ಟ್ರೀಮಿಂಗ್ ವೆಬ್ ಸೈಟ್ ಎಂದರೆ ನಮಗೆ ತಕ್ಷಣ ನೆನಪಾಗುವುದು ಯೂಟ್ಯೂಬ್ ! ವೀಡಿಯೋ ಸ್ಟ್ರೀಮಿಂಗ್ ಎಂದರೆ ಹೆಚ್ಚಿನ ಜನರ ಮೊದಲ ಆದ್ಯತೆ ಗೂಗಲ್ ನ ಯೂಟ್ಯೂಬ್ ಆಗಿದೆ. ಜಗತ್ತಿನ ಖ್ಯಾತ ವೆಬ್ ಸೈಟ್ ಗಳಲ್ಲಿ ಯೂಟ್ಯೂಬ್ ಕೂಡ ಒಂದಾಗಿದೆ. ಒಂದು ವೇಳೆ ಯೂಟ್ಯೂಬ್ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸದಿದ್ದರೆ ಅಥವಾ ನಿಮಗೆ ಅದನ್ನು ತಲುಪಲು ಆಗದಿದ್ದರೆ? ಇಂತಹ ಸಂದರ್ಭಗಳು ವಿರಳವಾದರೂ, ಯೂಟ್ಯೂಬ್ ಗೆ ಬದಲೀ ಆಯ್ಕೆಗಳು ತಿಳಿದಿರುವುದು ಉತ್ತಮ.

ಯೂಟ್ಯೂಬ್ ಮಾತ್ರವಲ್ಲ, ನೀವು ನೋಡಲೇಬೇಕಾದ ಉತ್ತಮ ವೀಡಿಯೋ ಸ್ಟ್ರೀಮಿಂಗ್ ತಾಣಗಳು

ಇಂದಿನ ದಿನಗಳಲ್ಲಿ ಆನ್ಲೈನ್ ಅನುಭವದಲ್ಲಿ ವೀಡಿಯೋಗಳು ಬಹು ಮುಖ್ಯ ಪಾತ್ರ ವಹಿಸುತ್ತದೆ. ಅದಕ್ಕೆಂದೇ ಈ ಲೇಖನದಲ್ಲಿ ಯೂಟ್ಯೂಬ್ ಗೆ ಪರ್ಯಾಯ ವೀಡಿಯೋ ಸ್ಟ್ರೀಮಿಂಗ್ ವೆಬ್ ಸೈಟ್ ಗಳನ್ನು ಪಟ್ಟಿಮಾಡಿದ್ದೇವೆ. ಈ ವೆಬ್ ಸೈಟ್ ಗಳು ಯೂಟ್ಯೂಬ್ ಗಿಂತ ಉತ್ತಮವಾಗಿದೆಯೇ ಇಲ್ಲವೇ ಎನ್ನುವುದು ಚರ್ಚಾಸ್ಪದ ವಿಷಯವಾದರೂ, ಇಷ್ಟೊಂದು ವೀಡಿಯೋ ಸ್ಟ್ರೀಮಿಂಗ್ ವೆಬ್ ಸೈಟ್ ಗಳು ಇವೆಯೆಂದು ನಿಮಗೆ ಅಚ್ಚರಿಯಾಗುವುದು ಖಂಡಿತ.

ವೀಮಿಯೋ

ವೀಮಿಯೋ

ಹೈ ಡೆಫಿನೇಶನ್ ವೀಡಿಯೋ ಬೆಂಬಲಿಸಿದ ಮೊದಲ ವೆಬ್ಸೈಟ್ ಇದು. ವೀಮಿಯೋ ದಲ್ಲಿ ಉತ್ತಮ ಗುಣಮಟ್ಟದ ವೀಡಿಯೋಗಳು ಲಭ್ಯವಿದ್ದು, ಇದರ ಈಸಿ-ಟು-ಬ್ರೌಸ್ ಫೀಚರ್ ಮೂಲಕ ನಿಮಗೆ ಬೇಕಾದ ವೀಡಿಯೋಗಳನ್ನು ಸುಲಭವಾಗಿ ಹುಡುಕಬಹುದಾಗಿದೆ.

ಮೆಟಾಕೆಫೆ

ಮೆಟಾಕೆಫೆ

ನೀವು ಮೇಟಾಕೆಫೆ ಗೆ ಭೇಟಿ ನೀಡಿದ ತಕ್ಷಣ ಮೊದಲು ನಿಮ್ಮ ಗಮನ ಸೆಳೆಯುವುದು ಅದರ ಸರಳ ವಿನ್ಯಾಸ.ಅದರ ಬ್ರೌಸಿಂಗ್ ಇಂಟರ್ಫೇಸ್ ಕೂಡ ಸರಳವಾಗಿದ್ದು. ನೀವು ಚಿಕ್ಕ ವೀಡಿಯೋಗಳ ಅಭಿಮಾನಿಯಾಗಿದ್ದರೆ ಮೆಟಾಕೆಫೆ ನಿಮಗೆ ಸೂಕ್ತ ಆಯ್ಕೆಯಾಗಿದೆ.

ವಿಯೋಹ್

ವಿಯೋಹ್

ಇಂಟರ್ನೆಟ್ ಟಿವಿ ಎಂದು ಕರೆದುಕೊಳ್ಳುವ ವಿಯೋಹ್ ವೃತ್ತಿಪರರು ನಿರ್ಮಿಸಿರುವ ಲಕ್ಷಾಂತರ ವೀಡಿಯೋಗಳನ್ನು ಹೊಂದಿದೆ.ಇಲ್ಲಿ ಹಲವಾರು ಖ್ಯಾತ ಟಿವಿ ಶೋಗಳು ಮತ್ತು ಸರಣಿಗಳು ಕೂಡ ಲಭ್ಯವಿದೆ. ಅಷ್ಟೇ ಅಲ್ಲದೆ ವಿವಿಧ ಪ್ರಕಾರಗಳ ಸಂಗೀತವೂ ಇಲ್ಲಿ ಲಭ್ಯವಿದೆ.

ದಿ ಇಂಟರ್ನೆಟ್ ಆರ್ಖೈವ್

ದಿ ಇಂಟರ್ನೆಟ್ ಆರ್ಖೈವ್

ಹೆಸರೇ ಸೂಚಿಸುವಂತೆ,ದಿ ಇಂಟರ್ನೆಟ್ ಆರ್ಖೈವ್ ನಲ್ಲಿ ಸಾವಿರಾರು ವೀಡಿಯೋಗಳು ಲಭ್ಯವಿದೆ. ಗಮನಾರ್ಹ ವಿಷಯವೆಂದರೆ ಇದರಲ್ಲಿ ಹಲವಾರು ಐತಿಹಾಸಿಕ ಕಂಟೆಂಟ್ ಇದ್ದು ಹಲವು ಬಳಕೆದಾರರು ಇದರಲ್ಲಿ ಆಸಕ್ತಿ ಹೊಂದಿರಬಹುದು. ನೀವು ಹಲವು ಹಳೆಯ ಮತ್ತು ಬೇರೆಡೆ ಸಿಗಲು ಕಷ್ಟಕರವಾದ ವೀಡಿಯೋಗಳನ್ನು ಇಲ್ಲಿ ಕಾಣಬಹುದಾಗಿದೆ.

ನಿರೀಕ್ಷಿತ ಮಾರಾಟವಾಗದ ನೋಕಿಯಾ ಫೋನ್‌ಗಳ ಬೆಲೆ ಇಳಿಕೆ!?..ನೋಕಿಯಾ 8 ಮೇಲೆ 8000 ಡಿಸ್ಕೌಂಟ್ಸ್!!ನಿರೀಕ್ಷಿತ ಮಾರಾಟವಾಗದ ನೋಕಿಯಾ ಫೋನ್‌ಗಳ ಬೆಲೆ ಇಳಿಕೆ!?..ನೋಕಿಯಾ 8 ಮೇಲೆ 8000 ಡಿಸ್ಕೌಂಟ್ಸ್!!

ಕ್ರ್ಯಾಕಲ್

ಕ್ರ್ಯಾಕಲ್

ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್ ಒಡೆತನದ ಕ್ರ್ಯಾಕಲ್ ಅನ್ಲೈನ್ ಟಿವಿ ಚ್ಯಾನಲ್ ಎಂದು ಪರಿಗಣಿಸಬಹುದಾಗಿದ್ದು ಇದರಲ್ಲಿ ಸ್ವಂತ ವೀಡಿಯೋ ಕಂಟೆಂಟ್, ಹಾಲಿವುಡ್ ಚಲನಚಿತ್ರಗಳು ಮತ್ತು ಖ್ಯಾತ ಟಿವಿ ಶೋಗಳು ಇವೆ.

ಸ್ಕ್ರೀನ್ ಜಂಕೀಸ್

ಸ್ಕ್ರೀನ್ ಜಂಕೀಸ್

ಮೂವಿಗಳು, ಟಿವಿ ಶೋಗಳು ಮತ್ತು ಒರಿಜಿನಲ್ ಕಂಟೆಂಟ್ ನಿಮ್ಮ ಆಸಕ್ತಿಯ ವಿಷಯಗಳಾಗಿದ್ದರೆ ನೀವು ಸ್ಕ್ರೀನ್ ಜಂಕೀಸ್ ಅನ್ನು ಒಮ್ಮೆ ಭೇಟಿ ಮಾಡಬೇಕು. ಇಲ್ಲಿ ಹೆಚ್ಚಿನ ವೀಡಿಯೋಗಳು ಕಾಮೆಡಿ ಅಥವಾ ಹಾಸ್ಯ ಪ್ರಕಾರದ್ದಾಗಿದ್ದು ಇತರ ಪ್ರಕಾರಗಳ ವೀಡಿಯೋಗಳು ಕೂಡ ಇಲ್ಲಿ ಲಭ್ಯವಿದೆ.

ಮೈಸ್ಪೇಸ್

ಮೈಸ್ಪೇಸ್

ಯೂಟ್ಯೂಬ್ ಬಂದ ನಂತರ ಮೈಸ್ಪೇಸ್ ತನ್ನ ಜನಪ್ರಿಯತೆಯನ್ನು ಕಳೆದುಕೊಂಡರೂ ಇನ್ನೂ ಅಸ್ತಿತ್ವದಲ್ಲಿದೆ. ಈ ವೆಬ್ಸೈಟ್ ಈಗ ಅಧಿಕತರ ವೀಡಿಯೋ ಕಂಟೆಂಟ್ ನತ್ತ ಗಮನಹರಿಸುತ್ತಿದ್ದು, ಇದರಲ್ಲಿರುವ ವೀಡಿಯೋಗಳು ಹೆಚ್ಚಾಗಿ ಸೆಲಬ್ರಿಟಿ ಮತ್ತು ಆಕ್ಷನ್ ಸ್ಪೋರ್ಟ್ಸ್ ಸ್ಟಾರ್ ಗಳ ಸಂದರ್ಶನಗಳಾಗಿವೆ.

ದಿ ಓಪನ್ ವೀಡಿಯೋ ಪ್ರಾಜೆಕ್ಟ್

ದಿ ಓಪನ್ ವೀಡಿಯೋ ಪ್ರಾಜೆಕ್ಟ್

ದಿ ಓಪನ್ ವೀಡಿಯೋ ಪ್ರಾಜೆಕ್ಟ್ ಮುಖ್ಯವಾಗಿ ಸಂಶೋಧಕರು ಮತ್ತು ಮಲ್ಟೀ-ಮೀಡಿಯಾ ರಿಟ್ರೀವಲ್ ಮತ್ತು ಡಿಜಿಟಲ್ ಲೈಬ್ರರಿ ಕುರಿತಾಗಿ ಕೆಲಸಮಾಡುವವರಿಗಾಗಿ ಸೃಷ್ಟಿಸಲಾಗಿದೆ.ಇಲ್ಲಿ ಲಭ್ಯವಿರುವ ವೀಡಿಯೋಗಳು ಹೆಚ್ಚಾಗಿ ಶೈಕ್ಷಣಿಕ ಪ್ರಕಾರದ್ದಾಗಿದೆ. ನಾಸಾ ದ ದಾಖಲೆಯಿಂದ ಹಲವಾರು ವೀಡಿಯೋಗಳನ್ನು ಮತ್ತು ಕ್ಲಾಸಿಕ್ ಕಮರ್ಶಿಯಲ್ಗಳನ್ನು ಇಲ್ಲಿ ನೀವು ಕಾಣಬಹುದಾಗಿದೆ.

 9GAG

9GAG

ಅಗಾಧ ಮೇಮ್ಸ್ ಸಂಗ್ರಹಕ್ಕೆ ಹೆಸರುಗಳಿಸಿರುವ 9GAG ಚಿಕ್ಕ ಚಿಕ್ಕ ಹಾಸ್ಯಮಯ ವೀಡಿಯೋಗಳನ್ನು ಹೊಂದಿದ್ದು ನಿಮ್ಮನ್ನು ಹೊಟ್ಟೆಹುಣ್ಣಾಗಿಸುವಂತೆ ನಗಿಸುವುದರಲ್ಲಿ ಸಂಶಯವಿಲ್ಲ.

ಟೆಡ್

ಟೆಡ್

ಟೆಡ್ ವೆಬ್ಸೈಟ್ ಖ್ಯಾತ ವ್ಯಕ್ತಿಗಳು ತಂತ್ರಜ್ಞಾನ, ವ್ಯಾಪಾರ, ವಿನ್ಯಾಸ, ವಿಜ್ಞಾನ ಮತ್ತು ಜಾಗತಿಕ ಸಮಸ್ಯೆಗಳು ಮೊದಲಾದ ವಿಷಯಗಳ ಕುರಿತು ಮಾತನಾಡುವ ವೀಡಿಯೋಗಳನ್ನು ಹೊಂದಿದೆ. ಇಲ್ಲಿರುವ ವೀಡಿಯೋಗಳು ಹೆಚ್ಚಾಗಿ ಸ್ಪೂರ್ತಿದಾಯಕ ಮತ್ತು ಭಾವನಾತ್ಮಕವಾಗಿದ್ದರೂ, ಕೆಲವು ಹಾಸ್ಯಮಯ ವೀಡಿಯೋಗಳು ಕೂಡ ಇದೆ.

Best Mobiles in India

Read more about:
English summary
YouTube is a go-to video site for the majority of people. But what happens if you can't access YouTube or it stops working temporarily for reason? Here are the 10 video sites that might surprise you.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X