ಮೊಝಿಲ್ಲಾದ ಹೊಸ ಫೈರ್ ಫಾಕ್ಸ್ ಫೋಕಸ್ ಬ್ರೌಸರ್ ಬಗ್ಗೆ ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

|

ಮೊಝಿಲ್ಲಾ ಐಪ್ಯಾಡ್ ಮತ್ತು ಐಫೋನ್ ಬಳಕೆದಾರರಿಗೆ ಫೈರ್ ಫಾಕ್ಸ್ ಫೋಕಸ್ ಎಂಬ ಹೊಸ ಬ್ರೌಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಹೊಸ ಮೊಬೈಲ್ ವೆಬ್ ಬ್ರೌಸರ್ ಪ್ರೈವೇಟ್ ಬ್ರೌಸಿಂಗ್ ಅನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿದೆ.

ಹೊಸ ಮೊಜಿಲ್ಲಾ ಫೈರ್‌ಫಾಕ್ಸ್ ಬಗ್ಗೆ ತಿಳಿಯಲೇಬೇಕಾದ 5 ಸೀಕ್ರೇಟ್ ಅಂಶಗಳು

ಓದಿರಿ: ಈ ಆಪ್‌ನಿಂದ 2000 ನೋಟು ಸ್ಕ್ಯಾನ್‌ ಮಾಡಿ ಮೋದಿ ಭಾಷಣ ಕೇಳಿ, ಇಂಟರ್ನೆಟ್ ಬೇಕಿಲ್ಲ!

ಈ ಬ್ರೌಸರ್ ಆ್ಯಡ್ ಟ್ರ್ಯಾಕರುಗಳನ್ನು ಬ್ಲಾಕ್ ಮಾಡುತ್ತದೆ, ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ಅಳಿಸಿಹಾಕುತ್ತದೆ - ಪಾಸ್ ವರ್ಡ್ಸ್ ಮತ್ತು ಕುಕಿಗಳನ್ನೂ ಅಳಿಸಿ ಹಾಕುತ್ತದೆ. ಜೊತೆಗೆ, ಈ ಬ್ರೌಸರ್ ಜಾಹೀರಾತು ಕಂಪನಿಗಳು ನಿಮ್ಮ ವೆಬ್ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವುದಕ್ಕೆ ತಡೆ ಹಾಕುತ್ತದೆ.

ಜಾಹೀರಾತುದಾರರು ನಿಮ್ಮ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿರುತ್ತಾರೆ.

ಜಾಹೀರಾತುದಾರರು ನಿಮ್ಮ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿರುತ್ತಾರೆ.

ಸಾಮಾನ್ಯವಾಗಿ ನಾವು ಒಂದು ಅಂತರ್ಜಾಲ ಪುಟವನ್ನು ತೆರೆದರೆ, ಉದಾಹರಣೆಗೆ ಮಿಂತ್ರಾವನ್ನು ತೆರೆದರೆ ನೀವು ಯಾವುದೋ ಒಂದು ಉತ್ಪನ್ನದ ಮೇಲೆ ಕ್ಲಿಕ್ಕಿಸಿರುತ್ತೀರಿ. ನೀವು ವಿವಿಧ ಉತ್ಪನ್ನಗಳ ಮೇಲೆ ಕ್ಲಿಕ್ಕಿಸಿದಾಗ ಅಥವಾ ಆ ವೆಬ್ ಪುಟಕ್ಕೆ ಭೇಟಿ ಕೊಟ್ಟಾಗ ಜಾಹೀರಾತುದಾರರು ಆ ಟೆಕ್ಸ್ಟ್ ಫೈಲುಗಳನ್ನು ನಿಮ್ಮ ಪಿಸಿ ಅಥವಾ ಫೋನಿನಲ್ಲಿ ಸಂಗ್ರಹ ಮಾಡುತ್ತದೆ.

ಈ ಸಂಗ್ರಹಗೊಂಡ ಡೇಟಾದ ಸಹಾಯದಿಂದ ನೀವು ಮತ್ತೊಂದು ಪುಟ ತೆರೆದಾಗಲೂ ಈ ಮುಂಚೆ ನೀವು ಆಸಕ್ತಿ ವ್ಯಕ್ತಪಡಿಸಿದ ಉತ್ಪನ್ನದ ಜಾಹೀರಾತೇ ಮೂಡಲಾರಂಭಿಸುತ್ತದೆ.

ಟ್ರ್ಯಾಕರ್ ಸಾಫ್ಟ್ ವೇರ್ ಅನ್ನು ಬ್ಲಾಕ್ ಮಾಡಿ.

ಟ್ರ್ಯಾಕರ್ ಸಾಫ್ಟ್ ವೇರ್ ಅನ್ನು ಬ್ಲಾಕ್ ಮಾಡಿ.

ಫೈರ್ ಫಾಕ್ಸ್ ಫೋಕಸ್ ಬ್ರೌಸರ್ ಅಂತಹದ್ದನ್ನು ಬ್ಲಾಕ್ ಮಾಡುತ್ತದೆ ಮತ್ತು ಸರಳ ಬ್ರೌಸರ್ ಆಗಿರುವುದರಿಂದ ವೆಬ್ ಪುಟಗಳು ತುಂಬ ವೇಗವಾಗಿ ತೆರೆದುಕೊಳ್ಳುತ್ತದೆ. ಜೊತೆಗೆ, ಸೆಟ್ಟಿಂಗ್ಸ್ ವಿಭಾಗಕ್ಕೆ ಹೋಗಿ ಬಳಕೆದಾರರು ಆ್ಯಡ್ ಟ್ರ್ಯಾಕರ್, ಅನಾಲಿಟಿಕ್ಸ್ ಟ್ರ್ಯಾಕರ್, ಸೋಷಿಯಲ್ ಟ್ರ್ಯಾಕರ್, ಕಂಟೆಂಟ್ ಟ್ರ್ಯಾಕರ್ ಮತ್ತು ವೆಬ್ ಫಾಂಟ್ ಗಳನ್ನು ಬ್ಲಾಕ್ ಮಾಡಬಹುದು.

ಸಫಾರಿಗಿದು ಪ್ರತಿಸ್ಪರ್ಧಿ.

ಸಫಾರಿಗಿದು ಪ್ರತಿಸ್ಪರ್ಧಿ.

ಈ ತಂತ್ರಾಂಶವನ್ನು ಒಂದು ವರ್ಷದ ಹಿಂದೆ ಆ್ಯಪ್ ಸ್ಟೋರ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದನ್ನು ಬಳಸಿ ಐಫೋನಿನ ಸಫಾರಿ ಬ್ರೌಸರ್ ನಲ್ಲಿ ಜಾಹೀರಾತನ್ನು ತೆಗೆಯಬಹುದಿತ್ತು ಮತ್ತು ಟ್ರ್ಯಾಕರುಗಳನ್ನು ತೆಗೆಯಬಹುದಿತ್ತು.

ಹೊಸ ತಂತ್ರಾಂಶದಲ್ಲೂ ಈ ಸೌಲಭ್ಯ ಹೊಸ ತಂತ್ರಾಂಶದಲ್ಲೂ ಲಭ್ಯವಿದೆ. ಮೊಝಿಲ್ಲಾ ನೇರವಾಗಿ ಸಫಾರಿಯೊಂದಿಗೆ ಸ್ಪರ್ಧೆಗಿಳಿದಂತೆ ಕಾಣುತ್ತದೆ.

ಮೊಝಿಲ್ಲಾದ ದೃಡ ನಡೆ.

ಮೊಝಿಲ್ಲಾದ ದೃಡ ನಡೆ.

ಜಾಹೀರಾತುಗಳು ನಮ್ಮ ಖಾಸಗಿತನಕ್ಕೆ ಧಕ್ಕೆ ಉಂಟುಮಾಡುತ್ತದೆ. ದಕ್ಷತೆ ಕಡಿಮೆಯಾಗುತ್ತದೆ, ನಿಮ್ಮ ತಿಂಗಳ ಡೇಟಾ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆನ್ ಲೈನ್ ದಾಳಿಗೂ ನಿಮ್ಮನ್ನು ಈಡುಮಾಡಬಹುದು. ಬಹುಮುಖ್ಯವಾಗಿ ಮೊಝಿಲ್ಲಾ ಜಾಹೀರಾತುದಾರರು ಮತ್ತು ಜನರ ನಡುವಿನ ಘರ್ಷಣೆಯನ್ನು ಇಲ್ಲವಾಗಿಸುತ್ತದೆ.

ಹೊಸ ಫೈರ್ ಫಾಕ್ಸ್ ಫೋಕಸ್ ಬ್ರೌಸರ್ ಆ್ಯಪಲ್ ಆ್ಯಪ್ ಸ್ಟೋರಿನಲ್ಲಿ ಉಚಿತವಾಗಿ ಲಭ್ಯವಿದೆ. ಆ್ಯಂಡ್ರಾಯ್ಡ್ ಆವೃತ್ತಿಯ ಬಿಡುಗಡೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Hide from advertisers' eyes using Mozilla Firefox's new iPhone browser.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X