ಕರೆಯನ್ನು ಎನ್ಕ್ರಿಪ್ಟ್ ಮಾಡಲು ಐದು ಆ್ಯಂಡ್ರಾಯ್ಡ್ ಮತ್ತು ಐಒಎಸ್ ತಂತ್ರಾಂಶಗಳು.

|

ಡೇಟಾವನ್ನು ಕದಿಯುವ ಪ್ರಸಂಗಗಳು ಹೆಚ್ಚಾಗುತ್ತಿರುವುದರಿಂದ, ಬಹಳಷ್ಟು ಸ್ಮಾರ್ಟ್ ಫೋನ್ ಬಳಕೆದಾರರು ತಮ್ಮ ಸಂದೇಶಗಳನ್ನು ಹಾಗೂ ಕರೆಗಳನ್ನು ಸುರಕ್ಷಿತವಾಗಿಡಬಯಸುತ್ತಾರೆ. ಸ್ಮಾರ್ಟ್ ಫೋನ್ ಬಳಕೆದಾರರು ತಮ್ಮ ಫೋನಿನ ಕರೆಗಳನ್ನು ಎನ್ಕ್ರಿಪ್ಟ್ ಮಾಡುವ ವಿಧಾನ ಇಲ್ಲಿದೆ.

ಕರೆಯನ್ನು ಎನ್ಕ್ರಿಪ್ಟ್ ಮಾಡಲು ಐದು ಆ್ಯಂಡ್ರಾಯ್ಡ್ ಮತ್ತು ಐಒಎಸ್ ತಂತ್ರಾಂಶಗಳು.

ಆ್ಯಪ್ ಗಳ ಲೋಕದಲ್ಲಿ, ಪ್ರಪಂಚದಾದ್ಯಂತ ಉಚಿತ ಕರೆಗಳನ್ನು ಮಾಡುವ ಸೌಕರ್ಯವಿರುವ ತಂತ್ರಾಂಶಗಳು ಕೆಲವೇ ಕೆಲವಿವೆ.

ಓದಿರಿ: ರಿಲಾಯನ್ಸ್ ಜಿಯೋ ಸಿಮ್ ಆಕ್ಟಿವೇಟ್ ಮಾಡಿ ಬಳಸಲು ಈ 5 ಅಂಶಗಳು ಅತ್ಯಗತ್ಯ

ಈ ತಂತ್ರಾಂಶಗಳನ್ನು ಉಪಯೋಗಿಸಿ ನಿಮ್ಮ ಸ್ನೇಹಿತ/ತೆಯೊಡನೆ ನಡೆಸುವ ಸಂಭಾಷಣೆಯು ಸುರಕ್ಷಿತ. ಈ ತಂತ್ರಾಂಶಗಳನ್ನು ಉಪಯೋಗಿಸಿ ಮಾಡುವ ಕರೆಗಳನ್ನು ನಿಮ್ಮ ಮೊಬೈಲಿನ ನೆಟ್ ವರ್ಕ್ ನವರು ರೆಕಾರ್ಡ್ ಮಾಡಿಕೊಳ್ಳಲಾಗುವುದಿಲ್ಲ.

ಓದಿರಿ: ಈ ಅಪ್ಲಿಕೇಶನ್ ಇದ್ದರೆ ಸಾಕು ಏರ್‌ಟೆಲ್‌ 5ಜಿಬಿ ಇಂಟರ್ನೆಟ್ ಉಚಿತ

ಆ್ಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಸುರಕ್ಷಿತ ಕರೆ ಮಾಡಲು ಲಭ್ಯವಿರುವ ಉತ್ತಮ ತಂತ್ರಾಂಶಗಳನ್ನಿಲ್ಲಿ ಪಟ್ಟಿ ಮಾಡಿದ್ದೀವಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೆಡ್ ಫೋನ್.

ರೆಡ್ ಫೋನ್.

ರೆಡ್ ಫೋನ್ ಆ್ಯಪ್ ಉಪಯೋಗಿಸುವ ಮೂಲಕ ನೀವು ಎನ್ಕ್ರಿಪ್ಟೆಡ್ ಕರೆಗಳನ್ನು ಮಾಡಬಹುದು. ಈ ತಂತ್ರಾಂಶದಲ್ಲಿ ಸುರಕ್ಷತೆಯೇ ಮುಖ್ಯ, ಹಾಗಾಗಿ ಓಪನ್ ಸ್ಟ್ಯಾಂಡರ್ಡ್ ZRTP ಮೇಲೆ ಇದನ್ನು ನಿರ್ಮಿಸಲಾಗಿದೆ.

ಈ ತಂತ್ರಾಂಶವನ್ನು ಇನ್ಸ್ಟಾಲ್ ಮಾಡುವುದು ಬಹಳ ಸುಲಭ, ಬಳಕೆದಾರರು ತಮ್ಮ ಫೋನ್ ನಂಬರ್ ಉಪಯೋಗಿಸಿ ಲಾಗಿನ್ ಆಗಬಹುದು; ಹೊಸ ಬಳಕೆದಾರರ ಖಾತೆಯನ್ನು ತೆರೆಯುವ ಅವಶ್ಯಕತೆಯಿಲ್ಲ, ಕರೆಗಳು ಸುರಕ್ಷಿತವಾಗಿರುತ್ತವೆ.

ಸಿಮ್ಲಾರ್.

ಸಿಮ್ಲಾರ್.

ಇದು ಆ್ಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಬ್ಬರಿಗೂ ಲಭ್ಯ. ಸಿಮ್ಲಾರ್ ಓಪನ್ ಸೋರ್ಸ್ ತಂತ್ರಾಂಶ, ತಂತ್ರಾಂಶದ ಮೂಲಕ ಮಾಡುವ ಕರೆಯು ಎನ್ಕ್ರಿಪ್ಟೆಡ್ ಆಗಿರುತ್ತದೆ.

ZRTP ಪ್ರೋಟೋಕಾಲ್ ಮೇಲೆ ನಿರ್ಮಿತವಾದ ಈ ತಂತ್ರಾಂಶದಲ್ಲಿರುವ ಕ್ರಿಪ್ಟೊಗ್ರಾಫಿಕ್ ಕೀ ಒಪ್ಪಂದದ ಕಾರಣದಿಂದ ನೀವು ಮಾಡುವ ಕರೆಯನ್ನು ಸಿಮ್ಲಾರ್ ನವರೂ ಕೇಳಲಿಕ್ಕಾಗುವುದಿಲ್ಲ.

ವೈಪರ್.

ವೈಪರ್.

ವೈಪರ್ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಸ್ನೇಹಿತರೊಂದಿಗೆ ಹರಟಿ. ಇತರೆ ತಂತ್ರಾಂಶಗಳಿಗೆ ಹೋಲಿಸಿದರೆ ಇದರಲ್ಲಿ ನೀವು ಕರೆ ಮಾಡಿದ ದಾಖಲೆಯೂ ನಿಮ್ಮ ಫೋನಿನಲ್ಲಿ ಉಳಿಯುವುದಿಲ್ಲ.

ಸಂಪರ್ಕಪಟ್ಟಿಯಲ್ಲಿರುವವರಿಗೆ ಸಂದೇಶ ಕಳುಹಿಸಬಹುದು, ವೈಪ್ ಆಯ್ಕೆಯನ್ನು ಉಪಯೋಗಿಸಬಹುದು.

ವೈಪರ್ ಸರ್ವರ್ ನಲ್ಲಿರುವ ಸಂದೇಶಗಳನ್ನು ತಂತ್ರಾಂಶವನ್ನು ಉಪಯೋಗಿಸಿ ಅಳಿಸಿ ಹಾಕಬಹುದು, ಅದನ್ನು ಮತ್ತೆ ಪಡೆಯಲು ಸಾಧ್ಯವಾಗುವುದಿಲ್ಲ.

ಝಾಯ್ಪರ್.

ಝಾಯ್ಪರ್.

ಎಲ್ಲಾ VoIP ಕರೆಗಳನ್ನೂ ಟಿ.ಎಲ್.ಎಸ್/ಎಸ್.ಆರ್.ಟಿ.ಪಿ ಮತ್ತು ZRTP ಪ್ರೊಟೋಕಾಲ್ ಉಪಯೋಗಿಸಿ ಎನ್ಕ್ರಿಪ್ಟ್ ಮಾಡಲಾಗುತ್ತದೆ. ಆ್ಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಬ್ಬರಿಗೂ ಝಾಯ್ಪರ್ ಲಭ್ಯ. ಇದನ್ನು ಲಿನಕ್ಸ್ ಮತ್ತು ವಿಂಡೋಸ್ ಕಂಪ್ಯೂಟರ್ ಬಳಕೆದಾರರೂ ಉಪಯೋಗಿಸಬಹುದು.

ಕವರ್ ಮಿ.

ಕವರ್ ಮಿ.

ಇದನ್ನು ಉಪಯೋಗಿಸಿಕೊಂಡು ಕರೆಗಳು, ಸಂದೇಶಗಳು, ದಾಖಲೆಗಳು, ಫೋನಿನ ಸಂಗ್ರಹವನ್ನೂ ಎನ್ಕ್ರಿಪ್ಟ್ ಮಾಡಬಹುದು. ತಂತ್ರಾಂಶವು ಕರೆ ಮತ್ತು ಸಂದೇಶಗಳನ್ನು ಎನ್ಕ್ರಿಪ್ಟ್ ಮಾಡುತ್ತದೆ ಮತ್ತು ಸ್ಮಾರ್ಟ್ ಫೋನಿನಲ್ಲಿ ಎನ್ಕ್ರಿಪ್ಟೆಡ್ ವಾಲ್ಟ್ ಅನ್ನು ಸೃಷ್ಟಿಸುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Want to keep the conversation with your friend secure? Here're 5 best phone call encryption apps for the Android and iPhone users to encrypt your call details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X