Subscribe to Gizbot

ಆಪಲ್‌ನಿಂದ ಸಿರಿ ತಂತ್ರಜ್ಞಾನ ಇನ್ನಷ್ಟು ಅಭಿವೃದ್ಧಿ

Written By:

ತನ್ನ ಸಿರಿ ಉತ್ಪನ್ನವನ್ನು ಇನ್ನಷ್ಟು ಪ್ರಯೋಜನಕಾರಿಯನ್ನಾಗಿಸಲು ಆಪಲ್, ಸೀಟಲ್ ಮೂಲದ ಮೆಶೀನ್ ಕಲಿಕೆ ಸ್ಟಾರ್ಟಪ್ ತುರಿಯನ್ನು $200 ಮಿಲಿಯನ್‌ಗೆ ಕೊಂಡುಕೊಂಡಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಮತ್ತು ಮೆಶೀನ್ ಲರ್ನಿಂಗ್‌ನಲ್ಲಿ ಇನ್ನಷ್ಟು ಸುಧಾರಣೆಯನ್ನು ಕಂಡುಕೊಳ್ಳಲು ಕಂಪೆನಿ ಈ ಸ್ವಾಧೀನತೆಗೆ ಮುಂದಾಗಿದೆ.

ಆಪಲ್‌ನಿಂದ ಸಿರಿ ತಂತ್ರಜ್ಞಾನ ಇನ್ನಷ್ಟು ಅಭಿವೃದ್ಧಿ

ಸೀಟಲ್‌ನಲ್ಲಿ ಆಪಲ್‌ನ ಪ್ರಸಿದ್ಧಿಯನ್ನು ಇದು ಹೆಚ್ಚಿಸಲಿದ್ದು ಉತ್ಪನ್ನಗಳ ಮಾರಾಟಕ್ಕೆ ಈ ನಿರ್ಧಾರ ಸಹಾಯವನ್ನು ಮಾಡಲಿದೆ. ಕಳೆದ ಎರಡು ವರ್ಷಗಳಿಂದ ಕಂಪೆನಿ ಈ ಭಾಗದಲ್ಲಿ ಇಂಜಿನಿಯರಿಂಗ್ ಔಟ್ ಪೋಸ್ಟ್ ಅನ್ನು ರಚನೆ ಮಾಡುತ್ತಿದೆ.

ಓದಿರಿ: ಸ್ಮಾರ್ಟ್‌ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡುವ ಟಿಪ್ಸ್ ಇಲ್ಲಿದೆ

ಸಮಯದಿಂದ ಸಮಯಕ್ಕೆ ಆಪಲ್ ಸಣ್ಣ ತಂತ್ರಜ್ಞಾನ ಸಂಸ್ಥೆಗಳನ್ನು ಖರೀದಿಸುತ್ತದೆ, ನಾವು ಇದುವರೆಗೆ ನಮ್ಮ ನಿರ್ಧಾರ ಮತ್ತು ಉದ್ದೇಶಗಳನ್ನು ಮಾತನಾಡಿಕೊಂಡಿಲ್ಲ ಎಂಬುದಾಗಿ ಆಪಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆಪಲ್‌ನಿಂದ ಸಿರಿ ತಂತ್ರಜ್ಞಾನ ಇನ್ನಷ್ಟು ಅಭಿವೃದ್ಧಿ

ತುರಿಯು ಡೆವಲಪರ್‌ಗಳಿಗೆ ಮೆಶೀನ್ ಲರ್ನಿಂಗ್ ಅಪ್ಲಿಕೇಶನ್‌ಗಳನ್ನು ಸರಳವಾಗಿ ಅರಿತುಕೊಳ್ಳಲು ನೆರವಾಗಲಿದೆ. ಸೀಟಲ್ ಪ್ರದೇಶದಲ್ಲಿಯೇ ತುರಿ ಸಂಸ್ಥೆಯು ಪ್ರಸ್ತುತ ಇದ್ದು ಆಪಲ್ ಮುಂದಿನ ನಿರ್ಧಾರಗಳನ್ನು ಈ ಕ್ಷೇತ್ರದಲ್ಲಿ ಹೆಚ್ಚುವರಿ ಪ್ರಗತಿಯನ್ನು ಪಡೆದುಕೊಂಡ ನಂತರ ಸ್ಟಾರ್ಟಪ್ ಅನ್ನು ಅಭಿವೃದ್ಧಿಪಡಿಸಲಿದೆ.

English summary
Taking another foray into the field of artificial intelligence (AI) and machine learning as well as to make its digital assistant Siri better, Apple has acquired Seattle-based machine learning startup Turi for nearly $200 million.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot