ಕ್ರಿಸ್‍ಮಸ್ ರಜೆಯಲ್ಲಿ ಮನೆಯಿಂದ ಹೊರಗೆ ಇದ್ದಾಗ ನಿರ್ವಹಣೆಗಾಗಿ ಇರಲೇ ಬೇಕಾದ 5 ಆಪ್‍ಗಳು

ಕ್ರಿಸ್‍ಮಸ್ ಇನ್ನೇನು ಬರಲಿದೆ, ರಜೆ ಮತ್ತು ಹಬ್ಬದ ದಿನಗಳಾಗಿವೆ. ಈ ಸಮಯದಲ್ಲಿ ಪ್ರಪಂಚದಾದ್ಯಂತ ಪ್ರವಾಸದ ಯೋಜನೆ ಮಾಡುತ್ತಾರೆ. ನೀವು ಮನೆಯಿಂದ ಹೊರ ಹೋದಾಗ ಆಗಬಾರದ್ದು ಆದರೆ? ಭಯವಾಗುತ್ತೆ ಅಲ್ಲವೆ ?

ಈ ಕ್ರಿಸ್‍ಮಸ್ ಹಬ್ಬದಲ್ಲಿ, ಯಾವುದೇ ಚಿಂತೆಯಿಲ್ಲದೆ ರಜೆಯಲ್ಲಿ ಹೊರಗೆ ಹೋಗಿ!

ಇಂದು ತಂತ್ರಜ್ಞಾನ ತುಂಬಾ ಮುಂದುವರಿದಿದೆ, ಲಕ್ಷಗಟ್ಟಲೆ ಆಪ್ ನಿಮಗೆ ಆಪ್ ಸ್ಟೊರ್ ನಲ್ಲಿ ಸಿಗುತ್ತವೆ, ಬಹಳಷ್ಟು ವರ್ಗಗಳಿವೆ ಆಪ್‍ಸ್ಟೋರ್ ನಲ್ಲಿ, ಅದರಲ್ಲಿ ಕೆಲವು ಬಳಕೆದಾರರಿಗೆ ಮನೆಯಿಂದ ದೂರವಿದ್ದಾಗ ತಮ್ಮ ಮನೆಯನ್ನು ನೋಡಿಕೊಳ್ಳಲು ಅವಕಾಶ ನೀಡುತ್ತದೆ.

ಓದಿರಿ: ಫೇಸ್‌ಬುಕ್‌ ಮೆಸೇಂಜರ್‌ನಿಂದ 'ಗ್ರೂಪ್‌ ವೀಡಿಯೊ ಕರೆ' ಫೀಚರ್‌ ಲಾಂಚ್‌: ಎಲ್ಲರನ್ನು ನೋಡುತ್ತ ಮಾತನಾಡಿ

ಮನೆ ನಿರ್ವಹಣೆಗಾಗಿ ಬಹಳಷ್ಟು ಆಪ್ ಗಳಿವೆ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ ನಲ್ಲಿ. ನಿಮಗೆ ಗೊಂದಲವಾಗಬಹುದು ಯಾವುದು ಒಳ್ಳೆಯದು, ಯಾವುದು ಸುಲಭವಾಗಿ ಉಪಯೋಗಿಸುವಂತಹುದು ಎಂದು. ಅದಕ್ಕಾಗಿ ಗಿಜ್‍ಬೊಟ್ ನಿಮಗಾಗಿ 5 ಉತ್ತಮ ಆಪ್‍ಗಳ ಪಟ್ಟಿ ತಂದಿದೆ. ಇದರ ಸಹಾಯದಿಂದ ಸ್ಮಾರ್ಟ್‍ಫೋನ್ ಮೂಲಕ ನಿಮ್ಮ ಮನೆಯನ್ನು ನಿರ್ವಹಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‍ಥಿಂಗ್ಸ್ ಮೊಬೈಲ್

ಸ್ಮಾರ್ಟ್‍ಥಿಂಗ್ಸ್ ಮೊಬೈಲ್

ಆಪ್ ಐಒಎಸ್ ಮತ್ತು ಆಂಡ್ರೊಯಿಡ್ ಬಳಕೆದಾರರಿಬ್ಬರಿಗೂ ಲಭ್ಯವಿದೆ. ಇದು ಬಳಕೆದಾರರಿಗೆ ನಿಯಂತ್ರಿಸಲು, ನಿರ್ವಹಿಸಲು ಮತ್ತು ಗೈರುಹಾಜರಿಯಲ್ಲಿ ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ. ಬಳಕೆದಾರರು ಸ್ಮಾರ್ಟ್‍ಥಿಂಗ್ಸ್ ಹಬ್ ಕೊಳ್ಳಬೇಕು, ಉಚಿತ ಆಪ್ ಡೌನ್‍ಲೊಡ್ ಮಾಡಬೇಕು ಮತ್ತು ಅವಶ್ಯಕತೆಗೆ ತಕ್ಕಂತೆ ಎಷ್ಟು ಕನೆಕ್ಟ್ ಮಾಡಿದ ಲೈಟ್ಸ್, ಲೊಕ್ಸ್ ಮತ್ತು ಸೆನ್ಸರ್ಸ್ ಬೇಕೆಂದು ಹೇಳಬೇಕು ಸ್ಮಾರ್ಟ್ ಮನೆಗಾಗಿ. ಈ ಆಪ್ ನಿಮ್ಮ ಮನೆಯ ಸುರಕ್ಷತೆ ನೋಡಕೊಳ್ಳುತ್ತದೆ ಮತ್ತು ಏನಾದರು ಅಪಾಯವಿದ್ದಲ್ಲಿ ನಿಮಗೆ ಸಂದೇಶ ಕಳಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಸ್ಮಾರ್ಟ್ ಹೋಮ್

ಸ್ಯಾಮ್ಸಂಗ್ ಸ್ಮಾರ್ಟ್ ಹೋಮ್

ಪ್ರಪಂಚದಾದ್ಯಂತ ಸ್ಯಾಮ್ಸಂಗ್ ಬ್ರ್ಯಾಂಡ್ ಅನ್ನು ಉಪಯೋಗಿಸಲಾಗುತ್ತಿದೆ. ಹೀಗಾಗಿ ಈ ಆಪ್ ಖಂಡಿತ ಬಹಳಷ್ಟು ಜನರಿಗೆ ಉಪಯುಕ್ತಕಾರಿಯಾಗಿದೆ. ಈ ಆಪ್ ಬಳಕೆದಾರರಿಗೆ ತ್ವರಿತವಾಗಿ ಮತ್ತು ಸುಲಭವಾಗಿ ವಿವಿಧ ಸ್ಯಾಮ್ಸಂಗ್ ಮನೆ ಬಳಕೆಯ ವಸ್ತುಗಳೊಂದಿಗೆ ಸಂಪರ್ಕಹೊಂದಲು ಅವಕಾಶ ನೀಡುತ್ತದೆ. ಉದಾ: ರೆಫ್ರಿಜರೇಟರ್, ವಾಷಿಂಗ್ ಮಷಿನ್, ಏರ್ ಕಂಡಿಷನರ್ ಮತ್ತು ಸ್ಯಾಮ್ಸಂಗ್ ನ ಇತರ ಡಿವೈಜ್‍ಗಳು ಸ್ಮಾರ್ಟ್ ಫೋನ್ ಮೂಲಕ.

ಇಂಪೆರಿಹೋಮ್

ಇಂಪೆರಿಹೋಮ್

ಆಪ್ ಮನೆಯ ಅಟೊಮೆಷನ್ ಅನ್ನು ನಿಯಂತ್ರಿಸುತ್ತದೆ ಎಪಿಐ ಉಪಯೋಗಿಸಿ ಸಿಂಗಲ್ ಮತ್ತು ಹೈಲಿ ಕಸ್ಟಮೈಜೆಬಲ್ ಪ್ಲಾಟ್‍ಫಾರ್ಮ್ ನಿಂದ ನೇರವಾಗಿ ಮನೆಯ ವಸ್ತುಗಳ ಮೇಲೆ ಸಂಪರ್ಕ ಇಡುವ ಮೂಲಕ ಮತ್ತು ಬಳಕೆದಾರರಿಗೆ ದೂರದಿಂದ ಮನೆಯ ಸಾಮಾನುಗಳೊಂದಿಗೆ ಸಂಪರ್ಕಿಸಲು ಅನುಮತಿ ನೀಡುತ್ತದೆ.

ಲೊಕ್ಸೊನ್ ಸ್ಮಾರ್ಟ್ ಹೋಮ್

ಲೊಕ್ಸೊನ್ ಸ್ಮಾರ್ಟ್ ಹೋಮ್

ಲೊಕ್ಸೊನ್ ಸ್ಮಾರ್ಟ್ ಹೋಮ್ಆಪ್ ಮನೆಯ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ, ಲೈಟ್ ಬಂದ್ ಮಾಡುವುದಿರಬಹುದು ಅಥವಾ ನೀವು ಮನೆಯಿಂದ ಹೊರ ಇರುವಾಗ ಮನೆಯನ್ನು ಕಾಯುವುದಿರಬಹುದು. ಈ ಆಪ್ ಸ್ಮಾರ್ಟ್ ಹೋಮ್ ನ ಕಾರ್ಯಗಳನ್ನು ನೋಡಿಕೊಳ್ಳುತ್ತದೆ ಮನೆಯ ತಾಪಮಾನ, ಲೈಟಿಂಗ್, ಶಕ್ತಿ ನಿರ್ವಹಣೆ, ತಾಪಮಾನ ವರದಿ ಮತ್ತು ಇತ್ಯಾದಿ.

ಗಿಡಿಯೊನ್ ಸ್ಮಾರ್ಟ್ ಹೋಮ್

ಗಿಡಿಯೊನ್ ಸ್ಮಾರ್ಟ್ ಹೋಮ್

ಆಪ್ ಸ್ಮಾರ್ಟ್ ಹೋಮ್ ಮಾಡುತ್ತದೆ ಒಂದೇ ಆಪ್ ನಲ್ಲಿ. ಇದು ಎಲ್ಲವನ್ನೂ ನಿಯಂತ್ರಿಸುತ್ತದೆ ಮನೆಯ ಮನೊರಂಜನಾ ಯಂತ್ರದಿಂದ ಹಿಡಿದು ಸುರಕ್ಷತೆ, ಬಿಸಿ ಮಾಡುವುದರಿಂದ ಹಿಡಿದು ಲೈಟಿಂಗ್ ಮತ್ತು ಇತ್ಯಾದಿ ಕೇವಲ ಆಪ್ ನಿಂದ. ಇದು ಮನೆಯ ಕಾರ್ಯಗಳನ್ನು ಸುಲಭವಾಗಿ ಆಪ್ ನೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ ಮತ್ತು ಎಲ್ಲಾ ಕಾರ್ಯಗಳ ಮೇಲೆ ಕಣ್ಣಿಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Here are 5 apps to download which will help you keep an eye on your home when away for a holiday.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot