ಫೇಸ್‌ಬುಕ್‌ ಮೆಸೇಂಜರ್‌ನಿಂದ 'ಗ್ರೂಪ್‌ ವೀಡಿಯೊ ಕರೆ' ಫೀಚರ್‌ ಲಾಂಚ್‌: ಎಲ್ಲರನ್ನು ನೋಡುತ್ತ ಮಾತನಾಡಿ

By Suneel
|

ಮಗ ದೂರದ ನಗರಕ್ಕೆ/ವಿದೇಶಕ್ಕೆ ಹೋಗಿದ್ದಾನೆ ಎಲ್ಲಾ ಹಬ್ಬಗಳಿಗೆ ಮಿಸ್ ಮಾಡ್ಕೋತಿದೀವಿ ಅಂತ ಹಲವು ಫೋಷಕರು ತಮ್ಮ ಮಗನನ್ನು ನೆನೆಸಿಕೊಂಡು ಫೀಲ್‌ ಮಾಡೋದು ಸಾಮಾನ್ಯ. ಹಾಗೆ ಹಲವರು ತಮ್ಮ ತಂದೆ-ತಾಯಿಯನ್ನು ಮಿಸ್‌ ಮಾಡಿಕೊಳ್ಳೋ ಫೀಲ್ ಅನುಭವಿಸುವುದು ಉಂಟು. ಈ ರೀತಿಯ ಅಲೋಚನೆಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಪರಿಣಿತರು ಹಲವು ಆಪ್‌ಗಳಲ್ಲಿ, ಸಾಮಾಜಿಕ ತಾಣ ವೇದಿಕೆಗಳಲ್ಲಿ ವೀಡಿಯೊ ಕರೆ ಫೀಚರ್‌ ಅನ್ನು ಅಭಿವೃದ್ದಿಪಡಿಸಿದ್ದಾರೆ.

ಅಂದಹಾಗೆ ಮೆಸೇಜ್ ಆಪ್‌ಗಳಾದ ಫೇಸ್‌ಬುಕ್‌ ಮೆಸೇಂಜರ್, ವಾಟ್ಸಾಪ್, ವಿಚಾಟ್‌ಗಳಲ್ಲಿ ಇಷ್ಟುದಿನ ಕೇವಲ ಗ್ರೂಪ್‌ ಟೆಕ್ಸ್ಟ್‌ ಚಾಟ್‌ ಬಗ್ಗೆ ಕೇಳಿದ್ದೀರಿ. ಆದರೆ ಇನ್ನುಮುಂದೆ ಫೇಸ್‌ಬುಕ್‌ ಮೆಸೇಂಜರ್‌ನಲ್ಲಿ ಗ್ರೂಪ್‌ ವೀಡಿಯೊ ಚಾಟ್‌ ಅನ್ನು ಮಾಡಬಹುದು.

ಫೇಸ್‌ಬುಕ್‌ ಮೆಸೇಂಜರ್‌ನಿಂದ 'ಗ್ರೂಪ್‌ ವೀಡಿಯೊ ಕರೆ' ಫೀಚರ್‌ ಲಾಂಚ್‌...ǃǃ

ಹೌದು, ನೀವೇನಾದ್ರು ನಿಮ್ಮ ಕುಟುಂಬದ ಎಲ್ಲರನ್ನೂ ಮಿಸ್‌ ಮಾಡ್ಕೋತಿದೀನಿ ಎಂದು ಫೀಲ್‌ ಆಗುತ್ತಿದ್ದರೆ, ಫೇಸ್‌ಬುಕ್ ಮೆಸೇಂಜರ್ ಲೇಟೆಸ್ಟ್‌ ಆಗಿ ಲಾಂಚ್ ಮಾಡಿರೋ ಗ್ರೂಪ್ ವೀಡಿಯೊ ಚಾಟ್‌ ಫೀಚರ್ ಬಳಸಿಕೊಂಡು ಎಲ್ಲರೊಂದಿಗೆ ಮಾತನಾಡಬಹುದು. ನಿಮ್ಮ ಕುಟುಂಬದವರು ಯಾರು ಯಾರು ಎಲ್ಲೇ ಇದ್ದರೂ ಪರವಾಗಿಲ್ಲ. ಎಲ್ಲರನ್ನೂ ನೀವು ಗ್ರೂಪ್ ವೀಡಿಯೊ ಕರೆಯಲ್ಲಿ ಒಟ್ಟಗೆ ನೋಡಬಹುದು.

ಫೇಸ್‌ಬುಕ್‌ ಮೆಸೇಂಜರ್ ಎಲ್ಲರ ಬೇಡಿಕೆಯ, ಬಹು ನಿರೀಕ್ಷಿತ ಫೀಚರ್‌ ಆದ ಗ್ರೂಪ್‌ ವೀಡಿಯೊ ಚಾಟ್‌ ಫೀಚರ್‌ ಅನ್ನು ಸೋಮವಾರ ಆಂಡ್ರಾಯ್ಡ್, ಐಓಏಸ್, ಡೆಸ್ಕ್‌ಟಾಪ್ ವರ್ಸನ್‌ ಮೆಸೇಂಜರ್‌ಗೆ ಪ್ರಪಂಚದಾದ್ಯಂತ ಲಾಂಚ್ ಮಾಡಿದೆ. ಬಳಕೆ ಹೇಗೆ, ವಿಶೇಷತೆ ಏನು, ಎಷ್ಟು ಜನರು ಒಮ್ಮೆ ಕಾಣಿಸಿಕೊಳ್ಳಬಹುದು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ವಾಟ್ಸಾಪ್ ವೀಡಿಯೊ ಕರೆ ಫೀಚರ್ ಲಾಂಚ್: ಒಂದೇ ಕ್ಲಿಕ್‌ನಿಂದ ಫೀಚರ್ ಪಡೆಯಿರಿ!

 245 ದಶಲಕ್ಷ ಜನರಿಂದ ವೀಡಿಯೊ ಕರೆ

245 ದಶಲಕ್ಷ ಜನರಿಂದ ವೀಡಿಯೊ ಕರೆ

" 245 ದಶಲಕ್ಷ ಜನರು ಪ್ರತಿ ತಿಂಗಳು ವೀಡಿಯೊ ಕರೆಯನ್ನು ಮೆಸೇಂಜರ್‌ನಲ್ಲಿ ಮಾಡುತ್ತಾರೆ. ಈಗ ಇನ್ನೂ ಹೆಚ್ಚಿನದಾಗಿ ಎಲ್ಲರನ್ನೂ ಮೆಸೇಂಜರ್‌ ಆಪ್‌ಗೆ ತರುತ್ತಿದ್ದೇವೆ. ಮೆಸೇಂಜರ್ ಬಳಕೆದಾರರು ಒಂದೇ ಗ್ರೂಫ್‌ನಲ್ಲಿ ಫೇಸ್ ಟು ಫೇಸ್ ಮಾತನಾಡಲು ಅವಕಾಶವನ್ನು ಗ್ರೂಪ್‌ ವೀಡಿಯೊ ಚಾಟ್ ಫೀಚರ್ ನೀಡುತ್ತದೆ" ಎಂದು ಫೇಸ್‌ಬುಕ್‌ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 6 ಜನರು ಗ್ರೂಪ್ ವೀಡಿಯೊ ಚಾಟ್‌ನಲ್ಲಿ ಕಾಣಿಸಿಕೊಳ್ಳಬಹುದು

6 ಜನರು ಗ್ರೂಪ್ ವೀಡಿಯೊ ಚಾಟ್‌ನಲ್ಲಿ ಕಾಣಿಸಿಕೊಳ್ಳಬಹುದು

ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಒಮ್ಮೆ 6 ಜನರು ಗ್ರೂಫ್‌ ವೀಡಿಯೊ ಚಾಟ್‌ನಲ್ಲಿ ಕಾಣಿಸಿಕೊಳ್ಳಬಹುದು ಮತ್ತು 50 ಜನರವರೆಗೆ ವೀಡಿಯೊ ಚಾಟ್‌ಗೆ ಸೇರ್ಪಡೆ ಆಗಬಹುದು. "Just listen' ಆಯ್ಕೆ ಮಾಡಿ ಮತ್ತು ಧ್ವನಿ ಮೂಲಕ ಅಥವಾ ಕ್ಯಾಮೆರಾ ಮೂಲಕ ಜಾಯಿನ್‌ ಆಗಬಹುದು.

ಡೊಮಿನಂಟ್ ಸ್ಪೀಕರ್ ಎಲ್ಲಾ ವೇಳೆ ಪ್ರದರ್ಶನ

ಡೊಮಿನಂಟ್ ಸ್ಪೀಕರ್ ಎಲ್ಲಾ ವೇಳೆ ಪ್ರದರ್ಶನ

"ಫೇಸ್‌ಬುಕ್‌ ಮೆಸೇಂಜರ್‌ನ ಗ್ರೂಪ್‌ ವೀಡಿಯೊ ಚಾಟ್‌ನಲ್ಲಿ ಒಮ್ಮೆ 6 ಜನರು ಕಾಣಿಸಿಕೊಳ್ಳುತ್ತಾರೆ. ಇವರುಗಳಲ್ಲಿ ಎಲ್ಲಾ ಸಮಯದಲ್ಲೂ ಡೊಮಿನಂಟ್ ಸ್ಪೀಕರ್‌ ಮಾತ್ರ ಕಾಣಿಸಿಕೊಳ್ಳುತ್ತಾರೆ" ಎಂದು ಫೇಸ್‌ಬುಕ್‌ ಹೇಳಿದೆ.

 ಲೇಟೆಸ್ಟ್ ವರ್ಸನ್ ಮೆಸೇಂಜರ್ ಆಪ್‌

ಲೇಟೆಸ್ಟ್ ವರ್ಸನ್ ಮೆಸೇಂಜರ್ ಆಪ್‌

ಫೇಸ್‌ಬುಕ್‌ ಮೆಸೇಂಜರ್‌ನಲ್ಲಿ ಗ್ರೂಪ್‌ ವೀಡಿಯೊ ಚಾಟ್ ಫೀಚರ್ ಪಡೆಯಲು ಬಳಕೆದಾರರು ಲೇಟೆಸ್ಟ್ ವರ್ಸನ್‌ನ ಮೆಸೇಂಜರ್ ಆಪ್‌ ಅನ್ನು ಹೊಂದಿರಬೇಕು. ಗ್ರೂಪ್‌ ವೀಡಿಯೊ ಚಾಟ್ ಮಾಡಲು ಆರಂಭಿಸಲು ಈಗಾಗಲೇ ಇರುವ ಗ್ರೂಪ್‌ಗೆ ಸೇರ್ಪಡೆ ಆಗಬೇಕು ಅಥವಾ ಹೊಸ ಗ್ರೂಪ್‌ ಅನ್ನು ಕ್ರಿಯೇಟ್ ಮಾಡಿಕೊಳ್ಳಬೇಕು. ನಂತರ ಗ್ರೂಪ್‌ ಮೇಲೆ ಕ್ಲಿಕ್ ಮಾಡಿ ಸ್ಕ್ರೀನ್‌ನ ಬಲಭಾಗದ ಮೆಲ್ಭಾಗದಲ್ಲಿ ವೀಡಿಯೊ ಐಕಾನ್ ಅನ್ನು ಟ್ಯಾಪ್ ಮಾಡಬೇಕು.

ಅತ್ಯಾಧುನಿಕ ಫೀಚರ್

ಅತ್ಯಾಧುನಿಕ ಫೀಚರ್

ವಾಟ್ಸಾಪ್ ಇದೀಗ ತಾನೆ ತನ್ನ ವೀಡಿಯೊ ಕರೆ ಫೀಚರ್ ಅನ್ನು ಲಾಂಚ್ ಮಾಡಿದೆ. ಆದರೆ ವಾಟ್ಸಾಪ್‌ನಲ್ಲಿ ಗ್ರೂಪ್‌ ಕ್ರಿಯೇಟ್ ಮಾಡಿ ಟೆಕ್ಸ್ಟ್‌ ಮೆಸೇಜ್‌ ಚಾಟ್‌ ಮಾಡಬಹುದು. ಆದರೆ ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಹಲವರು ಸ್ಕ್ರೀನ್‌ನಲ್ಲಿ ಕಾಣುತ್ತ ವೀಡಿಯೊ ಕರೆ ಮಾಡಿ ಒಬ್ಬರನೊಬ್ಬರು ನೋಡುತ್ತ ಲೈವ್ ಆಗಿ ಮಾತನಾಡಬಹುದು. ಕ್ರಿಸ್‌ಮಸ್‌ಗೆ ಫೇಸ್‌ಬುಕ್‌ನ ದೊಡ್ಡ ಉಡುಗೊರೆಯು ಇದಾಗಿದೆ ಎನ್ನಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Bridging distances! Facebook Messenger launches group video chat feature. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X