Subscribe to Gizbot

ನೆಟ್‌ ಬ್ಯಾಂಕ್‌ ಬಳಸಿ ಪ್ಲೇ ಸ್ಟೋರ್‌ನಲ್ಲಿ ಆಪ್‌ ಖರೀದಿ: ಫೇಕ್ ಆಪ್‌ಗಳ ಪತ್ತೆ ಹೇಗೆ?

Written By:

ಇತ್ತೀಚೆಗಷ್ಟೆ ಆಪಲ್‌ ಆಪ್ ಸ್ಟೋರ್‌ನಲ್ಲಿ ನೂರಾರು ನಕಲಿ(ಫೇಕ್‌) ಆಪ್‌ಗಳನ್ನು ಖರೀದಿಸಿರುವ ಬಗ್ಗೆ ಪತ್ತೆ ಮಾಡಲಾಗಿತ್ತು. ಆಪಲ್‌ ಆಪ್‌ ಸ್ಟೋರ್‌ನಲ್ಲಿದ್ದ ಈ ಆಪ್‌ಗಳು ಗ್ರಾಹಕರ ಕ್ರೆಡಿಟ್ ಕಾರ್ಡ್‌ನ ವಿವರಗಳನ್ನು ಪಡೆಯಲು ಗ್ರಾಹಕರನ್ನು ಆಕರ್ಷಿಸುತ್ತಿದ್ದವು ಎಂದು ತಿಳಿಯಲಾಗಿತ್ತು.

'ಆಪಲ್‌ ಆಪ್‌ ಸ್ಟೋರ್‌'ನಂತೆಯೇ, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹಲವು ಫೇಕ್‌ ಆಪ್‌ಗಳು ಇವೆ. ಈ ಆಪ್‌ಗಳು ಗ್ರಾಹಕರ ಸೂಕ್ಷ್ಮ ಮಾಹಿತಿಗಳನ್ನು ಕದಿಯುವ ಉದ್ದೇಶಗಳನ್ನು ಹೊಂದಿವೆ. ತಿಳಿಯದೇ ಈ ಫೇಕ್‌ ಆಪ್‌ಗಳನ್ನು ಖರೀದಿಸಿ ಇನ್‌ಸ್ಟಾಲ್‌ ಮಾಡುವುದು ಅಪಾಯಕಾರಿಯಾಗಿದೆ.

ಚಾರ್ಜರ್ ಇಲ್ಲದೇ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವ 5 ವಿಧಾನಗಳು ನಿಮಗೆ ಗೊತ್ತೇ?

ಅಂದಹಾಗೆ ಗೂಗಲ್ ತನ್ನ ಪ್ಲೇ ಸ್ಟೊರ್‌ನಲ್ಲಿ ಆಪ್‌ ಖರೀದಿಗೆ ನೆಟ್‌ ಬ್ಯಾಂಕಿಂಗ್ ಆಪ್ಶನ್‌ ನೀಡಿದ್ದು, ಕೆಲವು ಅನುಕೂಲಗಳಿಂದ ಭಾರತೀಯರಿಗೆ ಗುಡ್ ನ್ಯೂಸ್ ಆದರೂ, ಇದು ಅಪಾಯಕಾರಿ ಆಗಿದೆ. ಕಾರಣ ಕೆಲವರು ಗೂಗಲ್ ಪ್ಲೇ ಸ್ಟೋರ್‌ ಮುಖಾಂತರ ಆಪ್‌ಗಳನ್ನು ಖರೀದಿಸುತ್ತಾರೆ. ಆಪ್‌ ಖರೀದಿಯಲ್ಲಿ ಕೆಲವರು ತಿಳಿಯದೇ ಫೇಕ್‌ ಆಪ್‌ಗಳನ್ನು ಖರೀದಿಸಿದಾಗ ನೆಟ್‌ ಬ್ಯಾಂಕಿಂಗ್ ಬಳಕೆದಾರರಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಆದ್ದರಿಂದ ನೆಟ್‌ ಬ್ಯಾಂಕಿಂಗ್ ಮೂಲಕ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆಪ್‌(Apps) ಖರೀದಿಸುವಾಗ ಫೇಕ್‌ ಆಪ್‌ಗಳನ್ನು ಪತ್ತೆ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಗಿಜ್‌ಬಾಟ್ ಇಂದಿನ ಲೇಖನದಲ್ಲಿ ತಿಳಿಸುವ 5 ಟಿಪ್ಸ್‌ಗಳ ಮೂಲಕ ಫೇಕ್‌ ಆಪ್‌ಗಳನ್ನು ಪತ್ತೆಹಚ್ಚಬಹುದು. ಮುಂದೆ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಟೈಟಲ್‌ನಲ್ಲಿ ಸ್ಪೆಲ್ಲಿಂಗ್ ಮಿಸ್‌ಟೇಕ್‌ ಚೆಕ್‌ ಮಾಡಿ

ಟೈಟಲ್‌ನಲ್ಲಿ ಸ್ಪೆಲ್ಲಿಂಗ್ ಮಿಸ್‌ಟೇಕ್‌ ಚೆಕ್‌ ಮಾಡಿ

ಮೊದಲಿಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆಪ್‌ ಖರೀದಿಸುವ ಮುನ್ನ ಆಪ್‌ನ ಟೈಟಲ್‌ನಲ್ಲಿ ಮತ್ತು ಆಪ್‌ ವಿವರಣೆಯಲ್ಲಿ ಸ್ಪೆಲ್ಲಿಂಗ್ ಮಿಸ್‌ಟೇಕ್‌ ಚೆಕ್‌ ಮಾಡಿ. ವಂಚಿಸುವವರು ಪ್ರಖ್ಯಾತ ಆಪ್‌ಗಳ ಹೆಸರನ್ನೇ ಬಳಸಿ ಫೇಕ್‌ ಆಪ್‌ ನೀಡಿರುತ್ತಾರೆ. ಉದಾಹರಣೆಗೆ 'Flipkart" ಆಪ್‌ ಖರೀದಿಸಿದಲ್ಲಿ, ವಂಚನೆ ಮಾಡುವವರು ತಮ್ಮ ಫೇಕ್‌ ಆಪ್‌ ಹೆಸರಲ್ಲಿ 'Fllpkart' ಎಂದು ಹೆಸರಿಸಿರುತ್ತಾರೆ.

ಆದರೆ ಫ್ಲಿಪ್‌ಕಾರ್ಟ್ ಭಾರತದಲ್ಲಿ ಉಚಿತ ಆಪ್‌ ಆಗಿದ್ದು, ಕೇವಲ ರೆಫರೆನ್ಸ್‌ಗೆ ಹೆಸರು ತಿಳಿಸಿದ್ದೀವಿ.

ಆಪ್‌ ಡೆವಲಪರ್‌ಗಳ ಖ್ಯಾತಿಯ ಬಗ್ಗೆ ಚೆಕ್‌ ಮಾಡಿ

ಆಪ್‌ ಡೆವಲಪರ್‌ಗಳ ಖ್ಯಾತಿಯ ಬಗ್ಗೆ ಚೆಕ್‌ ಮಾಡಿ

ಫೇಕ್‌ ಆಪ್‌ ಖರೀದಿಯಿಂದ ದೂರ ಉಳಿಯಲು ಇನ್ನೊಂದು ಮಾರ್ಗವೆಂದರೆ, ಆಪ್ ಡೆವಲಪರ್‌ಗಳ ಸ್ಥಾನಮಾನ, ಖ್ಯಾತಿ ಬಗ್ಗೆ ಚೆಕ್‌ ಮಾಡುವುದು. ಜಸ್ಟ್‌ ಡೆವಲಪರ್‌ ಹೆಸರನ್ನು ಗೂಗಲ್ ಮಾಡಿ, ಮಾಹಿತಿ ಚೆಕ್‌ ಮಾಡಿ. ಉತ್ತಮ ಖ್ಯಾತಿ ಹೊಂದಿದ್ದರೆ, ಆಪ್‌ ಖರೀದಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಪ್‌ ಅನುಮತಿಗಳನ್ನು ಎಚ್ಚರದಿಂದ ಓದಿಕೊಳ್ಳಿರಿ

ಆಪ್‌ ಅನುಮತಿಗಳನ್ನು ಎಚ್ಚರದಿಂದ ಓದಿಕೊಳ್ಳಿರಿ

ಗೂಗಲ್ ಪ್ಲೇ ಸ್ಟೊರ್‌ನಲ್ಲಿ ಆಫ್ ಖರೀದಿಸುವ ಮುನ್ನ ಎಚ್ಚರದಿಂದ ಆಪ್‌ ಅನುಮತಿಗಳನ್ನು ಅಗತ್ಯವಾಗಿ ಓದಿಕೊಳ್ಳಿರಿ. ನಂತರ ಒಪ್ಪಿಗೆ ಆದಲ್ಲಿ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಿ. ಕೆಲವೊಂದು ಫ್ಲ್ಯಾಶ್‌ಲೈಟ್ ಆಪ್‌ಗಳು ನಿಮ್ಮ ಸಂಪರ್ಕಗಳು, ಮೆಸೇಜ್‌ಗಳು ಮತ್ತು ಇತರೆ ಚಟುವಟಿಕೆಗಳಿಗೆ ಅನುಮತಿ ಕೇಳುತ್ತವೆ. ಆದ್ದರಿಂದ ಮೊದಲು ಆಪ್‌ ಕೇಳುವ ಅನುಮತಿಗಳನ್ನು ಓದಿಕೊಳ್ಳಿ.

ವಿಮರ್ಶೆಗಳನ್ನು ಓದಿಕೊಳ್ಳಿ

ವಿಮರ್ಶೆಗಳನ್ನು ಓದಿಕೊಳ್ಳಿ

ಪ್ಲೇ ಸ್ಟೋರ್‌ನಿಂದ ಆಪ್‌ ಖರೀದಿಸುವ ಮುನ್ನ ಕೆಲವು ಸಮಯಗಳನ್ನು ಆಪ್‌ ಬಗೆಗಿನ ವಿಮರ್ಶೆಗಳನ್ನು ಓದಲು ಮೀಸಲಿಡಿ. ಒಂದು ರಿಯಲ್ ಮತ್ತು ಉತ್ತಮವಾದ ಆಪ್‌ ಸಾವಿರಾರು ವಿಮರ್ಶೆಗಳನ್ನು ಹೊಂದಿರುತ್ತದೆ. ಆದರೆ ಫೇಕ್‌ ಆಪ್ ಕೆಲವು ವಿಮರ್ಶೆಗಳನ್ನು ಮಾತ್ರ ಹೊಂದಿರುತ್ತದೆ. ಅಲ್ಲದೇ ಎಷ್ಟು ಜನರು ಆಪ್ ಖರೀದಿಸಿದ್ದಾರೆ ಎಂಬುದನ್ನು ತಿಳಿದು ನಿರ್ಧರಿಸಿ.

ಹೆಚ್ಚಿನ ಡಿಸ್ಕೌಂಟ್‌ಗಳನ್ನು ನೀಡುವ ಆಪ್‌ ಖರೀದಿಸದಿರಿ

ಹೆಚ್ಚಿನ ಡಿಸ್ಕೌಂಟ್‌ಗಳನ್ನು ನೀಡುವ ಆಪ್‌ ಖರೀದಿಸದಿರಿ

ಅಂದಹಾಗೆ ಕೆಲವೊಂದು ಆಪ್‌ಗಳು ಪ್ರಾಡಕ್ಟ್‌ ಮೇಲೆ ಹೆಚ್ಚಿನ ಡಿಸ್ಕೌಂಟ್ ನೀಡುತ್ತೇವೆ ಎಂದು ಹೇಳುತ್ತವೆ. ಅಂತಹ ಆಪ್‌ಗಳ ಖರೀದಿಗೆ ಹೋಗದಿರಿ. ಈ ಆಪ್‌ಗಳು ನಿಮ್ಮ ಸೂಕ್ಷ್ಮ ಮಾಹಿತಿಗಳನ್ನು ಕದಿಯಲು ಆಕರ್ಷಕ ಭರವಸೆಗಳನ್ನು ನೀಡುತ್ತವೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
5 Tips to Spot Fake Apps Before Purchasing Them From Google Play Store via Net Banking. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot