'ಗೂಗಲ್‌ ಪ್ಲೇ ಸ್ಟೋರ್‌'ನಿಂದ 9 ಫೇಮಸ್‌ ಆಪ್‌ಗಳು ಬ್ಯಾನ್!

By Suneel
|

2016 ನೇ ವರ್ಷ ಪ್ರಾರಂಭವಾಗುತ್ತಿದಂತೆ ಗೂಗಲ್‌(Google) ತನ್ನ ಅಪ್ಲಿಕೇಶನ್‌ಗಳ ಪ್ಲೇ ಸ್ಟೋರ್‌ನಿಂದ 13 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿತು. ಕಾರಣ ಪ್ಲೇ ಸ್ಟೋರ್‌ನಲ್ಲಿದ್ದ ಆ ಫೇಮಸ್ ಆಪ್ಲಿಕೇಶನ್‌ಗಳು ಗೂಗಲ್‌ಗೂ ತಿಳಿಯದಂತೆ ದುರುದ್ದೇಶಪೂರಿತ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದವು. ಆಂಡ್ರಾಯ್ಡ್‌ ಬಳಕೆದಾರರು ತಾವು ಇನ್‌ಸ್ಟಾಲ್‌ ಮಾಡಿಕೊಂಡ ಆ ಕೆಲವು ಆಪ್‌ಗಳು ಬಳಕೆದಾರರಿಗೆ ತಿಳಿಯದಂತೆ ವಯಕ್ತಿಕ ಡೇಟಾ ಕದ್ದಾಲಿಕೆಯನ್ನು ನಿರ್ವಹಿಸುತ್ತಿದ್ದವು.

ಇತ್ತೀಚೆಗೆ ಫೇಸ್‌ಬುಕ್‌ ಮಾಲಿಕತ್ವದ ವಾಟ್ಸಾಪ್‌ ಎಂಡ್‌-ಟು-ಎಂಡ್‌ ಗೂಢಲಿಪೀಕರಣ ಫೀಚರ್‌ ಜಾರಿ ಮಾಡಲು ಹ್ಯಾಕರ್‌ಗಳ ಸಮಸ್ಯೆಯನ್ನು ತಪ್ಪಿಸುವುದು ಉದ್ದೇಶವಾಗಿತ್ತು. ಸರ್ಕಾರವು ಸಹ ವಾಟ್ಸಾಪ್‌ ಬಳಕೆದಾರರ ಯಾವುದೇ ವಯಕ್ತಿಕ ಮಾಹಿತಿಯನ್ನು ಕದ್ದಾಲಿಕೆ ನಡೆಸದಂತೆ ವ್ಯವಸ್ಥೆಗೊಳಿಸುವುದು ವಾಟ್ಸಾಪ್‌ ಉದ್ದೇಶವಾಗಿತ್ತು. ಅಂದಹಾಗೆ ಇಂದಿನ ಲೇಖನದಲ್ಲಿ ಗೂಗಲ್‌ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿದ ಫೇಮಸ್‌ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳು(Apps) ಯಾವುವು ಎಂದು ತಿಳಿಯಿರಿ.

ಅತ್ಯಧಿಕ ಉಪಯೋಗದ ಯಾರು ತಿಳಿಯದ ಗೂಗಲ್‌ ಆಪ್‌ಗಳು

1

1

ಗೂಗಲ್‌ ತನ್ನ ಆಪ್‌ ಸ್ಟೋರ್‌ನಿಂದ ಬ್ಯಾನ್‌ ಮಾಡಿದ ಮೊದಲ ಆಂಡ್ರಾಯ್ಡ್‌ ಅಪ್ಲಿಕೇಶನ್‌ "ಟ್ಯೂಬ್‌ಮೇಟ್‌". ಸ್ಮಾರ್ಟ್‌ಫೋನ್‌ ಬಳಕೆದಾರರು ನೇರವಾಗಿ ತಮ್ಮ ಮೊಬೈಲ್‌ಗೆ ಯೂಟ್ಯೂಬ್‌ ವೀಡಿಯೋಗಳನ್ನು ಡೌನ್‌ಲೋಡ್‌ ಮಾಡಬಹುದಾದ ಈ ಆಪ್‌ ವೀಡಿಯೋವನ್ನು ನೋಡಲು ಸಹ ಅನುಕೂಲವಾಗಿರಲಿಲ್ಲ.

2

2

CM Installer ಅಥವಾ CyanogenMod Installer ಅಪ್ಲಿಕೇಶನ್‌ ಕಂಪ್ಯೂಟರ್‌ ಅನ್ನು ರೀಬೂಟ್‌ ಮಾಡದೇ CyanogenMod Rom ಇನ್‌ಸ್ಟಾಲ್‌ ಮಾಡಲು ಉಪಯೋಗಿಸಬಹುದಾಗಿದ್ದ ಅಪ್ಲಿಕೇಶನ್‌. ಗೂಗಲ್‌ ಈ ಆಪ್‌ ಅನ್ನು ಯಾವ ಕಾರಣಗಳಿಂದ ತೆಗೆದುಹಾಕಿತು ಎಂಬುದೇ ತಿಳಿಯಲಿಲ್ಲ.

3

3

ಫ್ಲಾಪ್ಪಿ ಬರ್ಡ್‌ ಅಪ್ಲಿಕೇಶನ್‌ ಗೂಗಲ್‌ ಪ್ಲೇ ಸ್ಟೋರ್‌ನಿಂದ ಮಾತ್ರವಲ್ಲದೇ, ಆಪಲ್‌ ಆಪ್‌ ಸ್ಟೋರ್‌ನಿಂದಲೂ ಸಹ ಬ್ಯಾನ್‌ ಆಯಿತು. ವಿಶೇಷ ಅಂದ್ರೆ ಅಪ್ಲಿಕೇಶನ್‌ ಅಭಿವೃದ್ದಿಗಾರರಾದ 'ಡಾಂಗ್‌ ಎನ್‌ಗುಎನ್'‌ ಸ್ವತಃ ಈ ಅಪ್ಲಿಕೇಶನ್‌ ತನ್ನ ಸರಳ ಜೀವನವನ್ನು ಹಾಳು ಮಾಡುತ್ತಿದೆ ಎಂದು ಟ್ವಿಟರ್‌ನಲ್ಲಿ ಬರೆದಿದ್ದರು. ಅಲ್ಲದೇ ಅವರೇ 'ಫ್ಲಾಪ್ಪಿ ಬರ್ಡ್‌' ಗೇಮ್‌ ಆಪ್‌ ಅನ್ನು ಅವರೇ ವಾಪಸ್ಸು ತೆಗೆದುಕೊಂಡರು.

4

4

ಟಿವಿ ಪೋರ್ಟಲ್ ಅಪ್ಲಿಕೇಶನ್‌ ಅನ್ನು ಜನರು ನೇರವಾಗಿ ಟಿವಿ ಶೋಗಳನ್ನು ಸ್ಟ್ರೀಮ್‌ ಮಾಡಲು ಅನುಕೂಲವಾಗಿತ್ತು. ಆದರೆ ಗೂಗಲ್ ಹಕ್ಕುಸ್ವಾಮ್ಯ ಸಮಸ್ಯೆಗಳಿಂದ ಈ ಆಪ್‌ ಅನ್ನು ಬ್ಯಾನ್ ಮಾಡಿತು.

5

5

'MIUI Music' ಫೇಮಸ್‌ ಮ್ಯೂಸಿಕ್‌ ಸ್ಟ್ರೀಮಿಂಗ್ ಆಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಬ್ಯಾನ್‌ ಮಾಡಲಾಗಿದೆ.

6

6

ಆಂಡ್ರಾಯ್ಡ್ ಬಳಕೆದಾರರು ಎಲ್ಲಾ ಆಂಡ್ರಾಯ್ಡ್‌ ಡಿವೈಸ್‌ ಜಾಹಿರಾತುಗಳನ್ನು ನಿರ್ಬಧಿಸಲು ಇದ್ದ ಫೇಮಸ್‌ ಅಪ್ಲಿಕೇಶನ್‌. ಗೂಗಲ್‌ 'ಆಡ್‌ವೇ' ಅಪ್ಲಿಕೇಶನ್‌ ಅನ್ನು ಪ್ಲೇ ಸ್ಟೋರ್‌ನಿಂದ ಬ್ಯಾನ್‌ ಮಾಡಿತು.

7

7

ಅತಿ ಹೆಚ್ಚು ವಿವಾದಕ್ಕೆ ಒಳಗಾಗಿದ್ದ ಅಪ್ಲಿಕೇಶನ್‌ ಇದು. ಆನ್‌ಲೈನ್‌ ಸಾಂಗ್‌ ಕೇಳಲು ಇದ್ದ 'ಗ್ರೂವ್‌ಶಾರ್ಕ್‌' ಆಪ್‌ ಅನ್ನು ಗೂಗಲ್‌ ಹಲವು ಬಾರಿ ತೆಗೆದು ಹಲವು ಬಾರಿ ಪ್ರಕಟ ಮಾಡಿತ್ತು. ಅಮೇರಿಕದಲ್ಲಿ ವಾಸಿಸದವರು ಬಳಕೆ ಮಾಡ ಬಹುದಾಗಿದ್ದ ಆಪ್‌ ಇದು. ಗೂಗಲ್‌ ಈ 'ಗ್ರೂವ್‌ಶಾರ್ಕ್' ವಿರುದ್ಧ ದೂರು ಪಡೆದ ನಂತರ ಬ್ಯಾನ್‌ ಮಾಡಿತು.

8

8

PSX4Droid, ಪ್ಲೇಸ್ಟೇಷನ್‌ ಹಾರಾಟಗಾರ ಗೇಮ್‌ ಅಪ್ಲಿಕೇಶನ್‌ ಬಹುಬೇಗ ಪ್ರಖ್ಯಾತಿಯನ್ನು ಗಳಿಸಿತ್ತು. ಆದರೆ ಹಕ್ಕುಸ್ವಾಮ್ಯ ಮತ್ತು ಕಾನೂನು ಸಮಸ್ಯೆಗಳಿಂದ ಗೂಗಲ್‌ 'PSX4Droid' ಆಪ್‌ ಅನ್ನು ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿತು.

9

9

"ರಶ್‌ ಪಾಕರ್‌", ಹೆಚ್ಚು ಪ್ರಖ್ಯಾತವಾದ ಜೂಜಿನ ಅಪ್ಲಿಕೇಶನ್‌. ಕಾರಣ ಕೇವಲ ಮೊಬೈಲ್‌ ಜೂಜಿನ ಆಪ್‌ ಆಗಿರುವ ಇದನ್ನು ಚಿಕ್ಕ ವಯಸ್ಸಿನ (Under-age) ಹುಡುಗರು ಸಹ ವಾಸ್ತವ ಹಣ ಕಟ್ಟಿಕೊಂಡು ಜೂಜು ಆರಂಭಿಸಿದ್ದರು. ಆದ್ದರಿಂದ ಗೂಗಲ್‌ 'ರಶ್‌ ಪಾಕರ್‌" ಆಪ್‌ ಅನ್ನು ತೆಗೆದು ಹಾಕಿತು.

ಗಿಜ್‌ಬಾಟ್‌

ಗಿಜ್‌ಬಾಟ್‌

ಹೆಚ್ಚು ವೀಕ್ಷಣೆ ಪಡೆದ ವಾಟ್ಸಾಪ್‌ ವೈರಲ್‌ ವೀಡಿಯೋ!ಹೆಚ್ಚು ವೀಕ್ಷಣೆ ಪಡೆದ ವಾಟ್ಸಾಪ್‌ ವೈರಲ್‌ ವೀಡಿಯೋ!

ನೋಕಿಯಾ ಫೋನ್ಸ್‌: 'ಓಲ್ಡ್‌ ಈಸ್‌ ಗೋಲ್ಡ್‌ ' ಏಕೆ ಗೊತ್ತೇ?ನೋಕಿಯಾ ಫೋನ್ಸ್‌: 'ಓಲ್ಡ್‌ ಈಸ್‌ ಗೋಲ್ಡ್‌ ' ಏಕೆ ಗೊತ್ತೇ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

English summary
9 Android apps banned on Google Play Store. Readm more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X