Subscribe to Gizbot

ಜಿಯೋ ಬೆಂಬಲಕ್ಕೆ ನಿಂತ CCI: ಮತ್ತಷ್ಟು ಆಫರ್ ನಿರೀಕ್ಷೆ..!!!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ 4G voLTE ಸೇವೆಯನ್ನು ಆರಂಭಿಸುವ ಮೂಲಕ ಹೊಸದೊಂದು ಶಕೆಗೆ ನಾಂದಿ ಹಾಡಿತ್ತು. ದುಬಾರಿಯಾಗಿದ್ದ ಡೇಟಾ ಬೆಲೆಯನ್ನು ಶೇ.70ರಷ್ಟು ಕಡಿಮೆ ಮಾಡಿತ್ತು. ಗ್ರಾಹಕರಿಗೆ ಉಚಿತ ಕರೆ ಮಾಡುವ ಸೇವೆಯನ್ನು ನೀಡಲು ಮುಂದಾಗಿತ್ತು. ಇದನ್ನು ಪ್ರಶ್ನಿಸಿದ ಇತರೆ ಟೆಲಿಕಾಂ ಕಂಪನಿಗಳು ಜಿಯೋ ಸ್ಪರ್ಧಾತ್ಮಕವಾದ ಆಫರ್ ಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದ್ದವು.

ಜಿಯೋ ಬೆಂಬಲಕ್ಕೆ ನಿಂತ CCI: ಮತ್ತಷ್ಟು ಆಫರ್ ನಿರೀಕ್ಷೆ..!!!!

ಓದಿರಿ: ಕಾಸು ಕೊಟ್ರೂ ಜಿಯೋ ಸ್ಪೀಡ್ ಕಡಿಮೆ ಆಗಿದ್ಯಾ..? ಹಾಗಿದ್ರೆ ನೀವು ಸ್ಟೋರಿ ಓದಬೇಕು..!!

ಭಾರತೀಯ ಸ್ಪರ್ಧೆ ಆಯೋಗವೂ ಜಿಯೋ ನೀಡುತ್ತಿರುವ ಸೇವೆಯ ಬಗ್ಗೆ ಹೇಳಿಕೆಯನ್ನು ನೀಡಿದ್ದು, ಜಿಯೋ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಆಫರ್‌ ಗಳನ್ನು ನೀಡುತ್ತಿದೆ. ಇದರಲ್ಲಿ ಯಾವುದೇ ಸ್ಪರ್ಧಾತ್ಮಕವಲ್ಲದ ಆಫರ್ ಗಳು ಕಾಣಿಸಿಕೊಂಡಿಲ್ಲ. ಉಚಿತ ಕರೆ ಮಾಡುವ ಮತ್ತು ಉಚಿತ ಡೇಟಾ ಆಫರ್ ಗಳು ನಿಯಮಬದ್ಧವಾಗಿಯೇ ಇದೆ ಎಂದು CCI ತಿಳಿಸಿದೆ.

ಉಚಿತ ಆಫರ್ ನೀಡಿದ ತಕ್ಷಣ ಅದನ್ನು ಸ್ಪರ್ಧಾತ್ಮಕವಲ್ಲದ ಆಫರ್ ಎಂದು ಹೇಳಲು ಸಾಧ್ಯವಿಲ್ಲ, ಒಂದೇ ಮಾದರಿಯ ಆಫರ್ ಅನ್ನು ಕಾಪಿ ಮಾಡಿದ ಸಂದರ್ಭದಲ್ಲಿ ಮಾತ್ರವೇ ಅದನ್ನು ಸ್ಪರ್ಧಾತ್ಮಕವಲ್ಲದ ಆಫರ್ ಎಂದು ಕರೆಯಬಹುದು ಎಂದು ಭಾರ್ತಿ ಏರ್‌ಟೆಲ್ ನೀಡಿದ ದೂರಿಗೆ ಭಾರತೀಯ ಸ್ಪರ್ಧೆ ಆಯೋಗವೂ ಪ್ರತಿಕ್ರಿಯೇ ನೀಡಿದೆ.

ಜಿಯೋ ಬೆಂಬಲಕ್ಕೆ ನಿಂತ CCI: ಮತ್ತಷ್ಟು ಆಫರ್ ನಿರೀಕ್ಷೆ..!!!!

ಓದಿರಿ: ಆಧಾರ್ ಕಾರ್ಡ್ ಕಳೆದ ಹೋದರೆ ಮಾಡಬೇಕಾದ್ದೇನು..?

ಜಿಯೋ ನೀಡಿದ ಆಫರ್ ನಿಂದ ಟೆಲಿಕಾಂ ಲೋಕವೇ ನಡುಗಿತ್ತು, ಅಷ್ಟು ದಿನ ಗ್ರಾಹಕರಿಂದ ಕರೆ ಮತ್ತು ಡೇಟಾ ಮೇಲೆ ಹೆಚ್ಚಿನ ಹಣವನ್ನು ಸಂಗ್ರಹಿಸುತ್ತಿದ್ದರೂ. ಆದರೆ ಜಿಯೋ ಉಚಿತ ಆಫರ್ ಗಳನ್ನು ಮೇಲಿಂದ ಮೇಲೆ ನೀಡಲು ಶುರು ಮಾಡಿತು. ಎಲ್ಲಾ ಕಂಪನಿಗಳ ಗ್ರಾಹಕರು ಜಿಯೋ ಕಡೆಗೆ ಸಾಗಿದರು. ಇದರಿಂದ ನಷ್ಟ ಅನುಭವಿಸಿದ ಏರ್‌ಟೆಲ್, ವೊಡಾಫೋನ್, ಐಡಿಯಾ ಹಾಗೂ ಇತರೆ ಟೆಲಿಕಾಂ ಕಂಪನಿಗಳು ಜಿಯೋ ಮೇಲೆ ದೂರು ನೀಡಿದ್ದವು.

Read more about:
English summary
India's anti-trust regulator said on Friday offers for free voice and data from Reliance Jio Infocomm, a unit of Reliance Industries, did not amount to anti-competitive actions, rejecting a complaint by rival Bharti Airtel. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot