ಗೂಗಲ್ ಪ್ಲೇ ಸ್ಟೋರಿನಲ್ಲಿ ಇದೇ ಟಾಪ್‌ಆಪ್‌..? ಊಹಿಸಲು ಸಾಧ್ಯವಿಲ್ಲ..!

|

ದೇಶದಲ್ಲಿ ಮೊಬೈಲ್ ಡೇಟಾ ಬಳಕೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ದೇಶದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಹೀಗಾಗಿ 2017ನೇ ಸಾಲಿನಲ್ಲಿ ಗೂಗಲ್ ಪ್ಲೇ ಸ್ಟೋರಿನಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಕಂಡ ಆಪ್ ಗಳ ವಿವರವನ್ನು ಬಹಿರಂಗಗೊಳಿಸಿದೆ.

ಗೂಗಲ್ ಪ್ಲೇ ಸ್ಟೋರಿನಲ್ಲಿ ಇದೇ ಟಾಪ್‌ಆಪ್‌..? ಊಹಿಸಲು ಸಾಧ್ಯವಿಲ್ಲ..!

ಓದಿರಿ: ಅಮೆಜಾನ್‌ನಲ್ಲಿ ಐಫೋನ್ ಜಾತ್ರೆ: ಬೆಲೆಗಳೂ ಹೋಲ್‌ಸೇಲ್‌ನಲ್ಲಿ....!

ಕಳೆದ ಬಾರಿಗಿಂತ ಈ ಸಾಲಿನಲ್ಲಿ ಆಪ್‌ಗಳ ಸ್ಥಾನದಲ್ಲಿ ಭಾರೀ ಬದಲಾವಣೆಯನನ್ನು ಕಾಣಬಹುದಾಗಿದ್ದು, ವಿಶೇಷ ಎನ್ನುವಂತೆ ಫೋಟೋ ಎಡಿಟಿಂಗ್ ಆಪ್ ವೊಂದು ಪ್ರಥಮ ಸ್ಥಾನದಲ್ಲಿರುವುದು ಆಚ್ಚರಿಯನ್ನು ಮೂಡಿಸಿದೆ ಎನ್ನಲಾಗಿದೆ. ಈ ಸಾಲಿನಲ್ಲಿ ಭಾರತದಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ ಆಪ್‌ಗಳ ಪಟ್ಟಿ ಇಲ್ಲಿದೆ.

ಮೊದಲ ಸ್ಥಾನ ಫೋಟೋ ಎಡಿಟರ್:

ಮೊದಲ ಸ್ಥಾನ ಫೋಟೋ ಎಡಿಟರ್:

ಭಾರತದ ಫೇವರೆಟ್ ಆಪ್‌ಗಳಲ್ಲಿ ಮೊದಲ ಸ್ಥಾನದಲ್ಲಿ 'ಫೋಟೋ ಎಡಿಟರ್' ಆಪ್ ಕಾಣಿಸಿಕೊಂಡಿದ್ದು, ಇದಾದ ನಂತರದಲ್ಲಿ 'ಮೆಂಸೆಂಜರ್ ಲೈಟ್' ಆಪ್ ಸ್ಥಾನ ಮಾಡಿಕೊಂಡಿದೆ. ಮತ್ತೇ ಮೂರನೇ ಸ್ಥಾನದಲ್ಲಿ 'ಸೆಲ್ಪೀ ಕ್ಯಾಮೆರಾ' ಆಪ್ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಟಾಪ್ ಗೇಮಿಂಗ್ ಆಪ್‌ಗಳು:

ಟಾಪ್ ಗೇಮಿಂಗ್ ಆಪ್‌ಗಳು:

ಇದಲ್ಲದೇ 2017ರಲ್ಲಿ 'ಬಾಹುಬಲಿ ಗೇಮ್' ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಇದಲ್ಲದೇ ನಂತರದಲ್ಲಿ 'WWE' ಗೇಮ್, ಸೂಪರ್ ಮಾರಿಯೋ ರನ್, ಡಾಕ್ಟರ್ ಡ್ರೈವಿಂಗ್ 2 ಮತ್ತು ಪೋಕೆಮ್ಯಾನ್ ಡ್ಯುಯಲ್ ಗೇಮ್‌ಗಳು ಸ್ಥಾನ ಪಡೆದುಕೊಂಡಿದೆ.

ಟಾಪ್ ಮೂವಿ:

ಟಾಪ್ ಮೂವಿ:

ಬಾಲಿವುಡ್ ಮೂವಿ 'ಡಿಯರ್ ಜಿನ್ದಗಿ' ಚಿತ್ರ ಗೂಗಲ್ ಪ್ಲೇ ಸ್ಟೋರಿನಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದಾದ ನಂತರ ಮೋನಾ, ವಂಡರ್ ವುಮೇನ್, ದಿ ಬಾಸ್ ಬೇಬಿ ಚಿತ್ರಗಳು ಸ್ಥಾನವನ್ನು ಪಡೆದುಕೊಂಡಿದೆ.

How to create two accounts in one Telegram app (KANNADA)
ಟಾಪ್ ಬುಕ್ಸ್:

ಟಾಪ್ ಬುಕ್ಸ್:

ಟಾಪ್ ಬುಕ್ಸ್‌ನಲ್ಲಿ ಆನ್ 'ಅನ್‌ಸುಟಬಲ್ ಬಾಯ್‌' ಪುಸ್ತಕ ಮೊದಲ ಸ್ಥಾನದಲ್ಲಿದೆ. ಇದಾದ ನಂತರ 'ನ್ಯೂ ಮಿಡಿಯಾ ವಿಂಗ್ಸ್' ಎರಡನೇ ಸ್ಥಾನದಲ್ಲಿದೆ. ನಂತರ 'ಕುಲ್ಲಾ ಕುಲ್ಲಾ' ಬುಕ್ ಅನ್ನು ಕಾಣಬಹುದಾಗಿದೆ.

Best Mobiles in India

English summary
Best of 2017: Google Play announces the most popular apps in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X