Subscribe to Gizbot

ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ ಆಡಬಹುದಾದ ಟಾಪ್ ಕಾರ್ ರೇಸಿಂಗ್ ಗೇಮ್‌

Written By:

ಇಂದಿನ ದಿನದಲ್ಲಿ ಹೆಚ್ಚಿನ RAM ಇರುವ ಮತ್ತು ವೇಗದ ಪ್ರೋಸೆಸರ್ ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಅಲ್ಲದೇ ಹೆಚ್ಚಿನ ಗ್ರಾಫಿಕ್ಸ್ ಕಾರ್ಡ್ ಅನ್ನು ಈ ಫೋನುಗಳಲ್ಲಿ ಕಾಣಬಹುದಾಗಿದೆ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ ಆಡಬಹುದಾದ ಟಾಪ್ ಕಾರ್ ರೇಸಿಂಗ್ ಗೇಮ್‌

ಓದಿರಿ: ಪಾಸ್‌ಪೋರ್ಟ್ ಮಾಡಿಸುವುವವರಿಗೆ ಸಂತಸದ ವಿಚಾರ: ಪೊಲೀಸ್ ವೆರಿಫಿಕೇಷನ್ ಕಿರಿಕಿರಿ ತಪ್ಪಲಿದೆ..!

ಈ ಹಿನ್ನಲೆಯಲ್ಲಿ ಇಂತಹ ಸ್ಮಾರ್ಟ್‌ಫೋನ್ ಗಳಲ್ಲಿ ಆಡಬಹುದ ಉತ್ತಮ ಕಾರ್ ರೇಸಿಂಗ್ ಗೇಮ್‌ಗಳ ಬಗ್ಗೆ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೀಡ್ ಫಾರ್ ಸ್ಪೀಡ್ ನೋ ಲಿಮಿಟ್ಸ್:

ನೀಡ್ ಫಾರ್ ಸ್ಪೀಡ್ ನೋ ಲಿಮಿಟ್ಸ್:

ಕಾರ್‌ ರೇಸಿಂಗ್ ಗೇಮ್‌ಗಳಲ್ಲಿ ಮೊದಲ ಸ್ಥಾನದಲ್ಲಿರುವ ಈ ಗೇಮ್, ಹೆಚ್ಚಿನ ಗ್ರಾಫಿಕ್ಸ್ ಆನ್ನು ಹೊಂದಿದ್ದು, ಆಡಲು ಒಳ್ಳೆಯ ಅನುಭವನ್ನು ನೀಡಲಿದೆ. ಅಲ್ಲದೇ ರಿಯಲ್ ವರ್ಲ್ಡ್ ಕಾರ್‌ಗಳನ್ನು ಇಲ್ಲಿ ಬಳಸಿಕೊಳ್ಳಬಹುದಾಗಿದೆ.

ಆಸ್ಫಾಲ್ಟ್ 8 ಏರ್‌ಬಾರ್ನಿ:

ಆಸ್ಫಾಲ್ಟ್ 8 ಏರ್‌ಬಾರ್ನಿ:

ಇದು ಸಹ ಹೆಚ್ಚು ಪ್ರಖ್ಯಾತಿಯನ್ನು ಪಡೆದಿರುವ ಗೇಮ್ ಆಗಿದ್ದು, ಆಸ್ಫಾಲ್ಟ್ ಸರಣಿಯ ಗೇಮ್‌ನಲ್ಲಿ ಹೆಚ್ಚು ಗ್ರಾಫೀಕ್ಸ್ ಹೊಂದಿರುವ ಗೇಮ್ ಇದಾಗಿದೆ. ಹಾರ್ಡ್‌ ಕೋರ್ ರೇಸಿಂಗ್ ಗೇಮ್ ಪ್ರಿಯರಿಗೆ ಈ ಗೇಮ್ ಇಷ್ಟವಾಗಲಿದೆ.

ಕಾಲಿನ್ ಮೆಕ್‌ರೇ ರ್ಯಾಲಿ:

ಕಾಲಿನ್ ಮೆಕ್‌ರೇ ರ್ಯಾಲಿ:

ಇಂದೊಂದು ಆಫ್‌ ರೋಡ್ ರೇಸಿಂಗ್ ಗೇಮ್ ಆಗಿದ್ದು, ಡರ್ಟ್ ಹಾರ್ಡ್ ಗೇಮ್ ಆಗಿದೆ. ಇದು ಕಂಪ್ಯೂಟರ್ ವರ್ಷನ್ ನಲ್ಲಿಯೂ ಲಭ್ಯವಿದೆ ಎನ್ನಲಾಗಿದೆ. ಈ ಗೇಮ್‌ನಲ್ಲಿ ಅಷ್ಟಾಗಿ ಗ್ರಾಫಿಕ್ಸ್ ಗಳನ್ನು ಬಳಕೆ ಮಾಡಿಕೊಂಡಿಲ್ಲ.

GT ರೇಸಿಂಗ್ 2:

GT ರೇಸಿಂಗ್ 2:

ಇದು ಸಹ ಇಂದಿನ ದಿನದಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದಿರುವ ರೇಸಿಂಗ್ ಗೇಮ್ ಆಗಿದೆ. ಇದನ್ನು ಆನ್‌ಲೈನಿನಲ್ಲಿಯೂ ಆಡಬಹುದಾಗಿದೆ. ಇದು ಸಹ ಆಟವಾಡಲು ಉತ್ತಮ ಅನುಭವನ್ನು ನೀಡಲಿದೆ.

ರೇಸಿಂಗ್ ಥಂಡರ್ ಫ್ರೀ:

ರೇಸಿಂಗ್ ಥಂಡರ್ ಫ್ರೀ:

ಆಂಡ್ರಾಯ್ಡ್ ಡಿವೈಸ್‌ನಲ್ಲಿ ಆಡಬಹುದಾದ ಉತ್ತಮ ಗೇಮ್ ಇದಾಗಿದೆ. 3D ಎಫೆಕ್ಟ್‌ನಲ್ಲಿ ಇದು ಕಾರ್ಯನಿರ್ವಹಿಸಲಿದೆ. ಇದು ಹಾರ್ಡ್‌ಕೋರ್ ರೇಸಿಂಗ್ ಗೇಮ್ ಆಗಿದೆ. ಒಮ್ಮೆ ಇದನ್ನು ಆಡಲು ಶುರು ಮಾಡಿದರೆ ಬಿಡುವ ಮನಸೇ ಆಗುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Today we are going to share an awesome article on gaming. This post is compiled of best Android Car racing Games which you can play on your Android smartphone. to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot