ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್‌ ವೇಗ ಹೆಚ್ಚಿಸುವ 6 ಆಂಡ್ರಾಯ್ಡ್‌ ಆಪ್‌ಗಳು

By Suneel
|

ಭಾಗಶಃ ಸ್ಮಾರ್ಟ್‌ಫೋನ್‌ ಬಳಸದ ಮನೆಗಳಿಲ್ಲಾ ಎನ್ನಬಹುದಾದ ಕಾಲವಿದು. ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ ಇಂದು ಬಹುಸಂಖ್ಯಾತರು ಇತರರಿಗೆ ಕರೆ ಮಾಡಲು ಕರೆನ್ಸಿ ಇಟ್ಟುಕೊಳ್ಳುತ್ತಾರೋ ಇಲ್ಲವೋ!! ಆದ್ರೆ ವಾಟ್ಸಾಪ್‌ ಚಾಟಿಂಗ್‌, ಫೇಸ್‌ಬುಕ್‌ ಬ್ರೌಸಿಂಗ್‌ಗಾಗಿ ಮೊಬೈಲ್‌ ಇಂಟರ್ನೆಟ್‌ ಪ್ಯಾಕ್‌ ಅಂತು ಹಾಕಿಸಿರುತ್ತಾರೆ. ಇಂಟರ್ನೆಟ್ ಸೇವೆಯ ಇನ್ನೊಂದು ಉಪಯೋಗವೆಂದರೆ ವಾಟ್ಸಾಪ್‌ನಲ್ಲಿ ಕರೆಯನ್ನು ಸಹ ಮಾಡಬಹುದು. ಫೇಸ್‌ಬುಕ್‌ನಲ್ಲಿ ವೀಡಿಯೋ ಕರೆ ಮಾಡಬಹುದು. ಕರೆ ಮಾಡಲು ಇಂಟರ್ನೆಟ್‌ ಸಂಪರ್ಕವಿದ್ದರೆ ಸಾಕು. ಇದೆಲ್ಲಾ ಓಕೆ... ಆದ್ರೆ ಕೆಲವೊಮ್ಮೆ ಇಂಟರ್ನೆಟ್ ಸಂಪರ್ಕ ವೇಗ ಅಧಿಕವಾಗಿ ಕಡಿಮೆ ಇರುತ್ತದಲ್ಲಾ. ಇದಕ್ಕೇನು ಪರಿಹಾರ ಎಂಬುದು ಹಲವರ ಸಮಸ್ಯೆ, ಪ್ರಶ್ನೆ ಎರಡು ಸಹ.

ಬಹುಶಃ ದಿನನಿತ್ಯ ಇಂಟರ್ನೆಟ್‌ ಬಳಸುವವರಿಗೆ ಇಂಟರ್ನೆಟ್‌ ನಿಧಾನವಾಗಿ ಸಂಪರ್ಕಗೊಳ್ಳುವ, ವೆಬ್‌ಪೇಜ್‌ ಬೇಗ ಲೋಡ್‌ ಆಗದಿರುವ ಸಮಸ್ಯೆಗಳ ಅನುಭವ ಇರುತ್ತದೆ. ಇಂಟರ್ನೆಟ್‌ ಸಂಪರ್ಕ ವೇಗದ ಸಮಸ್ಯೆ ಎದುರಿಸುತ್ತಿರುವ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಟೆಕ್ನಾಲಜಿ ಮಾಹಿತಿ ನೀಡುವ ಗಿಜ್‌ಬಾಟ್‌ ಒಂದು ಸಿಹಿ ಸುದ್ದಿ ನೀಡುತ್ತಿದೆ. ಟೆಕ್ನಾಲಜಿ ಅಭಿವೃದ್ದಿ ಎಂಬುದು ನಿರಂತರ ಬೀಸುವ ಗಾಳಿ ಇದ್ದ ಹಾಗೆ ಎಂಬುದು ಹಲವರಿಗೆ ತಿಳಿದಿರುವ ವಿಷಯ. ಅಂತೆಯೇ ಇಂದಿನ ಲೇಖನದಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ತಮ್ಮ ಮೊಬೈಲ್‌ಗಳಲ್ಲಿ ಇಂಟರ್ನೆಟ್‌ ಸಂಪರ್ಕ ವೇಗಗೊಳಿಸಲು ಸಹಾಯವಾಗುವ ಅತ್ಯುತ್ತಮವಾದ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳನ್ನು ತಿಳಿಸುತ್ತಿದ್ದೇವೆ. ಈ ಆಪ್‌ಗಳು ನಿಮ್ಮ ಮೊಬೈಲ್‌ನಲ್ಲಿ ಇಂಟರ್ನೆಟ್‌ ಸಂಪರ್ಕವನ್ನು ಅತ್ಯಧಿಕವಾಗಿ ವೇಗಗೊಳಿಸುವುದರಲ್ಲಿ ಸಂಶಯವಿಲ್ಲ. ಲೇಖನದ ಸ್ಲೈಡರ್‌ನಲ್ಲಿ ಅಪ್ಲಿಕೇಶನ್‌ಗಳು ಯಾವುವು ಎಂದು ತಿಳಿಯಿರಿ ಹಾಗೂ ನಾವು ನೀಡುವ ಆಪ್‌ ಲಿಂಕ್‌ಗೆ ಹೋಗಿ ಅಪ್ಲಿಕೇಶನ್‌ ಸಹ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದಾಗಿದೆ.

1

1

ಸ್ವಯಂಚಾಲಿತವಾಗಿ ಕೆಲವು ಆಜ್ಞೆಗಳನ್ನು "ಇಂಟರ್ನೆಟ್‌ ಬೂಸ್ಟರ್‌ ಮತ್ತು ಆಪ್ಟಿಮೈಜರ್" ಅಪ್ಲಿಕೇಶನ್‌ ಬ್ರೌಸರ್‌ಗೆ ನೀಡಿ ಇಂಟರ್ನೆಟ್‌ ವೇಗವನ್ನು ಹೆಚ್ಚು ಮಾಡುತ್ತದೆ. ಅಲ್ಲದೇ ಇಂಟರ್ನೆಟ್‌ ಸಂಪರ್ಕ ವೇಗಗೊಳ್ಳಲು ಸ್ವಯಂಚಾಲಿತವಾಗಿ RAM ಶೇಕರಣೆಯನ್ನು ಸ್ವಚ್ಛಗೊಳಿಸುವುದು, ಅನುಪಯುಕ್ತ ವೆಬ್‌ ಸಂಗ್ರಹವನ್ನು ತೆಗೆದು ಹಾಕಿ ಇಂಟರ್ನೆಟ್‌ ವೇಗಗೊಳಿಸುತ್ತದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

2

2

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ "ಫಾಸ್ಟರ್‌ ಇಂಟರ್ನೆಟ್‌ 2X " ಅಪ್ಲಿಕೇಶನ್‌ ವಿಶೇಷ ಸ್ಕ್ರಿಫ್ಟ್‌ಗಳನ್ನು ಬಳಸಿಕೊಂಡು ಸಿಗ್ನಲ್‌ಗಳನ್ನು ಅಭಿವೃದ್ದಿ ಪಡಿಸುವುದರೊಂದಿಗೆ ಇಂಟರ್ನೆಟ್‌ ಸಂಪರ್ಕ ವೇಗಗೊಳಿಸುತ್ತದೆ. ರೂಟ್ ಆಗಿರುವ ಮತ್ತು ರೂಟ್‌ ಆಗದಿರುವ ಎರಡು ರೀತಿಯ ಫೋನ್‌ಗಳಲ್ಲೂ ಸಹ ಇಂಟರ್ನೆಟ್ ವೇಗಗೊಳಿಸುತ್ತದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

3

3

ಮೊಬೈಲ್‌ ನೆಟ್‌ವರ್ಕ್‌ ಮತ್ತು ವೈಫೈ ನೆಟ್‌ವರ್ಕ್‌ ಎರಡರಲ್ಲೂ ಸಹ ನೀವು ಇಂಟರ್ನೆಟ್ ಸಂಪರ್ಕ ನಿಧಾನವಿರುವ ಅನುಭವ ಪಡೆದಿದ್ದರೆ "ಉಚಿತ ಇಂಟರ್ನೆಟ್‌ ಸ್ಪೀಡ್‌ ಬೂಸ್ಟರ್‌" ಆಪ್‌ ನಿಮಗೆ ಉತ್ತಮ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅನುಪಯುಕ್ತ ಬ್ಯಾಗ್ರೌಂಡ್‌ ಕಾರ್ಯಗಳನ್ನು ನಿಲ್ಲಿಸಿ ಅತ್ಯುತ್ತಮವಾದ ಇಂಟರ್ನೆಟ್‌ ವೇಗ ನೀಡುತ್ತದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

4

4

"ಇಂಟರ್ನೆಟ್‌ ಸ್ಪೀಡ್‌ ಬೂಸ್ಟರ್‌ 3G/4G" ಅಪ್ಲಿಕೇಶನ್‌ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವೀಡಿಯೋ ಮತ್ತು ವೆಬ್‌ಪೇಜ್‌ ಶೀಘ್ರ ಲೋಡ್‌ಗೆ ಶೇಕಡ 30-40 ಹಿಂದಿನ ವೇಗಕ್ಕಿಂತಲೂ ಅಧಿಕಗೊಳಿಸುತ್ತದೆ. ಅಲ್ಲದೇ ಡೇಟಾ ಪ್ಯಾಕೇಜ್‌ ದೀರ್ಘ ಬಾಳಿಕೆಗೆ ಸಹಾಯ ಮಾಡುತ್ತದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

5

5

"ಇಂಟರ್ನೆಟ್‌ ಸ್ಪೀಡ್‌ ಮೀಟರ್ ಲೈಟ್‌" ಅಪ್ಲಿಕೇಶನ್‌ ಸ್ಮಾರ್ಟ್‌ಫೋನ್‌ ಸ್ಕ್ರೀನ್'ನ ಸ್ಟೇಟಸ್‌ ಬಾರ್‌ನಲ್ಲಿಯೇ ಇಂಟರ್ನೆಟ್ ವೇಗವನ್ನು ಪ್ರದರ್ಶಿಸುತ್ತದೆ. ರಿಯಲ್‌ ಟೈಮ್‌ ವೇಗದ ಅಪ್‌ಡೇಟ್‌ ಸ್ಟೇಟಸ್‌ ಅನ್ನು ತೋರಿಸುತ್ತದೆ. ದಿನನಿತ್ಯದ ಇಂಟರ್ನೆಟ್‌ ಟ್ರಾಫಿಕ್‌ ಬಳಕೆಯನ್ನು ನೀಡುತ್ತದೆ. ಇವು ಇತರ ಎಲ್ಲಾ ಅಪ್ಲಿಕೇಶನ್‌ಗಳಿಗಿಂತಲೂ ಉತ್ತಮವಾದುದು.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

6

6

"ಇಂಟರ್ನೆಟ್‌ ಸ್ಪೀಡ್‌ ಬೂಸ್ಟರ್" ಅಪ್ಲಿಕೇಶನ್‌ ಉಚಿತ ಅಪ್ಲಿಕೇಶನ್‌. ವೈಫೈನಲ್ಲಿ ನಿಧಾನವಾದ ಇಂಟರ್ನೆಟ್ ಅನುಭವ ಪಡೆಯುತ್ತಿದ್ದರೆ ಇದು ಇಂಟರ್ನೆಟ್‌ ವೇಗಕ್ಕಾಗಿ ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್‌'ನ ಬಳಸಲು ಸರಳವಾಗಿದೆ. ಬ್ಯಾಗ್ರೌಂಡ್‌ನಲ್ಲಿ ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿ ಇಂಟರ್ನೆಟ್‌ ವೇಗದಲ್ಲಿ ಉತ್ತಮ ಅನುಭವ ನೀಡುತ್ತದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ವೇಗಗೊಳಿಸುವುದು ಹೇಗೆ?ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ವೇಗಗೊಳಿಸುವುದು ಹೇಗೆ?

ಯಾವುದೇ ಸಿನಿಮಾಗಳಿಗೆ VLC ಮೀಡಿಯಾ ಪ್ಲೇಯರ್‌ನಲ್ಲಿ ಸಬ್‌ಟೈಟಲ್‌ ಪಡೆಯುವುದು ಹೇಗೆ?ಯಾವುದೇ ಸಿನಿಮಾಗಳಿಗೆ VLC ಮೀಡಿಯಾ ಪ್ಲೇಯರ್‌ನಲ್ಲಿ ಸಬ್‌ಟೈಟಲ್‌ ಪಡೆಯುವುದು ಹೇಗೆ?

ಸೆಂಡರ್‌ಗೆ ತಿಳಿಯದಂತೆ ವಾಟ್ಸಾಪ್‌ ಮೆಸೇಜ್‌ ಓದುವುದು ಹೇಗೆಸೆಂಡರ್‌ಗೆ ತಿಳಿಯದಂತೆ ವಾಟ್ಸಾಪ್‌ ಮೆಸೇಜ್‌ ಓದುವುದು ಹೇಗೆ

ಏರ್‌ಟೆಲ್‌ ಬಳಕೆದಾರರು ಉಚಿತ ಇಂಟರ್ನೆಟ್‌ ಪಡೆಯುವುದು ಹೇಗೆ?ಏರ್‌ಟೆಲ್‌ ಬಳಕೆದಾರರು ಉಚಿತ ಇಂಟರ್ನೆಟ್‌ ಪಡೆಯುವುದು ಹೇಗೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Best Apps to Increase Internet Speed In Android. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X