ಬ್ರೇಕಿಂಗ್ ನ್ಯೂಸ್!..ಜಿಯೋವಿನ ಮತ್ತೊಂದು ಹೊಸ ಸೇವೆ ಆರಂಭ!

|

ರಿಲಯನ್ಸ್ ಜಿಯೋ ಮಾಲಿಕ ಮುಖೇಶ್ ಅಂಬಾನಿಯ ತಲೆಯಲ್ಲಿ ಏನೇನೆಲ್ಲಾ ಇರಬಹುದು ಎಂಬ ಊಹೆಗೂ ಸಿಗದಂತಹ ಮತ್ತೊಂದು ಜಿಯೋ ಸೇವೆ ಪರಿಚಯವಾಗಿದೆ. ಜಿಯೋ ಹೆಸರಿನಲ್ಲಿ ದೇಶ ಹಾಗೂ ವಿಶ್ವ ಮಾರುಕಟ್ಟೆಗೆ ಹೊಸದಾಗಿ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್-ಆಧಾರಿತ ಸೇವೆ ರೂಪದಲ್ಲಿ 'ಜಿಯೋ ನ್ಯೂಸ್' ಎಂಬ ಡಿಜಿಟಲ್ ಉತ್ಪನ್ನವನ್ನು ಪರಿಚಯವಾಗಿದೆ. ಈ ಮೂಲಕ ಭಾರತ ಮತ್ತು ವಿಶ್ವ ಸುದ್ದಿ ಮಾರುಕಟ್ಟೆಗೆ ರಿಲಯನ್ಸ್ ಜಿಯೋ ನೇರವಾಗಿ ಪ್ರವೇಶ ಮಾಡಿದೆ.

ಹೌದು, ಜಿಯೋ ಹೆಸರಿನಲ್ಲಿ ಹೊಸ ಹೊಸ ಉತ್ಪನ್ನಗಳ ಪರಿಚಯಿಸುತ್ತಿರುವ ರಿಲಯನ್ಸ್ ಜಿಯೋ, ಇದೀಗ 12ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ 'ಜಿಯೋ ನ್ಯೂಸ್' ಅನ್ನು ಆರಂಭಿಸಿದೆ. ಈ ಆಪ್ ಬಳಸುವವರು ಇತ್ತೀಚಿನ ಸುದ್ದಿಗಳನ್ನು ಪಡೆಯುವುದಲ್ಲದೇ. ಬ್ರೇಕಿಂಗ್ ನ್ಯೂಸ್, ಲೈವ್ ಟಿವಿ, ವೀಡಿಯೋ ನೋಡಬಹುದು, ಪತ್ರಿಕೆಗಳನ್ನು ಓದುವುದು ಮತ್ತು ಇನ್ನು ಹೆಚ್ಚಿನ ಸೇವೆಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಒಂದೇ ಆಪ್‌ನಲ್ಲಿ ಸರ್ವವೂ ದೊರೆಯಲಿದೆ ಎಂದು ಜಿಯೋ ತಿಳಿಸಿದೆ.

ಬ್ರೇಕಿಂಗ್ ನ್ಯೂಸ್!..ಜಿಯೋವಿನ ಮತ್ತೊಂದು ಹೊಸ ಸೇವೆ ಆರಂಭ!

ಜಿಯೋ ನ್ಯೂಸ್ 12ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ತನ್ನ ಬಳಕೆದಾರರಿಗೆ ತಮ್ಮದೇ ಭಾಷೆಯಲ್ಲಿ ಸುದ್ದಿಯನ್ನು ಪಡೆಯಲು ಅವಕಾಶವನ್ನು ಮಾಡಿಕೊಟ್ಟಿದೆ. ಜಿಯೋ ನ್ಯೂಸ್ ಆಪ್ ನಲ್ಲಿ ಭಾರತ ಮತ್ತು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ 150+ ಲೈವ್ ನ್ಯೂಸ್ ಚಾನಲ್ಗಳು, 800+ ಮ್ಯಾಗಜೀನ್ಗಳು, 250+ ಸುದ್ದಿಪತ್ರಿಕೆಗಳು, ಪ್ರಸಿದ್ಧ ಬ್ಲಾಗ್ಗಳು ಮತ್ತು ಸುದ್ದಿ ವೆಬ್‌ಸೈಟ್‌ಗಳನ್ನು ನೋಡಬಹುದು ಎಂದು ಜಿಯೋ ಹೇಳಿಕೊಂಡಿದೆ.

ಜಿಯೋ ನ್ಯೂಸ್ ಆಪ್‌ ಜಿಯೋ ಎಕ್ಸ್‌ಪ್ರೆಸ್ ನ್ಯೂಸ್, ಜಿಯೋ ಮ್ಯಾಗ್ಸ್ ಮತ್ತು ಜಿಯೋ ನ್ಯೂಸ್ ಪೇಪರ್ಸ್ ಆಪ್‌ಗಳನ್ನು ಒಳಗೊಂಡ ಸೇವೆಯಾಗಲಿದ್ದು, ಇದರಲ್ಲಿ ಹೆಚ್ಚುವರಿಯಾಗಿ ಲೈವ್ ಟಿವಿ ಮತ್ತು ವೀಡಿಯೋಗಳು ಕೊಡುಗೆಯಾಗಿ ದೊರೆಯಲಿದೆ. ತಮ್ಮ ಭಾಷೆಯಲ್ಲಿಯೇ ಆದ್ಯತೆಗಳನ್ನು ಆರಿಸುವ ಮೂಲಕ ಅವರ ಓದುವ ಅನುಭವವನ್ನು ವೈಯಕ್ತೀಕರಿಸಲು ಜಿಯೋ ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದಾಗಿ ಸಂಸ್ಥೆ ಮಾಹಿತಿ ನೀಡಿದೆ.

ಬ್ರೇಕಿಂಗ್ ನ್ಯೂಸ್!..ಜಿಯೋವಿನ ಮತ್ತೊಂದು ಹೊಸ ಸೇವೆ ಆರಂಭ!

2019ರ ಲೋಕಸಭಾ ಚುನಾವಣೆ,ಐಪಿಎಲ್ 2019, ಕ್ರಿಕೆಟ್ ವಿಶ್ವಕಪ್ 2019ರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜಿಯೋ ನ್ಯೂಸ್ ಮೂಲಕ ಪಡೆಯಬಹುದಾಗಿದ್ದು, ಇದಲ್ಲದೇ ಭಾರತ ಮತ್ತು ವಿಶ್ವದಾದ್ಯಂತದ ನಡೆಯುವ ಪ್ರಮುಖ ಘಟನೆಗಳನ್ನು ಈ ಆಪ್ ಮೂಲಕವೇ ತಿಳಿದುಕೊಳ್ಳಲು ಅವಕಾಶವಿದೆ. ಜಿಯೋ ಬಳಕೆದಾರರಲ್ಲದವರಿಗೂ ಪ್ರೀಮಿಯಮ್ ಆಯ್ಕೆಯ ಮೂಲಕ ಜಿಯೋ ನ್ಯೂಸ್ ಆಪ್ ಬಳಕೆಗೆ ಅವಕಾಶವನ್ನು ಮಾಡಿಕೊಟ್ಟಿದ್ದು, ಬಳಕೆದಾರರು ಪ್ಲೇ ಸ್ಟೋರ್ ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಓದಿರಿ: 'ಒನ್‌ಪ್ಲಸ್ 6T' ಭಾರೀ ಬೆಲೆ ಕಡಿತ!..ಪ್ರೀಮಿಯಂ ಫೋನ್ ಖರೀದಿಗೆ ಇದು ಬೆಸ್ಟ್ ಟೈಮ್!

Best Mobiles in India

English summary
Breaking news, live TV, blogs. Reliance enters online news business with JioNews app. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X