ಉಚಿತವಾಗಿ ಕ್ರೆಡಿಟ್‌ ಸ್ಕೋರ್‌ ಚೆಕ್‌ ಮಾಡಬೇಕೆ?..ಹಾಗಿದ್ರೆ, ಈ ಆಪ್ಸ್‌ ನೋಡಿ!

|

ಗ್ರಾಹಕರು ಕ್ರೆಡಿಟ್ ಆಧಾರದ ಮೇಲೆ ಯಾವುದೇ ವಹಿವಾಟು ಮಾಡಲು ಬಯಸಿದರೆ, ಅವರ ಕ್ರೆಡಿಟ್ ಕಾರ್ಡ್ ಸ್ಕೋರ್ ಪ್ರಮುಖ ಅಂಶವಾಗಿ ಪರಿಗಣಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ನಿಮ್ಮ ಸಾಲವನ್ನು ಸಾಲದಾತರಿಗೆ ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಉತ್ತಮ ಕ್ರೆಡಿಟ್‌ ಸ್ಕೋರ್ ಇದ್ದರೆ, ನಿಮ್ಮ ಬಗ್ಗೆ ಸಾಲ ನೀಡುವವರಲ್ಲಿ ನಂಬಿಕೆಯನ್ನು ಮೂಡಿಸುತ್ತದೆ. ಹೀಗಾಗಿ ಸಾಲ ಪಡೆಯುವಾಗ ನಿಮ್ಮ ಕ್ರೆಡಿಟ್‌ ಸ್ಕೋರ್ ಮಾಹಿತಿ ತಿಳಿಯುವುದು ಅಗತ್ಯ.

ಕ್ರೆಡಿಟ್‌ ಸ್ಕೋರ್

ಕ್ರೆಡಿಟ್‌ ಸ್ಕೋರ್ ಎಂಬುದು ಮೂರು-ಅಂಕಿಯ ಸಂಖ್ಯೆಯಾಗಿದ್ದು, ಅದು ಗ್ರಾಹಕರ ಕ್ರೆಡಿಟ್ ಕಾರ್ಡ್ ಹಿಸ್ಟರಿ ಅನ್ನು ಸಾರಾಂಶಗೊಳಿಸುತ್ತದೆ. ಕ್ರೆಡಿಟ್‌ ಸ್ಕೋರ್ ಹೆಚ್ಚಿನ ಅಂಕದಲ್ಲಿದ್ದರೆ, ಅದು ಉತ್ತಮ ಎಂಬುದನ್ನು ಸೂಚಿಸುತ್ತದೆ. ಗ್ರಾಹಕರು ಸಾಲ ಪಡೆದ್ದಿದ್ದು, ಆ ಸಾಲವನ್ನು ನಿಗದಿಯಂತೆ ಸರಿಯಾದ ಸಮಯಕ್ಕೆ ಮರುಪಾವತಿಸಿದ್ದರೆ, ಉತ್ತಮ ಅಂಕ ಇರುತ್ತದೆ. ಕೆಲವು ವರದಿಗಳ ಪ್ರಕಾರ 670 ಕ್ಕಿಂತ ಅಧಿಕ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವುದು ಉತ್ತಮ. ಒಂದು ವೇಳೆ 800 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಇದ್ದರೆ, ಅದು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ

ಆನ್‌ಲೈನ್‌ನಲ್ಲಿ

ಇನ್ನು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನೀವು ಉಚಿತವಾಗಿ ಹಾಗೂ ಸುಲಭವಾಗಿ ಚೆಕ್‌ ಮಾಡಬಹುದಾಗಿದೆ. ಕ್ರೆಡಿಟ್ ಸ್ಕೋರ್ ಅನ್ನು ಆನ್‌ಲೈನ್‌ನಲ್ಲಿ ಚೆಕ್ ಮಾಡಬಹುದು, ಅದಕ್ಕಾಗಿ ಕೆಲವು ಕೆಲವು ಆಪ್‌ಗಳು ಸಹ ಇವೆ. ಉಚಿತವಾಗಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡುವ ಕೆಲವು ಅಪ್ಲಿಕೇಶನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಪೇಟಿಎಮ್‌ (Paytm)

ಪೇಟಿಎಮ್‌ (Paytm)

ಪೇಟಿಎಮ್‌ (Paytm) ಆಪ್‌ ಬಗ್ಗೆ ನಿಮಗೆ ಗೊತ್ತೆ ಇದೆ. ಇದು ಭಾರತದ ಪ್ರಮುಖ ಯುಪಿಐ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಪೇಟಿಎಮ್‌ ಮೂಲಕವು ಸಹ ಉಚಿತವಾಗಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡಬಹುದಾಗಿದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಪೇಟಿಎಮ್‌ ಅಪ್ಲಿಕೇಶನ್‌ನಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಕೆಲವು ಸೆಕೆಂಡುಗಳ ಕಾಲ ಕಾಯಿರಿ. ಅಪ್ಲಿಕೇಶನ್‌ನಲ್ಲಿಯೇ ನೀವು ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳಿಗೆ ಸಹ ಅರ್ಜಿ ಸಲ್ಲಿಸಬಹುದು. ಪೇಟಿಎಮ್‌ ನಲ್ಲಿ, ನೀವು ಪ್ರತಿ ವರ್ಷ 12 ಉಚಿತ ವರದಿಗಳನ್ನು ಪಡೆಯಬಹುದು.

ಫಿಟ್.ಕ್ರೆಡಿಟ್ (Fit.Credit)

ಫಿಟ್.ಕ್ರೆಡಿಟ್ (Fit.Credit)

ಫಿಟ್.ಕ್ರೆಡಿಟ್ (Fit.Credit) ಎಂಬುದು ಕ್ರೆಡಿಟ್ ಸ್ಕೋರ್ ಅನ್ನು ನೋಡುವ ಜೊತೆಗೆ ನಿಮ್ಮ ಒಟ್ಟಾರೆ ಆರ್ಥಿಕ ಮಾಹಿತಿ ತಿಳಿಯುವ ಉಚಿತ ಅಪ್ಲಿಕೇಶನ್ ಆಗಿದೆ. ಇದು ನಿಮ್ಮ ಕ್ರೆಡಿಟ್ ವರದಿಯನ್ನು 30 ಸೆಕೆಂಡುಗಳಲ್ಲಿ ರಚಿಸುತ್ತದೆ ಮತ್ತು ನಿಮ್ಮ ಕ್ರೆಡಿಟ್ ಅರ್ಹತೆಯ ಸಾರಾಂಶವನ್ನು ನಿಮಗೆ ಒದಗಿಸುತ್ತದೆ. ಅದಕ್ಕಾಗಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಸೈನ್ ಇನ್ ಮಾಡಲು ನಿಮಗೆ ಕಳುಹಿಸಲಾದ ಓಟಿಪಿ ಅನ್ನು ಬಳಸಿ, ನಿಮ್ಮ ಪ್ಯಾನ್‌ ವಿವರಗಳನ್ನು ನಮೂದಿಸಿ ಮತ್ತು 30 ಸೆಕೆಂಡುಗಳ ಕಾಲ ಕಾಯಿರಿ. ಬಳಿಕ ಕ್ರೆಡಿಟ್ ಸ್ಕೋರ್‌ಗಳು ಮತ್ತು ವರದಿಗಳಿಗೆ ಮಾತ್ರವಲ್ಲದೆ ಹಲವಾರು ಇತರ ವಿಷಯಗಳಿಗೆ ಪ್ರವೇಶವನ್ನು ನೀಡುತ್ತದೆ.

ಕ್ರೆಡ್‌ (CRED)

ಕ್ರೆಡ್‌ (CRED)

ಕ್ರೆಡ್‌ (CRED) ಎಂಬುದು ಉಚಿತ ಅಪ್ಲಿಕೇಶನ್ ಆಗಿದ್ದು, ಅದು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಪಾವತಿಸಲು ನಿಮಗೆ ರೀವಾರ್ಡ್‌ಗಳನ್ನು ಲಭ್ಯ ಮಾಡುತ್ತದೆ. ಅಷ್ಟೇ ಅಲ್ಲ, ಕ್ರೆಡ್‌ ನೊಂದಿಗೆ, ನಿಮ್ಮ ಕ್ರೆಡಿಟ್ ಕಾರ್ಡ್ ಸ್ಕೋರ್ ಅನ್ನು ನೀವು ತಕ್ಷಣವೇ ಉಚಿತವಾಗಿ ಚೆಕ್ ಮಾಡಬಹುದು. ಅದಕ್ಕಾಗಿ ನೀವು ನಿಮ್ಮ ವಿವರಗಳನ್ನು ಸಲ್ಲಿಸುವುದು ಮತ್ತು ಕ್ರೆಡ್‌ನ ಕ್ರೆಡಿಟ್ ಸ್ಕೋರ್ ಪರೀಕ್ಷಕರು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಲೆಕ್ಕ ಹಾಕುತ್ತಾರೆ ಮತ್ತು ಅದನ್ನು ನಿಮಗೆ ಕಳುಹಿಸುತ್ತಾರೆ.

Best Mobiles in India

English summary
Few Best Apps To Check Credit Score For Free In India 2023.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X