ಸ್ಮಾರ್ಟ್‌ಫೋನಿನಲ್ಲಿ ವಿಡಿಯೊ ಎಡಿಟ್‌ ಮಾಡಬೇಕೆ?.ಇಲ್ಲವೇ ನೋಡಿ ಬೆಸ್ಟ್ ಆಪ್ಸ್.!

|

ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಜಗತ್ತುನ್ನು ಚಿಕ್ಕದಾಗಿಸಿದೆ ಎಂದರೇ ತಪ್ಪಾಗಲಾರದು, ಏಕೆಂದರೇ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಾದರೂ ಕ್ಷಣದಲ್ಲಿ ತಿಳಿದುಕೊಳ್ಳಬಹುದಾಗಿದ್ದು, ಅದಕ್ಕಾಗಿ ಹಲವಾರು ಆಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ. ಏನೇ ಕೆಲಸ ಮಾಡಬೇಕಿದ್ದರೂ ಅದಕ್ಕೆ ಸಂಬಂದಿಸಿದ ಆಪ್‌ ಅನ್ನು ಹುಡುಕುತ್ತಾರೆ. ಹಾಗೇ ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೊ ಎಡಿಟ್ ಮಾಡಲು ಆಪ್‌ಗಳ ಮೋರೆ ಹೋಗುತ್ತಿದ್ದಾರೆ.

ಸ್ಮಾರ್ಟ್‌ಫೋನಿನಲ್ಲಿ ವಿಡಿಯೊ ಎಡಿಟ್‌ ಮಾಡಬೇಕೆ?.ಇಲ್ಲವೇ ನೋಡಿ ಬೆಸ್ಟ್ ಆಪ್ಸ್.!

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೊ ಎಡಿಟಿಂಗ್ ಮಾಡುವುದು ಹೆಚ್ಚಾಗಿ ಕಂಡುಬರುತ್ತಿದ್ದು, ಗ್ಯಾಲರಿಯಲ್ಲಿನ ಫೋಟೊಗಳನ್ನು ಬಳಸಿಕೊಂಡು ಸ್ವಂತ ತಾವೇ ಪುಟ್ಟ ವಿಡಿಯೊಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆತ್ಮೀಯರ ಹುಟ್ಟುಹಬ್ಬ, ವಾರ್ಷಿಕೋತ್ಸವದ ಶುಭದಿನಗಳದಂದು ಅವರಿಗೆ ಶುಭಾಶಯ ವಿಡಿಯೊ ಸಿದ್ಧಪಡಿಸಿ ಸರ್‌ಪ್ರೈಸ್‌ ನೀಡುತ್ತಿದ್ದಾರೆ. ಹೀಗಾಗಿ ವಿಡಿಯೊ ಎಡಿಟಿಂಗ್ ಆಪ್‌ಗಳಿಗೆ ಡಿಮ್ಯಾಂಡ ಹೆಚ್ಚಾಗಿದ್ದು, ಸೂಕ್ತ ಆಪ್‌ ಮೂಲಕ ವಿಡಿಯೊವನ್ನು ಮತ್ತಷ್ಟು ಸುಂದರವಾಗಿಸಬಹುದು. ಹಾಗಾದರೇ ವಿಡಿಯೊ ಎಡಿಟಿಂಗ್ ಗೆ ಅತ್ಯುತ್ತಮ ಆಪ್‌ಗಳ ಬಗ್ಗೆ ಈ ಕೆಳಗೆ ನೀಡಲಾಗಿದ್ದು, ಮುಂದೆ ಓದಿರಿ.

ಫಿಲ್ಮೊರಾಗೊ-FilmoraGo

ಫಿಲ್ಮೊರಾಗೊ-FilmoraGo

ಬಹುತೇಕ ಬಳಕೆದಾರರನ್ನು ಹೊಂದಿರುವ ಉತ್ತಮ ಸ್ಮಾರ್ಟ್‌ಫೋನ್ ವಿಡಿಯೊ ಎಡಿಟಿಂಗ್ ಆಪ್‌ ಇದಾಗಿದ್ದು, ಇದರಲ್ಲಿ ವಿಡಿಯೊ ಎಡಿಟಿಂಗ್ನಲ್ಲಿ ಟ್ರಿಮ್ಮಿಂಗ್, ಕಟ್ಟಿಂಗ್, ಆಡಿಂಗ್ ಆಯ್ಕೆಗಳು ದೊರೆಯಲಿವೆ. ಸ್ಲೋ ಮೋಷನ್ ಸೇರಿದಂತೆ ಹಲವು ಹೊಸ ಎಫೆಕ್ಟ್‌ಗಳ ಆಯ್ಕೆಗಳನ್ನು ಸಹ ಕಾಣಬಹುದಾಗಿದೆ. ಟೆಂಪ್ಲೇಟ್ಸ್‌ಗಳ ಆಯ್ಕೆಯನ್ನು ಹೊಂದಿದ್ದು, ಎಡಿಟ್‌ ಮಾಡಿರುವ ಕ್ಲಿಪ್‌ಗಳನ್ನು ಪ್ರಿವ್ಯೂವ್ ಮಾಡಬಹುದಾಗಿದೆ.

ಅಡೊಬ್ ಪ್ರೀಮಿಯರ್‌ ಕ್ಲಿಪ್-Adobe Premiere Clip

ಅಡೊಬ್ ಪ್ರೀಮಿಯರ್‌ ಕ್ಲಿಪ್-Adobe Premiere Clip

ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೊ ಎಡಿಟಿಂಗ್ ಮಾಡಲು ಸೂಕ್ತ ಆಪ್ ಇದಾಗಿದ್ದು, ವೇಗವಾಗಿ ಎಡಿಟ್ ಮಾಡಬಹುದಾದ ಆಯ್ಕೆಗಳನ್ನು ಹೊಂದಿದೆ. ಆಟೋಮ್ಯಾಟಿಕ್ ಆಗಿ ವಿಡಿಯೊ ಕ್ರಿಯೆಷನ್ ಮಾಡಿಕೊಳ್ಳುವ ಆಯ್ಕೆಯನ್ನ ಸಹ ಇದು ಹೊಂದಿದೆ. ಮ್ಯೂಸಿಕ್, ಫಿಲ್ಟರ್, ಎಫೆಕ್ಟ್, ಟ್ರಿಮ್ಮಿಂಗ್, ಕಟ್ಟಿಂಗ್ ಮತ್ತು ಆಡಿಂಗ್ ಆಯ್ಕೆಗಳನ್ನು ಒಳಗೊಂಡಿರುವ ಜೊತೆಗೆ ಇನ್ನೂ ಹಲವು ಮಲ್ಟಿ ಆಯ್ಕೆಗಳನ್ನು ಹೊಂದಿದೆ.

ವಿಡಿಯೊ ಶೋ-Video Show

ವಿಡಿಯೊ ಶೋ-Video Show

ಅತ್ಯುತ್ತಮ ಮೊಬೈಲ್ ವಿಡಿಯೊ ಎಡಿಟಿಂಗ್ ಆಪ್ ಎಂದು ಬಿಂಬಿತವಾಗಿದ್ದು, ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಮ್ಯೂಸಿಕ್ ಸೇರಿಸುವ, ಕಟ್ಟಿಂಗ್, ಟೆಕ್ಸ್ಟ್ ಸೇರಿಸುವ ಆಯ್ಕೆಗಳು ಸೇರಿದಂತೆ ಹಲವು ಸರಳ ಎಡಿಟಿಂಗ್ ಆಯ್ಕೆಗಳನ್ನು ಒಳಗೊಂಡಿದ್ದು ಬಳಕೆದಾರರ ಸ್ನೇಹಿ ಆಪ್ ಇದಾಗಿದೆ. ಬ್ಯಾಕ್‌ಗ್ರೌಂಡ್‌ ಆಡಿಯೊ ಎಫೆಕ್ಟ್ ಸೇರಿಸಬಹುದಾಗಿದ್ದು, ಇದು ಉಚಿತ ಆಪ್ ಆಗಿದೆ.

ಪವರ್‌ ಡೈರೆಕ್ಟರ್-Power Director

ಪವರ್‌ ಡೈರೆಕ್ಟರ್-Power Director

ಪವರ್‌ ಡೈರೆಕ್ಟರ್ ಆಪ್ ಸರಳವಾದ ಆಯ್ಕೆಗಳನ್ನು ಒಳಗೊಂಡಿದ್ದು, ವಿಡಿಯೊಗಳನ್ನು ಸುಲಭವಾಗಿ ಎಡಿಟ್ ಮಾಡಬಹುದಾಗಿದೆ. ಸುಮಾರು 30 ಭಿನ್ನ ಎಫೆಕ್ಟ್ ಆಯ್ಕೆಗಳನ್ನು ನೀಡಿರುವ ಜೊತೆಗೆ ಫೊಫೇಶನಲ್ ಆಯ್ಕೆಗಳನ್ನು ಸಹ ಕಾಣಬಹುದಾಗಿದೆ. ಗ್ರೀನ್ ಸ್ಕ್ರೀನ್ ವಿಡಿಯೊಗಳನ್ನು ಎಡಿಟ್ ಮಾಡಬಹುದಾಗಿದ್ದು, ಸ್ಲೋ ಮೋಷನ್ ಸಹ ಇದೆ. ವಿಡಿಯೊ ಎಡಿಟ್ ಕುರಿತು ಟ್ಯೂಟೊರಿಲ್ ಮಾಹಿತಿಗಳು ಇವೆ.

ಕಿನ್ ಮಾಸ್ಟರ್-Kine Master

ಕಿನ್ ಮಾಸ್ಟರ್-Kine Master

ಈ ಆಪ್ ಅತ್ಯುತ್ತಮ ರಚನೆಯನ್ನು ಹೊಂದಿರುವ ಜೊತೆಗೆ ಪವರ್‌ಫುಲ್ ಎಡಿಟಿಂಗ್ ಆಯ್ಕೆಗಳನ್ನು ಸಹ ಒಳಗೊಂಡಿದೆ. ಫೋಟೊ, ಮ್ಯೂಸಿಕ್‌ಗಳನ್ನು ಗ್ಯಾಲರಿಯಿಂದ ಡ್ರಾಗ್‌ ಮಾಡಿಕೊಂಡು ಎಡಿಟಿಂಗ್‌ನಲ್ಲಿ ಡ್ರಾಪ್ ಮಾಡುವ ಅವಕಾಶ ಈ ಆಪ್‌ನಲ್ಲಿದೆ. ಕಟ್ಟಿಂಗ್, ಟೆಕ್ಸ್ಟ್, ಎಫೆಕ್ಟ್‌ಗಳು ಮತ್ತು ಸ್ಟಿಕ್ಕರ್‌ಗಳನ್ನು ಸಹ ಸೇರಿಸಬಹುದಾಗಿದೆ. ಎಡಿಟಿಂಗ್ ಸಮಯ ಪ್ರಿವ್ಯೂವ್ ಆಯ್ಕೆ ಮೂಲಕ ವಿಡಿಯೊ ವೀಕ್ಷಿಸಬಹುದಾಗಿದೆ.

Best Mobiles in India

English summary
Free & Best Android Video Editor Apps For 2019.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X