ಇನ್ನೂ ಶೇರ್‌ಇಟ್ ಬಳಸುತ್ತಿದ್ದೀರಾ..? ಸಾಕು ನಿಲ್ಲಿಸಿ, ಬಂದಿದೆ ಗೂಗಲ್ ಫೈಲ್ ಟು ಗೂ ಆಪ್..!!!

Written By:

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಫೈಲ್, ವಿಡಿಯೋ, ಫೋಟೋ ಮತ್ತು ವಿಡಿಯೋಗಳನ್ನು ಸೇಹಿತರೊಂದಿಗೆ ಶೇರ್ ಮಾಡಿಕೊಳ್ಳಲು ಅತೀ ಹೆಚ್ಚು ಮಂದಿ ಶೇರ್‌ಇಟ್ ಆಪ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮಾರುಕಟ್ಟೆಯಲ್ಲಿ ಯಾವುದೇ ಪ್ರತಿಸ್ಪರ್ಧಿ ಆಪ್‌ ಇರಲಿಲ್ಲ ಎನ್ನಲಾಗಿದೆ. ಆದರೆ ಸರ್ಚ್ ಇಂಜಿನ್ ದೈತ್ಯ ಇದಕ್ಕೊಂದು ಸ್ಪರ್ಧೆಯನ್ನು ಹುಟ್ಟಿಹಾಕಿದೆ.

ಇನ್ನೂ ಶೇರ್‌ಇಟ್ ಬಳಸುತ್ತಿದ್ದೀರಾ..? ಸಾಕು ನಿಲ್ಲಿಸಿ

ಓದಿರಿ: ಒಪ್ಪೋ, ಶಿಯೋಮಿಗೆ ಹೊಡೆತ ನೀಡಲು ಫ್ಲಿಪ್‌ಕಾರ್ಟ್‌ನಲ್ಲಿ ಕಾಣಿಸಿಕೊಂಡ ಡ್ಯುಯಲ್ ಕ್ಯಾಮೆರಾ ಫೋನ್..!!

ಗೂಗಲ್ ಮಾರುಕಟ್ಟೆಗೆ ಫೈಲ್ ಟು ಗೂ ಆಪ್ ಎನ್ನುವ ಆಪ್ ವೊಂದನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿರುವ ಶೇರ್‌ಇಟ್ ಆಪ್‌ಗೆ ಪ್ರಬಲ ಪ್ರತಿಸ್ಫರ್ಧಿ ಇದು ಎನ್ನಲಾಗಿದೆ. ಈಗಾಗಲೇ ಪ್ಲೇ ಸ್ಟೋರಿನಲ್ಲಿ ಈ ಆಪ್ ಬೀಟಾ ಬಳಕೆದಾರರಿಗೆ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೈಲ್ ಟು ಗೂ ಆಪ್:

ಫೈಲ್ ಟು ಗೂ ಆಪ್:

ಶೇರ್‌ ಇಟ್ ಮಾದರಿಯಲ್ಲಿಯೇ ಈ ಆಪ್ ಕಾರ್ಯನಿರ್ವಹಿಸಲಿದ್ದು, ಹತ್ತಿರದ ಸ್ಮಾರ್ಟ್‌ಫೋನ್‌ಗೆ ಈ ಆಪ್‌ ಮೂಲಕ ಫೈಲ್‌ಗಳನ್ನು ವಿಡಿಯೋ ಹಾಗೂ ಫೋಟೋಗಳನ್ನು ಕಳುಹಿಸಬಹುದಾಗಿದೆ.

ವೇಗವಾಗಿ ವಿತರಣೆ:

ವೇಗವಾಗಿ ವಿತರಣೆ:

ಈ ಆಪ್ ಎರಡು ಸ್ಮಾರ್ಟ್‌ಫೋನ್‌ ಗಳ ನಡುವೆ ಬ್ಲೂಟೂತ್ ಮೂಲಕ ಸಂಪರ್ಕವನ್ನು ಸಾಧಿಸಲಿದ್ದು, ವೇಗವಾಗಿ ಫೈಲ್‌ಗಳನ್ನು ಸಾಗಿಸಲಿದೆ ಎನ್ನಲಾಗಿದೆ. ಇನ್ನು ಈ ಆಪ್ ಸಾಮಾನ್ಯ ಬಳಕೆದಾರರಿಗೆ ಲಭ್ಯವಿಲ್ಲ ಎನ್ನಲಾಗಿದೆ.

 ಕಡಿಮೆ ಗಾತ್ರ:

ಕಡಿಮೆ ಗಾತ್ರ:

ಈಗಾಗಲೇ ಆಂಡ್ರಾಯ್ಡ್ ಆಪ್‌ಗಳೇಲ್ಲವೂ ದೊಡ್ಡ ಗಾತ್ರದಲ್ಲಿ ಕಾಣಿಸಿಕೊಂಡಿವೆ, ಹೆಚ್ಚಿನ ಜಾಗವನ್ನು ಆಕ್ರಮಿಸಲಿದೆ. ಆದರೆ ಗೂಗಲ್ ನ ಈ ಹೊಸ ಆಪ್ ಅತೀ ಕಡಿಮೆ ಗಾತ್ರದಲ್ಲಿದ್ದೂ ಹೆಚ್ಚಿನ ಕಾರ್ಯವನ್ನು ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Google announces Files To Go, takes on ShareIt. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot