ಭಾರತೀಯರಿಗಾಗಿ ಗೂಗಲ್ ನಿಂದ ಮೊಬೈಲ್ ಪೇಮೆಂಟ್ ಆಪ್: ಸರಳ ಮತ್ತು ಸುರಕ್ಷ

ಆಂಡ್ರಾಯ್ಡ್ ಹಾಗೂ iOS ಬಳಕೆದಾರರಿಗಾಗಿಯೇ ಗೂಗಲ್ ಟೆಜ್ ಎನ್ನುವ ಪೇಮೆಂಟ್ ಆಪ್ ವೊಂದನ್ನು ರೀಲಿಸ್ ಮಾಡಿದ್ದು, ಈ ಆಪ್ ನೊಂದಿಗೆ ಗ್ರಾಹಕರು ತಮ್ಮ ಬ್ಯಾಂಕ್ ಆಕೌಂಟ್

|

ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಮತ್ತು ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯೂ ದಿನೇ ದಿನೇ ಅಧಿಕವಾಗುತ್ತಿದ್ದು, ಇದಲ್ಲದೇ ದೇಶದಲ್ಲಿ ಡಿಜಿಟಲ್ ಪೇಮೆಂಟ್ ಸೇವೆಯೂ ಹೆಚ್ಚು ಖ್ಯಾತಿಯನ್ನು ಪಡೆಕೊಳ್ಳುತ್ತಿರುವ ಹಿನ್ನಲೆಯಲ್ಲಿ ಗೂಗಲ್ ಭಾರತೀಯರಿಗಾಗಿ ಮೊಬೈಲ್ ವ್ಯಾಲೆಟ್ ವೊಂದನ್ನು ಲಾಂಚ್ ಮಾಡಿದೆ.

ಭಾರತೀಯರಿಗಾಗಿ ಗೂಗಲ್ ನಿಂದ ಮೊಬೈಲ್ ಪೇಮೆಂಟ್ ಆಪ್: ಸರಳ ಮತ್ತು ಸುರಕ್ಷ

ಓದಿರಿ: 1.02 ಲಕ್ಷ ಬೆಲೆಯ ಐಫೋನ್ X ಇಲ್ಲಿ ಕೇವಲ ರೂ.6500ಕ್ಕೆ ಲಭ್ಯ

ಆಂಡ್ರಾಯ್ಡ್ ಹಾಗೂ iOS ಬಳಕೆದಾರರಿಗಾಗಿಯೇ ಗೂಗಲ್ ಟೆಜ್ ಎನ್ನುವ ಪೇಮೆಂಟ್ ಆಪ್ ವೊಂದನ್ನು ರೀಲಿಸ್ ಮಾಡಿದ್ದು, ಈ ಆಪ್ ನೊಂದಿಗೆ ಗ್ರಾಹಕರು ತಮ್ಮ ಬ್ಯಾಂಕ್ ಆಕೌಂಟ್ ನೊಂದಿಗೆ ರಿಜಿಸ್ಟರ್ ಆದಲ್ಲಿ ತಮ್ಮ ಬ್ಯಾಂಕಿಗ್ ವ್ಯವಹಾರಗಳನ್ನು ಗೂಗಲ್ ಆಕೌಂಟ್ ನಿಂದಲೇ ಮಾಡಬಹುದು.

UPI ಮಾದರಿಯಲ್ಲಿ ಕಾರ್ಯನಿರ್ವಹಣೆ:

UPI ಮಾದರಿಯಲ್ಲಿ ಕಾರ್ಯನಿರ್ವಹಣೆ:

ಆಂಡ್ರಾಯ್ಡ್ ಹಾಗೂ iOSನಲ್ಲಿ ಕಾರ್ಯನಿರ್ವಹಿಸುವ ಗೂಗಲ್ ಟೆಜ್ ಸರಕಾರವು ಜಾರಿ ಮಾಡಿರುವ UPI ಮಾದರಿಯನ್ನು ಅನುಸರಿಸಲಿದೆ. ಎಲ್ಲಾ ಬ್ಯಾಂಕುಗಳ ಸೇವೆಯೂ ಇಲ್ಲಿ ಲಭ್ಯವಿದೆ ಎನ್ನಲಾಗಿದೆ.

ಆಪಲ್ ವ್ಯಾಲೆಟ್ ಮಾದರಿ:

ಆಪಲ್ ವ್ಯಾಲೆಟ್ ಮಾದರಿ:

ಮಾರುಕಟ್ಟೆಯಲ್ಲಿರುವ ಪೇಟಿಎಂ ಮಾದರಿಯಲ್ಲಿ ಗೂಗಲ್ ಟೆಜ್ ಕಾರ್ಯನಿರ್ವಹಿಸುವುದಿಲ್ಲ. ಬದಲಿಗೆ ನಿಮ್ಮ ಬ್ಯಾಂಕ್ ಆಪ್‌ಗಳ ಮಾದರಿಯಲ್ಲಿ ಹಾಗೂ ಆಪಲ್ ವ್ಯಾಲೆಟ್ ರೀತಿಯಲ್ಲಿ ವರ್ತಿಸಲಿದೆ. ಅಲ್ಲದೇ ನಿಮ್ಮ ಖಾತೆಗೆ ಸುರಕ್ಷತೆಯನ್ನು ನೀಡಲಿದೆ.

ಎಲ್ಲಾ ಬ್ಯಾಂಕ್ ಗಳ ಸೇವೆ:

ಎಲ್ಲಾ ಬ್ಯಾಂಕ್ ಗಳ ಸೇವೆ:

ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಕ್ಸಿಸ್, HDFC, ICICI, ಸ್ಟೇಟ್ ಬ್ಯಾಂಕ್ ಸೇರಿದಂತೆ UPI ಪೇಮೆಂಟ್ ಸಫೋರ್ಟ್ ಮಾಡುವ ಎಲ್ಲಾ ಬ್ಯಾಂಕ್‌ಗಳ ಸೇವೆಯೂ ಈ ಆಪ್‌ನಲ್ಲಿ ದೊರೆಯಲಿದೆ.

Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!
ವಿವಿಧ ಭಾಷೆಗಳಲ್ಲಿ ಸೇವೆ:

ವಿವಿಧ ಭಾಷೆಗಳಲ್ಲಿ ಸೇವೆ:

ಇದಲ್ಲದೇ ಗೂಗಲ್ ಟೆಜ್ ಆಪ್ ಭಾರತೀಯ ಭಾಷೆಗಳಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದ್ದು, ಇಂಗೀಷ್, ಹಿಂದಿ, ಬೆಂಗಾಲಿ, ಗುಜರಾತಿ, ಕನ್ನಡ, ಮರಾಠಿ, ತಮಿಳ್ ಮತ್ತು ತೆಲಗು ಭಾಷೆಗಳಿಗೆ ಸಫೋರ್ಟ್ ಮಾಡಲಿದೆ.

ಹೆಚ್ಚಿನ ಸುರಕ್ಷತೆ:

ಹೆಚ್ಚಿನ ಸುರಕ್ಷತೆ:

ಈ ಆಪ್ ನಲ್ಲಿ ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಯನ್ನು ಗೂಗಲ್ ನೀಡಿದ್ದು, ನಿಮ್ಮ ಮಾಹಿತಿಯನ್ನು ಮೂರನೇ ವ್ಯಕ್ತಿಯೂ ಕದಿಯುವ ಸಾಧ್ಯತೆಇಲ್ಲ. ಇದಲ್ಲದೇ ಎರಡು ಹಂತದ ಸೆಕ್ಯೂರಿಟಿ ಇದ್ದು, ನಿಮ್ಮನ್ನು ಬಿಟ್ಟರೇ ಆಪ್ ಪಿನ್ ಇಲ್ಲದೇ ಇನ್ಯಾರು ಓಪನ್ ಮಾಡಲು ಸಾಧ್ಯವಿಲ್ಲದಂತೆ ಮಾಡಲಾಗಿದೆ.

Best Mobiles in India

English summary
The Android and search giant has launched Tez, a new mobile wallet in India that will let users link up their phones to their bank accounts to pay for goods securely in physical stores and online, and for person-to-person money transfers. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X