Subscribe to Gizbot

ಗೂಗಲ್ TEZ ಬಳಕೆದಾರರಿಗೆ ಮತ್ತೊಂದು ಬಂಪರ್ ಕೊಡುಗೆ...!

Written By:

ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆದ ಗೂಗಲ್ TEZ ಸಖತ್ ಸದ್ದು ಮಾಡುತ್ತಿದೆ. ಈ ವರ್ಷ ಸೆಪ್ಟೆಂಬರ್‍‍ನಲ್ಲಿ ಗೂಗಲ್ ಪರಿಚಯಿಸಿದ TEZ ಆಪ್ ಹೊಸ ಮಾದರಿಯ ಬದಲಾವಣೆಯೊಂದಿಗೆ ಕಾಣಿಸಿಕೊಳ್ಳಲಿದ್ದು, ಮತ್ತೊಂದು ಬಂಪರ್ ಕೊಡುಗೆಯನ್ನು ನೀಡಲಿದೆ ಎನ್ನಲಾಗಿದೆ.

ಗೂಗಲ್ TEZ ಬಳಕೆದಾರರಿಗೆ ಮತ್ತೊಂದು ಬಂಪರ್ ಕೊಡುಗೆ...!

ಓದಿರಿ: 4000mAh ಬ್ಯಾಟರಿಯ ಇನ್‌ಟೆಕ್ಸ್ ELYT e6: ರೆಡ್‌ಮಿ 5Aಗಿಂತಲೂ ಕಡಿಮೆ ಬೆಲೆ..!

ಇಷ್ಟು ದಿನಗಳ ಕಾಲ ಇತರರಿಗೆ ಹಣ ಕಳುಹಿಸಲು ಮಾತ್ರವೇ ಉಪಯೋಗವಾಗುತ್ತಿದ್ದ ಗೂಗಲ್ TEZ ಇದೀಗ ಹೊಸ ಸೌಲಭ್ಯವನ್ನು ಪರಿಚಯಿಸುತ್ತಿದೆ. ಇನ್ನು ಮುಂದೆ ಗೂಗಲ್ TEZ ಮೂಲಕ ರೀಚಾರ್ಜ್, ಬಿಲ್ ಪೇಮೆಂಟ್ಸ್ ಮಾಡುವ ಸೌಲಭ್ಯವನ್ನು ನೀಡಲಿದೆ ಎನ್ನುವ ಸುದ್ದಿಯೂ ಲಭ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಿಲ್‌ ಪೇಮೆಂಟ್ ಮಾಡಬಹುದಾಗಿದೆ;

ಬಿಲ್‌ ಪೇಮೆಂಟ್ ಮಾಡಬಹುದಾಗಿದೆ;

ಗೂಗಲ್ TEZ ಬಳಕೆದಾರರು ಇನ್ನು ಮುಂದೆ TEZ ಆಪ್ ಮೂಲಕ ವಿದ್ಯುತ್, ನೀರಿನ ಬಿಲ್ ಜತೆಗೆ DTH ರಿಚಾರ್ಜ್ ಮಾಡಿಸಬಹುದಾಗಿದೆ. ಈ ಕುರಿತು ದೆಹಲಿಯಲ್ಲಿ ನಡೆಯುತ್ತಿರುವ 'ಗೂಗಲ್ ಫಾರ್ ಇಂಡಿಯಾ' ಕಾರ್ಯಕ್ರಮದಲ್ಲಿ ಈ ವಿಷಯವನ್ನು ಬಹಿರಂಗಗೊಳಿಸಲಾಗಿದೆ.

ಫೀಚರ್‌ಫೋನ್‌ನಲ್ಲಿಯೂ ಲಾಂಚ್:

ಫೀಚರ್‌ಫೋನ್‌ನಲ್ಲಿಯೂ ಲಾಂಚ್:

ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಜಿಯೋ ಫೋನ್ ಸೇರಿದಂತೆ ಅತ್ಯಂತ ಕಡಿಮೆ ಬೆಲೆಯ 4G ಫ್ಯೂಚರ್ ಫೋನ್‌ಗಳಲ್ಲಿ ಗೂಗಲ್ TEZ ಸಪೋರ್ಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಜಿಯೋ ಫೋನ್ ಗೂಗಲ್ ಅಸಿಸ್ಟೆಂಟ್ ಸಪೋರ್ಟ್ ಮಾಡಲಿದೆ.

ಇನ್ನಷ್ಟು ಸೇವೆಗಳು:

ಇನ್ನಷ್ಟು ಸೇವೆಗಳು:

ಈಗಾಗಲೇ ಗೂಗಲ್ TEZ ಬಳಕೆಯೂ ಅತ್ಯಂತ ಸುಲಭವಾಗಿದ್ದು, ಮುಂದೆ ಇನ್ನಷ್ಟು ಸೇವೆಗಳು ಇದರೊಂದಿಗೆ ಕಾಣಿಸಿಕೊಳ್ಳಲಿದ್ದು, ಅಲ್ಲದೇ ಇನ್ನಷ್ಟು ಸರಳವಾಗಿ ಮತ್ತು ಸುರಕ್ಷಿತವಾಗಿ ಹಣವನ್ನು ವರ್ಗಾಹಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google for India: Now pay your utility bills through Tez app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot