Subscribe to Gizbot

4000mAh ಬ್ಯಾಟರಿಯ ಇನ್‌ಟೆಕ್ಸ್ ELYT e6: ರೆಡ್‌ಮಿ 5Aಗಿಂತಲೂ ಕಡಿಮೆ ಬೆಲೆ..!

Written By:

ಜಜೆಟ್ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ಇನ್‌ಟೆಕ್ಸ್ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇನ್‌ಟೆಕ್ಸ್ ELYT e6 ಸ್ಮಾರ್ಟ್‌ಫೋನ್ ಸದ್ಯ ಬಿಡುಗಡೆಗೊಂಡಿರುವ ಶಿಯೋಮಿ ರೆಡ್‌ಮಿ 5Aಗೆ ಭಾರೀ ಸ್ಪರ್ಧೇಯನ್ನು ನೀಡಲಿದೆ ಎನ್ನಲಾಗಿದೆ.

4000mAh ಬ್ಯಾಟರಿಯ ಇನ್‌ಟೆಕ್ಸ್ ELYT e6: ರೆಡ್‌ಮಿ 5Aಗಿಂತಲೂ ಕಡಿಮೆ ಬೆಲೆ..!

ಓದಿರಿ: ನಿಮ್ಮ ಮನೆಗೆ ಬೆಸ್ಟ್‌ TV ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ: ಕೇವಲ ರೂ.13,999ಕ್ಕೆ ಸ್ಮಾರ್ಟ್ LED TV..!

ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದ್ದು, ಡಿಸೆಂಬರ್ 15 ರಿಂದ ಎಕ್ಸ್‌ಕ್ಲೂಸಿವ್ ಸೇಲ್ ನಡೆಯಲಿದೆ. ಇನ್‌ಟೆಕ್ಸ್ ELYT e6 ಸ್ಮಾರ್ಟ್‌ಫೋನ್‌ನಲ್ಲಿ ದೊಡ್ಡ ಬ್ಯಾಟರಿ ಹಾಗೂ ಉತ್ತಮ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಬ್ಲಾಕ್ ಬಣ್ಣದಲ್ಲಿ ಮಾತ್ರವೇ ಈ ಸ್ಮಾರ್ಟ್‌ ಫೋನ್ ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೊಡ್ಡ ಬ್ಯಾಟರಿ:

ದೊಡ್ಡ ಬ್ಯಾಟರಿ:

5 ಇಂಚಿನ HD ಡಿಸ್‌ಪ್ಲೇಯನ್ನು ಈ ಫೋನಿನಲ್ಲಿ ಅಳವಡಿಸಲಾಗಿದ್ದು, ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಕಷ್ಟು ದೊಡ್ಡ ಬ್ಯಾಟರಿಯನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಇನ್‌ಟೆಕ್ಸ್ ELYT e6 4000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಅಲ್ಲದೇ ಇದು 12 ದಿನಗಲ ಸ್ಟಾಂಡ್ ಬೈ ಹಾಗೂ 8-16 ಗಂಟೆಗಳ ಟಾಕ್ ಟೈಮ್ ದೊರೆಯಲಿದೆ.

3GB RAM- 32GB ಮೆಮೊರಿ ಇದರಲ್ಲಿದೆ:

3GB RAM- 32GB ಮೆಮೊರಿ ಇದರಲ್ಲಿದೆ:

ಇನ್‌ಟೆಕ್ಸ್ ELYT e6 ಸ್ಮಾರ್ಟ್‌ಫೋನಿನಲ್ಲಿ 3GB RAM ಕಾಣಬಹುದಾಗಿದೆ. ಇದಲ್ಲದೇ 32GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಈ ಫೋನಿನಲ್ಲಿ ಕಾಣಬಹುದು.

ಉತ್ತಮ ಕ್ಯಾಮೆರಾ:

ಉತ್ತಮ ಕ್ಯಾಮೆರಾ:

ಇನ್‌ಟೆಕ್ಸ್ ELYT e6 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ LED ಫ್ಲಾಷ್ ಲೈಟ್ ಕಾಣಬಹುದಾಗಿದೆ. ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಲಾಗಿದೆ. ಅಲ್ಲದೇ ಮುಂಭಾಗದಲ್ಲಿಯೂ LED ಫ್ಲಾಷ್ ಲೈಟ್ ಅಳವಡಿಸಲಾಗಿದೆ.

ಆಂಡ್ರಾಯ್ಡ್ ನ್ಯಾಗಾ-VoLTE:

ಆಂಡ್ರಾಯ್ಡ್ ನ್ಯಾಗಾ-VoLTE:

ಇದಲ್ಲದೇ ಇನ್‌ಟೆಕ್ಸ್ ELYT e6 ಸ್ಮಾರ್ಟ್‌ಫೋನು ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, 4G VoLETಯನ್ನು ಇದರಲ್ಲಿ ನೀಡಲಾಗಿದೆ. ಬ್ಲೂಟೂತ್, GPS ಸೇರಿದಂತೆ ಇನ್ನು ಹಲವು ಆಯ್ಕೆಗಳನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Intex launches ELYT e6 with 4000mAh battery, Android Nougat at Rs 6,999. to kmow more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot