ಗೂಗಲ್ ನಿಂದ ಮುಸ್ಲಿಂ ಬಾಂದವರಿಗೆ ಕೊಡುಗೆಯೊಂದು ಸಿಕ್ಕಿದೆ..!!!

By: Precilla Dias

ಪವಿತ್ರ ರಂಜಾನ್ ಮಾಸ ಶುರುವಾಗಿದ್ದು, ಇದೇ ಸಂದರ್ಭದಲ್ಲಿ ಗೂಗಲ್ ನಿಂದ ಮುಸ್ಲಿಂ ಬಾಂದವರಿಗೆ ಕೊಡುಗೆಯೊಂದು ಸಿಕ್ಕಿದೆ, ಗೂಗಲ್ ಹೊಸದೊಂದ ವೆಬ್ ಆಪ್ ಬಿಡುಗಡೆ ಮಾಡಿದ್ದು, ಅದೇ ಕ್ವಿಬಾ ಫೈಂಡರ್. ಕ್ವಿಬಾ ಎನ್ನುವುದು ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ದಿಕ್ಕನ್ನು ತೋರಿಸಲಿದೆ.

ಗೂಗಲ್ ನಿಂದ ಮುಸ್ಲಿಂ ಬಾಂದವರಿಗೆ ಕೊಡುಗೆಯೊಂದು ಸಿಕ್ಕಿದೆ..!!!

ಬೇರೆ ಬೇರೆ ಪ್ರದೇಶಗಳಲ್ಲಿ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಸರಿಯಾದ ದಿಕ್ಕನು ಹೂಡುಕುವುದು ಕಷ್ಟವಾಗುವ ಕಾರಣದಿಂದ ಗೂಗಲ್ ಅದಕ್ಕಾಗಿಯೇ ಒಂದು ಆಪ್ ರೆಡಿ ಮಾಡಿದೆ. ಇದು ಪ್ರಾರ್ಥನೆ ಮಾಡಲು ಸರಿಯಾದ ದಾರಿಯನ್ನು ತೋರಿಸಲಿದೆ.

ಈ ಆಪ್ ಸ್ಮಾರ್ಟ್ ಫೋನಿನಲ್ಲಿರುವ ಕ್ಯಾಮೆರಾ ಮತ್ತು ಕಂಪಾಸ್ ಅನ್ನು ಬಳಸಿಕೊಂಡು, ಕಾಬಾ ಇರುವ ದಿಕ್ಕನ್ನು ಸರಿಯಾಗಿ ತೋರಿಸಲಿದೆ. ಇದು ಗೂಗಲ್ ಬ್ರೌಸರ್ ನಲ್ಲಿಯೋ ಲಭ್ಯವಿದೆ. ಇದು ರಂಜಾನ್ ಮುಂದುವರೆದ ಮೇಲೆಯೂ ಲಭ್ಯವಿರಲಿದೆ.

ಈ ಆಪ್ GPS ಮೂಲಕ ಕಾರ್ಯನಿರ್ವಹಿಸಿಲಿದ್ದು, ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ ಸರಿಯಾದ ಮಾಹಿತಿಯನ್ನು ನೀಡಲಿದೆ. ಈ ಆಪ್ ಬಳಸುವ ಮೊದಲು ನಿಮ್ಮ ಸ್ಮಾರ್ ಫೋನಿನಲ್ಲಿ ಇರುವ ಕಂಪಾಸ್ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತಿದೇಯೇ ಎಂಬುದನ್ನು ನೀವು ತಿಳಿಯಬೇಕಿದೆ.

ಈ ಆಪ್ ಬಳಕೆ ಮಾಡುವ ಸಂದರ್ಭದಲ್ಲಿ ಅಂದರೆ ಇನ್ಸ್ಟಾಲ್ ಮಾಡುವ ಸಂದರ್ಭದಲ್ಲಿ ನಿಮ್ಮ ಫೋನಿ ಕ್ಯಾಮೆರಾ ಮತ್ತು GPS ಸೇವೆಯನ್ನು ಬಳಸಿಕೊಳ್ಳುವ ಅಕಾಶ ನೀಡಬೇಲು ಇಲ್ಲವಾದರೆ ಅದು ಕಾರ್ಯನಿರ್ವಹಿಸುವುದಿಲ್ಲ.

Read more about:
English summary
As the Holy Month of Ramadan has started, Google has introduced a new web app named the Qibla Finder.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot