ಗೂಗಲ್‌ನಿಂದ ಭಾರತಕ್ಕಾಗಿ ಮತ್ತೊಂದು ಆಪ್ ಬಿಡುಗಡೆ!!

|

ಭಾರತದ ಮೇಲೆ ಅತಿ ಹೆಚ್ಚು ಗಮನ ಕೇಂದ್ರಿಕರಿಸಿರುವ ಟೆಕ್ ದೈತ್ಯ ಗೂಗಲ್ ಸಂಸ್ಥೆ ಗೂಗಲ್ ಆಂಡ್ರಾಯ್ಡ್ ಬಳಕೆದಾರರಿಗೆ ಸ್ಥಳೀಯ ಮಾಹಿತಿ ಹಂಚಿಕೆ ಆಪ್ ಅಭಿವೃದ್ಧಿಗೊಳಿಸಿದೆ. ವಾಣಿಜ್ಯ ನಗರಿ ಮುಂಬಯಿಯಲ್ಲಿ ನಡೆದ ಸಮಾರಂಭದಲ್ಲಿ ಗೂಗಲ್‌ನ ಮೊದಲ ಸ್ಥಳೀಯ ಮಾಹಿತಿ ಹಂಚಿಕೆ ಅಪ್ಲಿಕೇಷನ್ ಗೂಗಲ್ ನೇಬರ್ಲೀ (Google Neighbourly App) ಬಿಡುಗಡೆ ಮಾಡಿದೆ.

ಬೃಹತ್ನಗರಗಳು ಮತ್ತು ಅಲ್ಲಿ ವಾಸಿಸುವ ಜನರು ಬದಲಾಗುತ್ತಿರುವಂತೆಯೇ ಸ್ಥಳೀಯ ಸಂದೇಹಗಳಿಗೆ ಸೂಕ್ತ ಉತ್ತರ ಹುಡುಕುವುದು ಕಷ್ಟವಾಗುತ್ತಿದೆ ಎಂಬುದನ್ನು ಗೂಗಲ್ ಮನಗಂಡಿದೆ. ಹಾಗಾಗಿ, ಹೊಸತಾದ ಗೂಗಲ್ ನೇಬರ್ಲೀ ಆಪ್ ಮೂಲಕ ಅದೇ ಪ್ರದೇಶದ ಜನರಿಗೆ ಸ್ಥಳೀಯ ಪ್ರಶ್ನೆಗಳನ್ನು ಕೇಳಲು ಹಾಗೂ ಸಂಬಂಧಿತ ಉತ್ತರಗಳನ್ನು ಹುಡುಕಲು ಸುಲಭವಾಗಲಿದೆ.

 ಗೂಗಲ್‌ನಿಂದ ಭಾರತಕ್ಕಾಗಿ ಮತ್ತೊಂದು ಆಪ್ ಬಿಡುಗಡೆ!!

ಈ ಆಪ್ ಬಳಕೆದಾರರು ಯಾವುದೆ ಪ್ರಶ್ನೆಯನ್ನು ಕೇಳಿದಾಗ ಉತ್ತರ ಮಾಡುವಂತಹ ಪರಿಣಿತರಿಗೆ ಕಳುಹಿಸಲಾಗುತ್ತದೆ. ಗೂಗಲ್ ವಾಯ್ಸ್ ಗುರುತಿಸುವಿಕೆ ಮೂಲಕ ನಿಮ್ಮ ಪ್ರಶ್ನೆ ಕೇಳಬಹುದು ಅಥವಾ ಉತ್ತರವನ್ನು ನೀಡಬಹುದಾಗಿದೆ. ಆಂಗ್ಲ ಹಾಗೂ ಭಾರತದ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಗೂಗಲ್ ನೇಬರ್ಲೀ ಆಪ್ ಬೆಂಬಲಿಸುತ್ತದೆ ಎಂದು ಗೂಗಲ್ ತಿಳಿಸಿದೆ.

How to send WhatsApp Payments invitation to others - GIZBOT KANNADA

ಗೂಗಲ್ ನೇಬರ್ಲೀ ಆಪ್‌ನಲ್ಲಿ ಗರಿಷ್ಠ ಸುರಕ್ಷತೆಯನ್ನು ಕಾಯ್ದುಕೊಳ್ಳಲಾಗಿದ್ದು, ಖಾಸಗಿ ಮಾಹಿತಿಯನ್ನು ನೀಡದೆಯೇ ನೀವು ಪ್ರಶ್ನೆ ಕೇಳಬಹುದುವುದು, ಬ್ರೌಸ್ ಮಾಡಬಹುದು ಹಾಗೂ ಇದರಲ್ಲಿ ಉತ್ತರವನ್ನು ನೀಡಬಹುದು. ಇಲ್ಲಿ ಫೋನ್ ನಂಬರ್, ಹೆಸರು ಹಾಗೂ ಇತರೆ ಸಂಪರ್ಕ ಮಾಹಿತಿಯನ್ನು ಗೌಪ್ಯವಾಗಿ ಇಡಬಹುದಾ ಆಯ್ಕೆಯನ್ನು ಗೂಗಲ್ ಒದಗಿಸಿದೆ.

 ಗೂಗಲ್‌ನಿಂದ ಭಾರತಕ್ಕಾಗಿ ಮತ್ತೊಂದು ಆಪ್ ಬಿಡುಗಡೆ!!

ಜನರಿಗೆ ತಮ್ಮ ನೆರೆಹೊರೆಯವರಿಂದ ಸ್ಥಳೀಯ ಮಾಹಿತಿಗಳನ್ನು ಕಲೆ ಹಾಕಲು ನೆರವಾಗುವ ಆಪ್ ಸಹ ಇದಾಗಿದ್ದು, ಮುಂಬೈನಲ್ಲಿ ಮೊದಲು ಪರಿಚಯಿಸಲಾಗಿದೆ. ಸ್ಥಳೀಯ ಪ್ರಶ್ನೆಗಳ ಬಗ್ಗೆ ಮಾಹಿತಿಯಿದ್ದರೆ ಉತ್ತರಿಸಬಹುದಾದ ಈ ಆಪ್‌ನಲ್ಲಿ ಕುತೂಹಲಕಾರಿಯೆಂಬಂತೆ ಸಹಾಯಕವಾದ ಮಾಹಿತಿ ನೀಡುವವರಿಗೆ ಬ್ಯಾಡ್ಜ್, ಕಮ್ಯೂನಿಟಿ ಪ್ರತಿಫಲವನ್ನು ನೀಡಲಾಗುತ್ತದೆ.

ಓದಿರಿ: ಒಮ್ಮೆ ಪೋಲೀಸರ ಅತಿಥಿಯಾಗಿದ್ದ 'ಬಿಲ್‌ಗೇಟ್ಸ್' ಅವರ ಜೀವನದ 13 ಇಂಟ್ರೆಸ್ಟಿಂಗ್ ವಿಷಯಗಳು!!

Best Mobiles in India

English summary
Google is increasing its focus on India after it released a new social app that’s aimed at building neighborhood communities within cities in the country. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X