ಗೂಗಲ್‌ ಮ್ಯಾಪ್‌ನಲ್ಲಿ ಬರುತ್ತಿವೆ ಮತ್ತೆರಡು ಸೂಪರ್ ಅಪ್‌ಡೇಟ್‌ಗಳು!

|

ಅಮೆರಿಕಾ ಸೇರಿದಂತೆ ಹಲವೆಡೆ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ ಗೂಗಲ್‌ ಮ್ಯಾಪ್‌ನಲ್ಲಿ ಮತ್ತೆರಡು ಅಪ್‌ಡೇಟ್‌ಗಳು ಬಂದಿವೆ. 40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವೇಗ ಮಿತಿ ಮತ್ತು ಮೊಬೈಲ್ ರಾಡಾರ್ ಸ್ಥಳಗಳನ್ನು ಗುರುತಿಸುವಂತಹ ಫೀಚರ್ಸ್‌ಗಳನ್ನು ಗೂಗಲ್ ಸಂಸ್ಥೆ ದೃಢೀಕರಿಸಿದ್ದು, ಮೊಬೈಲ್ ಸ್ಪೀಡ್ ಕ್ಯಾಮೆರಾಗಳು ಈಗ ಮ್ಯಾಪ್‌ನಲ್ಲಿ ಕಾಣಿಸಿಕೊಳ್ಳಲಿವೆ.

ಹೌದು, ವಾಹನ ಚಾಲಕರಿಗೆ ಸಹಾಯವಾಗುವಂತಹ ಎರಡು ಹೊಸ ಇದೀಗ ಫೀಚರ್ಸ್ ಸೇರ್ಪಡೆಯಾಗಿದ್ದು, ಗೂಗಲ್‌ ಮ್ಯಾಪ್‌ನಲ್ಲಿ ಈಗ ವೇಗ ಮಿತಿ ಬಗ್ಗೆ ಮಾಹಿತಿ ಸಿಗಲಿದೆ. ಯಾವ ರಸ್ತೆಗಳಲ್ಲಿ ವೇಗ ಮಿತಿ ಎಷ್ಟು ಎಂಬುದನ್ನು ಈ ಫೀಚರ್‌ಗಳ ಸಹಾಯದಿಂದ ಗೂಗಲ್ ಮ್ಯಾಪ್ ತೋರಿಸುತ್ತವೆ. ಇದರಲ್ಲಿ ವೇಗ ಮಿತಿ ಮಾತ್ರವಲ್ಲದೇ ಇನ್ನಿತರ ಸೇವೆಗಳು ಸಹ ಸಿಗಲಿವೆ.

ಗೂಗಲ್‌ ಮ್ಯಾಪ್‌ನಲ್ಲಿ ಬರುತ್ತಿವೆ ಮತ್ತೆರಡು ಸೂಪರ್ ಅಪ್‌ಡೇಟ್‌ಗಳು!

ಮ್ಯಾಪ್ ಬಳಕೆದಾರರಿಗೆ ಆ ರಸ್ತೆಯ ಬಗ್ಗೆ ಸಂಪೂರ್ಣ ಮಾಹಿತಿ, ಆ ರಸ್ತೆಯಲ್ಲಿ ಇರುವ ಬಂಕ್‌ಗಳಲ್ಲಿ ಇಂಧನ ಬೆಲೆಗಳು, ಎಲ್ಲಿಯಾದರೂ ರಸ್ತೆ ಮುಚ್ಚುರುವ ಮಾಹಿತಿ, ಕೆಂಪು ಬೆಳಕು ಮಾಹಿತಿ, ಸ್ಪೀಡ್ ಕ್ಯಾಮರಾಗಳು ಸೇರಿದಂತೆ ಆ ಮಾರ್ಗಗಳು ಎದುರಿಸುತ್ತಿರುವ ಅಡೆತಡೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಪಘಾತವಾದರೆ ವರದಿ ಕೂಡ ಮಾಡುವ ಆಯ್ಕೆ ಇರಲಿದೆ.

ಹಾಗೆಯೇ ಗೂಗಲ್‌ ಮ್ಯಾಪ್‌ನಲ್ಲಿ ಗೂಗಲ್‌ ಅಸಿಸ್ಟಂಟ್ ಸೌಲಭ್ಯವನ್ನು ಸಹ ಗೂಗಲ್ ಶೀಘ್ರದಲ್ಲೇ ಸೇರಿಸಲಿದೆ ಎನ್ನಲಾಗಿದೆ. ಗೂಗಲ್‌ ಮ್ಯಾಪ್‌ನಲ್ಲಿ 'ಆರ್ಡರ್‌ ಆನ್‌ಲೈನ್‌' ಎಂಬ ಹೊಸ ಆಯ್ಕೆಯನ್ನು ಗೂಗಲ್ ಪರಿಚಯಿಸುತ್ತಿದೆ. ಅದಕ್ಕಾಗಿ ಗೂಗಲ್‌ ಅಸಿಸ್ಟಂಟ್ ಸೌಲಭ್ಯವನ್ನು ತರುತ್ತಿರುವ ಈ ಸೇವೆ ಹೊಸ ಅಪ್‌ಡೇಟ್‌ಗಳಿಗೂ ಸಹ ಸಹಾಯಕವಾಗುವುದು ಎನ್ನಲಾಗಿದೆ.

ಗೂಗಲ್‌ ಮ್ಯಾಪ್‌ನಲ್ಲಿ ಬರುತ್ತಿವೆ ಮತ್ತೆರಡು ಸೂಪರ್ ಅಪ್‌ಡೇಟ್‌ಗಳು!

ಇತ್ತೀಚಿಗಷ್ಟೇ ಗೂಗಲ್ ಮ್ಯಾಪ್‌ನಲ್ಲಿ ಹೊಸದಾಗಿ 'ಆರ್ಡರ್‌ ಆನ್‌ಲೈನ್‌' ಆಯ್ಕೆ ಸೇರಿಸುವುದಾಗಿ ಗೂಗಲ್ ಹೇಳಿತ್ತು. ಈ ಫೀಚರ್ ಮೂಲಕ ಗ್ರಾಹಕರು ಮ್ಯಾಪ್ ಬಳಕೆದಾರರು ಪ್ರಮುಖ ರೆಸ್ಟೊರಂಟ್‌ಗಳಿಂದ ಫುಡ್‌ ಆರ್ಡರ್‌ ಮಾಡಬಹುದಾಗಿದ್ದು, ಆನ್‌ಲೈನ್‌ ಮೂಲಕ ಫುಡ್‌ ಆರ್ಡರ್‌ ಮಾಡಲು ಬೇರೆ ಬೇರೆ ಫುಡ್‌ ಆಪ್‌ಗಳ ಅಗತ್ಯ ಇರುವುದಿಲ್ಲ ಎಂದು ಗೂಗಲ್ ತಿಳಿಸಿತ್ತು.

ಓದಿರಿ: ಸ್ವಂತ ಮನೆ ಕನಸು ಕಂಡಿದ್ದ ತಾಯಿಗೆ ಬಂಗಲೆಯನ್ನೇ ಕಟ್ಟಿಸಿದ ಈತನ ಸಾಧನೆ ಅಮೋಘ!!

Best Mobiles in India

English summary
The search engine giant Google confirmed that Maps would now let users see speed limits, speed cameras. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X