Subscribe to Gizbot

ಬೈಕ್-ಸೈಕಲ್ ಸವಾರರಿಗೆ ಗೂಗಲ್ ಮ್ಯಾಪಿನಲ್ಲಿರುವ ಈ ಹೊಸ ಆಯ್ಕೆ ತಿಳಿದಿಲ್ಲ..!!!!!

Posted By: Precilla Dias

ನಮ್ಮ ವಿಳಾಸ ಹುಡುಕುವ ಮತ್ತು ದಾರಿಯನ್ನು ಕೇಳುವ ರೀತಿಯನ್ನೇ ಬದಲಾಯಿಸಿದ ಗೂಗಲ್ ಮ್ಯಾಪ್ ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗುವುದೇ ಇಲ್ಲ. ಯಾರನ್ನು ದಾರಿ ಕೇಳಿದರು, ಗೂಗಲ್ ಮ್ಯಾಪ್ ಇದೆಯಲ್ಲ ಎನ್ನುವ ಉತ್ತರ ಸಿದ್ಧವಾಗಿಯೇ ಇರುತ್ತದೆ. ಇದಲ್ಲದೇ ಎಲ್ಲರ ಕೈನಲ್ಲೂ ಸ್ಮಾರ್ಟ್ ಫೋನ್ ಸೇರಿರುವದರಿಂದ ಗೂಗಲ್ ಮ್ಯಾಪ್ ಬಳಸುವವರ ಸಂಖ್ಯೆ ಹೆಚ್ಚಾಗಿಯೇ ಇದೆ ಎಂದು ಹೇಳಬಹುದು.

ಬೈಕ್-ಸೈಕಲ್ ಸವಾರರಿಗೆ ಗೂಗಲ್ ಮ್ಯಾಪಿನಲ್ಲಿರುವ ಈ ಹೊಸ ಆಯ್ಕೆ ತಿಳಿದಿಲ್ಲ..!!!!!

ಸದ್ಯ ಗೂಗಲ್ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಕಾರು, ಬಸ್ಸು ಮತ್ತು ಟ್ರೈನಿನಲ್ಲಿ ದಾರಿ ತೋರಿಸುತ್ತಿದ್ದ ಗೂಗಲ್ ಇನ್ನು ಮಹಾನಗರಗಳಲ್ಲಿ ಸ್ಕೂಟರ್ ಮತ್ತು ಸೈಕಲ್ ನಲ್ಲಿ ತೆರಳುವವರಿಗೂ ದಾರಿ ತೋರಿಸುವ ವ್ಯವಸ್ಥೆಯನ್ನು ಮಾಡಿದೆ. ಈ ಮೂಲದ ಸ್ಕೂಟರ್ ನಲ್ಲಿ ತೆರಳುವವರಿಗೆ ಗಲ್ಲಿದಾರಿಗಳನ್ನು ಗೂಗಲ್ ತೋರಿಸಲಿದೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಮಹಾನಗರಗಳಲ್ಲಿ ವಾಹನದಟ್ಟನೆ ಮತ್ತು ವಾಯುಮಾಲಿನ್ಯದ ಪ್ರಮಾಣವೂ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೈಕಲ್ ಬಳಕೆಯ ಒಲವು ಹೆಚ್ಚಾಗುತ್ತಿದೆ. ಇದನ್ನು ಅರ್ಥ ಮಾಡಿಕೊಂಡಿರುವ ಗೂಗಲ್ ತನ್ನ ಮ್ಯಾಪ್ ಬಳದಾರರಾದ ಸೈಕಲಿಸ್ಟ್ ಗಳಿಗೆ ದಾರಿ ತೋರಿಸುವ ಸಲುವಾಗಿ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ.

ಬೆಂಗಳೂರಲ್ಲಿ 12 ಗಂಟೆಗಳಲ್ಲಿ 5 ಕೋಟಿ ವಹಿವಾಟು ನಡೆಸಿದ ಶಿಯೋಮಿ..!!

ನಿಮ್ಮ ಗೂಗಲ್ ಮ್ಯಾಪಿನಲ್ಲಿ ಸೈಕಲ್ ದಾರಿಯನ್ನು ಪಡೆಯುವ ಸಲುವಾಗಿ ನೀವು ಮೊದಲು ಮ್ಯಾಪಿನಲ್ಲಿ ಲೋಕೆಷನ್ ಎಂಟ್ರಿ ಮಾಡಬೇಕು, ಜೊತೆಗೆ ಮ್ಯಾಪ್ ನಲ್ಲಿ ನೀವು ತಲುಪಬೇಕಾಗದ ಸ್ಥಳದ ಮಾಹಿತಿಯನ್ನು ದಾಖಲಿಸಿದ ನಂತರ ಅಲ್ಲಿಂದ ಅಲ್ಲಿಗೆ ಇರುವ ವಿವಿಧ ದಾರಿಗಳು ಕಾಣಿಸಲಿದ್ದು, ನಂತರ ಅಲ್ಲಿರುವ ಟ್ರಾನ್ಸ್ ಫೋರ್ಟ್ ಮೋಡಿನಲ್ಲಿ 'ಸೈಕಲ್’ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಅಲ್ಲಿಂದ ನಿಮಗೆ ಸೈಕಲ್ ಹೋಗುವ ದಾರಿಗಳು ಕಾಣಿಸಿಲಿದೆ.

ಇಲ್ಲಿ ನೀವು ತೆರಳುದಾರಿಯಲ್ಲಿರುವ ವಾಹನ ದಟ್ಟನೆಯ ಚಿತ್ರಣವು ದೊರೆಯಲಿದ್ದು, ಎಲ್ಲಿ ನೀವು ಸೈಕಲ್ ತುಳಿಯಬಹುದು ಮತ್ತು ಎಲ್ಲಿ ನಡೆದುಕೊಂಡು ಸಾಗಬೇಕು ಎಂಬುದನ್ನು ಗೂಗಲ್ ಮ್ಯಾಪ್ ತಿಳಿಸಲಿದೆ. ಈ ಆಯ್ಕೆಯು ಮುಂದೆ ಬೈಕರ್ಸ್ ಮತ್ತು ಸೈಕಲಿಸ್ಟ್ ಗಳಿಗೆ ಭಾರಿ ಸಹಾಯವನ್ನು ಮಾಡಲಿದೆ.

English summary
Google Maps is one of the best apps we could ever ask for. Thanks to Google! Undoubtedly, it makes our life easier often by providing inputs about the traffic, shortest route, bus numbers and more.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot