'ಫ್ರಿಡಮ್ 251' ಸುಳ್ಳಲ್ಲ: ರೂ.251ಕ್ಕೆ ಸ್ಮಾರ್ಟ್‌ಫೋನ್ ಮಾರ್ಚ್-ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ..!!
ಜಿಯೋ ಆರಂಭಕ್ಕೂ ಮುನ್ನ ದೇಶದಲ್ಲಿ ಸಖತ್ ಸದ್ದು ಮಾಡಿದ್ದು ಎಂದರೆ 'ಫ್ರಿಡಮ್ 251' ಸ್ಮಾರ್ಟ್‌ಫೋನ್. ಕೇವಲ ರೂ. 251ಕ್ಕೆ ಸ್ಮಾರ್ಟ್‌ಫೋನ್ ನೀಡುವುದಾಗಿ ಭಾರೀ ಸಂಚಲವನ್ನು ಮುಡಿಸಿದ್ದ ರಿಂಗಿಗ್‌ಬೆಲ್ಸ್ ಕಂಪನಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಾಧ್ಯವಾಗದೆ ಸುಮ್ಮನಾಗಿತ್ತು. ಆದರೆ ಈ ಮತ್ತೆ ಸದ್ದು ಶುರು ಮಾಡಿದೆ.

ಓದಿರಿ: ಶಿಯೋಮಿಗೆ ಸೆಡ್ಡು: ಸ್ಯಾಮ್‌ಸಂಗ್‌ನಿಂದ ಏರ್‌ಪ್ಯೂರಿಫೈರ್ ಲಾಂಚ್
ಈ ಬಾರಿ ಖಂಡಿತವಾಗಿಯೂ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ನೀಡುವುದಾಗಿ ಹೇಳಿಕೆ ನೀಡಿರುವ 'ಫ್ರಿಡಮ್ 251' ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ರಿಂಗಿಗ್‌ಬೆಲ್ಸ್, ಈ ಬಾರಿ 2018ರ ಮಾರ್ಚ್ ಇಲ್ಲವೇ ಏಪ್ರಿಲ್ ತಿಂಗಳಿನಲ್ಲಿ 'ಫ್ರಿಡಮ್ 251' ಸ್ಮಾರ್ಟ್‌ಫೋನ್ ಲಾಂಚ್ ಮಾಡುವುದಾಗಿ ಹೇಳಿಕೆ ನೀಡಿದೆ.

ಜೈಲು ಸೇರಿದ್ದ ಮಾಲೀಕ:
ರೂ.251ಕ್ಕೆ ಸ್ಮಾರ್ಟ್‌ಫೋನ್ ನೀಡುವುದಾಗಿ ಜನರಿಂದ ಹಣವನ್ನು ಸಂಗ್ರಹಿಸಿದ್ದ 'ಫ್ರಿಡಮ್ 251' ಸ್ಮಾರ್ಟ್‌ಪೋನ್ ತಯಾರಿಕ ಕಂಪನಿ ರಿಂಗಿಗ್‌ಬೆಲ್ಸ್ ಮಾಲೀಕ ಗೋಯಿಲ್ ವಿರುದ್ಧ ಜನರು ದೂರು ದಾಖಲಿಸಿದ್ದ ಕಾರಣ ಜೈಲು ಸೇರಿದ್ದ ಎನ್ನಲಾಗಿದೆ.

ಈ ಬಾರಿ ಕೊಟ್ಟೆ ಕೊಡುವೆ:
ಸದ್ಯ ಜೈಲಿನಿಂದ ಹೊರಗೆ ಬಂದಿರುವ ರಿಂಗಿಗ್‌ಬೆಲ್ಸ್ ಮಾಲೀಕ ಗೋಯಿಲ್ ಈ ಬಾರಿ ಗ್ರಾಹಕರಿಗೆ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಕೊಟ್ಟೆ ಕೊಡುವೆ ಎಂದು ವಾಗ್ದಾನ ಮಾಡಿದ್ದಾರೆ. ಈ ಕುರಿತು ಟೈಮ್ಸ್ ಆಫ್ ಇಂಡಿಯಾ ಜೊತೆಗೆ ಮಾತನಾಡಿದ್ದಾರೆ.

ಮುಂದಿನ ವರ್ಷ ಮಾರುಕಟ್ಟೆಗೆ:
ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಸೇರಿದಂತೆ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಗಳು ಲಭ್ಯವಿದ್ದು, ಹೆಚ್ಚು ಸದ್ದು ಮಾಡುತ್ತಿವೆ. ಈ ಹಿನ್ನಲೆಯಲ್ಲಿ ರಿಂಗಿಗ್‌ಬೆಲ್ಸ್ ಮಾಲೀಕ ಗೋಯಿಲ್ ಹೊಸ ವರ್ಷಕ್ಕೆ ಹೊಸ ಸ್ಮಾರ್ಟ್‌ಫೋನ್ ನೀಡಲಿದ್ದಾರೆ ಎನ್ನಲಾಗಿದೆ.

'ಫ್ರಿಡಮ್ 251' ಸ್ಮಾರ್ಟ್‌ಪೋನ್:
ವಿಶ್ವದಲ್ಲೇ ಅತೀ ಕಡಿಮೆ ಬೆಲೆಗೆ ದೊರೆಯುವುದ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದ್ದ ಈ ಫೋನ್, ಟೆಚ್ ಸ್ಕ್ರಿನ್, ಕ್ಯಾಮೆರಾ. ಇಂಟರ್ನೆಟ್, ಉತ್ತಮ ಬ್ಯಾಟರಿ ಸೇರಿದಂತೆ ಎಲ್ಲಾ ಪ್ರಮುಖ ಆಯ್ಕೆಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ.


Click it and Unblock the Notifications








