ಇನ್ಮುಂದೆ ’ಗೂಗಲ್‌ ಮ್ಯಾಪ್ಸ್‘ ಬಳಸುವ ಮುನ್ನ ಈ ಹೊಸ ಫೀಚರ್ ಬಗ್ಗೆ ತಿಳಿದಿರಿ!!

|

'ಗೂಗಲ್‌ ಮ್ಯಾಪ್ಸ್' ಸೇವೆಯನ್ನು ಇನ್ನಷ್ಟು ಬಳಕೆದಾರ ಸ್ನೇಹಿಯನ್ನಾಗಿ ಮಾಡಲು ಮುಂದಾಗಿರುವ ಗೂಗಲ್ ಇದೀಗ ಮತ್ತೊಂದು ವಿಶೇಷ ಫೀಚರ್ ನೀಡುವ ಮೂಲಕ ಗಮನಸೆಳೆದಿದೆ. ಪ್ರಯಾಣಿಸುವ ಸಂದರ್ಭಗಳಲ್ಲಿ ಮಾರ್ಗ ತೋರುವ ಗೂಗಲ್‌ ಮ್ಯಾಪ್‌ನಲ್ಲಿ ಇನ್ಮುಂದೆ ನಿರ್ದಿಷ್ಟ ಮಾರ್ಗ ಬಿಟ್ಟು ಹೆಚ್ಚು ದೂರ ವಾಹನ ಓಡಿಸಿದಾಗ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ.

ಹೌದು, ಗೂಗಲ್‌ ಮ್ಯಾಪ್ಸ್ ಬಳಸಿ ಪ್ರಯಾಣಿಸುವ ಸಂದರ್ಭದಲ್ಲಿ ವಾಹನ ಚಾಲಕರು ವಾಹನವನ್ನು ನಿರ್ದಿಷ್ಟ ಮಾರ್ಗ ಬಿಟ್ಟು 500 ಮೀ.ಗಿಂತ ಹೆಚ್ಚು ದೂರ ಓಡಿಸಿದಾಗ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ನಿರ್ದಿಷ್ಟ ಮಾರ್ಗ ಬಿಟ್ಟು ವಾಹನ ಚಲಿಸಿದ ಪ್ರತಿ ಸಂದರ್ಭದಲ್ಲಿಯೂ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ ಎಂದು ಎಕ್ಸ್‌ಡಿಎ ಡೆವೆಲಪರ್ಸ್ ವರದಿ ಮಾಡಿದೆ.

ಇನ್ಮುಂದೆ ’ಗೂಗಲ್‌ ಮ್ಯಾಪ್ಸ್‘ ಬಳಸುವ ಮುನ್ನ ಈ ಹೊಸ ಫೀಚರ್ ಬಗ್ಗೆ ತಿಳಿದಿರಿ!!

ಗೂಗಲ್ ಮ್ಯಾಪ್‌ನಲ್ಲಿ ಈಗಾಗಲೇ ಪ್ರತಿಯೊಂದು ರಸ್ತೆಯ ಡೇಟಾವು ಸಂಪೂರ್ಣವಾಗಿ ಸಂಯೋಜನೆಗೊಂಡಿದೆ. ಹಾಗಾಗಿ, ಗೂಗಲ್ ಮ್ಯಾಪ್ ಬಳಕೆದಾರರು ನಿಖರ ಮಾರ್ಗವನ್ನು ಬಿಟ್ಟು ಚಲಿಸಿದ ಸಂದರ್ಭದಲ್ಲಿ, ಈ ಆಯ್ಕೆಯು ಪರ್ಯಾಯ ಮಾರ್ಗವನ್ನು ತೋರಿಸುವುದಿಲ್ಲ. ಅದರ ಬದಲಾಗಿ ಬಳಕೆದಾರರ ಫೋನಿಗೆ ಈ ಬಗ್ಗೆ ಎಚ್ಚರಿಕೆಯನ್ನು ಕಳುಹಿಸುತ್ತದೆ ಎನ್ನಲಾಗಿದೆ.

ವಾಹನವನ್ನು ನಿರ್ದಿಷ್ಟ ಮಾರ್ಗ ಬಿಟ್ಟು ದೂರ ಒಡಿಸಿದಾಗ ಆಗಬಹುದಾದ ನಷ್ಟವನ್ನು ಇದರಿಂದ ತಡೆಯಬಹುದು. ಆದರೆ, ಬಳಕೆದಾರರು ನಗರವೊಂದರ ಅಪರಿಚಿತ ಸ್ಥಳಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಕ್ಯಾಬ್ ಚಾಲಕ ಮಾರ್ಗ ಬದಲಿಸಿ ಮಾಡಬಹುದಾದ ವಂಚನೆಯನ್ನು ತಡೆಗಟ್ಟಬಹುದಾದುದು ಸಹ ಈ ಸೇವೆಯ ಮುಖ್ಯ ಉದ್ದೇಶ ಎಂದು ಎಕ್ಸ್‌ಡಿಎ ವರದಿಯಲ್ಲಿ ಹೇಳಿದೆ.

ಇನ್ಮುಂದೆ ’ಗೂಗಲ್‌ ಮ್ಯಾಪ್ಸ್‘ ಬಳಸುವ ಮುನ್ನ ಈ ಹೊಸ ಫೀಚರ್ ಬಗ್ಗೆ ತಿಳಿದಿರಿ!!

ಇಂತಹ 'ಆಫ್‌-ರೂಟ್‌' ಸೇವೆಯನ್ನು ಭಾರತದಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಲಾಗುತ್ತಿದ್ದು, ಇದಕ್ಕಾಗಿ ಗೂಗಲ್‌ ಮ್ಯಾಪ್ಸ್‌ನ ಮೆನುವಿನಲ್ಲಿ 'ಸ್ಟೇ ಸೇಫರ್' ಎಂಬ ಆಯ್ಕೆಯನ್ನು ಬಳಸಿಕೊಳ್ಳಬಹುದು ಎಂದು ಎಕ್ಸ್‌ಡಿಎ ಡೆವೆಲಪರ್ಸ್ ಸಂಸ್ಥೆಯ ವರದಿಯಲ್ಲಿ ತಿಳಿಸಿದೆ. ಹಾಗಾದರೆ, ಇನ್ನೇಕೆ ತಡ ಇನ್ನು ನಿಮ್ಮ ಚಾಲನೆಯನ್ನು ಮತ್ತಷ್ಟು ಸರಳ ಮತ್ತು ಸೇಫ್ ಮಾಡಿಕೊಳ್ಳಿ.

ಓದಿರಿ: ಮೊಬೈಲ್ ಸ್ಪೋಟದ ತೀರ್ವತೆ ಹೇಗಿರುತ್ತದೆ ಗೊತ್ತಾ?..ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯ!!

Best Mobiles in India

English summary
An update will soon roll out to Google Maps that will alert users ... The update will giveusers real-time updates about Make Sure You Never Miss Your road. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X