14 ವಿಶೇಷ ಅಪ್‌ಡೇಟ್ಸ್ ಪಡೆದಿದೆ ಗೂಗಲ್ ಮ್ಯಾಪ್ಸ್!!..ಇನ್ನು ಕನ್ನಡದಲ್ಲಿಯೂ ವಾಯ್ಸ್ ಸೇವೆ!!

ಬಳಕೆದಾರರಿಗೇ ಈಗಾಗಲೇ ಸಾಕಷ್ಟು ಸೇವೆ ನೀಡುತ್ತಿರುವ ಗೂಗಲ್ ಮ್ಯಾಪ್ಸ್ ಇದೀಗ ಮತ್ತಷ್ಟು ಶಾರ್ಟ್‌ಕಟ್‌ಗಳ ಮೂಲಕ ಅಪ್‌ಡೇಟ್ ಆಗುತ್ತಿದೆ.

|

ಬಳಕೆದಾರರಿಗೇ ಈಗಾಗಲೇ ಸಾಕಷ್ಟು ಸೇವೆ ನೀಡುತ್ತಿರುವ ಗೂಗಲ್ ಮ್ಯಾಪ್ಸ್ ಇದೀಗ ಮತ್ತಷ್ಟು ಶಾರ್ಟ್‌ಕಟ್‌ಗಳ ಮೂಲಕ ಅಪ್‌ಡೇಟ್ ಆಗುತ್ತಿದೆ. ಹತ್ತಿರದ ಹೋಟೆಲ್, ಮಾಲ್‌ಗಳು, ಮೆಟ್ರೊ ಸೆಂಟರ್ ಹಾಗೂ ಮನೆಗಳ ವಿಳಾಸ ಸೇರಿದಂತೆ 14 ವಿಶೇಷ ಶಾರ್ಟ್‌ಕಟ್ ಅಪ್‌ಡೇಟ್ ಅನ್ನು ನೀಡಲು ಗೂಗಲ್ ಮ್ಯಾಪ್ ಮುಂದಾಗಿದೆ.!!

ಆಂಡ್ರಾಯ್ಡ್ ಪೋಲಿಸ್ ವರದಿಮಾಡಿರುವ ಪ್ರಕಾರ, ಗೂಗಲ್ ಮ್ಯಾಪಿನಲ್ಲಿ ಪೂರ್ವ ನಿಗದಿಯಾಗಿ ಆಯ್ಕೆಮಾಡಿದ ಶಾರ್ಟ್‌ಕಟ್‌ ಆಯ್ಕೆಗಳೊಂದಿಗೆ 14 ವಿಶೇಷ ಶಾರ್ಟ್‌ಕಟ್ ಅಪ್‌ಡೇಟ್ ವೈಶಿಷ್ಟ್ಯಗಳು ಸಿಗಲಿವೆ ಎಂದು ತಿಳಿಸಿದೆ. ಗೂಗಲ್ ಮ್ಯಾಪ್ ಆವೃತ್ತಿ 9.72.2ನೊಂದಿಗೆ ಆಯ್ದ ಬಳಕೆದಾರರಿಗೆ ಈಗಾಗಲೇ ಈ ಸೇವೆ ಲಭ್ಯವಾಗಿರುವ ಬಗ್ಗೆ ಮಾಹಿತಿ ನೀಡಿದೆ.!!

14 ವಿಶೇಷ ಅಪ್‌ಡೇಟ್ಸ್ ಪಡೆದಿದೆ ಗೂಗಲ್ ಮ್ಯಾಪ್ಸ್!!

ಗೂಗಲ್ ಮ್ಯಾಪ್ಸ್ ತಂಡವು ಭಾರತದಲ್ಲಿ ಮ್ಯಾಪ್ ಬಳಕೆಯಯನ್ನು ಇನ್ನು ಹೆಚ್ಚು ವಿಸ್ತರಿಸಲು ಕೆಲವು ದೊಡ್ಡ ಯೋಜನೆಗಳನ್ನು ಹೊಂದಿದೆ. ದೇಶದ ಎಲ್ಲಾ ನಗರಗಳಲ್ಲಿಯೂ ನಕ್ಷೆಯ ಮೂಲಕ ನೈಜ ಸಮಯದ ಬಸ್ ಮಾಹಿತಿಯನ್ನು ವಿಸ್ತರಿಸುವ ಯೋಜನೆಗಳಿವೆ ಎಂದು ಗೂಗಲ್ ಮ್ಯಾಪ್ಸ್ ಭಾರತೀಯ ನಿರ್ದೇಶಕ ಸುರೇನ್ ರುಹೇಲಾ ಹೇಳಿದ್ದಾರೆ.!!

14 ವಿಶೇಷ ಅಪ್‌ಡೇಟ್ಸ್ ಪಡೆದಿದೆ ಗೂಗಲ್ ಮ್ಯಾಪ್ಸ್!!

ಯಾವುದೇ ರಸ್ತೆಯು ಬ್ಲಾಕ್ ಆಗಿದ್ದರೆ ಅದರ ಬಗ್ಗೆ ಮೊದಲೇ ತಿಳಿಯಲು ಹಾಗೂ ಟ್ರಾಫಿಕ್ ಜಾಮ್ ಸಂದರ್ಭಗಳನ್ನು ಕಡಿಮೆಗೊಳಿಸುವ ಬಗ್ಗೆ ನಗರ ಸಂಚಾರ ಪೊಲೀಸ್ ಅಧಿಕಾರಿಗಳ ಜೊತೆ ಗೂಗಲ್ ಮ್ಯಾಪ್ಸ್ ತಂಡ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಗೂಗಲ್ ಮ್ಯಾಪಿನಿಂದ ಬಳಕೆದಾರರಿಗೆ ಮತ್ತಷ್ಟು ಅನುಕೂಲವಾಗಲಿದೆ.!!

14 ವಿಶೇಷ ಅಪ್‌ಡೇಟ್ಸ್ ಪಡೆದಿದೆ ಗೂಗಲ್ ಮ್ಯಾಪ್ಸ್!!

ಇನ್ನು ಗೂಗಲ್ ಮ್ಯಾಪ್ ಮೂಲಕ ಭಾರತೀಯ ಬಳಕೆದಾರರಿಗೆ ಸ್ಮಾರ್ಟ್ ವಿಳಾಸ ಹುಡುಕಾಟವನ್ನು ಸೇರಿಸಲು ಮುಂದಾಗಿದೆ. ಜೊತೆಗೆ ಕನ್ನಡ, ತೆಲುಗು, ತಮಿಳು, ಮತ್ತು ಮಲಯಾಳಂ ಬಂಗಾಳಿ, ಗುಜರಾತಿ, ಸೇರಿದಂತೆ ಆರು ಹೆಚ್ಚುವರಿ ಭಾರತೀಯ ಭಾಷೆಗಳಲ್ಲಿ ವಾಯ್ಸ್ ನ್ಯಾವಿಗೇಷನ್ ಬೆಂಬಲವನ್ನು ಗೂಗಲ್ ಮ್ಯಾಪ್ಸ್ ಸೇರಿಸಿದೆ.!!

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?

ಓದಿರಿ: ಹೆದ್ದಾರಿ ಪ್ರಯಾಣಿಕರಿಗಾಗಿ ಆಪ್!..ಪ್ರಯಾಣಿಸುವಾಗ ಆಪ್ ಮೂಲಕ ವಿಡಿಯೋ ಮಾಡಬಹುದು!!

Best Mobiles in India

English summary
Google Maps Shortcuts Now Available for Select Users in India, Let You Choose From 14 Quick Actions. to knwo more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X