ಗೂಗಲ್‌ ಪೇ ಆಪ್‌ನಲ್ಲಿ 'ರೈಲ್ವೆ ಟಿಕೆಟ್‌ ಬುಕ್ಕಿಂಗ್' ಸೌಲಭ್ಯ ಶುರು.!!

|

ಮೊಬೈಲ್‌ ಬ್ಯಾಂಕಿಂಗ್ ಸೌಲಭ್ಯವು ಕ್ಯಾಶ್ ಲೆಸ್‌ ಜೊತೆಗೆ ಕ್ಯೂ ಲೆಸ್‌ ಆಗಿದೆ ಎನ್ನಬಹುದು. ಆನ್‌ಲೈನ್‌ ಹಣಕಾಸು ವರ್ಗಾವಣೆ ಮಾಡಲು ಅನೇಕ ಆಪ್‌ಗಳು ಲಭ್ಯವಿದ್ದರೂ ಅತೀ ಜನಪ್ರಿಯತೆ ಪಡೆದಿರುವುದು ಗೂಗಲ್‌ ಒಡೆತನದ 'ಗೂಗಲ ಪೇ' ಆಪ್‌. ಈ ಆಪ್‌ ಸುರಕ್ಷತೆ ಮತ್ತು ಸರಳ ವಿಧಾನದಲ್ಲಿ ಎಲ್ಲ ಬಗ್ಗೆಯ ಹಣ ವರ್ಗಾವಣೆ ಮಾಡುವ ಆಯ್ಕೆಗಳನ್ನು ಒದಗಿಸಿದ್ದು, ಇದೀಗ ರೈಲ್ವೆ ಟಿಕೆಟ್ ಬುಕ್ಕ್ ಮಾಡುವ ಆಯ್ಕೆ ನೀಡಿದೆ.

ಗೂಗಲ್‌ ಪೇ ಆಪ್‌ನಲ್ಲಿ 'ರೈಲ್ವೆ ಟಿಕೆಟ್‌ ಬುಕ್ಕಿಂಗ್' ಸೌಲಭ್ಯ ಶುರು.!!

ಹೌದು, ಗೂಗಲ್ ಪೇ ಆಪ್‌, 'ಐಆರ್‌ಸಿಟಿಸಿ' ಸಹಯೋಗದೊಂದಿಗೆ ರೈಲ್ವೆ ಟಿಕೆಟ್‌ ಬುಕ್ಕ್ ಮಾಡುವ ಸೌಲಭ್ಯವನ್ನು ಅಳವಡಿಸಿದ್ದು, ಪ್ರತ್ಯಕವಾಗಿ ಐಆರ್‌ಸಿಟಿಸಿ ಆಪ್‌ ಬಳಸುವ ಅಗತ್ಯವಿಲ್ಲ. ಗೂಗಲ್‌ ಪೇ ಆಪ್‌ನಲ್ಲಿ ಇನ್ನು ಟ್ರೈನ್‌ ಟಿಕೆಟ್‌ ಬುಕ್ಕ್ ಮಾಡುವ ಆಯ್ಕೆ ಕಾಣಿಸಲಿದ್ದು, ಸರಳ ಹಂತಗಳನ್ನು ಅನುಸರಿಸಿ ಟಿಕೆಟ್‌ ಬುಕ್ಕಿಂಗ್ ಮಾಡಬಹುದಾಗಿದೆ. ನಾಲ್ಕು ತಿಂಗಳ ಮೊದಲೇ ಮುಂಗಡ ಬುಕ್ಕಿಂಗ್ ಅವಕಾಶವು ಬಳಕೆದಾರರಿಗೆ ಲಭ್ಯವಾಗಲಿದೆ.

ಗೂಗಲ್‌ ಪೇ ಆಪ್‌ನಲ್ಲಿ 'ರೈಲ್ವೆ ಟಿಕೆಟ್‌ ಬುಕ್ಕಿಂಗ್' ಸೌಲಭ್ಯ ಶುರು.!!

ಟಿಕೆಟ್‌ ಬುಕ್‌ ಮಾಡಲು ಐಆರ್‌ಸಿಟಿಸಿ ಐಡಿಯನ್ನು ಹೊಂದಿರಬೇಕು, ಒಂದು ವೇಳೆ ಇಲ್ಲದಿದ್ದರೆ ಹೊಸದಾಗಿ ಕ್ರಿಯೆಟ್‌ ಮಾಡಿಕೊಳ್ಳುವ ಆಯ್ಕೆ ಸಹ ಇದೆ. ಗೂಗಲ್‌ ಪೇ ಆಪ್‌ನಲ್ಲಿ ಬ್ಯುಸಿನೆಸಸ್‌ ಕೇಟಗರಿಯಲ್ಲಿ ಇರಲಿದ್ದು, ಒಂದೇ ಟ್ಯಾಪ್‌ ಮೂಲಕ ಬುಕ್ಕಿಂಗ್ ಸ್ಟೇಟಸ್ಸ್ ಮತ್ತು ಟ್ರಾನ್ಸಾಕ್ಶನ್ ಹಿಸ್ಟರ್‌ ನೋಡುವ ಅನುಕೂಲ ಸಹ ಇದೆ. ಹಾಗಾದರೇ ಗೂಗಲ್‌ ಪೇ ಟಿಕೆಟ್‌ ಬುಕ್ಕಿಂಗ್ ಕುರಿತು ಇತರೆ ಏನೆಲ್ಲಾ ಫೀಚರ್ಸ್ಗಳನ್ನು ಒದಗಿಸಿರುವ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಬುಕ್ಕಿಂಗ್ ಹಂತಗಳು

ಬುಕ್ಕಿಂಗ್ ಹಂತಗಳು

ಗೂಗಲ್‌ ಪೇ ಆಪ್‌ ತೆರೆದಾಗ ಟ್ರೈನ್‌ ಎಂಬ ಹೊಸ ಆಯ್ಕೆ ಕಾಣಿಸುತ್ತೆ ಈ ಆಯ್ಕೆಯನ್ನು ಸೆಲೆಕ್ಟ್‌ ಮಾಡಿಕೊಂಡಾಗ, ಬುಕ್ಕ್ ಟಿಕೆಟ್‌ ಆಯ್ಕೆ ಕಾಣಿಸಿಕೊಳ್ಳುಲಿದ್ದು, ನಂತರ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುವಿರಿ ಎಂಬುದನ್ನು ಎಂಟ್ರಿ ಮಾಡಿದರೇ ಲಭ್ಯವಿರುವ ಟ್ರೈನುಗಳ ಮಾಹಿತಿ ಕಾಣಿಸುತ್ತದೆ. ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ನಿಮ್ಮ ಐಆರ್‌ಸಿಟಿಸಿ ಲಾಗಿನ್ ಆಗಿ ಬುಕ್ಕಿಂಗ್ ಕನ್‌ಫರ್ಮ್‌ ಮಾಡಿ ಪೇಮೆಂಟ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಿ.

ಟಿಕೆಟ್ ರದ್ದು ಪಡೆಸಬಹುದು.

ಟಿಕೆಟ್ ರದ್ದು ಪಡೆಸಬಹುದು.

ರೈಲ್ವೆ ಟಿಕಟ್‌ ಬುಕ್ಕಿಂಗ್ ಮಾಡಿದ್ದು, ಒಂದು ವೇಳೆ ಅನಿವಾರ್ಯ ಕಾರಣದಿಂದಾಗಿ ಕನ್ಫರ್ಮ್‌ ಆಗಿರುವ ಟಿಕೆಟ್‌ ಕ್ಯಾನ್ಸ್‌ಲ್‌ ಮಾಡುವ ಸಂದರ್ಭ ಬಂದರೇ, ಗೂಗಲ್ ಪೇ ಆಪ್‌ ಮೂಲಕವೇ ಟಿಕೆಟ್‌ ರದ್ದು ಮಾಡಿಕೊಳ್ಳುವ ಆಯ್ಕೆಯು ಇದೆ. ರೈಲ್ವೆ ಟಿಕೆಟ್‌ ಸ್ಟೇಟಸ್ ಹಾಗೂ ಟಿಕೆಟ್‌ ಬುಕ್ಕಿಂಗ್ ಹಿಸ್ಟರಿ ಬಗ್ಗೆ ಸಹ ತಿಳಿಯಬಹುದು.

ಐಆರ್‌ಸಿಟಿಸಿ ಖಾತೆ ಕಡ್ಡಾಯ

ಐಆರ್‌ಸಿಟಿಸಿ ಖಾತೆ ಕಡ್ಡಾಯ

ಗೂಗಲ್‌ ಪೇ ಆಪ್‌ನಲ್ಲಿ ಮಾತ್ರವಲ್ಲ ಯಾವುದೇ ಆನ್‌ಲೈನ್‌ ವಿಧಾನದಲ್ಲಿ ರೈಲ್ವೆ ಟಿಕೆಟ್‌ ಬುಕ್ಕಿಂಗ್ ಮಾಡಲು ಐಆರ್‌ಸಿಟಿಸಿ ಖಾತೆ ಅಗತ್ಯ. ಈಗಾಗಲೇ ಐಆರ್‌ಸಿಟಿಸಿ ಖಾತೆ ಹೊಂದಿದ್ದರೇ ಮತ್ತೆ ಹೊಸ ಖಾತೆ ತೆರೆಯುವ ಅಗತ್ಯವಿಲ್ಲ. ಐಆರ್‌ಸಿಟಿಸಿ ಖಾತೆ ಇಲ್ಲದಿದ್ದರೇ, ಹೊಸ ಖಾತೆಯನ್ನು ತೆರೆಯಿರಿ.

Best Mobiles in India

English summary
The UPI-based Google Pay app will now allows users in India to book train tickets via IRCTC.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X