ಗೂಗಲ್ ಫೊಟೊಸ್ಕ್ಯಾನ್ ಆಪ್ ನಿಮಗೆ ನಿಮ್ಮ ಹಳೆ ನೆನಪುಗಳನ್ನು ನಿಮ್ಮ ಸ್ಮಾರ್ಟ್‍ಫೋನಿನಲ್ಲಿ ಡಿಜಿಟೈಜ್ ಮಾಡಲು ಬಿಡುತ್ತದೆ

ನಾವು ತುಂಬಾ ಸಲ ನಮ್ಮ ಹಳೆ ಚಿತ್ರಗಳನ್ನು ಎಲ್ಲೆಲ್ಲೊ ಹಾಕಿ ಬಹಳಷ್ಟು ನೆನಪುಗಳನ್ನು ಕಳೆದುಕೊಳ್ಳುತ್ತೇವೆ. ಈಗ ಗೂಗಲ್ ಉಚಿತವಾಗಿ ಕೆಲವೇ ಸೆಕೆಂಡುಗಳಲ್ಲಿ ಚಿತ್ರಗಳನ್ನು ಡಿಜಿಟೈಜ್ ಮಾಡಲು ದಾರಿ ಹುಡುಕಿದೆ.

ಗೂಗಲ್ ಫೊಟೊಸ್ಕ್ಯಾನ್ ಮೂಲಕ ನಿಮ್ಮ ಹಳೆ ನೆನಪುಗಳನ್ನು ಡಿಜಿಟೈಜ್ ಮಾಡಿ!!

ಹಳೆ ಚಿತ್ರಗಳನ್ನು ಸ್ಕ್ಯಾನ್ ಮಾಡುವುದು ಸುಸ್ತುಹೊಡೆಸುವ ಮತ್ತು ದುಬಾರಿ ಕೆಲಸವಾಗಿದೆ. ಈಗ ಗೂಗಲ್ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು ಆಪ್ ಉಪಯೋಗಿಸಿ ಮತ್ತು ಸಮಯವನ್ನು ಕೂಡ ಉಳಿಸಬಹುದು. ಆಂಡ್ರೊಯಿಡ್ ಮತ್ತು ಐಒಎಸ್ ಎರಡರಲ್ಲೂ ಇದು ಲಭ್ಯ.

ಓದಿರಿ: ಗೂಗಲ್‌ ನೌ ( google now)ಹೆಚ್ಚಿನ ಫೀಚರ್‌ಗಳೇನು? ಏನು ವಿಶೇಷ?

ಕೆಳಗಿನ 3 ಹೆಜ್ಜೆ ಗಳನ್ನು ಅನುಸರಿಸಿ ಹಳೆ, ಮುದ್ದೆಯಾದ, ಹರಿದ ಚಿತ್ರಗಳನ್ನು ಸ್ಕ್ಯಾನ್ ಮಾಡಿ ಮತ್ತು ಕೆಲವೆ ಸೆಕೆಂಡುಗಳಲ್ಲಿ ಡಿಜಿಟೈಜ್ ಮಾಡಿ.

ಗೂಗಲ್ ಫೊಟೊಸ್ಕ್ಯಾನ್ ಮೂಲಕ ನಿಮ್ಮ ಹಳೆ ನೆನಪುಗಳನ್ನು ಡಿಜಿಟೈಜ್ ಮಾಡಿ!!

1. ಫೊಟೊಸ್ಕ್ಯಾನ್ ಆಪ್ ಡೌನ್‍ಲೊಡ್ ಮತ್ತು ಇನ್‍ಸ್ಟಾಲ್ ಮಾಡಿ

ಈ ಆಪ್ ಆಂಡ್ರೊಯಿಡ್ ಮತ್ತು ಐಒಎಸ್ ಫೋನ್ ಎರಡರಲ್ಲೂ ಲಭ್ಯವಿದೆ ಮತ್ತು ಆಪ್ ನಲ್ಲಿ ನಿಮ್ಮನ್ನು ರಿಜಿಸ್ಟರ್ ಮಾಡಿ ಅದರ ಎಲ್ಲಾ ಸೇವೆಗಳನ್ನು ಪಡೆಯಬಹುದು.

ಗೂಗಲ್ ಫೊಟೊಸ್ಕ್ಯಾನ್ ಮೂಲಕ ನಿಮ್ಮ ಹಳೆ ನೆನಪುಗಳನ್ನು ಡಿಜಿಟೈಜ್ ಮಾಡಿ!!

2. ಹಳೆ ಚಿತ್ರಗಳ ಫೊಟೊ ತೆಗೆಯಿರಿ ಫೊಟೊಸ್ಕ್ಯಾನ್ ಉಪಯೋಗಿಸಿ

ರಿಜಿಸ್ಟರ್ ಮಾಡಿಸಿದ ಮೇಲೆ ಯಾವ ಚಿತ್ರವನ್ನು ಸ್ಕ್ಯಾನ್ ಮಾಡಬಯಸುವಿರೊ ಅದನ್ನು ಸಮತಟ್ಟ ಜಾಗದಲ್ಲಿ ಇರಿಸಿ ಮತ್ತು ಫೊಟೊ ತೆಗೆಯಿರಿ. ಆಪ್ ಅದೇ ಚಿತ್ರದ ಚಿತ್ರ ತೆಗೆಯುತ್ತದೆ 4 ವಿವಿಧ ಕೋನಗಳಲ್ಲಿ.

ಗೂಗಲ್ ಫೊಟೊಸ್ಕ್ಯಾನ್ ಮೂಲಕ ನಿಮ್ಮ ಹಳೆ ನೆನಪುಗಳನ್ನು ಡಿಜಿಟೈಜ್ ಮಾಡಿ!!

3. ಸೆಕೆಂಡುಗಳಲ್ಲಿ ಸ್ಕ್ಯಾನ್

ನೀವು ಫೊಟೊ ತೆಗೆದಾಗ ಆಪ್ ಆ ಚಿತ್ರವನ್ನು ಚಿಕ್ಕ ಚಿಕ್ಕ ಬ್ಲೊಕ್ ಗಳಾಗಿ ವಿಭಜಿಸಿ ನಂತರ ಫೀಚರ್ ಪಾಯಿಂಟ್ ಆಧಾರವಾಗಿ ಎಲ್ಲವನ್ನು ಸರಿಯಾಗಿ ಪುನಃ ಜೋಡಿಸುತ್ತದೆ. ಅದಾದ ನಂತರ ಮಬ್ಬು ಇದ್ದಲ್ಲಿ ಅದನ್ನು ತೆಗೆಯುತ್ತದೆ ಮತ್ತು ಅವಶ್ಯಕತೆಯಿದ್ದಲ್ಲಿ ತುಂಡರಿಸುತ್ತದೆ ಮತ್ತು ಇದರಲ್ಲಿ ಸ್ಮಾರ್ಟ್ ರೊಟೆಷನ್ ಫೀಚರ್ ಕೂಡ ಇದೆ. ನೆನಪಿಡಿ ಇದೆಲ್ಲವು ಆಗುತ್ತದೆ ಕೆಲವೇ ಸೆಕೆಂಡುಗಳಲ್ಲಿ ಮತ್ತು ಆಪ್ ನಿಮಗೆ ನಿಮ್ಮ ಎಲ್ಲಾ ಹಳೆ ಚಿತ್ರಗಳನ್ನು ಕೆಲವೇ ಸೆಕೆಂಡುಗಳಲ್ಲಿ ಸರಿಯಾಗಿ ಜೋಡಿಸಿ ಕೊಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
Here's how you can scan your old memories and transform them into a digital format with these 4 simple steps.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot