ಭಾರೀ ಡೌನ್‌ಲೋಡ್ ಆಗಿದ್ದ ಈ 85 ಆಪ್‌ಗಳಿಗೆ ಗೂಗಲ್‌ನಿಂದ ಕೋಕ್!..ಕಾರಣ ಏನು?

|

ಇದು ಆಪ್‌ಗಳ ದುನಿಯಾ, ಈಗ ಎಲ್ಲ ಕ್ಷೇತ್ರಕ್ಕೂ ಸಂಬಂಧಿಸಿದ ಪ್ರತ್ಯೇಕ ಅಪ್ಲಿಕೇಶನ್‌ಗಳಿವೆ. ಹೊಸ ಹೊಸ ಅಪ್ಲಿಕೇಶನ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇರುವುದರಿಂದ ಆಪ್ ಸ್ಟೋರ್‌ಗಳಲ್ಲಿ ಮಿಲಿಯನ್‌ ಆಪ್‌ಗಳು ಲಭ್ಯ. ಆದರೆ, ಇಷ್ಟು ಆಪ್‌ಗಳಲ್ಲಿ ಯಾವ ಆಪ್ ಉತ್ತಮ ಎಂದು ನಿಮಗೆ ಗೊತ್ತಾ?, ನೀವಿನ್ನು ಅದನ್ನು ತಿಳಿಯಬಹುದು. ಏಕೆಂದರೆ, ಗೂಗಲ್ ಈಗ ಹೆಚ್ಚು ಜಾಹಿರಾತುಗಳನ್ನು ನೀಡುವ ಆಪ್‌ಗಳನ್ನು ಸಹ ಪ್ಲೇ ಸ್ಟೋರ್‌ನಿಂದ ತೆಗೆದುಹಾಕುತ್ತಿದೆ.

ಹೌದು, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿನ ಬಹುತೇಕ ಆಪ್‌ಗಳು ಉಚಿತವಾಗಿ ಡೌನಲೋಡ್ ಮಾಡಿಕೊಳ್ಳಬಹುದು ಇನ್ನೂ ಹಲವು ಆಪ್‌ಗಳು ದರ ನಿಗದಿ ಮಾಡಿರುತ್ತವೆ. ಹಾಗೇ ಜಾಹೀರಾತು ರಹಿತ ಆಪ್‌ಗಳಿವೆ ಮತ್ತು ಜಾಹೀರಾತು ಸಹಿತ ಆಪ್‌ಗಳಿವೆ. ಆದರೆ, ಆಪ್‌ಬಳಕೆ ಮಾಡುವಾಗ ಮಧ್ಯದಲ್ಲಿ ಜಾಹೀರಾತು ಹೆಚ್ಚು ಕಾಣಿಸಿಕೊಳ್ಳುವ 85 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ ಎಂದು ತಿಳಿದುಬಂದಿದೆ.

ಭಾರೀ ಡೌನ್‌ಲೋಡ್ ಆಗಿದ್ದ ಈ 85 ಆಪ್‌ಗಳಿಗೆ ಗೂಗಲ್‌ನಿಂದ ಕೋಕ್!..ಕಾರಣ ಏನು?

ಟ್ರೆಂಡ್ ಮೈಕ್ರೋ ಎಂಬ ಸಂಸ್ಥೆ ಈ 85 ಅಪ್ಲಿಕೇಶನ್‌ಗಳ ಪಟ್ಟಿಯನ್ನು ಗೂಗಲ್ ಮತ್ತು ಓಎಸ್ ತಯಾರಕರಿಗೆ ನೀಡಿದ್ದ ಅವರ ವರದಿಯನ್ನು ಆಧರಿಸಿ ನಂತರ ಈ ಅಪ್ಲಿಕೇಶನ್‌ಗಳನ್ನು ಗೂಗಲ್‌ ತೆಗೆದುಹಾಕಿದೆ. ಗೂಗಲ್‌ ತೆಗೆದು ಹಾಕಲಾದ ಈ 85 ಅಪ್ಲಿಕೇಶನ್‌ಗಳಲ್ಲಿ ಪೈಕಿ ಗೇಮಿಂಗ್ ಆಪ್‌ಗಳು ಮತ್ತು ಟಿವಿ ಕಂಕ್ರೋಲ್ ಆಪ್‌ಗಳೇ ಅಧಿಕವಾಗಿವೆ. ಈ ಎಲ್ಲಾ ಆಪ್‌ಗಳು ಬಳಕೆದಾರರಿಗೆ ಆಪ್‌ ಬಳಸುವಾಗ ಅಡಚಣೆಯೆನಿಸುತ್ತದೆ ಎಂಬ ಕಾರಣದಿಂದ ಆ ಆಪ್‌ಗಳನ್ನು ತನ್ನ ಅಪ್ಲಿಕೇಶನ್ ಅಂಗಡಿಯಿಂದ ತೆಗೆದುಹಾಕಿದೆ ಎನ್ನಲಾಗಿದೆ.

ಭಾರೀ ಡೌನ್‌ಲೋಡ್ ಆಗಿದ್ದ ಈ 85 ಆಪ್‌ಗಳಿಗೆ ಗೂಗಲ್‌ನಿಂದ ಕೋಕ್!..ಕಾರಣ ಏನು?

ಪ್ರಮುಖ ಆಪ್‌ಯಾವುದು?
ಗೂಗಲ್ ತೆಗೆದುಹಾಕಿರುವ ಈ ಎಲ್ಲಾ 85 ಅಪ್ಲಿಕೇಷನಗಳು ಒಂಬತ್ತು ಮಿಲಿಯನ್‌ಗಿಂತಲೂ ಅಧಿಕ ಬಾರಿ ಗೂಗಲ್‌ ಪ್ಲೇ ಸ್ಟೋರನಿಂದ ಡೌನ್‌ಲೋಡ್‌ ಮಾಡಲ್ಪಟ್ಟಿವೆ ಎಂದು ವರದಿಯಾಗಿದೆ. ಈ 85 ಆಪ್‌ಗಳ ಪೈಕಿ 'ಈಸಿ ಯುನಿವರ್ಸಲ್ ಟಿವಿ ರಿಮೋಟ್' (Easy Universal TV Remote) ಎಂಬ ಹೆಸರಿನ ಈ ಒಂದು ಅಪ್ಲಿಕೇಶನೇ ಐದು ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಡೌನ್ಲೋಡ್ ಮಾಡಲ್ಪಟ್ಟಿದೆ ಎಂದು ತಂತ್ರಜ್ಞರು ಹೇಳಿದ್ದಾರೆ. ಈ ಲಿಂಕ್‌ನಲ್ಲಿ ಇತರೆ ಆಪ್‌ಗಳ ಲೀಸ್ಟ್ ಅನ್ನು ನೀವು ತಿಳಿಯಬಹುದು.

Best Mobiles in India

English summary
Adware-infected apps masqueraded as games and TV remote controllers. to know more visit the kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X